MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • 21 ವರ್ಷಗಳ ನಂತರ 'Lagaan' ಚಿತ್ರದ ನಟಿ ಗ್ರೇಸಿ ಸಿಂಗ್‌ ಹೇಗಾಗಿದ್ದಾರೆ ನೋಡಿ

21 ವರ್ಷಗಳ ನಂತರ 'Lagaan' ಚಿತ್ರದ ನಟಿ ಗ್ರೇಸಿ ಸಿಂಗ್‌ ಹೇಗಾಗಿದ್ದಾರೆ ನೋಡಿ

ಆಮೀರ್ ಖಾನ್  (Aamir Khan) ಅಭಿನಯದ ಲಗಾನ್ (Lagaan)  ಚಿತ್ರ 21 ವರ್ಷ ಪೂರೈಸಿದೆ. ನಿರ್ದೇಶಕ ಅಶುತೋಷ್ ಗೋವಾರಿಕರ್ (Ashutosh Gowariker) ಅವರ ಚಲನಚಿತ್ರವು ಜೂನ್ 15, 2001 ರಂದು ಬಿಡುಗಡೆಯಾಯಿತು. ಸುದ್ದಿ ಪ್ರಕಾರ, 21 ವರ್ಷಗಳನ್ನು ಪೂರೈಸಿದ ಸಂಭ್ರಮಕ್ಕಾಗಿ  ಈ ಚಿತ್ರದ ತಾರಾಬಳಗವು ಆಮೀರ್ ಖಾನ್ ಅವರ ಮನೆಯಲ್ಲಿ ಸೇರುವ ಮೂಲಕ ಆಚರಿಸಲು ತಯಾರಿ ನಡೆಸುತ್ತಿದೆ. ಲಗಾನ್ ಭಾರತದ ಇತಿಹಾಸದಲ್ಲಿ ಮದರ್ ಇಂಡಿಯಾದ ನಂತರ ಆಸ್ಕರ್‌ನ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಎರಡನೇ ಏಕೈಕ ಚಲನಚಿತ್ರವಾಗಿದೆ. ಇದು ಬಹುತಾರಾಗಣದ ಚಿತ್ರ. ಇದರಲ್ಲಿ  ನಟಿಸಿದ ಅನೇಕ ತಾರೆಯರ ಲುಕ್‌ನಲ್ಲಿ ಈಗ  ಸಾಕಷ್ಟು ಬದಲಾವಣೆಯಾಗಿದೆ. ಚಿತ್ರದ ನಾಯಕಿ ಗ್ರೇಸಿ ಸಿಂಗ್ ಅವರನ್ನು ಗುರುತಿಸುವುದು ಈಗ ಕಷ್ಟಕರವಾದರೆ, ಶ್ರೀವಲ್ಲಭ ವ್ಯಾಸ್, ರಾಜೇಶ್ ವಿವೇಕ್ ಮತ್ತು ಎಕೆ ಹಂಗಲ್ ಸೇರಿದಂತೆ ಕೆಲವು ತಾರೆಯರು ಇಹಲೋಕ ತ್ಯಜಿಸಿದ್ದಾರೆ. 

2 Min read
Suvarna News
Published : Jun 16 2022, 08:14 PM IST
Share this Photo Gallery
  • FB
  • TW
  • Linkdin
  • Whatsapp
19

ಲಗಾನ್ ಚಿತ್ರದಲ್ಲಿ ಆಮೀರ್ ಖಾನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಗೌರಿ ಆಗಿ ನಟಿಸಿದ ಗ್ರೇಸಿ ಸಿಂಗ್ ಅವರನ್ನು ಈಗ ಗುರುತಿಸುವುದು ಕಷ್ಟ. ಗ್ರೇಸಿ ಟಿವಿ ಪ್ರಪಂಚವನ್ನು ತೊರೆದು ಬಾಲಿವುಡ್‌ಗೆ ಬಂದರು. ಆಕೆಯ ಮೊದಲ ಚಿತ್ರ ಲಗಾನ್ ಬ್ಲಾಕ್ಬಸ್ಟರ್ ಆದರೆ ನಂತರ ಯಾವುದೇ ಹಿಟ್ ಚಿತ್ರ ನೀಡಲು ಸಾಧ್ಯವಾಗಲಿಲ್ಲ. ಚಲನಚಿತ್ರಗಳನ್ನು ತೊರೆದ ನಂತರ ಅವರು ಕೆಲವು ಟಿವಿ ಧಾರಾವಾಹಿಗಳಲ್ಲಿಯೂ ಕೆಲಸ ಮಾಡಿದರು. 
 

29

ಚಿತ್ರದ ನೆಗೆಟಿವ್ ಪಾತ್ರ ಲಾಖಾದಲ್ಲಿ ನಟಿಸಿರುವ ಯಶಪಾಲ್ ಶರ್ಮಾ ಹಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬಹುತೇಕ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಅರ್ಜುನ್ ಪಂಡಿತ್, ಗಂಗಾಜಲ್, ರೌಡಿ ರಾಥೋಡ್, ಪುಕಾರ್, ಗುಣಾ, ಚಮೇಲಿ, ಶೂಲ್, ದಮ್, ಆಬ್ ತಕ್ ಚಪ್ಪನ್, ಆಪ್ನಾನ್, ಬೇನಮ್, ಆರಕ್ಷಣ್, ಸಿಂಗ್ ಸಾಹಬ್ ದಿ ಗ್ರೇಟ್, ಟ್ಯೂಬ್‌ಲೈಟ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಟಿವಿ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

39

ಇಂದಿಗೂ ಆದಿತ್ಯ ಲಖಿಯಾ ಅವರನ್ನು ಕಚ್ರಾ ಹೆಸರಿನಿಂದಲೇ ಕರೆಯುತ್ತಾರೆ ಅವರು ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆದಿತ್ಯ ಕೂಡ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅವರು ರಿಹೈ, ಜೋ ಜೀತಾ ವೋಹಿ ಸಿಕಂದರ್, ಕಭಿ ಯಾ ಕಭಿ ನಾಮ್, ಅಕೇಲೆ ಹಮ್ ಅಕೇಲೆ ತುಮ್, ಹುಮ್ರಾಜ್, ಏಕ್ ಅಜ್ಞಾಬೀ, ಕೋಯಿ ಜಾನೇ ನಾ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಸದ್ಯ ಅವರಿಗೆ ಯಾವುದೇ ಸಿನಿಮಾ ಆಫರ್‌ಗಳಿಲ್ಲ.


 

49

ಚಿತ್ರದಲ್ಲಿ ಆಮೀರ್ ಖಾನ್ ಜೊತೆ ಕಾಣಿಸಿಕೊಂಡಿದ್ದ ಟಿಪ್ಪು ಅಂದರೆ ಅಮೀನ್ ಘಾಜಿ ಎಂಬ ಮಗು ಈಗ ಸಾಕಷ್ಟು ಬೆಳೆದು ಹ್ಯಾಂಡ್‌ಸಮ್‌ ಆಗಿದ್ದಾರೆ. ಈ ಚಿತ್ರ ಬಂದಾಗ ಅಮೀನ್‌ಗೆ 13 ವರ್ಷ ವಯಸ್ಸಾಗಿತ್ತು   ಅಂದಹಾಗೆ, ಅವರು ಹಂಗಾಮಾ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ.

59

ಇತ್ತೀಚೆಗೆ ವೆಬ್ ಸಿರೀಸ್ ಪಂಚಾಯತ್ 2 ನಲ್ಲಿ ಕಾಣಿಸಿಕೊಂಡಿದ್ದ ರಘುವೀರ್ ಯಾದವ್ ಈಗ ಬೆಳ್ಳಿತೆರೆಗಿಂತ ಒಟಿಟಿಯಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅವರು ಅದೇ ವರ್ಷದಲ್ಲಿ ಬಂದ ಕೌನ್ ಬನೇಗಿ ಶೇಖಾವತಿ ಮತ್ತು ದಿ ಗ್ರೇಟ್ ಇಂಡಿಯನ್ ಮರ್ಡರ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರು ಹಲವಾರು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಸಲಾಮ್ ಬಾಂಬೆ, ಕಸಬ್, ಧಾರಾವಿ, ರುಡಾಲಿ, 1942 ಎ ಲವ್ ಸ್ಟೋರಿ, ಸರ್ದಾರ್, ದುಷ್ನಾನಿ, ದಿಲ್ ಸೆ, ಪಾಗ್ಲೆಟ್, ಸಂದೀಪ್ ಔರ್ ಪಿಂಕಿ ಫರಾರ್, ಚೆಹ್ರೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು.

69

ಅಮೀನ್ ಹಾಜಿ  ಚಿತ್ರದಲ್ಲಿ  ಮಾತನಾಡಲು ಬರದ ಭಾಗಾ ಎನ್ನುವ ಡ್ರಮ್ಮರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತಮ್ಮ ಪಾತ್ರದಿಂದ ಎಲ್ಲರನ್ನೂ ಆಕರ್ಷಿಸಿದರು. ಅಮೀನ್ ನಟರಲ್ಲದೆ, ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ಕೂಡ ಹೌದು. ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಸ್ವದೇಶ್, ಜೋಧಾ ಅಕ್ಬರ್ ಮುಂತಾದ ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ.


 

79

ಲಗಾನ್ ಚಿತ್ರದಲ್ಲಿ ಪ್ರದೀಪ್ ರಾವತ್ ಸರ್ದಾರ್ ದೇವ ಪಾತ್ರವನ್ನು ನಿರ್ವಹಿಸಿದ್ದಾರೆ. ಆಮೀರ್ ಖಾನ್ ಅವರ ಗಜನಿ ಚಿತ್ರದಲ್ಲಿ ಪ್ರದೀಪ್ ಪ್ರಮುಖ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ  ಅವರು ಅನೇಕ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮೇರಿ ಜಂಗ್, ಕಾಶ್, ಇನ್ಸಾಫ್, ದೇಶ್ ಕೆ ದುಷ್ಮನ್, ಬಾಘಿ, ಅಗ್ನಿಪಥ್, ಕ್ರೈಮ್, ಮೇಜರ್ ಸಾಹಬ್, ಸರ್ಫರೋಶ್, ದೀವಾರ್, ಗ್ರ್ಯಾಂಡ್ ಮಸ್ತಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.


 

89

ಧಾರಾವಾಹಿ ಚಂದ್ರಕಾಂತದಲ್ಲಿ ಕ್ರೂರ್ ಸಿಂಗ್ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಅಖಿಲೇಂದ್ರ ಮಿಶ್ರಾ ಅವರು ಅನೇಕ ಬಾಲಿವುಡ್ ಚಿತ್ರಗಳಲ್ಲಿ ತಮ್ಮ ಅಭಿನಯವನ್ನು ತೋರಿಸಿದ್ದಾ ಅವರು ವೀರಗತಿ, ಸರ್ಫರೋಶ್, ಲಾಲ್ ಸಲಾಮ್, ದೀವಾರ್, ಪರ್ವಾನಾ, ಯೇ ದಿಲ್, ಫಿದಾ, ವೀರ್ ಜರಾ, ಅಪಹಾನ್, ಗಂಗಾಜಲ್, ದೆಹಲಿ 6, ರೆಡಿ, ಕಾಬಿಲ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಹಳ ದಿನಗಳಿಂದ ನಟನಾ ಲೋಕದಿಂದ ದೂರ ಉಳಿದಿದ್ದರು.


 

99

ಭುವನ್   ಪಾತ್ರದಲ್ಲಿ ಕಾಣಿಸಿಕೊಂಡ ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಈ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಆಮೀರ್ ಅವರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ, ಈ ಚಿತ್ರದಲ್ಲಿ ಕರೀನಾ ಕಪೂರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

About the Author

SN
Suvarna News
ಆಮಿರ್ ಖಾನ್
ಬಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved