60 ಕೋಟಿಯ ಬಂಗಲೆ ಮತ್ತು ಐಷಾರಾಮಿ ಕಾರುಗಳ ಓನರ್ ಆರಾಧ್ಯ ಬಚ್ಚನ್!
ಐಶ್ವರ್ಯಾ ರೈ ಬಚ್ಚನ್ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ಅವರ ಪುತ್ರಿ ಆರಾಧ್ಯ ಬಚ್ಚನ್(Aaradhya Bachchan) ಇಂದು 11 ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ನವೆಂಬರ್ 16 ರಂದು.2011 ರಲ್ಲಿ ಮುಂಬೈನಲ್ಲಿ ಜನಿಸಿದ ಆರಾಧ್ಯ ಬಾಲಿವುಡ್‌ನ ಸೂಪರ್‌ಸ್ಟಾರ್ ಮಕ್ಕಳಲ್ಲಿ ಸಖತ್ ಫೇಮಸ್. ಆಗಾಗ್ಗೆ ತನ್ನ ಹೆತ್ತವರೊಂದಿಗೆ ಕಾಣಿಸಿಕೊಳ್ಳುವ ಆರಾಧ್ಯ ಅವಳು ಉಳಿದ ಸ್ಟಾರ್ ಕಿಡ್‌ಗಳಿಗಿಂತ ಹೆಚ್ಚು ಶ್ರೀಮಂತಳು ಕೂಡ ಹೌದು.
ಆರಾಧ್ಯ ಬಚ್ಚನ್ ಅವರ ಮೊದಲ ಹುಟ್ಟುಹಬ್ಬದಂದು ಪೋಷಕರಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಕೆಂಪು ಬಣ್ಣದ ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಸುಮಾರು 43 ಲಕ್ಷ ರೂ. ಇದಲ್ಲದೇ ಆರಾಧ್ಯ ಅವರು ತಮ್ಮ ತಂದೆಯಿಂದ ಆಡಿ ಎ8 ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ.
ಮುಂಬೈನ ಜಲ್ಸಾ ಬಂಗಲೆಯ ಹಿಂದೆ ಅಮಿತಾಬ್ ಬಚ್ಚನ್ ತಮ್ಮ ಮೊಮ್ಮಗಳು ಆರಾಧ್ಯಗಾಗಿ ಖರೀದಿಸಿದ ಮತ್ತೊಂದು ಬಂಗಲೆ ಇದೆ ಎಂದು ಬಹುಶಃ ಕೆಲವೇ ಜನರಿಗೆ ತಿಳಿದಿದೆ. ಈ ಬಂಗಲೆಯ ಬೆಲೆ ಸುಮಾರು 60 ಕೋಟಿ ಬೆಲೆಬಾಳುತ್ತದೆ.
ಕಾರುಗಳು ಮತ್ತು ಡಿಸೈನರ್ ಡ್ರೆಸ್‌ಗಳಲ್ಲದೆ, ಆರಾಧ್ಯ ಬಚ್ಚನ್ ಬಳಿ ದುಬಾರಿ ಬ್ಯಾಗ್‌ಗಳೂ ಇವೆ. ಒಮ್ಮೆ 91 ಸಾವಿರ ರೂಪಾಯಿಯ ಬ್ಯಾಗ್ ಹಿಡಿದು ತನ್ನ ಅಜ್ಜಿಯ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡ ಸದ್ದು ಮಾಡಿದ್ದಳು. ಬೇಬಿ ಬಚ್ಚನ್ ಬ್ಯಾಗ್‌ಗಳನ್ನು ತುಂಬಾ ಇಷ್ಟಪಡುತ್ತಾಳೆ ಮತ್ತು ಅವಳ ನೆಚ್ಚಿನ ಬಣ್ಣ ಪಿಂಕ್.
ಆರಾಧ್ಯ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದು ತನ್ನ ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾಳೆ. ಬೇಬಿ ಬಚ್ಚನ್‌ಗೆ ನೃತ್ಯವೆಂದರೆ ತುಂಬಾ ಇಷ್ಟ.
ಆರಾಧ್ಯ ಅವರ ಅಜ್ಜ ಅಮಿತಾಬ್ ಬಚ್ಚನ್ ಅವರಿಗೂ ತುಂಬಾ ಹತ್ತಿರವಾಗಿದ್ದಾಳೆ ಬಿಗ್ ಬಿ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ, ಆರಾಧ್ಯ ಆಗಾಗ್ಗೆ ಅವನ ಪಕ್ಕದಲ್ಲಿ ಕುಳಿತಿರುವ ಪೋಟೋಗಳು ವೈರಲ್ ಆಗಿದ್ದವು.
ಐಶ್ವರ್ಯಾ ರೈ ತಮ್ಮ ಮಗಳ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಆಶ್ ಆರಾಧ್ಯಳ ಕೈ ಹಿಡಿದೇ ಇರುತ್ತಾರೆ. ಇದರಿಂದಾಗಿ ಹಲವು ಬಾರಿ ಟ್ರೋಲ್‌ಗೂ ಒಳಗಾಗಿದ್ದಾರೆ.
ಚಿತ್ರಕಲೆಯನ್ನೂ ಇಷ್ಟ ಪಡುವ ಆರಾಧ್ಯ ಬಚ್ಚನ್ ಲಾಕ್‌ಡೌನ್‌ನಲ್ಲಿ, ಪೇಂಟಿಂಗ್ ಮಾಡಿ ಕೊರೋನಾ ವಾರಿಯರ್ಸ್‌ಗೆ ಧನ್ಯವಾದಗಳನ್ನು ಹೇಳಿದ ಪೇಂಟಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆರಾಧ್ಯ ತನ್ನ ತಂದೆಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಇಷ್ಟಪಡುತ್ತಾಳೆ. ಅಭಿಷೇಕ್ ಬಚ್ಚನ್ ಸಂದರ್ಶನವೊಂದರಲ್ಲಿ ತಮ್ಮ ಮಗಳು ತುಂಬಾ ಬುದ್ಧಿವಂತೆ ಮತ್ತು ವಿಷಯಗಳನ್ನು ಸುಲಭವಾಗಿ ನಿಭಾಯಿಸುತ್ತಾಳೆ ಎಂದು ಹೇಳಿದ್ದರು.