- Home
- Entertainment
- Cine World
- ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್ ಹೀರೋ: ತಾಯಿ ತೂಕದಷ್ಟೇ ಸಸ್ಯ ಬೀಜ ಕ್ರಾಂತಿ ಮಾಡಿದ 'ಉಪ್ಪಿ 2' ನಟ Sayaji Shinde
ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್ ಹೀರೋ: ತಾಯಿ ತೂಕದಷ್ಟೇ ಸಸ್ಯ ಬೀಜ ಕ್ರಾಂತಿ ಮಾಡಿದ 'ಉಪ್ಪಿ 2' ನಟ Sayaji Shinde
ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ವಿಲನ್ ಆಗಿ ಅಬ್ಬರಿಸಿದ ಅನೇಕ ಕಲಾವಿದರು ರಿಯಲ್ ಲೈಫ್‌ನಲ್ಲಿ ನಿಜಕ್ಕೂ ಮಾನವೀಯ ಮೌಲ್ಯಗಳನ್ನು ಹೊಂದಿರುತ್ತಾರೆ, ಸಾಮಾಜಿಕ ಕೆಲಸಗಳನ್ನು ಮಾಡಿರುತ್ತಾರೆ ಎನ್ನೋದಿಕ್ಕೆ ನಟ ಸಯಾಜಿ ಶಿಂಧೆ ಉತ್ತಮ ಉದಾಹರಣೆ.

ರಿಯಲ್ ಹೀರೋಗಳಿದ್ದಾರೆ
ಸಿನಿಮಾಗಳಲ್ಲಿ ಅಬ್ಬರದ ಡೈಲಾಗ್ ಹೊಡೆದು, ನೂರಾರು ರೌಡಿಗಳ ಜೊತೆ ಫೈಟ್ ಮಾಡುವ ಕೆಲ ಹೀರೋಗಳು ರಿಯಲ್ ಲೈಫ್‌ನಲ್ಲಿ ಕೂಡ ಹೀರೋ ಆದ ಉದಾಹರಣೆಗಳು ತುಂಬ ಇವೆ. ಎಷ್ಟೋ ಕಲಾವಿದರು ಶಿಕ್ಷಣ, ಪರಿಸರ ಎಂದೋ ಅಥವಾ ಅಸಹಾಯಕರಿಗೆ ಸಹಾಯ ಮಾಡಿ ಹೀರೋಗಳಾದ ನಿದರ್ಶನಗಳು ನಮ್ಮಲ್ಲಿವೆ.
ಪರಿಸರ ಪ್ರೇಮ ಬಂದಿದ್ದು ಹೇಗೆ?
“97 ವರ್ಷದಲ್ಲಿ ತಾಯಿ ತೀರಿಕೊಂಡರು. ನನ್ನ ಬಳಿ ಹಣವಿದ್ದರೂ ಕೂಡ ತಾಯಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಒಂದು ಕಡೆ ತಾಯಿಯನ್ನಿಟ್ಟು, ಇನ್ನೊಂದು ಕಡೆ ಸಸ್ಯಗಳ ಬೀಜ ಇಟ್ಟು ತೂಕ ಮಾಡಿದೆ. ಆ ಮರದ ಬೀಜಗಳನ್ನು ಇಟ್ಟು ಬೆಳೆಸುವೆ. ಆ ಬೀಜ, ಗಿಡವಾಗಿ ಮರಗಳಾಗಬೇಕು. ಆ ಮರಗಳು ದೊಡ್ಡವಾಗುತ್ತವೆ, ಹೂವು ಬಿಡುತ್ತವೆ, ನನ್ನ ತಾಯಿ ನಂತರ ಮರಗಳೇ ತಾಯಿ ಎಂದು ಅಂದುಕೊಂಡಿದ್ದೆ” ಎಂದು ಸಯಾಜಿ ಶಿಂಧೆ ಅವರು ತೆಲುಗು ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿದ್ದರು.
ಪರಿಸರ ಕ್ರಾಂತಿ ಮಾಡಿದ್ರು
ಇಂದು ಅವರು ಮಹಾರಾಷ್ಟ್ರ ಸತಾರಾ ಕಡೆಗೆ 25000 ಮರಗಳನ್ನು ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ ಗಿಡ ನೆಟ್ಟು, ಪೋಷಿಸಿ ಎಂದು ಸಾಕಷ್ಟು ಕಡೆ ಅವರು ಸಂದೇಶವನ್ನು ನೀಡಿದ್ದಾರೆ. ಈಗಾಗಲೇ ಅನೇಕ ಕಡೆ ಅವರು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಹೋರಾಟ ಮಾಡಿದ್ರು
ಮರ ಕಡಿಯೋದನ್ನು ವಿರೋಧಿಸಿ ಅವರು ಅನೇಕ ಕಡೆ ಹೋರಾಟಗಳನ್ನು ಕೂಡ ಮಾಡಿದ್ದರು. ಇದಕ್ಕೆ ಪ್ರತಿಫಲ ಕೂಡ ಸಿಕ್ಕಿದೆ. ಹೀಗಾಗಿ ಸಾಕಷ್ಟು ಕಡೆ ಅವರಿಗೆ ಸನ್ಮಾನ ಮಾಡಿ, ಪುರಸ್ಕಾರ ಕೂಡ ನೀಡಲಾಗಿದೆ. ಮಹಾರಾಷ್ಟ್ರದ ರೈತ ಕುಟುಂಬದಲ್ಲಿ ಜನಿಸಿದ ಸಯಾಜಿ ಶಿಂಧೆ ಅವರು, ತಾವು ಬೆಳೆದ ನೆಲವನ್ನು ಮರೆತಿಲ್ಲ ಎನ್ನೋದು ಖುಷಿಯ ವಿಷಯ.
ಕನ್ನಡ ಸಿನಿಮಾಗಳಲ್ಲಿ ನಟನೆ
1971ರಿಂದ ನಟನೆ ಆರಂಭಿಸಿದ ಸಯಾಜಿ ಶಿಂಧೆ ಅವರು ಕನ್ನಡ, ತೆಲುಗು, ತಮಿಳು, ಹಿಂದಿ, ಭೋಜಪುರಿ, ಇಂಗ್ಲಿಷ್, ಗುಜರಾತಿ, ಮಲಯಾಳಂ, ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅದರಲ್ಲಿಯೂ ಕನ್ನಡದಲ್ಲಿ ಪತಿತ ಪಾವನಿ, ವೀರ ಕನ್ನಡಿಗ, ಲವ ಕುಶ, ಪೊರ್ಕಿ, ಶ್ರೀಮತಿ, ಆರಕ್ಷಕ, ಶಕ್ತ, ವೀರ, ಬ್ರಹ್ಮ, ಜೈ ಲಲಿತಾ, ಲವ್‌ಯು ಆಲಿಯಾ, ಉಪ್ಪಿ 2, ಕೆಂಪಿರುವೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

