Aishwarya Rai Controversies: ಪನಾಮ ಪೇಪರ್ಸ್ ಕೇಸ್- ಬೋಲ್ಡ್ ಸೀನ್!
ಬಾಲಿವುಡ್ (Bollywood) ನಟಿ ಐಶ್ವರ್ಯಾ ರೈ (Aishwariya Rai) ಅವರು 2016 ರ ಪನಾಮ ಪೇಪರ್ಸ್ (Panama Papers) ತೆರಿಗೆ ಸೋರಿಕೆ ಪ್ರಕರಣವನ್ನುಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನಿನ್ನೆ ಅಂದರೆ ಡಿಸೆಂಬರ್ 20ರಂದು ಜಾರಿ ನಿರ್ದೇಶನಾಲಯದಿಂದ (ED) ಐಶ್ವರ್ಯಾ ರೈ ಸಮನ್ಸ್ ಪಡೆದರು. ಈ ಕಾರಣದಿಂದ ನಟಿ ಐಶ್ವರ್ಯಾ ರೈ ಸುದ್ದಿಯಲ್ಲಿದ್ದಾರೆ. ಆಕೆ ದೆಹಲಿಯಲ್ಲಿ ಅಧಿಕಾರಿಗಳ ಮುಂದೆ ಹಾಜರಾದರು ಎಂದು ವರದಿಯಾಗಿದೆ. ಇದಲ್ಲದೆ ಐಶ್ವರ್ಯಾ ರೈ ಅವರ ಹಿಂದಿನ ಕಂಟ್ರವರ್ಸಿಗಳ ವಿವರ ಇಲ್ಲಿದೆ.
ಇಡಿ ಅಧಿಕಾರಿಗಳು ಐಶ್ವರ್ಯಾ ರೈ ಅವರಿಗೆ ಗೆ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳಿಂದ ಪನಾಮಾ ಪೇಪರ್ಸ್ ಪ್ರಕರಣದ ತನಿಖೆ ನಡೆಯುತ್ತಿದೆ. ರಾಜಕಾರಣಿಗಳು, ನಟರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳು ಸೇರಿದಂತೆ ಭಾರತದ 500 ಕ್ಕೂ ಹೆಚ್ಚು ವ್ಯಕ್ತಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಎಲ್ಲರೂ ತೆರಿಗೆ ವಂಚನೆ ಆರೋಪ ಹೊತ್ತಿದ್ದಾರೆ.
ಈ ರೀತಿ ಯಾವುದೇ ವಿವಾದದಲ್ಲಿ ಐಶ್ವರ್ಯಾ ಹೆಸರು ಬರುತ್ತಿರುವುದು ಇದೇ ಮೊದಲಲ್ಲ. ಅವರ ರಿಲೆಷನ್‌ಶಿಪ್‌ಗಳಿಂದ ಹಿಡಿದು ಅವರ ವೃತ್ತಿಜೀವನದ ನಿರ್ಧಾರಗಳ ಕಾರಣದಿಂದ ನಟಿ ಆಗಾಗ ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ ರೈಗೆ ಸಂಬಂಧಿಸಿದ ಕೆಲವು ಶಾಕಿಂಗ್ ವಿವಾದಗಳು ಇಲ್ಲಿವೆ.
ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್: ಐಶ್ವರ್ಯಾ ರೈ ಅವರ ವಿವಾದಗಳಲ್ಲಿ ಸಲ್ಮಾನ್ ಖಾನ್ ಜೊತೆಯ ಅವರ ಸಂಬಂಧ ಅಗ್ರಸ್ಥಾನದಲ್ಲಿದೆ. ಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯಾ ಮತ್ತು ಸಲ್ಮಾನ್ ಡೇಟಿಂಗ್ ಆರಂಭಿಸಿದ್ದರು ಎನ್ನಲಾಗಿದೆ. ಆದರೆ ಅದು ಶೀಘ್ರದಲ್ಲೇ ಕೊನೆಗೊಂಡಿತು. ನಟಿ ಒಮ್ಮೆ ಸಲ್ಮಾನ್ ತನ್ನ ಮೇಲೆ ದೌರ್ಜನ್ಯ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ನಂತರ, ಅವರು 2001 ರಲ್ಲಿ ಬೇರ್ಪಟ್ಟರು.
ಬಾಲ ಕಾರ್ಮಿಕರು: 2018 ರಲ್ಲಿ, ಐಶ್ವರ್ಯಾ ರೈ ದೊಡ್ಡ ಆಭರಣ ಬ್ರ್ಯಾಂಡ್‌ಗಾಗಿ ಮಾಡಿದ ಫೋಟೋಶೂಟ್ ವಿವಾದವನ್ನು ಸೃಷ್ಟಿಸಿತು. ಫೋಟೋದಲ್ಲಿ, ಐಶ್ವರ್ಯಾ ಎಲ್ಲಾ ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾದ ಆಭರಣಗಳೊಂದಿಗೆ ಇದ್ದಾರೆ ಮತ್ತು ಒಂದು ಮಗುವಿ ಛತ್ರಿ ಹಿಡಿದಿದೆ. ಇದರಿಂದಾಗಿ ಐಶ್ವರ್ಯಾ ರೈ ಬಾಲ ಕಾರ್ಮಿಕರ ಆರೋಪಗಳನ್ನು ಎದುರಿಸಿದರು.
ರಣಬೀರ್ ಕಪೂರ್ ಜೊತೆ ಬೋಲ್ಡ್ ಸೀನ್: ಕೆಲವು ವರ್ಷಗಳ ಹಿಂದೆ, ಐಶ್ವರ್ಯಾ ರೈ ಅವರು ರಣಬೀರ್ ಕಪೂರ್ ಅವರ ಜೊತೆ ಏ ದಿಲ್ ಹೇ ಮುಷ್ಕಿಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆಗಿನ ಬೋಲ್ಡ್ ಹಾಗೂ ಇಂಟಿಮೇಟ್ ನಟಿ ಸುದ್ದಿಯಲ್ಲಿದ್ದರು. ಈ ಸೀನ್‌ಗಳ ಕಾರಣದಿಂದ ಬಚ್ಚನ್ ಕುಟುಂಬಸಹ ಅಸಮಾಧನಗೊಂಡಿತ್ತು ಮತ್ತು ಅವುಗಳನ್ನು ಸಿನಿಮಾದಿಂದ ತೆಗೆದು ಹಾಕುವಂತೆ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಅವರಿಗೆಮನವಿ ಮಾಡಿದ್ದರು ಎಂದು ಹೇಳಲಾಗಿದೆ.
ಅಮಿತಾಭ್ ಜೊತೆಗಿನ ಲಿಂಕ್-ಅಪ್ ವದಂತಿಗಳು: ಐಶ್ವರ್ಯಾ ಎದುರಿಸಿದ ಅತಿ ಕೆಟ್ಟ ವದಂತಿಗಳಲ್ಲಿ ಇದು ಒಂದಾಗಿದೆ. ಅವರ ಮಾವ ಅಮಿತಾಬ್ ಬಚ್ಚನ್ ಜೊತೆ ಲಿಂಕಪ್ ವಿವಾದ. ಇಬ್ಬರೂ ಒಟ್ಟಿಗೆ ಇರುವ ಚಿತ್ರವೊಂದು ವೈರಲ್ ಆಗಿತ್ತು. ಅದರ ನಂತರ ಅವರು ಡೇಟಿಂಗ್ ಮಾಡುತ್ತಿರುವ ಬಗ್ಗೆ ವದಂತಿಗಳು ಹಬ್ಬಿದ್ದವು.
ಹೃತಿಕ್ ರೋಷನ್ ಜೊತೆಯ ಕಿಸ್ ಸೀನ್: ಧೂಮ್ 2 ಸಿನಿಮಾದದಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ನಡುವೆ ಕೆಲವು ನಿಮಿಷಗಳ ಚುಂಬನದ ದೃಶ್ಯವಿತ್ತು. ಈ ದೃಶ್ಯವನ್ನು ಮಾಡಿದ ನಂತರ, ಐಶ್ವರ್ಯಾ ಕಾನೂನು ತೊಂದರೆಗೆ ಸಿಲುಕಿದರು. ಈ ದೃಶ್ಯದಿಂದ ನಾವು ಕಂಫರ್ಟೇಬಲ್ ಆಗಿಲ್ಲ ಎಂದು ದೇಶದ ಅನೇಕ ಜನರು ನಟಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಅಭಿಷೇಕ್ ಬಚ್ಚನ್ ಹೃತಿಕ್ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದರಂತೆ. ಕೋಪಗೊಂಡ ಬಚ್ಚನ್ ಕುಟುಂಬವು ಈ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ.
ಅಜಯ್ ದೇವಗನ್ ಜೊತೆ ಕಿಸ್: ಕೆಲವು ವರ್ಷಗಳ ಹಿಂದೆ, ಅಜಯ್ ದೇವಗನ್ ಅವರು ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಅವರನ್ನು ವೇದಿಕೆಯಲ್ಲಿ ಹಗ್ ಮಾಡಿದರು. ಆದಾಗ್ಯೂ, ಹೊರಬಂದ ಆ ಸಮಯದ ಫೋಟೋವನ್ನು ಇಬ್ಬರೂ ಚುಂಬಿಸುತ್ತಿರುವಂತೆ ಕಾಣುವ ಆಂಗಲ್‌ನಿಂದ ತೆಗೆಯಲಾಗಿತ್ತು. ಆದರೆ ಅವರಿಬ್ಬರು ಹಗ್ ಮಾಡಿದ್ದರು ಅಷ್ಟೇ.