- Home
- Entertainment
- Cine World
- ನಂಗೆ ಮದುವೆ ಮಂಟಪದಲ್ಲಿ ಮೂತ್ರ ವಿಸರ್ಜನೆ ಮಾಡೋಕೆ ಬೌಲ್ ಕೊಟ್ಟಿದ್ರು: Actor Randeep Hooda
ನಂಗೆ ಮದುವೆ ಮಂಟಪದಲ್ಲಿ ಮೂತ್ರ ವಿಸರ್ಜನೆ ಮಾಡೋಕೆ ಬೌಲ್ ಕೊಟ್ಟಿದ್ರು: Actor Randeep Hooda
ಬಾಲಿವುಡ್ ನಟ ರಣದೀಪ್ ಹೂಡಾ ಅವರ ಮದುವೆಯಲ್ಲಿ ಎದುರಾದ ಒಂದು ವಿಚಿತ್ರ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದಾರೆ. ನಟಿ ಲಿನ್ ಲೈಶ್ರಾಮ್, ರಣದೀಪ್ ಹೂಡಾ ಅವರು, 2023ರಲ್ಲಿ ಮಣಿಪುರದ ಸಾಂಪ್ರದಾಯಿಕ ಮೈತೈ ವಿವಾಹದ ಬಗ್ಗೆ ಮಾತನಾಡಿದ್ದಾರೆ.

ಕಡಿಮೆ ಟೈಮ್‌ವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಈ ಜೋಡಿ, ಮದುವೆಯ ಫೋಟೋಗಳನ್ನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈಗ ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ, ರಣದೀಪ್ ಅವರು ಮದುವೆ ಟೈಮ್‌ನಲ್ಲಿ ಎದುರಾದ ಸಾಂಸ್ಕೃತಿಕ ಆಘಾತಗಳು ಮತ್ತು ಹಿಂದಿನ ಕ್ಷಣಗಳ ರೋಚಕ ವಿವರಗಳನ್ನು ತಿಳಿಸಿದ್ದಾರೆ. ಇದರಲ್ಲಿ ಮೂತ್ರ ವಿಸರ್ಜನೆಗಾಗಿ ಬಳಸುವ ಬಟ್ಟಲಿನ ಆಶ್ಚರ್ಯಕರ ಆಚರಣೆಯೂ ಸೇರಿದೆ.
‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ನಟ ರಣದೀಪ್, ತನ್ನ ನಿಜವಾದ ಮದುವೆಯಲ್ಲಿ ವರನಾಗಿ ತಾನು ಅನುಸರಿಸಬೇಕಾದ ಸಂಕೀರ್ಣ ಆಚರಣೆಗಳನ್ನು ನೆನಪಿಸಿಕೊಂಡಿದ್ದಾರೆ. “ನನ್ನ ಜೊತೆಗೆ ಒಬ್ಬ ಸಹಾಯಕನಿದ್ದ, ಅವನು ನನೆಗ ಅಂದು ಹೆಚ್ಚಾಗಿ ಶಿಕ್ಷಕನಂತೆ ಇದ್ದ.” ಎಂದು ಅವರು ಹೇಳಿದರು. “ವರನು ತಲೆಯ ಮೇಲೆ ಒಂದು ವಸ್ತುವನ್ನು ಧರಿಸಿದ ನಂತರ, ತಲೆಯನ್ನು ಓರೆಯಾಗಿಸುವಂತಿಲ್ಲ. ಅವರು ಒಂದು ಬಟ್ಟಲು, ಒಂದು ಛತ್ರಿಯನ್ನು ನೀಡುತ್ತಾರೆ. ನಂತರ ನಿಮ್ಮನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸುತ್ತಾರೆ, ಅಲ್ಲಿ ಎಲ್ಲರೂ ಬಂದು ನಿಮ್ಮನ್ನು ನೋಡಬೇಕು, ನೀವು ಬಹಳ ಗೌರವಾನ್ವಿತವಾಗಿ ಕಾಣಬೇಕು” ಎಂದು ಹೇಳಿದ್ದಾರೆ.
ಮಂಟಪದ ಸಮಾರಂಭದ ಬಗ್ಗೆ ಮಾತನಾಡುತ್ತಾ, “ನೀವು ನಡೆಯೋ ಹಾಗಿಲ್ಲ, ಅವರು ನಿಮ್ಮ ಸುತ್ತ ಕಂಬಳಿಯನ್ನು ಸುತ್ತುತ್ತಾರೆ. 2 ಗಂಟೆಗಳ ಕಾಲ ನಾನು ಬೆನ್ನನ್ನು ನೇರವಾಗಿಟ್ಟುಕೊಂಡು ತಲೆಯನ್ನು ಮೇಲಕ್ಕೆ ಎತ್ತಬೇಕಿತ್ತು. ನಂತರ ನಾನು ಆ ಬಟ್ಟಲು ಯಾಕೆ ಎಂದು ಕೇಳಿದಾಗ, ನೀನು ದೇವರಂತೆ ಇದ್ದೀಯಾ, ನಿನಗೆ ಮೂತ್ರ ವಿಸರ್ಜನೆ ಮಾಡಬೇಕಾದರೆ, ಛತ್ರಿಯನ್ನು ಒಪನ್ ಮಾಡಿ ಮರೆ ಮಾಚಿಕೊಂಡು, ಅಲ್ಲೇ ಮಾಡು, ನೀನು ಆ ಸ್ಥಳದಿಂದ ಹೋಗಾರದು” ಎಂದು ರಣದೀಪ್ ವಿವರಿಸಿದರು.
“ಲಿನ್‌ಗೂ ಸಹ ಒಬ್ಬ ‘ಶಿಕ್ಷಕ’ ಮಾರ್ಗದರ್ಶನ ಮಾಡುತ್ತಿದ್ದನು, ಸಮಾರಂಭದ ವೇಳೆ ಆಗಾಗ ಆಕೆಯನ್ನು ಗದರಿಸಲಾಗುತ್ತಿತ್ತು. ಲಿನ್ ನಗುತ್ತಿದ್ದಳು, ಆದರೆ ನಗುವಂತಿಲ್ಲ ಅಂತ ಹೇಳಿದ್ದರು. ಆದ್ದರಿಂದ ಸಂದೇಶವಾಹಕರು ಬಂದು ‘ನಗುವುದನ್ನು ನಿಲ್ಲಿಸು’ ಎಂದು ಹೇಳ್ತಿದ್ದರು” ಎಂದಿದ್ದಾರೆ ರಣದೀಪ್.
ಮಣಿಪುರದಲ್ಲಿ ರಾಜಕೀಯ ಅಶಾಂತಿಯ ನಡುವೆ ಈ ಮದುವೆ ನಡೆಯಿತು. ರಣದೀಪ್ ತಮ್ಮ ಸ್ನೇಹಿತ, ಅಸ್ಸಾಂ ರೈಫಲ್ಸ್‌ನ ಬ್ರಿಗೇಡಿಯರ್ ಸಂಘವಾನ್ ಈ ಮದುವೆ ಆಯೋಜಿಸಲು ಸಹಾಯ ಮಾಡಿದ್ದನ್ನು ಹೇಳಿದ್ದಾರೆ. “ಅಲ್ಲಿ ಒಂದು ರೀತಿಯ ಒಳಗುದಿಯ ಯುದ್ಧದ ಸ್ಥಿತಿಯಿತ್ತು, ಫೇರಾಗಳು ಮುಗಿದ ಕೂಡಲೇ, ನೂರಾರು ಎಕೆ-47 ಗಳಿಂದ ಗಾಳಿಯಲ್ಲಿ ಗುಂಡು ಹಾರಾಟ ನಡೆಯಿತು” ಎಂದಿದ್ದಾರೆ.
ಸಾಂಸ್ಕೃತಿಕ ವ್ಯತ್ಯಾಸಗಳ ಬಗ್ಗೆ ಮಾತನಾಡುತ್ತ, “ಹರಿಯಾಣದ ಸಂಸ್ಕೃತಿ ಮತ್ತು ಮಣಿಪುರಿ ಸಂಸ್ಕೃತಿಯು ತುಂಬಾ ಭಿನ್ನವಾಗಿದೆ. ನಮ್ಮದು ಒರಟಾದ, ಕಚ್ಚಾದ ಸಂಸ್ಕೃತಿಯಾಗಿದೆ, ಆದರೆ ಅವರದು ತುಂಬಾ ವ್ಯವಸ್ಥಿತವಾಗಿದೆ. ಲಿನ್ ತುಂಬಾ ಚಿನ್ನವನ್ನು ಧರಿಸಿದ್ದಳು, ‘ಚಲೋ, ಇಲ್ಲಿ ಒಂದು ಫೋಟೋವಾದರೂ ಸಿಕ್ಕಿತು” ಎಂದು ಹೇಳಿದ್ದಾರೆ.