MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಹಾಡಿನ ಸೀನ್‌ನಲ್ಲಿ ಬೇಕಂತಲೆ ಸತತವಾಗಿ ಮುತ್ತಿಟ್ಟ ಸಹ ನಟ, ಅಸಹಾಯಕತೆ ನೆನೆದು ಕಣ್ಣೀರಿಟ್ಟ ನಟಿ

ಹಾಡಿನ ಸೀನ್‌ನಲ್ಲಿ ಬೇಕಂತಲೆ ಸತತವಾಗಿ ಮುತ್ತಿಟ್ಟ ಸಹ ನಟ, ಅಸಹಾಯಕತೆ ನೆನೆದು ಕಣ್ಣೀರಿಟ್ಟ ನಟಿ

ಸೀನ್ ಇಂಪ್ರೂವ್ ಮಾಡಲು ನಟ ಸೂಚಿಸಿದ್ದ. ಹೀಗಾಗಿ ಹಾಡಿನ ಸೀನ್‌ನಲ್ಲಿ ಸ್ಕ್ರಿಪ್ಟ್‌ನಲ್ಲಿ ಇಲ್ಲದಿದ್ದರೂ ಸತತವಾಗಿ ಮುಟ್ಟಿಟ್ಟ. ಕ್ಯಾಮೆರಾ ಆನ್ ಆಗಿತ್ತು.ಪ್ರತಿಭಟಿಸಲು ಆಗದೆ ಅಸಹಾಯಕಳಾಗಿ ನಿಲ್ಲಬೇಕಾಯಿತು. ಘಟನೆ ನೆನೆದು ನಟಿ ಕಣ್ಣೀರಿಟ್ಟಿದ್ದಾರೆ.

2 Min read
Author : Chethan Kumar
Published : Jun 07 2026, 03:58 PM IST
Share this Photo Gallery
  • FB
  • TW
  • Linkdin
  • Whatsapp
16
ಸತತವಾಗಿ ಮುತ್ತಿಟ್ಟ ನಟ
Image Credit : stockPhoto

ಸತತವಾಗಿ ಮುತ್ತಿಟ್ಟ ನಟ

ರೊಮ್ಯಾಂಟಿಕ್ ಸೀನ್‌ಗಳಲ್ಲಿ ಕೆಲ ನಟರು ವರ್ತನೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವು ಬಾರಿ ಸ್ಕ್ರಿಪ್ಟ್‌ನಲ್ಲಿ ಇಲ್ಲದೇ ಇರುವ ಸೀನ್ ಮಾಡುತ್ತಾರೆ. ಪ್ರಮುಖವಾಗಿ ಕಿಸ್, ತಬ್ಬಿಕೊಳ್ಳುವುದು ಸೇರಿದಂತೆ ಹಲವು ರೊಮ್ಯಾಂಟಿಕ್ ಸೀನ್ ವೇಳೆ ಅತಿಯಾಗಿ ವರ್ತಿಸಿ ನೋವು ತರಿಸುತ್ತಾರೆ ಎಂದು ಮುನ್ನಾ ಬಾಯಿ ಎಂಬಿಬಿಎಸ್ ನಟಿ ಪ್ರಿಯಾ ಬಾಪಟ್ ಹೇಳಿದ್ದಾರೆ. ಇದೇ ವೇಳೆ ಸಹ ನಟ ತನ್ನ ಮೇಲೆ ಸತತವಾಗಿ ಮುತ್ತಿಟ್ಟ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನೋವು ತೋಡಿಕೊಂಡ ಬಾಲಿವುಡ್ ನಟಿ
Image Credit : Instagram

ನೋವು ತೋಡಿಕೊಂಡ ಬಾಲಿವುಡ್ ನಟಿ

ಫಿಲ್ಮ್‌ಪೇರ್ ಸಂದರ್ಶನದಲ್ಲಿ ನಟಿ ಪ್ರಿಯಾ ಕೆಲ ಸ್ಫೋಟಕ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಹಾಡಿನ ಸೀನ್ ಚಿತ್ರೀಕರಣ ಮಾಡಬೇಕಿತ್ತು. ಆರಂಭದಲ್ಲೇ ಸಂಪೂರ್ಣ ಸ್ಕ್ರಿಪ್ಟ್ ಕೇಳಿಸಿದ್ದೇನೆ, ಓದಿದ್ದೇನೆ, ಪ್ರತಿ ಸೀನ್ ಕುರಿತು ತಿಳಿದುಕೊಂಡಿದ್ದೆ. ಎಲ್ಲೂ ಕೂಡ ಕಿಸ್ಸಿಂಗ್, ಅತೀಯಾದ ರೊಮ್ಯಾನ್ಸ್ ಇರಲಿಲ್ಲ. ಆದರೆ ಹಾಡಿನ ಸೀನ್ ಇಂಪ್ರೂವೈಸೇಶನ್ ಮಾಡುವ ನೆಪದಲ್ಲಿ ನಟ ನನ್ನ ಮೇಲೆ ಸತತವಾಗಿ ಮುತ್ತಿಟ್ಟ, ಚುಂಬಿಸಲು ಯತ್ನಿಸಿದ ಎಂದು ಪ್ರಿಯಾ ಹೇಳಿದ್ದಾರೆ.

Related Articles

Related image1
Kiss: ಯಶ್ ಮೇಲೆ UP ಸುಂದರಿಗೆ ಲವ್.. ರಾಕಿಂಗ್ ಸ್ಟಾರ್ ಕಟೌಟ್‌ಗೆ ಕಿಸ್ ಕೊಟ್ಟ ಲೇಡಿ ಫ್ಯಾನ್; ವಿಡಿಯೋ ವೈರಲ್!
Related image2
ಇನ್ನೂರು ಜನರ ಮುಂದೆ ಮೊದಲ ಕಿಸ್ ಮಾಡಿದ್ದ ರಶ್ಮಿಕಾ.. ಆ 'Kiss' ವೈರಲ್ ಆಗಿತ್ತು; ಈಗ ವಿಜಯ್ ಜೊತೆ ಮದುವೆ!
36
ರೊಮ್ಯಾನ್ಸ್ ಮಾಡಿದಾಗ ಕಣ್ಣೀರಿಟ್ಟೆ
Image Credit : Instagram

ರೊಮ್ಯಾನ್ಸ್ ಮಾಡಿದಾಗ ಕಣ್ಣೀರಿಟ್ಟೆ

ಸಿನಿ ಕರಿಯರ್‌ನ ಆರಂಭಿಕ ದಿನಗಳಲ್ಲೇ ಈ ಅನುಭವವಾಗಿತ್ತು. ನಾನು ಪ್ರತಿಭಟಿಸಲು ಆಗದೆ, ನಟನನ್ನು ದೂರ ತಳ್ಳಲು ಆಗದೆ ನಿಲ್ಲಬೇಕಾಯಿತು. ಅಳು, ನೋವು, ಹಿಂಸೆ ಎಲ್ಲವೂ ಉಮ್ಮಳಿಸಿ ಬಂದಿತ್ತು. ನಾನು ಅಸಹಾಯಕನಾಗಿದ್ದೆ. ನಿರ್ದೇಶಕರು ಕಟ್ ಹೇಳಲಿಲ್ಲ. ಈ ರೀತಿ ಬೇಡ ಎನ್ನಲಿಲ್ಲ. ಸೀನ್‌ನಲ್ಲಿ ಇಲ್ಲದೇ ಇರುವ ರೊಮ್ಯಾನ್ಸ್ ಮಾಡಿದಾಗ, ತಬ್ಬಿಕೊಂಡು ಮುತ್ತಿಡುವಾಗ ನಾನು ಕಣ್ಣೀರು ಒರೆಸೆಕೊಂಡು ನಟಿಸಬೇಕಾಯಿತು ಎಂದು ಪ್ರಿಯಾ ಹೇಳಿದ್ದಾರೆ.

46
ಒಂದೇ ಹೊಟೆಲ್‌ನಲ್ಲಿ ತಂಗಿದ್ದಾಗ ಏನಾಯಿತು?
Image Credit : stockPhoto

ಒಂದೇ ಹೊಟೆಲ್‌ನಲ್ಲಿ ತಂಗಿದ್ದಾಗ ಏನಾಯಿತು?

ಭೋಪಾಲ್‌ನಲ್ಲಿ ಸಾಂಗ್ ಶೂಟಿಂಗ್‌ ನಡೆಯುತ್ತಿತ್ತು. ನಟ ನಟಿಯರು, ನಿರ್ದೇಶಕರು ಸೇರಿದಂತೆ ಹಲವರಿಗೆ ಒಂದೇ ಹೊಟೆಲ್‌ನಲ್ಲಿ ಬೇರೆ ಬೇರೆ ಕೊಠಡಿ ಬುಕ್ ಮಾಡಲಾಗಿತ್ತು. ಸಹ ಪ್ರತಿ ದಿನ ರಾತ್ರಿ ಡಿನ್ನರ್‌ಗೆ ಕೋಣೆಗೆ ಬರುವಂತೆ ಸೂಚಿಸಿದ್ದ. ಹಲವು ಬಾರಿ ಆತನ ಮನವಿ ತಿರಸ್ಕರಿಸಲಾಗಿತ್ತು. ಕೊನೆಗೆ ಆತ ತನ್ನ ಕೋಣೆಗೆ ಬಂದು ಬಾಗಿಲು ಬಡಿದಿದ್ದ. ಇದು ನನಗೆ ಮತ್ತಷ್ಟು ಆತಂಕ ಹೆಚ್ಚಿಸಿತ್ತು ಎಂದಿದ್ದಾರೆ.

56
ಕರೆ ಮಾಡಿ ನೆರವು ಕೇಳಿದ ನಟಿ
Image Credit : stockPhoto

ಕರೆ ಮಾಡಿ ನೆರವು ಕೇಳಿದ ನಟಿ

ಬಾಗಿಲು ಬಡಿದ ತಕ್ಷಣ ನಾನು ಅಲರ್ಟ್ ಆದೆ. ನಾಳೆ ಸಿಗುತ್ತೇನೆ ಎಂದು ನಟನ ಕೈಯಿಂದ ತಪ್ಪಿಸಕೊಂಡೆ. ಬಳಿಕ ನೇರವಾಗಿ ಪತಿಗೆ ಕರೆ ಮಾಡಿ ನಡೆಯುತ್ತಿರುವ ಕಿರುಕುಳ ಕುರಿತು ವಿವರಿಸಿದೆ. ಪತಿ ಮುಂಬೈನಿಂದ ನೇರವಾಗಿ ಭೋಪಾಲ್‌ಗೆ ಬಂದಿಳಿದರು. ಬಳಿಕ ಮೂರು ದಿನ ನನ್ನ ಜೊತೆ ಇದ್ದರು. ಹೀಗಾಗಿ ನಟನ ವರ್ತನೆ ಸರಿಯಾಗಿತ್ತು ಎಂದು ಪ್ರಿಯಾ ಹೇಳಿದ್ದಾರೆ.

66
ಬಲೆಗೆ ಬೀಳಿಸುತ್ತಾರೆ
Image Credit : stockPhoto

ಬಲೆಗೆ ಬೀಳಿಸುತ್ತಾರೆ

ಸಿನಿಮಾ ಹಿನ್ನಲೆ, ರಾಜಕಾರಣಿ, ಪ್ರಮುಖ ನಾಯಕರ ಬೆಂಬಲವಿಲ್ಲದೆ ಹಲವರು ಸಿನಿಮಾಗೆ ಬರುತ್ತಾರೆ. ಪ್ರತಿಭಾನ್ವಿತ ನಟಿಯರನ್ನು ಆರಂಭದಲ್ಲೇ ಏನೆಲ್ಲಾ ಮಾಡಿ ಬಲೆಗೆ ಬೀಳಿಸುತ್ತಾರೆ. ಮನೆಬಿಟ್ಟು ಬಂದಿರುತ್ತಾರೆ, ಕರಿಯರ್ ಎಂದೆಲ್ಲಾ ಕನಸಿಟ್ಟುಕೊಂಡಿರುತ್ತಾರೆ. ಈ ವೇಳೆ ಸಹಕರಿಸಿ ಕೊನೆಗೆ ನರಕ ಅನುಭವಿಸುತ್ತಾರೆ ಎಂದು ಪ್ರಿಯಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನಟಿ
ಮನರಂಜನಾ ಸುದ್ದಿ
ಬಾಲಿವುಡ್
Latest Videos
Recommended Stories
Recommended image1
Shocking: ಶೂಟಿಂಗ್‌ ವೇಳೆ ಕಾಜೋಲ್‌ ತಲೆಗೆ ಭಾರೀ ಪೆಟ್ಟು; ಶಾರುಖ್‌ ಮರೆತ ನಟಿ ಆ ನಟನನ್ನು ಮಾತ್ರ ಮರೆಯಲೇ ಇಲ್ಲ!
Recommended image2
ಆ ಹೀರೋಗಾಗಿಯೇ ನಾನು ಸಿನಿಮಾ ಕ್ಷೇತ್ರಕ್ಕೆ ಬಂದೆ.. ಕೊನೆಗೂ ಅಸಲೀ ಸತ್ಯ ಬಿಚ್ಚಿಟ್ಟ ಸಾಯಿ ಪಲ್ಲವಿ!
Recommended image3
ತೆಲುಗು ಬಿಗ್ ಬಜೆಟ್ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ? ಹೀರೋ ಯಾರು, ಸಿನಿಮಾ ಯಾವುದು ಗೊತ್ತಾ?
Related Stories
Recommended image1
Kiss: ಯಶ್ ಮೇಲೆ UP ಸುಂದರಿಗೆ ಲವ್.. ರಾಕಿಂಗ್ ಸ್ಟಾರ್ ಕಟೌಟ್‌ಗೆ ಕಿಸ್ ಕೊಟ್ಟ ಲೇಡಿ ಫ್ಯಾನ್; ವಿಡಿಯೋ ವೈರಲ್!
Recommended image2
ಇನ್ನೂರು ಜನರ ಮುಂದೆ ಮೊದಲ ಕಿಸ್ ಮಾಡಿದ್ದ ರಶ್ಮಿಕಾ.. ಆ 'Kiss' ವೈರಲ್ ಆಗಿತ್ತು; ಈಗ ವಿಜಯ್ ಜೊತೆ ಮದುವೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved