ವಯಸ್ಸಾದಂತೆ ಸೈಫ್ ಆಲಿ ಖಾನ್ ಸಕತ್ತೂ ಹಾಟ್ ಆಗ್ತಿದ್ದಾರೆ: ಏಜ್ ಗ್ಯಾಪ್ ಬಗ್ಗೆ ಪತ್ನಿ ಕರೀನಾ ಕಪೂರ್!
ಬಾಲಿವುಡ್ನ ಬೆಬೋ ಕರೀನಾ ಕಪೂರ್ (Kareena Kapoor) ಜಾನೆ ಜಾನ್ ((Jaane Jaan) ಸರಣಿ ಮೂಲಕ ತನ್ನ ಓಟಿಟಿ (OTT) ಚೊಚ್ಚಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಅಂತರ್ಧರ್ಮೀಯ ವಿವಾಹ ಮತ್ತು ಅವರ ಹಾಗೂ ಪತಿ ಸೈಫ್ ಅಲಿ ಖಾನ್ (Saif Ali Khan) ನಡುವಿನ 10 ವರ್ಷಗಳ ಅಂತರದ ಬಗ್ಗೆ ಟೀಕೆಗಳನ್ನು ಪ್ರಸ್ತಾಪಿಸಿದರು.
ಕರೀನಾ ಕಪೂರ್ ಅವರು ತಮ್ಮ ಅಂತರ್ಧರ್ಮೀಯ ವಿವಾಹ ಮತ್ತು ಅವರ ಮತ್ತು ಪತಿ ಸೈಫ್ ಅಲಿ ಖಾನ್ ನಡುವಿನ 10 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ಬಂದ ಟೀಕೆಗಳು ಬಗ್ಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ ಸೈಫ್ ಅಲಿ ಖಾನ್ ಮತ್ತು ಅವರ ಅಂತರ್ಧರ್ಮೀಯ ವಿವಾಹ ಮತ್ತು ವಯಸ್ಸಿನ ಅಂತರಕ್ಕಾಗಿ ಟ್ರೋಲರ್ಗಳ ಬಗ್ಗೆ ಏನು ಹೇಳಬೇಕೋ ಹಾಗೆಯೇ ಉತ್ತರಿಸಿದ್ದಾರೆ.
ಕರೀನಾ ಕಪೂರ್ ಮತ್ತು ಪತಿ ಸೈಫ್ ಆಲಿ ಖಾನ್ ನಡುವೆ 10 ವರ್ಷ ವಯಸ್ಸಿನ ಅಂತರ ಹೊಂದಿದ್ದಾರೆ. ಅದೇ ಸಮಯದಲ್ಲಿ ಅನ್ಯ ಧರ್ಮದ ಸೈಫ್ ಅವರನ್ನು ವರಿಸಿದಾಗ ಸಾಕಷ್ಟು ಟ್ರೋಲ್ಗಳಿಗೆ ಸಹಜವಾಗಿಯೇ ಗುರಿಯಾಗಿದ್ದರು.
ಕರೀನಾ ವಯಸ್ಸಿನ ವ್ಯತ್ಯಾಸದಿಂದೇನೂ ಅಷ್ಟೇನೂ ವ್ಯತ್ಯಾಸ ಗೊತ್ತಾಗಿಲ್ಲ. ಸೈಫ್ ವಯಸ್ಸಾಗುತ್ತಿದ್ದಂತೆ ಹಾಟ್ ಆಗುತ್ತಿದ್ದಾರೆ ಎಂದು ಕರೀನಾ ಕಪೂರ್ ಹೇಳಿದ್ದಾರೆ. ತಮ್ಮ ಗೌರವ, ಪ್ರೀತಿ ಮತ್ತು ಪರಸ್ಪರರ ಇರುವಿಕೆಯನ್ನು ಆನಂದಿಸುವುದು ಮುಖ್ಯ. ಅವರ ನಂಬಿಕೆ ಅಥವಾ ವಯಸ್ಸಿನ ವ್ಯತ್ಯಾಸದಿಂದ ಏನೂ ತೊಂದರೆ ಇಲ್ಲ ಎಂದಿದ್ದಾರೆ.
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ 2012 ರಲ್ಲಿ ಮುಂಬೈನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಪಸ್ರುತ್ತ ಈ ದಂಪತಿಗೆ 2 ಗಂಡು ಮಕ್ಕಳಿವೆ.
ಸೈಫ್ ಮತ್ತು ಕರೀನಾ ನಡುವೆ ಒಂದು ದಶಕದ ವ್ಯತ್ಯಾಸವಿರುವುದರಿಂದ ಅವರ ಮದುವೆಯ ಸುದ್ದಿ ಅನೇಕರಿಗೆ ಶಾಕ್ ಆಗಿತ್ತು. ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ತನ್ನ ಸಂಭಾಷಣೆಯಲ್ಲಿ ಇದೇ ಕುರಿತು ಮಾತನಾಡಿದ ಕರೀನಾ, ವಯಸ್ಸು ಎಂದಿಗೂ ವಿಷಯವಲ್ಲ ಎಂದು ಹೇಳಿದರು.
ಏನಿದ್ದರೂ, ಸೈಫ್ ಕಾಲಾನಂತರದಲ್ಲಿ ಹಾಟ್ ಆಗುತ್ತಿದ್ದಾರೆ. ಅಲ್ಲದೇ ಸೈಫ್ ಗಿಂತ 10 ವರ್ಷ ಚಿಕ್ಕವಳು ಎಂಬ ಖುಷಿಯೂ ಆಕೆಗಿದ್ದು, ಆತಂಕ ಪಡಬೇಕಾದದ್ದು ಸೈಫ್ ಎಂದು ತಮಾಷೆ ಮಾಡಿದ್ದಾರೆ.
ದಿನದ ಕೊನೆಯಲ್ಲಿ ಅವರು ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಹೊಂದುವುದು ಮತ್ತು ಒಟ್ಟಿಗೆ ಉತ್ತಮ ಸಮಯ ಕಳೆಯುತ್ತಾರೆ ಎಂಬುದು ಮುಖ್ಯ ಎಂದು ಕರೀನಾ ಹೇಳಿದರು.
ಜನರು ಈ ವಿಷಯಗಳ ಸುತ್ತಲೂ ಹೆಚ್ಚು ಸಮಯ ಮತ್ತು ಶಕ್ತಿಯನ್ನುವ್ಯಯಿಸುತ್ತಾರೆ, ಇದು ಮೊದಲು ಸಂಭಾಷಣೆಯ ವಿಷಯವಾಗಬಾರದು ಎಂದು ಹೇಳಿದರು. ಮುಖ್ಯವಾದ ವಿಷಯವೆಂದರೆ ಅವರು ಮತ್ತು ಸೈಫ್ ಪರಸ್ಪರರ ಒಡನಾಟವನ್ನು ಆನಂದಿಸುತ್ತಾರೆ ಇದಲ್ಲದೆ, ಅವರು ಅನುಸರಿಸುವ ಅಥವಾ ಸೈಫ್ ಅನುಸರಿಸುವ ಯಾವುದೇ ಧರ್ಮ ಎಂದಿಗೂ ಚರ್ಚೆಯವಿಷಯವಲ್ಲ ಎಂದು ಕರೀನಾ ಹೇಳಿದ್ದಾರೆ.
ಕೊನೆಯದಾಗಿ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ಕಾಣಿಸಿಕೊಂಡ ಕರೀನಾ ಕಪೂರ್ ತನ್ನ OTT ಚೊಚ್ಚಲ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಕೀಗೊ ಹಿಗಾಶಿನೊ ಅವರ ಜಪಾನೀಸ್ ಕಾದಂಬರಿಯ ರೂಪಾಂತರವಾಗಿರುವ ಸುಜೋಯ್ ಘೋಷ್ ಅವರ ನಿರ್ದೇಶನದ 'ಜಾನೆ ಜಾನ್' ನಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಸುಜೋಯ್ ಘೋಷ್ ಜಾನೆ ಜಾನ್ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಬದಲಿಗೆ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ ಎಂದು ಬಹಿರಂಗ ಪಡಿಸಿದ್ದರು. ಇದರಲ್ಲಿ ಕರೀನಾ ಅವರು ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಮುಂದಿನ ದಿನಗಳಲ್ಲಿ ಕರೀನಾ ಕಪೂರ್ ಅವರು 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಮತ್ತು 'ದಿ ಕ್ರ್ಯೂ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಲಿದ್ದಾರೆ.