- Home
- Entertainment
- Cine World
- Priyamani: 'ರಾವಣ' ಬಳಿಕ ಬಾಲಿವುಡ್‌ನಲ್ಲಿ ಹೆಚ್ಚಿನ ಅವಕಾಶ ಸಿಗುತ್ತೆ ಅಂದುಕೊಂಡಿದ್ದೆ, ಆದ್ರೆ ಹಾಗಾಗಲಿಲ್ಲ; ಸೀಕ್ರೆಟ್ ರಿವೀಲ್!
Priyamani: 'ರಾವಣ' ಬಳಿಕ ಬಾಲಿವುಡ್‌ನಲ್ಲಿ ಹೆಚ್ಚಿನ ಅವಕಾಶ ಸಿಗುತ್ತೆ ಅಂದುಕೊಂಡಿದ್ದೆ, ಆದ್ರೆ ಹಾಗಾಗಲಿಲ್ಲ; ಸೀಕ್ರೆಟ್ ರಿವೀಲ್!
"ನಾನು ಹಿಂದಿ ಸಿನಿಮಾಗಳನ್ನು ನೋಡುತ್ತಲೇ ಬೆಳೆದವಳು. ಹಾಗಾಗಿ 'ರಾವಣ' ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿಸುವ ಅವಕಾಶ ಸಿಕ್ಕಾಗ ನಾನು ತುಂಬಾ ರೋಮಾಂಚನಗೊಂಡಿದ್ದೆ. ಆ ಚಿತ್ರದ ನಂತರ ಬಾಲಿವುಡ್‌ನಲ್ಲಿ ನನಗೆ ಸಾಕಷ್ಟು ಅವಕಾಶಗಳು ಲಭಿಸಬಹುದು ಎಂದು ನಾನು ನಿರೀಕ್ಷಿಸಿದ್ದೆ' ಎಂದಿಿದ್ದಾರೆ.

'ರಾವಣ' ನಂತರ ಬಾಲಿವುಡ್‌ನಲ್ಲಿ ಹೆಚ್ಚಿನ ಅವಕಾಶ ಸಿಗುತ್ತೆ ಅಂದುಕೊಂಡಿದ್ದೆ! ಮನದಾಳದ ಮಾತು ಹಂಚಿಕೊಂಡ ಬಹುಭಾಷಾ ನಟಿ ಪ್ರಿಯಾಮಣಿ!
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ, ಈಗ ಕೇವಲ ಸೌತ್ ಸಿನಿಮಾಕ್ಕಷ್ಟೇ ಸೀಮಿತವಾಗಿಲ್ಲ. 'ದಿ ಫ್ಯಾಮಿಲಿ ಮ್ಯಾನ್', 'ದಿ ಗುಡ್ ವೈಫ್' ಅಂತಹ ವೆಬ್ ಸರಣಿಗಳು ಹಾಗೂ ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರದ ಯಶಸ್ಸಿನ ನಂತರ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಆದರೆ, ಬಾಲಿವುಡ್‌ನಲ್ಲಿ ಅವರ ಪಯಣ ಸುಲಭವಾಗಿರಲಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ತಮ್ಮ ಬಾಲಿವುಡ್ ಜರ್ನಿ ಮತ್ತು ವೈಯಕ್ತಿಕ ಬೆಳವಣಿಗೆಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
'ರಾವಣ' ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು:
ಪ್ರಿಯಾಮಣಿ ಅವರ ಹಿಂದಿ ಚಿತ್ರರಂಗದ ಪಯಣ ಆರಂಭವಾಗಿದ್ದು ಮಣಿರತ್ನಂ ನಿರ್ದೇಶನದ 'ರಾವಣ' ಚಿತ್ರದ ಮೂಲಕ. ಈ ಬಗ್ಗೆ ಮಾತನಾಡಿರುವ ಅವರು, "ನಾನು ಹಿಂದಿ ಸಿನಿಮಾಗಳನ್ನು ನೋಡುತ್ತಲೇ ಬೆಳೆದವಳು. ಹಾಗಾಗಿ 'ರಾವಣ' ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿಸುವ ಅವಕಾಶ ಸಿಕ್ಕಾಗ ನಾನು ತುಂಬಾ ರೋಮಾಂಚನಗೊಂಡಿದ್ದೆ.
ಅಭಿಷೇಕ್ ಬಚ್ಚನ್, ರವಿ ಕಿಶನ್ ಮತ್ತು ಪಂಕಜ್ ತ್ರಿಪಾಠಿ ಅವರಂತಹ ಅದ್ಭುತ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆ ಚಿತ್ರದ ನಂತರ ಬಾಲಿವುಡ್‌ನಲ್ಲಿ ನನಗೆ ಸಾಕಷ್ಟು ಅವಕಾಶಗಳು ಲಭಿಸಬಹುದು ಎಂದು ನಾನು ನಿರೀಕ್ಷಿಸಿದ್ದೆ," ಎಂದು ಹೇಳಿದ್ದಾರೆ.
ಅವಕಾಶಗಳಿದ್ದರೂ ಚ್ಯೂಸಿ ಆಗಿದ್ದ ನಟಿ:
'ರಾವಣ' ನಂತರ ಯಾಕೆ ಬಾಲಿವುಡ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಕೆಲವು ಅವಕಾಶಗಳು ಬಂದವು. ಆದರೆ ನಾನು ಪಾತ್ರಗಳ ಆಯ್ಕೆಯಲ್ಲಿ ಬಹಳ ಜಾಗರೂಕಳಾಗಿದ್ದೆ. ಕೆಲವು ಆಫರ್‌ಗಳು ನನಗೆ ಇಷ್ಟವಾದರೆ, ಇನ್ನು ಕೆಲವು ಅಷ್ಟೇನೂ ಇಷ್ಟವಾಗಲಿಲ್ಲ. ನಾನು ಯಾವುದಕ್ಕೂ ಬೇಸರ ಮಾಡಿಕೊಳ್ಳಲಿಲ್ಲ, ಏಕೆಂದರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾನು ಈಗಾಗಲೇ ಬ್ಯುಸಿಯಾಗಿದ್ದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರರಂಗದಲ್ಲಿ ಗಾಡ್‌ಫಾದರ್ ಇರಲಿಲ್ಲ:
ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡ ಪ್ರಿಯಾಮಣಿ, "ನಾನು 18ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದೆ. ನನ್ನ ಕುಟುಂಬದಲ್ಲಿ ಯಾರೂ ಈ ಕ್ಷೇತ್ರಕ್ಕೆ ಸೇರಿದವರಲ್ಲ. ನನಗೆ ಮಾರ್ಗದರ್ಶನ ನೀಡಲು ಯಾವುದೇ ಗಾಡ್‌ಫಾದರ್ ಇರಲಿಲ್ಲ. ಆಗಿನ ನನ್ನ ಹಳೆಯ ಫೋಟೋಗಳನ್ನು ನೋಡಿದಾಗ, 'ನಾನು ಯಾಕೆ ಹೀಗಿದ್ದೆ?' ಎಂದು ನಗು ಬರುತ್ತದೆ. ಆಗ ನನಗೆ ಮೇಕಪ್, ಹೇರ್ ಸ್ಟೈಲ್ ಅಥವಾ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಏನೂ ಗೊತ್ತಿರಲಿಲ್ಲ. ಸ್ಟೈಲಿಸ್ಟ್ ಅಥವಾ ಮೇಕಪ್ ಆರ್ಟಿಸ್ಟ್ ಇಟ್ಟುಕೊಳ್ಳಬಹುದು ಎಂಬ ಅರಿವೂ ನನಗಿರಲಿಲ್ಲ. ಎಲ್ಲವನ್ನೂ ನಾನೇ ಕಲಿತುಕೊಂಡೆ," ಎಂದಿದ್ದಾರೆ.
ಪತಿ ಮುಸ್ತಫಾ ಬಂದ ಮೇಲೆ ಬದಲಾದ ಜೀವನ:
ನನ್ನನ್ನು ನಾನು ಹೇಗೆ ಪ್ರೀತಿಸಬೇಕು ಮತ್ತು ಹೇಗೆ ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬುದನ್ನು ಕಲಿತಿದ್ದೇ ತಡವಾಗಿ ಎಂದು ಪ್ರಿಯಾಮಣಿ ಹೇಳಿದ್ದಾರೆ. "2011 ಅಥವಾ 2012ರ ಸುಮಾರಿಗೆ ನನಗೆ ಸ್ಟೈಲಿಸ್ಟ್‌ಗಳ ಮಹತ್ವ ತಿಳಿಯಿತು. ಅದರಲ್ಲೂ ಮುಸ್ತಫಾ ರಾಜ್ (ಪತಿ) ನನ್ನ ಜೀವನಕ್ಕೆ ಬಂದ ನಂತರ, ನನ್ನ ಮೇಲೆ ನಾನು ಹೂಡಿಕೆ ಮಾಡುವುದನ್ನು ಕಲಿತೆ.
ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸಿಕೊಳ್ಳುವುದು, ಅಚ್ಚುಕಟ್ಟಾಗಿ ಕಾಣಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ನನಗೆ ತಿಳಿಯಿತು," ಎಂದು ಪತಿಯ ಪಾತ್ರವನ್ನು ಕೊಂಡಾಡಿದ್ದಾರೆ. ಒಟ್ಟಿನಲ್ಲಿ 'ಪಾರು' ಖ್ಯಾತಿಯ ಪ್ರಿಯಾಮಣಿ ಈಗ ನಟನೆಯ ಜೊತೆಗೆ ತಮ್ಮ ಸ್ಟೈಲಿಂಗ್ ಮೂಲಕವೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

