ಶಾರೂಕ್ ಖಾನ್, ಅಮೀರ್ ಜೊತೆ ಕೆಲಸ ಮಾಡಿದ್ದ ಸುರ ಸುಂದರಾಂಗಿ ನಟಿ, ಒಂದೇ ಸಿನ್ಮಾದಿಂದ ಕೆರಿಯರ್ ಹಾಳಾಯ್ತು!
ಬಾಲಿವುಡ್‌ನಲ್ಲಿ ಮಾತ್ರವಲ್ಲ ಈ ನಟಿ ಸೌತ್ ಸಿನಿಮಾದಲ್ಲೂ ಫೇಮಸ್ ಆಗಿದ್ದರು. ಆದರೆ ಒಂದೇ ಒಂದು ಸಿನಿಮಾ ರಿಲೀಸ್ ಆದ ನಂತರ ಅವರ ಕೆರಿಯರ್ ಹಾಳಾಯಿತು. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ನಟಿಯ ಕೆರಿಯರ್ ಹಾಳು ಮಾಡಿದ ಅದೇ ಚಿತ್ರ 2 ದಶಕಗಳ ನಂತರ ಸೂಪರ್ ಹಿಟ್ ಆಯಿತು.
ಚಿತ್ರರಂಗದಲ್ಲಿ ಕೆಲವು ತಾರೆಯರು ಬಹಳ ಬೇಗನೇ ಯಶಸ್ಸು ಸಾಧಿಸುತ್ತಾರೆ. ಇನ್ನು ಕೆಲವರು ಸಿನಿಮಾದಲ್ಲಿ ನಟಸಿದರೂ ಹೆಸರು ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಖ್ಯಾತ ನಟರ ಮಕ್ಕಳಾಗಿದ್ದರೂ, ರಾಜ ಮನೆತನವಾಗಿದ್ದರೂ ಯಶಸ್ಸು ಕೆಲವೊಮ್ಮೆ ಸುಲಭವಾಗಿ ಸಿಗುವುದಿಲ್ಲ. ಇವರೂ ಅಂಥಾ ನಟಿಯರಲ್ಲಿ ಒಬ್ಬರು. ಪ್ರತಿಭೆ, ಸೌಂದರ್ಯ ಇದ್ದರೂ ಚಿತ್ರರಂಗದಲ್ಲಿ ಅವಕಾಶ ವಂಚಿತರಾದವರು.
ಆ ನಟಿ ಮತ್ಯಾರೂ ಅಲ್ಲ. ಮನೀಶಾ ಕೊಯಿರಾಲ. ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡರೂ ಮನೀಶಾ ಧೈರ್ಯ ಕಳೆದುಕೊಳ್ಳಲ್ಲಿಲ್ಲ. ಎಲ್ಲಾ ಕಷ್ಟವನ್ನು ಎದುರಿಸಿದರು. ಬಾಲಿವುಡ್‌ನಲ್ಲಿ ಮಾತ್ರವಲ್ಲ ಈ ನಟಿ ಸೌತ್ ಸಿನಿಮಾದಲ್ಲೂ ಫೇಮಸ್ ಆಗಿದ್ದರು ಆದರೆ ಒಂದೇ ಒಂದು ಸಿನಿಮಾ ರಿಲೀಸ್ ಆದ ನಂತರ ಸೌತ್ ನಲ್ಲಿ ಅವರ ಕೆರಿಯರ್ ಹಾಳಾಯಿತು. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ನಟಿಯ ಸೌತ್ ಕೆರಿಯರ್ ಹಾಳು ಮಾಡಿದ ಅದೇ ಚಿತ್ರ 2 ದಶಕಗಳ ನಂತರ ಸೂಪರ್ ಹಿಟ್ ಆಯಿತು.
ಹಿಂದಿ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿದ್ದ ಮನೀಶಾ ಕೊಯಿರಾಲಾ ಬಗ್ಗೆ ನಾವು ಹೇಳುತ್ತಿದ್ದೇವೆ. ಮನೀಶಾ ಕೊಯಿರಾಲ, 'ಬಾಂಬೆ' (1995), 'ಇಂಡಿಯನ್' (1996), ಮತ್ತು 'ಮುಧಲ್ವನ್' (1999) ನಂತಹ ಚಲನಚಿತ್ರಗಳಲ್ಲಿನ ನಟನೆಗಾಗಿ ಪ್ರಶಂಸೆಯನ್ನು ಪಡೆದಿದ್ದಾರೆ.ಮಣಿರತ್ನಂ ಅವರ 'ದಿಲ್ ಸೇ' ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿದರು. ಇದರ ಹಾಡುಗಳು ಬ್ಲಾಕ್‌ಬಸ್ಟರ್ ಆಗಿದ್ದವು.
ಮನೀಷಾ ನಟನೆಯು ದಕ್ಷಿಣದ ಸಿನಿ ಪ್ರೇಕ್ಷಕರಿಗೂ ಹೆಚ್ಚು ಇಷ್ಟವಾಗಿತ್ತು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಗೆ ಅವಕಾಶ ಕಡಿಮೆಯಾಗುತ್ತಾ ಹೋಯಿತು. ಕೇವಲ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು.
ಮನಿಶಾ ನೇಪಾಳಿ ಚಿತ್ರ 'ಫೇರಿ ಭೆಟೌಲಾ' ಮೂಲಕ ತೆರೆಗೆ ಪಾದಾರ್ಪಣೆ ಮಾಡಿದರು.ನಂತರ ಅವರು ಹಿಂದಿ ಚಲನಚಿತ್ರ 'ಸೌದಾಗರ್'ಗೆ ನಾಯಕಿಯಾದರು. ಇದಕ್ಕಾಗಿ ಅವರು ಅತ್ಯುತ್ತಮ ಮಹಿಳಾ ಚೊಚ್ಚಲ ನಟಿ ಪ್ರಶಸ್ತಿಯನ್ನು ಪಡೆದರು. 1991ರಲ್ಲಿ 'ಸೌದಾಗರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ, ಮನೀಶಾ ಕೊಯಿರಾಲಾ ಅನೇಕ ಜನಪ್ರಿಯ ಹಿಂದಿ, ತಮಿಳು, ಮಲಯಾಳಂ, ತೆಲುಗು, ಬೆಂಗಾಲಿ ಮತ್ತು ಇತರ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು.
ಮನಿಶಾ ಕೊಯಿರಾಲಾ, 'ಬಾಂಬೆ' ಚಿತ್ರದಲ್ಲಿ ತಮ್ಮ ನಟನೆಯಿಂದ ಲಕ್ಷಾಂತರ ಜನರನ್ನು ಆಕರ್ಷಿಸಿದರು. ಈ ಚಿತ್ರದಲ್ಲಿ, ಅವರು ಅರವಿಂದ್ ಸ್ವಾಮಿಯೊಂದಿಗೆ ಕಾಣಿಸಿಕೊಂಡರು. ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸಹ ಪಡೆದರು. 'ಖಾಮೋಶಿ: ದಿ ಮ್ಯೂಸಿಕಲ್' ಚಿತ್ರಕ್ಕಾಗಿ ಸಹ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.
ಮನೀಶಾ 2002 ರಲ್ಲಿ ರಜನಿಕಾಂತ್ ಅವರ 'ಬಾಬಾ' ಚಿತ್ರದಲ್ಲಿ ಕೆಲಸ ಮಾಡಿದ್ದರು. ಅದನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಚಿತ್ರವು ಫ್ಲಾಪ್ ಎಂದು ಸಾಬೀತಾದ ನಂತರ ದಕ್ಷಿಣ ಚಿತ್ರರಂಗದಲ್ಲಿ ಮನಿಷಾ ಅವರ ವೃತ್ತಿಜೀವನವು ಕೊನೆಗೊಂಡಿತು. O2 ಯೂಟ್ಯೂಬ್ ಚಾನೆಲ್‌ನೊಂದಿಗಿನ ಸಂಭಾಷಣೆಯಲ್ಲಿ ಮನೀಶಾ ತನ್ನ ಜೀವನದ ಈ ಹಂತದ ಬಗ್ಗೆ ಮಾತನಾಡಿದ್ದರು.
'ಬಾಬಾ' ತನ್ನ ಕೊನೆಯ ದೊಡ್ಡ ತಮಿಳು ಚಿತ್ರ ಎಂದು ಮನಿಷಾ ಹೇಳಿದ್ದರು. ಮನೀಶಾಗೆ, 'ಬಾಬಾ' ಚಿತ್ರದಿಂದ ಸಾಕಷ್ಟು ನಿರೀಕ್ಷೆಗಳಿದ್ದವು, ಆದರೆ ಅದು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ನಂತರ, ದಕ್ಷಿಣ ಭಾರತದ ಚಿತ್ರರಂಗದಿಂದ ಅವರಿಗೆ ಆಫರ್‌ಗಳು ಕಡಿಮೆಯಾದವು.
ಮನೀಶಾ ಕೊಯಿರಾಲಾ ಅವರು "ಬಾಬಾ ಬಹುಶಃ ನನ್ನ ಕೊನೆಯ ದೊಡ್ಡ ತಮಿಳು ಚಿತ್ರ. ಆ ದಿನಗಳಲ್ಲಿ ಅದು ತುಂಬಾ ಕೆಟ್ಟದಾಗಿ ಸೋತಿತು. ಮತ್ತು ಅದು ವೃತ್ತಿ ಜೀವನದ ದೊಡ್ಡ ದುರಂತವಾಗಿತ್ತು. ಚಿತ್ರದಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಅದು ಸೋತಾಗ, ನಾನು ದಕ್ಷಿಣದ ಚಲನಚಿತ್ರಗಳಲ್ಲಿ ಅವಕಾಶಗಳನ್ನು ಕಳೆದುಕೊಂಡೆ' ಎಂದು ತಿಳಿಸಿದರು.
ಮನಿಶಾ ಕೊಯಿರಾಲಾ ಅವರು ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅಭಿನಯದ 'ಶೆಹಜಾದಾ' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಟಿ ಸಂಜಯ್ ಲೀಲಾ ಬನ್ಸಾಲಿಯವರ ವೆಬ್ ಸೀರೀಸ್ 'ಹೀರಾಮಂಡಿ' ನಲ್ಲಿ ಮುಂದಿನ ಬಾರಿ ಕಾಣಿಸಿಕೊಳ್ಳಲಿದ್ದಾರೆ.