ಆಮೀರ್-ಸಲ್ಮಾನ್-ಶಾರುಖ್‌ ಒಂದೇ ಸಿನಿಮಾದಲ್ಲಿ ನಟಿಸೋದು ಪಕ್ಕಾ; ತೆರೆಗೆ ಬರೋದು ಯಾವಾಗ..!?

ಸುದೀರ್ಘ ಕಾಲದಲ್ಲಿ ಈ ಮೂವರೂ ಒಂದೇ ಸಿನಿಮಾದಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ.. ಇತ್ತೀಚೆಗೆ ನಟ ಆಮೀರ್ ಖಾನ್ ಹೇಳಿರೋ ಮಾತು ಕೇಳಿದ್ರೆ ಸದ್ಯದಲ್ಲೇ ಈ ಮೂರೂ ನಟರು ಒಂದೇ ಸಿನಿಮಾಕ್ಕೆ ಸಹಿ..

Bollywood star actors Aamir Khan, Salman Khan and Shah Rukh Khan acts in one movie

ಬಾಲಿವುಡ್‌ನ ತ್ರಿಮೂರ್ತಿಗಳು ಅಂದ್ರೆ ಸಾಕು, ಬಹುತೇಕ ಎಲ್ಲರಿಗೂ ಗೊತ್ತಾಗುತ್ತೆ ಅದು ಆಮಿರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅಂತ. ಇದೀಗ ಈ ಮೂರೂ ಸ್ಟಾರ್ ನಟರು ಒಟ್ಟಿಗೆ ಕೆಲಸ ಮಾಡುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾ ಯಶಸ್ವಿಯಾಗದಿದ್ದರೂ, ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯಿಂದ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದಾರೆ. ಇಷ್ಟು ಸುದೀರ್ಘ ಕಾಲದಲ್ಲಿ ಈ ಮೂವರೂ ಒಂದೇ ಸಿನಿಮಾದಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆಯಾ?

ಇತ್ತೀಚೆಗೆ ನಟ ಆಮೀರ್ ಖಾನ್ (Aamir Khan) ಮಾತು ಕೇಳಿದ್ರೆ ಸದ್ಯದಲ್ಲೇ ಈ ಮೂರೂ ನಟರು ಒಂದೇ ಸಿನಿಮಾಕ್ಕೆ ಸಹಿ ಹಾಕಲೂಬಹುದು. ಒಮ್ಮೆ ಹಾಗೇನಾದ್ರೂ ಆದ್ರೆ, ಈ ಮೂವರು ದಿಗ್ಗಜರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಅದು ಭಾರತೀಯ ಚಿತ್ರರಂಗಕ್ಕೆ ಹೊಸ ಹುರುಪು ನೀಡಲಿದೆ. ಸಿನಿಮಾ ಫಲಿತಾಂಶದ ಬಗ್ಗೆ ಚಿಂತಿಸದೆ, ಒಟ್ಟಿಗೆ ಕೆಲಸ ಮಾಡುವ ಈ ಮನೋಭಾವ ನಿಜಕ್ಕೂ ಶ್ಲಾಘನೀಯ. ಈ ಸುದ್ದಿ ಬಾಲಿವುಡ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಈ ಮೂವರ ಮ್ಯಾಜಿಕ್ ತೆರೆಯ ಮೇಲೆ ಯಾವಾಗ ಮೂಡುತ್ತದೆ ಎಂದು ಈಗಲೇ ಹೇಳೊದು ಕಷ್ಟ. 

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ, 4 ವರ್ಷ ತನಿಖೆ ಬಳಿಕ ಸಾವಿನ ಕಾರಣ ಬಿಚ್ಚಿಟ್ಟ ಸಿಬಿಐ ವರದಿ

ಆದ್ರೆ, ಬಾಲಿವುಡ್‌ನ ತ್ರಿಮೂರ್ತಿಗಳು ಒಟ್ಟಿಗೆ ನಟಿಸಿದರೆ ಅದು ಇತಿಹಾ ಸೃಷ್ಟಿಸಲಿದೆ. ಗೆಲುವಿರಲಿ ಸೋಲಿರಲಿ, ನಾವೆಲ್ಲಾ ಒಂದು ಎಂದಿದ್ದಾರೆ ಆಮಿರ್ ಖಾನ್. ಈಗ ಆಮೀರ್ ಖಾನ್, ಸಲ್ಮಾನ್ ಖಾನ್ (Salman Khan) ಮತ್ತು ಶಾರುಖ್ ಖಾನ್ (Shah Rukh Khan) ಅವರ ನಡುವೆ ಒಳ್ಳೆಯ ಗೆಳೆತನ ಮತ್ತು ಪರಸ್ಪರ ಗೌರವ ಇದೆ. ಈಗ, ಈ ಮೂವರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. 

'ಸಿನಿಮಾ ಗೆದ್ದರೂ ಸರಿ, ಸೋತರೂ ಸರಿ, ಒಟ್ಟಿಗೆ ಕೆಲಸ ಮಾಡುವುದೇ ಸಂತೋಷ..' ಎಂದು ಆಮಿರ್ ಖಾನ್ ಹೇಳಿದ್ದಾರೆ. ಒಮ್ಮೆ ಈ ಮೂವರೂ ಒಂದೇ ಚಿತ್ರದಲ್ಲಿ ನಟಿಸಿದರೆ ಬಾಲಿವುಡ್ ಇತಿಹಾಸದಲ್ಲಿ ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಘಟನೆ ಆಗಲಿದೆ. ಈ ಮೂವರನ್ನೂ ಒಂದೇ ತೆರೆಯ ಮೇಲೆ ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಈ ತ್ರಿಮೂರ್ತಿಗಳ ಸಿನಿಮಾ ತೆರೆಗೆ ಬಂದರೆ ಬಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಯಾಗುವುದು ಖಚಿತ.

ಇಲ್ನೋಡಿ.. 2 ದಿನಗಳಲ್ಲಿ 2 ದೊಡ್ಡ ಚಿತ್ರಗಳ ಟ್ರೇಲರ್-ಟೀಸರ್ ಬಿಡುಗಡೆ!

Latest Videos
Follow Us:
Download App:
  • android
  • ios