- Home
- Entertainment
- Cine World
- ಶಾರೂಕ್ ಖಾನ್ ಜೊತೆ ನಟಿಸಿ ಫೇಮಸ್ ಆಗಿದ್ದ ಈ ನಟಿ ಜೀವನ ನಡೆಸೋಕೆ ಟಾಯ್ಲೆಟ್ ಕ್ಲೀನ್ ಮಾಡ್ತಿದ್ರು!
ಶಾರೂಕ್ ಖಾನ್ ಜೊತೆ ನಟಿಸಿ ಫೇಮಸ್ ಆಗಿದ್ದ ಈ ನಟಿ ಜೀವನ ನಡೆಸೋಕೆ ಟಾಯ್ಲೆಟ್ ಕ್ಲೀನ್ ಮಾಡ್ತಿದ್ರು!
ಬಾಲಿವುಡ್‌ನಲ್ಲಿ ಈಗ ಹೆಸರು ಮಾಡಿರುವ ಹಲವಾರು ನಟ-ನಟಿಯರು ಈ ಹಿಂದೆ ಜೀವನ ನಡೆಸೋಕೆ ಹಲವು ಕೆಲಸಗಳನ್ನು ಮಾಡಿದ್ದರು. ವೈಟರ್, ಕ್ಲೀನರ್, ಮ್ಯಾನೇಜರ್, ಡ್ರೈವರ್ ಆಗಿ ಕೆಲಸ ಮಾಡಿದವರೂ ಇದ್ದಾರೆ. ಹಾಗೆಯೇ ಬಾಲಿವುಡ್‌ನ ಈ ಖ್ಯಾತ ನಟಿ ಹಿಂದೊಮ್ಮೆ ಜೀವನ ನಡೆಸೋಕೆ ಟಾಯ್ಲೆಟ್ ಕ್ಲೀನ್ ಮಾಡ್ತಿದ್ರಂತೆ.

ದೀಪಿಕಾ ಪಡುಕೋಣೆಯಿಂದ ಆರಂಭಿಸಿ ನಯನತಾರಾ ವರೆಗೆ ಹಲವಾರು ನಟಿಯರು ಶಾರೂಕ್ ಖಾನ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದರಲ್ಲಿ ಬಹುತೇಕ ನಟಿಯರು ಸೂಪರ್‌ಸ್ಟಾರ್ ನಟಿಗಳಾಗಿದ್ದಾರೆ. ಎಸ್‌ಆರ್‌ಕೆಯೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅಂತಹ ನಟಿಯೊಬ್ಬರು ಹೀಗೆಯೇ ಸಕ್ಸಸ್ ಆದರು.
ಆದರೆ ಈ ನಟಿ ತಮ್ಮ 17ನೇ ವಯಸ್ಸಿನಲ್ಲಿ ಜೀವನ ನಡೆಸಲು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಆಕೆ ಅತ್ಯಂತ ಶ್ರೀಮಂತ ಪಾಕಿಸ್ತಾನಿ ನಟಿ. ಇತ್ತೀಚೆಗಷ್ಟೇ ಮತ್ತೆ ಮದುವೆಯಾಗಿ ಒಂದು ಮಗು ಕೂಡ ಇದೆ. ಆಕೆ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಮಹಿರಾ ಖಾನ್.
ಮಹಿರಾ ಖಾನ್ 2006ರಲ್ಲಿ ವಿಜೆ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಜನಪ್ರಿಯ ಪಾಕಿಸ್ತಾನಿ ನಿರ್ದೇಶಕ ಶೋಯೆಬ್ ಮನ್ಸೂರ್ ಅವರ ನಿರ್ದೇಶನದ 'ಬೋಲ್' ಚಿತ್ರದಲ್ಲಿ ನಟಿಸಿದರು. ಆ ನಂತರ ಟಿವಿ ಶೋ 'ಹಮ್ಸಫರ್'ನಲ್ಲಿ ಅವರ ಪಾತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಹಿರಾ ಖಾನ್, ಹೆಚ್ಚು ಫೇಮಸ್ ಆಗಲು ಕಾರಣವಾಯಿತು.
ನಂತರ, 2017ರಲ್ಲಿ, ನಟಿ 'ರಯೀಸ್' ಚಿತ್ರದಲ್ಲಿ ಶಾರೂಕ್ ಖಾನ್ ಅವರೊಂದಿಗೆ ರೋಮ್ಯಾನ್ಸ್ ಮಾಡಿದರು. ರಾಹುಲ್ ಧೋಲಾಕಿಯಾ ಅವರು ನಿರ್ದೇಶಿಸಿದ ಈ ಚಿತ್ರವು ಸಕ್ಸಸ್ ಆಯಿತು. ಚಲನಚಿತ್ರದಲ್ಲಿ ಎಸ್‌ಆರ್‌ಕೆ ಅವರೊಂದಿಗಿನ ಕೆಮೆಸ್ಟ್ರಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು. ಈ ಚಿತ್ರವು ಕಮರ್ಷಿಯಲ್ ಹಿಟ್ ಆಗಿತ್ತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಿಶ್ವಾದ್ಯಂತ 281.45 ಕೋಟಿ ರೂ. ಗಳಿಸಿತು.
ಮಹಿರಾ ಖಾನ್ ತನ್ನ ಅಧ್ಯಯನಕ್ಕಾಗಿ 17ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದರು. ಈ ಸಂದರ್ಭದಲ್ಲಿ ನಟಿ, ಆರ್ಥಿಕ ಸಮಸ್ಯೆಯಿಂದಾಗಿ ಶೌಚಾಲಯ ಸ್ವಚ್ಛಗೊಸುವ, ಕಸವನ್ನು ಗುಡಿಸುವ ಕೆಲಸ ಮಾಡುತ್ತಿದ್ದರು. ನಟಿ ನಂತರ ಲಾಸ್ ಏಂಜಲೀಸ್‌ನ ಸ್ಥಳೀಯ ಅಂಗಡಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿದರು.
2021ರಲ್ಲಿ, ನಟಿ ಫ್ಯೂಶಿಯಾ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದರು. 'ನಾನು ಜೀವನದಲ್ಲಿ ಹಲವಾರು ಬಾರಿ ಸಂಕಷ್ಟದ ಸಮಯವನ್ನು ನೋಡಿದ್ದೇನೆ. ಮಹಡಿಗಳನ್ನು ಗುಡಿಸಿದ್ದೇನೆ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದೇನೆ. ನಾವು ರೆಸ್ಟೋರೆಂಟ್‌ಗಳಿಗೆ ಹೋಗಿ ದುಡ್ಡಿಲ್ಲದೆ ಒಂದು ಮೀಲ್ಸ್ ಹಂಚಿಕೊಳ್ಳುತ್ತಿದ್ದೆವು' ಎಂದು ಮಹಿರಾ ಖಾನ್ ಹೇಳಿದ್ದಾರೆ.
ಮಹಿರಾ ಖಾನ್ ಪಾಕಿಸ್ತಾನದ ಅತ್ಯಂತ ಶ್ರೀಮಂತ ನಟಿ ಮತ್ತು ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ನಟಿ ವರದಿಯ ಪ್ರಕಾರ ಪ್ರತಿ ಚಿತ್ರಕ್ಕೆ 3 ರಿಂದ 5 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ . ಬರೋಬ್ಬರಿ 7 ಮಿಲಿಯನ್ USD (ಅಂದಾಜು 58 ಕೋಟಿ ರೂಪಾಯಿ) ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆಂದು ತಿಳಿದುಬಂದಿದೆ.
ಮುಂಬರುವ ಪಾಕಿಸ್ತಾನದ ಮೊದಲ ಮೂಲ ನೆಟ್‌ಫ್ಲಿಕ್ಸ್ ಸರಣಿಯ ಜೋ ಬಚಾಯ್ ಹೈ ಸಾಂಗ್ ಸಮಿತ್ ಲೋಗಾಗಿ ಮಹಿರಾ ಖಾನ್ ಫವಾದ್ ಖಾನ್ ಜೊತೆ ಜೋಡಿಯಾಗಲಿದ್ದಾರೆ. ಈ ಸಿರೀಸ್ ಫರ್ಹತ್ ಇಶ್ತಿಯಾಕ್ ಅವರ 2013 ರ ಹೆಚ್ಚು ಮಾರಾಟವಾದ ಉರ್ದು ಭಾಷೆಯ ಕಾದಂಬರಿಯ ಅಧಿಕೃತ ರೂಪಾಂತರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.