ಅವಳೇನೂ ಅಂಬೆಗಾಲಿಡುವ ಮಗುನಾ? ಮಗಳ ಕೈ ಹಿಡಿದು ಓಡಾಡುವ ಐಶ್ವರ್ಯಾ ರೈ ಸಖತ್ ಟ್ರೋಲ್
Aishwarya Rai Trolled: ಬಾಲಿವುಡ್ ಸ್ಟಾರ್, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಟ್ರೋಲ್ ಗೆ ಗುರಿಯಾಗಿದ್ದಾರೆ. ಸದಾ ಮಗಳ ಕೈ ಹಿಡಿದು ಓಡಾಡುವ ಐಶ್ವರ್ಯಾ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಸೆಲೆಬ್ರಿಟಿಗಳು ಆಗಾಗ ಟ್ರೋಲ್‌ಗೆ ಗುರಿಯಾಗುತ್ತಿರುತ್ತಾರೆ. ಅದರಲ್ಲೂ ಸಿನಿಮಾ ಮಂದಿ ತುಸು ಹೆಚ್ಚೇ ಟ್ರೋಲಿಗರಿಗೆ ಆಹಾರವಾಗುತ್ತಾರೆ. ಸಿನಿಮಾ ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಟ್ರೋಲ‌್ ಆಗುತ್ತಾರೆ. ಟ್ರೋಲ್ ಗಳ ಕಾಟ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರನ್ನು ಬಿಟ್ಟಿಲ್ಲ. ಐಶ್ವರ್ಯಾ ಅನೇಕ ಬಾರಿ ಟ್ರೋಲ್ ಆಗಿದ್ದಾರೆ.
ಐಶ್ವರ್ಯಾ ಇದೀಗ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಸದಾ ಮಗಳ ಕೈ ಹಿಡಿದು ಓಡುಡುವ ಐಶ್ವರ್ಯಾ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ಸ್ಟಾರ್ ನಟಿ ಪೊನ್ನಿಯನ್ ಸೆಲ್ವನ್ ಸಕ್ಸಸ್ ಮೀಟ್ ಮುಗಿಸಿ ಮುಂಬೈಗೆ ಪಾವಾಸ್ ಆಗುವ ವೇಳೆ ಐಶ್ವರ್ಯಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಐಶ್ವರ್ಯಾ ಸದಾ ಮಗಳ ಕೈ ಹಿಡಿದು ಓಡಾಡುತ್ತಿರುತ್ತಾರೆ.
ಮಗಳಿಗೆ 10 ವರ್ಷವಾಗಿದ್ದರೂ ಕೈ ಹಿಡಿದು ಯಾಕೆ ಓಡಾಡುತ್ತಿದ್ದೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, 'ಅವಳಿನ್ನೂ ಅಂಬೆಗಾಲಿಡುವ ಮಗುನಾ' ಎಂದು ಕೇಳಿದ್ದಾರೆ. ಮತ್ತೊಬ್ಬ ನೆಟ್ಟಿಗ, ಅವಳಿಗೇನು ನಡೆಯುವಷ್ಟು ವಯಸ್ಸಾಗಿಲ್ವಾ, ನನಗೆ ಯಾವಾಗಲೂ ಅಚ್ಚರಿಯಾಗುತ್ತಿದೆ' ಎಂದು ಹೇಳಿದರು.
ಐಶ್ವರ್ಯಾ ಎಲ್ಲಿಗೇ ಹೋದರೂ ಮಗಳು ಆರಾಧ್ಯಾ ಜೊತೆಯಲ್ಲೇ ಇರುತ್ತಾಳೆ. ಹಾಗಾಗಿ ಈ ಹಿಂದೆಯೂ ಒಮ್ಮೆ ಟ್ರೋಲ್ ಆಗಿದ್ದರು. ಅವಲಿಗೇನು ಶಾಲೆ ಇಲ್ವಾ? ಶಾಲೆಗೆ ಹೋಗಲ್ವಾ, ಸದಾ ಟ್ರಿಪ್ ಮಾಡುತ್ತಿರುತ್ತಾಳೆ ಎಂದು ಟ್ರೋಲ್ ಮಾಡಲಾಗಿತ್ತು.
ಟ್ರೋಲಿಗರಿಗೆ ಅಭಿಷೇಕ್ ಬಚ್ಚನ್ ಖಡಕ್ ಉತ್ತರ ನೀಡಿದ್ದರು. ಅಭಿಷೇಕ್ ಬಚ್ಚನ್ ಸದಾ ಟ್ರೋಲಿಗೆ ಉತ್ತರ ನೀಡುತ್ತಿರುತ್ತಾರೆ. ಈ ಬಾರಿಯೂ ಪತ್ನಿ-ಮಗಳ ಪರವಾಗಿ ಟ್ರೋಲಿಗರಿಗೆ ಉತ್ತರ ನೀಡುತ್ತಾರಾ ಎಂದು ಕಾದುನೋಡಬೇಕು.
ಐಶ್ವರ್ಯಾ ರೈ ಇತ್ತೀಚಿಗಷ್ಟೆ ಪೊನ್ನಿಯಿನ್ ಸೆಲ್ವನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಪಾರ್ಟ್-1 ರಿಲೀಸ್ ಆಗಿದೆ. ಪಾರ್ಟ್-2 ರಿಲೀಸ್ ಗೆ ಸಿದ್ದತೆ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.