- Home
- Entertainment
- Cine World
- ಆ ಗುರೂಜಿ ಹೇಳಿದ ವಾಸ್ತು ಕೇಳಿದ್ದ Shahrukh Khan; ಸೂಪರ್ ಹಿಟ್ ಆದ ಪಠಾಣ್ ಸಿನಿಮಾ!
ಆ ಗುರೂಜಿ ಹೇಳಿದ ವಾಸ್ತು ಕೇಳಿದ್ದ Shahrukh Khan; ಸೂಪರ್ ಹಿಟ್ ಆದ ಪಠಾಣ್ ಸಿನಿಮಾ!
ಶಾರುಖ್ ಖಾನ್ 'ಪಠಾಣ್' ಮತ್ತು 'ಜವಾನ್' ಸೂಪರ್ ಹಿಟ್ ಆಗಲು ಕಾರಣ ವಾಸ್ತು? ನಿರ್ಮಾಪಕ ಆನಂದ್ ಪಂಡಿತ್ ಕಿಂಗ್ ಖಾನ್‌ಗೆ ವಾಸ್ತು ಟಿಪ್ಸ್ ಕೊಟ್ಟಿದ್ರಂತೆ. ಇದ್ರಿಂದ ಸಿನಿಮಾಗಳು ಸೂಪರ್ ಹಿಟ್ ಆಗಿವೆ ಅಂತ ಹೇಳಿದ್ದಾರೆ.

2024 ರಲ್ಲಿ ಶಾರುಖ್ ಖಾನ್ 'ಪಠಾಣ್' ಮತ್ತು 'ಜವಾನ್' ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಕಂಡ್ರು. ಬಾಲಿವುಡ್‌ನಲ್ಲಿ ದಾಖಲೆ ನಿರ್ಮಿಸಿದ ಈ ಸಿನಿಮಾಗಳು ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಾಗಿವೆ.
ಶಾರುಖ್ ಖಾನ್ ಅವರ ಆಧ್ಯಾತ್ಮಿಕ ಗುರು ಎಂದೇ ಖ್ಯಾತರಾಗಿರುವ ನಿರ್ಮಾಪಕ ಆನಂದ್ ಪಂಡಿತ್, 'ಪಠಾಣ್' ಮತ್ತು 'ಜವಾನ್' ಸಿನಿಮಾಗಳ ಬಗ್ಗೆ ದೊಡ್ಡ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
'ಜವಾನ್' ಮತ್ತು 'ಪಠಾಣ್' ಸಿನಿಮಾಗಳ ಬಿಡುಗಡೆಗೂ ಮುನ್ನ ಶಾರುಖ್ ಖಾನ್‌ಗೆ ಕೆಲವು ವಾಸ್ತು ಟಿಪ್ಸ್ ಕೊಟ್ಟಿದ್ದೆ ಎಂದು ಆನಂದ್ ಪಂಡಿತ್ ಹೇಳಿದ್ದಾರೆ.
ಎರಡೂ ಸಿನಿಮಾಗಳಿಗೂ ಮುನ್ನ ಶಾರುಖ್ ಖಾನ್ ವಾಸ್ತು ಸಲಹೆ ಕೇಳಿದ್ದರು. ಮನೆಯಲ್ಲಿ ಕೆಲವು ಬದಲಾವಣೆ ಮಾಡಲು ಸಲಹೆ ನೀಡಿದ್ದೆ ಎಂದು ಆನಂದ್ ಪಂಡಿತ್ ಹೇಳಿದ್ದಾರೆ.
ನಾನು ಬಿಲ್ಡರ್ ಆಗಿರುವುದರಿಂದ ವಾಸ್ತು ಚೆನ್ನಾಗಿ ಗೊತ್ತು. ಶಾರುಖ್ ಖಾನ್ ಕೆಲವೊಮ್ಮೆ ಮನೆಗೆ ಕರೆದು 'ಸರ್ ನನ್ನ ಹಿಂದಿನ ಸಿನಿಮಾ ಚೆನ್ನಾಗಿ ಓಡಲಿಲ್ಲ, ಏನಾದ್ರೂ ಮಾಡಿ' ಅಂತ ಕೇಳ್ತಾರೆ. ನಾನು ಕೊಟ್ಟ ಟಿಪ್ಸ್ ನಿಂದ ಅವರಿಗೆ ಒಳ್ಳೆಯದಾಗಿದೆ.
ನಾನು ಶಾರುಖ್ ಖಾನ್‌ಗೆ ವಾಸ್ತು ಸಲಹೆ ಕೊಟ್ಟಿದ್ದೆ. ಇದರಿಂದ 'ಪಠಾಣ್' ಮತ್ತು 'ಜವಾನ್' ಸಿನಿಮಾಗಳು ಗೆದ್ದವು. ಅವರು ಇದನ್ನು ಒಪ್ಪಿಕೊಂಡಿದ್ದು ಅವರ ದೊಡ್ಡತನ.
ಆನಂದ್ ಪಂಡಿತ್ ಬಾಲಿವುಡ್ ನಿರ್ಮಾಪಕ ಮತ್ತು ವಿತರಕ. 'ಟೋಟಲ್ ಧಮಾಲ್', 'ಮಿಸ್ಸಿಂಗ್', 'ಸರ್ಕಾರ್ 3' ಮತ್ತು 'ಗ್ರೇಟ್ ಗ್ರಾಂಡ್ ಮಸ್ತಿ' ಸಿನಿಮಾಗಳನ್ನು ನಿರ್ಮಿಸಿ, ವಿತರಿಸಿದ್ದಾರೆ.