ತನ್ನನ್ನು ಕೊಲ್ಲಲ್ಲು ಸುಪಾರಿ ನೀಡಿದ್ದಾಳೆ: ರಾಖಿ ಸಾವಂತ್ ವಿರುದ್ಧ ಅದಿಲ್ ಖಾನ್ ದೂರು
ರಾಖಿ ಸಾವಂತ್ (Rakhi Sawant) ಮತ್ತು ಆದಿಲ್ ಖಾನ್ ದುರಾನಿ (Adil Khan Durrani) ಎಲ್ಲಾ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಇವರ ಮದುವೆ ನಂತರ ಪ್ರತಿದಿನ ಒಂದಲ್ಲ ಒಂದು ನಾಟಕ ನಡೆಯುತ್ತಲೇ ಇದೆ. ಈಗ ರಾಖಿ ಸಾವಂತ್ ತನ್ನನ್ನು ಕೊಲ್ಲಲು ಸುಪಾರಿ ನೀಡಿದ್ದಾಳೆ ಎಂದು ಆದಿಲ್ ಖಾನ್ ದುರಾನಿ ಬಹಿರಂಗಪಡಿಸಿದ್ದಾರೆ ಮತ್ತು ಅವರ ವಿರುದ್ಧ ಪೋಲಿಸ್ ದೂರು ಸಲ್ಲಿದ್ದಾರೆ
ಆದಿಲ್ ತನಗೆ ಮೋಸ ಮಾಡಿ ಥಳಿಸಿದ್ದಾರೆ ಎಂದು ರಾಖಿ ಆರೋಪಿಸಿದ್ದರು. ಬಲವಂತವಾಗಿ ತನ್ನನ್ನು ಹೊಡೆಯುವ ಮೂಲಕ ಇಸ್ಲಾಂ ಸ್ವೀಕರಿಸುವಂತೆ ಮಾಡಿದ್ದಾರೆ ಎಂದು ಆಕೆ ಹೇಳಿದ್ದಳು. ಬಳಿಕ ಆದಿಲ್ ನನ್ನು ಪೊಲೀಸರು ಬಂಧಿಸಿದ್ದರು.
ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾದ ಅದಿಲ್, ಪತ್ರಿಕಾ ಗೋಷ್ಠಿ ನಡೆಸಿ ರಾಖಿ ಕುರಿತ ಎಲ್ಲ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ರಾಖಿ ತನಗೆ ಚೌಕಟ್ಟು ಹಾಕಿದ್ದಾಳೆ. ಆಕೆ ತನಗೆ ಕೆಟ್ಟದಾಗಿ ಹೊಡೆಯುತ್ತಿದ್ದಳು ಎಂದು ಹೇಳಿಕೆ ನೀಡಿದ್ದಾರೆ.
ರಾಖಿ ತನ್ನ ನಗ್ನ ವೀಡಿಯೋಗಳನ್ನು ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಅವರು ಹಂಚಿಕೊಂಡಿದ್ದಾರೆ. ಅವರು ರಾಖಿ ಸಾವಂತ್‌ಗೆ ಹಲವು ಐಷಾರಾಮಿ ಮತ್ತು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂದೂ ಅವರು ಬಹಿರಂಗಪಡಿಸಿದ್ದಾರೆ.
ರಾಖಿ ತನ್ನ ಗರ್ಭಪಾತದ ಬಗ್ಗೆ ಮತ್ತು ತಾನು ಎಂದಿಗೂ ತಾಯಿಯಾಗಲು ಸಾಧ್ಯವಿಲ್ಲ ಎಂದು ಸುಳ್ಳು ಹೇಳಿದ್ದಾಳೆ ಎಂದು ಆದಿಲ್ ಖಾನ್ ದುರಾನಿ ಹೇಳಿದ್ದಾರೆ. ಆಕೆಯ ಗರ್ಭಾಶಯವನ್ನು ತೆಗೆದಿದ್ದಾರೆ ಎಂದೂ ಹೇಳಿದ್ದಳು ಎಂದು ಅರೋಪಿಸಿದ್ದರು.
ಆಗ ರಾಖಿ, ಆದಿಲ್ ಸುಳ್ಳು ಹೇಳುತ್ತಿದ್ದಾನೆ ಮತ್ತು ಅವನು ತನ್ನನ್ನು ಹೊಡೆಯುತ್ತಿದ್ದ. ತನ್ನ ನಗ್ನ ವೀಡಿಯೋಗಳನ್ನು ಮಾರಾಟ ಮಾಡಿ ತನ್ನೆಲ್ಲ ಹಣವನ್ನು ದೋಚಿದ್ದಾನೆ ಎಂದು ಹೇಳಿದ್ದಾರೆ.
ಆದರೆ ರಾಖಿ ಅವರ ಆತ್ಮೀಯ ಸ್ನೇಹಿತೆ ರಾಜಶ್ರೀ ಮೋರ್ ಅವರು ರಾಖಿಯ ವಿರುದ್ಧ ಪುರಾವೆ ನೀಡಿದ ನಂತರ ಅವರ ತೊಂದರೆಗಳು ಹೆಚ್ಚಾದವು. ರಾಖಿ ಸಾವಂತ್ ವಿರುದ್ಧ ರಾಜಶ್ರೀ ಮತ್ತು ಆದಿಲ್ ಕೈ ಜೋಡಿಸಿದರು.
ಇತ್ತೀಚಿನ ಬೆಳವಣಿಗೆ ಏನೆಂದರೆ ಆದಿಲ್ ಖಾನ್ ದುರಾನಿ ರಾಖಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಆದಿಲ್ ವಿರುದ್ಧ ರಾಖಿ ವಿವಿಧ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವಳು ಕೇವಲ ಸುಳ್ಳು ಹೇಳುತ್ತಿದ್ದಾಳೆ ಎಂದು ಆದಿಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುಪಾರಿ ಕಿಲ್ಲರ್‌ಗಳ ವಿರುದ್ಧ ದೂರು ದಾಖಲಿಸಿದ್ದೇನೆ. ನನ್ನ ಜೀವ ಬೆದರಿಕೆ ಇದೆ. ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಓಶಿವಾರ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದೇನೆ. ರಾಖಿ ಸಾವಂತ್ ನನ್ನನ್ನು ಕೊಲ್ಲಲು ಬಯಸಿದ್ದಾಳೆ. ರಾಖಿ ಶೆಲ್ಲಿ ಮೂಲಕ ಈ ಯೋಜನೆ ರೂಪಿಸಿದ್ದರು. ಈ ಬಗ್ಗೆ ಮೈಸೂರು ಪೊಲೀಸರಿಗೂ ತಿಳಿಸಿದ್ದೇನೆ. ತನ್ನನ್ನು ಕೊಲ್ಲಲು ರಾಖಿ ಸುಪಾರಿ ಕೊಟ್ಟಿದ್ದಾಳೆ ಎಂದು ಆದಿಲ್ ಬಹಿರಂಗಪಡಿಸಿದ್ದಾರೆ.
ಶೆಲ್ಲಿ ಲಾಥರ್ ಗೆ ರಾಖಿ ಸುಪಾರಿ ನೀಡಿದ್ದಾಳೆ ಎಂದು ಆದಿಲ್ ಹೇಳಿದ್ದಾರೆ. ತನಗೆ ಏನಾದರೂ ಸಂಭವಿಸಿದರೆ ಅಥವಾ ಅವನು ಸತ್ತರೆ, ರಾಖಿ ಮತ್ತು ಶೆಲ್ಲಿಯನ್ನು ದೂಷಿಸಬೇಕು ಎಂದಿದ್ದಾರೆ. ರಾಖಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟಕ್ಕೆ ಬರಲಿ, ಮಾಧ್ಯಮಗಳಲ್ಲ ಎಂದು ಬಹಿರಂಗವಾಗಿಯೇ ಕೇಳಿಕೊಂಡಿದ್ದಾರೆ.