ಕೆಲವು ದಶಕಗಳ ಹಿಂದೆ ಈಗಿನಷ್ಟು ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡ ನಟಿಯರು ಕಡಿಮೆಯೇ. ಆದರೆ, ಅನಿವಾರ್ಯವಾಗಿ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಂಡು ಕೊನೆಗೆ ಕಣ್ಣೀರಿಟ್ಟಿದ್ದರು ನಟಿಯರು. ಅವರು ಯಾರು ನೋಡಿ! 

ಹಿಂದೊಮ್ಮೆ ಬೋಲ್ಡ್​ ಸೀನ್​, ಕಿಸ್​ ದೃಶ್ಯಗಳನ್ನು, ಇಂಟಿಮೇಟ್​ ಸೀನ್​ಗಳನ್ನು ಮಾಡಲು ಅಂಜುವ ಕಾಲವೊಂದಿತ್ತು. ಆದರೆ, ಇದೀಗ ಹಾಗಲ್ಲ. ಪೈಪೋಟಿಗೆ ಬಿದ್ದವರಂತೆ ಬೆತ್ತಲಾಗಲು ಹಲವು ನಟಿಯರು ಮುಂದೆ ಬರುತ್ತಿದ್ದಾರೆ. ಚಿತ್ರಕ್ಕೆ ಅಗತ್ಯಬಿದ್ದರೆ ಎಂದೇ ತಮ್ಮ ಮಾತಿನಲ್ಲಿ ಹೇಳುತ್ತಾ... ಅಗತ್ಯ ಬೀಳದಿದ್ದರೂ ಎಲ್ಲವನ್ನೂ ತೋರಿಸಲು ಸಿದ್ಧರಾಗಿರುತ್ತಾರೆ. ಆದರೆ ಕೆಲ ದಶಕಗಳ ಹಿಂದೆ ಹೋದಾಗ ಕೆಲವೊಂದು ದೃಶ್ಯಗಳನ್ನು ಮಾಡಲು ನಟಿಯರು ಮುಜುಗರ ಪಟ್ಟುಕೊಂಡದ್ದಿದೆ. ದೃಶ್ಯ ಮಾಡಿಯಾದ ಮೇಲೆ ಪಡಬಾರದ ಕಷ್ಟ ಪಟ್ಟದ್ದೂ ಇದೆ. ಅಂಥ ನೋವು ಅನುಭವಿಸಿದ ಕೆಲ ನಟಿಯರ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.

ಭಾಗ್ಯಶ್ರೀ (Bhagyashree)

‘ಮೈನೇ ಪ್ಯಾರ್ ಕಿಯಾ’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಭಾಗ್ಯಶ್ರೀ ಕಾಣಿಸಿಕೊಂಡಿದ್ದರು. ಈ ಚಿತ್ರದ ಒಂದು ದೃಶ್ಯದಲ್ಲಿ ನಟಿ ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಂಡು ಮುತ್ತಿಕ್ಕಬೇಕಾಯಿತು. ಆದರೆ ಅವರು ಮುತ್ತು ನೀಡಲು ನಿರಾಕರಿಸಿದರು, ನಂತರ ಇಬ್ಬರ ನಡುವಿನ ಚುಂಬನ ದೃಶ್ಯವನ್ನು ಕನ್ನಡಿಯ ಮೂಲಕ ತೋರಿಸಲಾಯಿತು. ಈ ದೃಶ್ಯವನ್ನು ಚಿತ್ರೀಕರಿಸಿದ ನಂತರ ನಟಿ ತುಂಬಾ ಅಳುತ್ತಿದ್ದರು.

ಸ್ಮಿತಾ ಪಾಟೀಲ್ (Smitha Patil)

ಬಾಲಿವುಡ್ ನಟಿ ಸ್ಮಿತಾ ಪಾಟೀಲ್ ಅವರು ನಟ ಅಮಿತಾಭ್​ ಬಚ್ಚನ್ ಅವರೊಂದಿಗೆ 'ನಮಕ್ ಹಲಾಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಂದು ಹಾಡಿನಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿದ್ದವು. ಲಿಪ್​ಲಾಕ್​ ಸೀನ್​ ಕೂಡ ಇತ್ತು. ಈ ಹಸಿಬಿಸಿ ದೃಶ್ಯವನ್ನು ಮಾಡಿದ ನಂತರ ನಟಿ ವಿಷಾದಿಸಿದರು.

ಕುಬ್ಬ್ರ ಸೇಟ್ (Kubra Seth)

ನಟಿ ಕುಬ್ಬಾ ಸೇಟ್ ಅವರು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ 'ಸೇಕ್ರೆಡ್ ಗೇಮ್ಸ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಈ ಸರಣಿಯಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಕುಬ್ರ ಸೇಟ್ ಅನೇಕ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಳು ಬಾರಿ ಬೋಲ್ಡ್ ಸೀನ್ ಶೂಟ್ ಮಾಡಲಾಗಿತ್ತು. ಅದೇ ರೀತಿಯ ಸೀನ್​ ಮಾಡುವುದು ಶೂಟಿಂಗ್​ ವೇಳೆ ಅನಿವಾರ್ಯವಾದರೂ ಕುಬ್ಬ್ರ ಸೇಟ್ ಈ ಸೀನ್​ ಪದೇ ಪದೇ ಮಾಡಿದ ಬಳಿಕ ಜ್ವರದಿಂದ ಮಲಗಿದ್ದರು.

ಮಾಧುರಿ ದೀಕ್ಷಿತ್ (Madhuri Dixit)

‘ದಯಾವನ್’ ಚಿತ್ರದಲ್ಲಿ ವಿನೋದ್ ಖನ್ನಾ ಜೊತೆಗಿನ ‘ಆಜ್ ಫಿರ್ ತುಂಪೆ ಪ್ಯಾರ್ ಆಯಾ ಹೈ’ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಅದರ ಚಿತ್ರೀಕರಣದ ನಂತರ ಮಾಧುರಿ ದೀಕ್ಷಿತ್ ತುಂಬಾ ಅಳುತ್ತಿದ್ದರು. ತಾವು ಈ ರೀತಿ ಮಾಡಬಾರದಿತ್ತು ಎಂದು ಪಡಬಾರದ ನೋವು ಪಟ್ಟಿದ್ದರಂತೆ. ಈ ಕುರಿತು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಮಾಹಿ ಗಿಲ್ (Mahi Gill)

‘ದೇವ್ಡಿ’ ಚಿತ್ರದಲ್ಲಿ ಮಹಿ ಗಿಲ್ ಅನೇಕ ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಬೋಲ್ಡ್ ದೃಶ್ಯಗಳ ಬಗ್ಗೆ ಮಾಹಿ ಗಿಲ್ ಅವರು ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ನನಗೆ ತುಂಬಾ ವಿಚಿತ್ರವಾಗಿದೆ ಎಂದು ಹೇಳಿದ್ದರು. ಶೂಟಿಂಗ್​ ಮಾಡುವಾಗ ಏನೂ ಅನ್ನಿಸಿರಲಿಲ್ಲ. ಆದರೆ ಎಲ್ಲರ ಮುಂದೆ ಕುಳಿತು ಈ ದೃಶ್ಯಗಳನ್ನು ನೋಡಿದಾಗ ನಾನು ಸಂಕಟಪಟ್ಟೆ. ಈ ರೀತಿ ಮಾಡಬಾರದಿತ್ತು ಎನ್ನಿಸಿತು ಎಂದಿದ್ದಾರೆ.

ರೇಖಾ (Rekha)

‘ಅಂಜನಾ ಸಫರ್’ ಚಿತ್ರದಲ್ಲಿ ನಟಿ ರೇಖಾ ಅವರನ್ನು ತಮಗಿಂತ 15 ವರ್ಷ ದೊಡ್ಡವನಾಗಿದ್ದ ಬಿಶ್ವಜಿತ್ ಬಲವಂತ ಮಾಡುವ ದೃಶ್ಯವಿದೆ. ಆ ಸಮಯದಲ್ಲಿ ರೇಖಾ ಚೆನ್ನಾಗಿಯೆ ನಟನೆ ಮಾಡಿದ್ದಾರೆ. ಆದರೆ ದೃಶ್ಯದ ನಂತರ ರೇಖಾ ತುಂಬಾ ಅತ್ತಿದ್ದರಂತೆ.