ಮೆಕ್ಕಾದಿಂದ ವಾಪಸಾದ ರಾಖಿ ಸಾವಂತ್: ನನ್ನ ರಾಖಿ ಅಲ್ಲ ಫಾತಿಮಾ ಅಂತ ಕರೀರಿ, ದೇವರೇ ನನ್ಗೆ ಹೀಗೆ ಮಾಡಿದ್ದಾರೆ ಅಂದ ನಟಿ
ಇತ್ತೀಚೆಗೆ ಉಮ್ರಾ ಮುಗಿಸಿ ಮೆಕ್ಕಾದಿಂದ ನಟಿ ರಾಖಿ ಸಾವಂತ್ ವಾಪಸಾಗಿದ್ದು, ಈ ವೇಳೆ ಪಾಪರಾಜಿಗಳಿಗೆ ಹಾಗೂ ಅಭಿಮಾನಿಗಳಿಗೆ ನನ್ನನ್ನು ರಾಖಿ ಅಲ್ಲ ಫಾತಿಮಾ ಅಂತ ಕರೀರಿ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ರಾಖಿ ಸಾವಂತ್ ಅಗಾಗ್ಗೆ ಸುದ್ದಿಯಲ್ಲಿರುತ್ತಾರೆ. ನಟನೆಗಿಂತ ಇತರೆ ಕಾರಣಗಳಿಗೇ ಸುದ್ದಿಯಲ್ಲಿರುತ್ತಾರೆ. ವಿಚ್ಛೇದಿತ ಪತಿ ಆದಿಲ್ ಜೊತೆಗಿನ ಜಗಳದ ಬಗ್ಗೆ ನಾನಾ ಚರ್ಚೆಗಳಾಗುತ್ತಿದೆ. ಬಳಿಕ, ಇತ್ತೀಚೆಗೆ ಉಮ್ರಾ ಮುಗಿಸಿ ಮೆಕ್ಕಾದಿಂದ ವಾಪಸಾಗಿದ್ದಾರೆ ನಟಿ ರಾಖಿ ಸಾವಂತ್.
ದೆಹಲಿ ವಿಮಾನ ನಿಲ್ದಾಣದಲ್ಲಿ ನಟಿಗೆ ಅವರ ಅಭಿಮಾನಿಗಳು ಮತ್ತು ಪಾಪರಾಜಿಗಳಿಂದ ಭವ್ಯವಾದ ಪುಷ್ಪ ಸ್ವಾಗತವನ್ನು ನೀಡಲಾಗಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿಯೂ ಆಗಿರೋ ಸೌದಿ ಅರೇಬಿಯಾಕ್ಕೆ ಕೆಲವು ಸ್ನೇಹಿತರೊಂದಿಗೆ ತೀರ್ಥಯಾತ್ರೆಗೆ ತೆರಳಿದ್ದರು.
ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಆದಿಲ್ ಖಾನ್ ದುರಾನಿ ವಿವಾಹೇತರ ಸಂಬಂಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹಾಗೂ ಇತರೆ ಹಲವಾರು ಆರೋಪಗಳನ್ನು ನಟಿ ಹೊರಿಸಿದ್ದರು. ಈ ಹಿನ್ನೆಲೆ ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರನ್ನು ಈ ವರ್ಷದ ಫೆಬ್ರವರಿ 7 ರಂದು ಬಂಧಿಸಲಾಯಿತು. ಜೈಲಿನಿಂದ ಹೊರಬಂದ ನಂತರ ರಾಖಿ ಸಾವಂತ್ ಮತ್ತು ಆಕೆಯ ಮಾಜಿ ಪತಿ ಆದಿಲ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಜಗಳದ ಮಧ್ಯೆ, ನಟಿ ಮೆಕ್ಕಾದಲ್ಲಿ ಉಮ್ರಾಗೆ ಹೋದರು ಮತ್ತು ತೀರ್ಥಯಾತ್ರೆಯ ವಿವಿಧ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈಗ, ನಟಿ ಆಗಮಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಹೂವಿನ ಸ್ವಾಗತ ದೊರೆತಿದೆ.
ಬಳಿಕ, ನಟಿ ಹೊರಡುವಾಗ, ತನ್ನ ಸುತ್ತಲೂ ಜಮಾಯಿಸಿದ ಪಾಪರಾಜಿಗಳಿಗೆ, "ರಾಖಿ ಅಲ್ಲ, ನನ್ನನ್ನು ಫಾತಿಮಾ ಎಂದು ಕರೆಯಿರಿ" ಎಂದು ಹೇಳಿದಳು. ಬಳಿಕ, ಛಾಯಾಗ್ರಾಹಕರು ಅವಳನ್ನು ಫಾತಿಮಾ ಎಂದು ಕರೆಯಲು ಪ್ರಾರಂಭಿಸಿದರು.
ಇನ್ನು, ಒಬ್ಬ ವ್ಯಕ್ತಿ ರಾಖಿಯ ಕುತ್ತಿಗೆಗೆ ಹಾರವನ್ನು ಹಾಕಲು ಪ್ರಯತ್ನಿಸಿದನು. ಆ ವೇಳೆ, ರಾಖಿ ಹಿಂದೆ ಸರಿದು ಅವನ ಕೈಯಿಂದ ಹಾರವನ್ನು ತೆಗೆದುಕೊಂಡಿದ್ದಾರೆ.
ಬಳಿಕ, ದಾಖಲೆಗಳಲ್ಲಿ ನಿಮ್ಮ ಹೆಸರನ್ನು ಬದಲಾಯಿಸಿದ್ದೀರಾ ಎಂದು ರಾಖಿ ಸಾವಂತ್‌ಗೆ ವರದಿಗಾರರೊಬ್ಬರು ಕೇಳಿದಾಗ, “ದೇವರು ನನ್ನನ್ನು ಹೀಗೆ ಮಾಡಿದ್ದಾನೆ, ನಾನು ಹೇಗಿದ್ದೇನೆಯೋ ಹಾಗೆಯೇ ಅವನು ನನ್ನನ್ನು ಪ್ರೀತಿಸುತ್ತಾನೆ. ನಾನು ದಾಖಲೆಗಳನ್ನು ಅಥವಾ ನನ್ನ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ’’ ಎಂದೂ ಹೇಳಿದ್ದಾರೆ. ಆದಿಲ್ ಖಾನ್ ಜೊತೆಗಿನ ಮದುವೆಗಾಗಿ ರಾಖಿ ಇಸ್ಲಾಂಗೆ ಮತಾಂತರಗೊಂಡಿದ್ದರು.
ರಾಖಿ ಸಾವಂತ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಮೆಕ್ಕಾದಿಂದ ಅನೇಕ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಒಂದರಲ್ಲಿ, ಕಾಬಾದ ಪಕ್ಕದಲ್ಲಿ ನಿಂತು ಆದಿಲ್ ತನ್ನ ವಿರುದ್ಧ ಮಾಡಿದ ವಿವಿಧ ಆರೋಪಗಳ ಬಗ್ಗೆ ಕ್ಯಾಮೆರಾದಲ್ಲಿ ನಟಿ ಅಳುವುದು ಕಂಡುಬಂದಿದೆ.