ತೆರೆ ಹಂಚಿಕೊಂಡ ಆಲಿಯಾ, ಕರೀನಾ ; ಅತ್ತಿಗೆ ನಾದಿನಿ ಬೆಂಕಿ ಎಂದ ಫ್ಯಾನ್ಸ್!
ಬಾಲಿವುಡ್‌ನ ದಿವಾಗಳಾದ ಆಲಿಯಾ ಭಟ್ (Alia Bhatt) ಮತ್ತು ಕರೀನಾ ಕಫೂರ್ ಖಾನ್ (kareena Kapoor) ಜೊತೆಯಾಗಿರುವ ವೀಡಿಯೋ ಸಖತ್ ವೈರಲ್ ಆಗಿದೆ. ಇಬ್ಬರು ನಟಿಯರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ತೆರೆಯ ಮೇಲೆ ಒಟ್ಟಿಗೆ ನೋಡಲು ಉತುಕ್ಸರಾಗಿದ್ದಾರೆ. ಹಾಗಾದರೆ ಇಬ್ಬರೂ ನಟಿಯರು ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಯಾವುದು?
ಕೆಲವು ಸಮಯದ ಹಿಂದೆಯೇ, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಒಟ್ಟಿಗೆ ಮನಮೋಹಕ ಫೋಟೋ-ಶೂಟ್‌ನಿಂದ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿ ಇಂಟರ್‌ನೆಟ್‌ನಲ್ಲಿ ಗೊಂದಲ ಮೂಡಿಸಿದರು.
ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕು ಎಂದು ಇಬ್ಬರೂ ಬರೆದುಕೊಂಡಿದ್ದರು. ಆದರೆ ಕರೀನಾ ಮತ್ತು ಆಲಿಯಾ ಅವರಿಬ್ಬರು ಒಂದಾಗಿರುವುದು ಜಾಹೀರಾತಿನ ಶೂಟ್‌ಗಾಗಿ.
ಆಭರಣ ಬ್ರಾಂಡ್ ಕರೀನಾ ಮತ್ತು ಆಲಿಯಾ ಅವರನ್ನು ಬ್ರಾಂಡ್ ಅಂಬಾಸಿಡರ್‌ಗಳಾಗಿ ಆಯ್ಕೆ ಮಾಡಿಕೊಂಡಿದೆ ಮತ್ತು ಅವರ ಜಾಹೀರಾತನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿದೆ.
ಇಬ್ಬರು ದಿವಾಸ್‌ಗಳ ಈ ಸಹಯೋಗವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ ಮತ್ತು ಜಾಹೀರಾತಿಗೆ ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಳಕೆದಾರರೊಬ್ಬರು, ‘ಎಂತಹ ಸುಂದರ ಅಭಿಯಾನ. ಬಾಲಿವುಡ್‌ನ ಇಬ್ಬರು ರಾಣಿಯರು' ಎಂದು ಬರೆದಿದ್ದಾರೆ. ಅತ್ತಿಗೆ ನಾದಿನಿ ಅನ್ ಫೈರ್ ಎಂದು ಇನ್ನೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು 'ಕರೀನಾ ಸೊಗಸಾಗಿದ್ದಾರೆ ಮತ್ತು ಸ್ಪೈಸಿ ಆಗಿದ್ದಾರೆ. ಆಲಿಯಾ ಮುದ್ದಾದ, ಆತ್ಮವಿಶ್ವಾಸ ಮತ್ತು ಸಂವೇದನಾಶೀಲರು. ಇಬ್ಬರೂ ಜಸ್ಟ್ ರಾಕ್ಡ್' ಎಂದು ಬರೆದಿದ್ದಾರೆ.
ಇದಕ್ಕೂ ಮೊದಲು ಆಲಿಯಾ ಮತ್ತು ಬೆಬೋ 'ಉಡ್ತಾ ಪಂಜಾಬ್' ನಲ್ಲಿ ಒಟ್ಟಿಗೆ ಕೆಲಸ ಮಾಡಿದರು ಆದರೆ ಚಿತ್ರದಲ್ಲಿ ಅವರು ಒಟ್ಟಿಗೆ ಇರುವ ಯಾವುದೇ ದೃಶ್ಯಗಳಿಲ್ಲ.
ಕೆಲಸದ ಮುಂಭಾಗದಲ್ಲಿ, ಕರೀನಾ ಇತ್ತೀಚೆಗೆ OTT-ಬಿಡುಗಡೆಯಾದ ಚಿತ್ರ 'ಜಾನೆ ಜಾನ್' ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಮುಂಬರುವ ಚಿತ್ರ 'ದಿ ಕ್ರ್ಯೂ'ನಲ್ಲಿ ಟಬು ಮತ್ತು ಕೃತಿ ಸನೋನ್ ಜೊತೆ ಇದ್ದಾರೆ
ಅದೇ ಸಮಯದಲ್ಲಿ ಆಲಿಯಾ ಭಟ್ ಅವರು ನಿರ್ದೇಶಕ ವಾಸನ್ ಬಾಲ ಅವರ 'ಜಿಗ್ರಾ' ಮತ್ತು 'ಬ್ರಹ್ಮಾಸ್ತ್ರ 2' 'ದಂತಹ ಚಲನಚಿತ್ರಗಳನ್ನು ಹೊಂದಿದ್ದಾರೆ.