Asianet Suvarna News Asianet Suvarna News

#BoycottLaalSinghChaddha; ಆಮೀರ್ ಸಿನಿಮಾ ಬಹಿಷ್ಕಾರಕ್ಕೆ ನೆಟ್ಟಿಗರು ಒತ್ತಾಯಿಸುತ್ತಿರುವುದೇಕೆ?

ಟ್ವಿಟ್ಟರ್ ನಲ್ಲಿ #BoycottLaalSinghChaddha ಟ್ರೆಂಡಿಂಗ್‌ನಲ್ಲಿದೆ. ಈ ಸಿನಿಮಾ ಬಿಹಿಷ್ಕರಿಸುವಂತೆ ನೆಟ್ಟಿಗರು ಅನೇಕ ಕಾರಣ ನೀಡುತ್ತಿದ್ದಾರೆ. ಅಮೀರ್ ಖಾನ್ ಅವರ ಹಳೆಯ ಹೇಳಿಕೆ ಇಟ್ಟುಕೊಂಡು ಈ ರೀತಿ ಟ್ರೆಂಟ್ ಮಾಡಲಾಗುತ್ತಿದೆ.

BoycottLaalSinghChaddha trends on Twitter and here is what wrong with Aamir khan film sgk
Author
Bengaluru, First Published May 30, 2022, 5:44 PM IST

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್(Aamir Khan) ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ(Lal Singh Chaddha) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ. ಐಪಿಎಲ್ ಫೈನಲ್ ಪಂದ್ಯದದ ವೇಳೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆಮೀರ್ ಖಾನ್ ಅನೇಕ ವರ್ಷಗಳ ಬಳಿಕ ಲಾಲ್ ಸಿಂಗ ಚಡ್ಡಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದು ಈ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ. ಆದರೀಗ ಆಮೀರ್ ಖಾನ್ ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸಿ ನೆಟ್ಟಿಗರು ಟ್ರೆಂಡ್ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ #BoycottLaalSinghChaddha ಟ್ರೆಂಡಿಂಗ್‌ನಲ್ಲಿದೆ. ಈ ಸಿನಿಮಾ ಬಿಹಿಷ್ಕರಿಸುವಂತೆ ನೆಟ್ಟಿಗರು ಅನೇಕ ಕಾರಣ ನೀಡುತ್ತಿದ್ದಾರೆ. ಅಮೀರ್ ಖಾನ್ ಅವರ ಹಳೆಯ ಹೇಳಿಕೆ ಇಟ್ಟುಕೊಂಡು ಈ ರೀತಿ ಟ್ರೆಂಟ್ ಮಾಡಲಾಗುತ್ತಿದೆ. ಇದರಲ್ಲಿ ಸ್ವಜನಪಕ್ಷಪಾತ, ದೇಶಭಕ್ತಿ ಮತ್ತು ಅದಕ್ಕಿಂತ ಮಿಗಿಲಾಗಿ ಒಟಿಟಿಯಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೂಲ ಫಾರೆಸ್ಟ್ ಗಂಪ್ ಸಿನಿಮಾ ಲಭ್ಯವಿದೆ. ಹಾಗಾಗಿ ಇದನ್ನ ಯಾಕೆ ನೋಡಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಆಮೀರ್ ಖಾನ್ ಅವರ ಹಳೆಯ ಹೇಳಿಕೆ, ಭಾರಿ ವಿವಾದ ಸೃಷ್ಟಿಸಿದ್ದ ಭಾರತದಲ್ಲಿ ಅಸಹಿಷ್ಣತೆ ವಿಚಾರವಾಗಿ ಟ್ರೋಲ್ ಮಾಡಲಾಗುತ್ತಿದೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಭಾರತ ಅಸಹಿಷ್ಣತೆ ಇದೆ ಎಂದು ಭಾರತ ತೊರೆಯಲು ನಿರ್ಧರಿಸಿದವರು ಹಾಗಾಗಿ ಅವರ ಸಿನಿಮಾ ಬಹಿಷ್ಕರಿಸಬೇಕು ಎಂದು ಹೇಳುತ್ತಿದ್ದಾರೆ. ಅನೇಕ ಟ್ರೋಲ್‌ಗಳು ಆಮೀರ್ ಖಾನ್ ಹಳೆಯ ಹೇಳಿಕೆ ಕೆದಕಿ ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಆಮೀರ್ ಖಾನ್ ಜೊತೆಗೆ ಕರೀನಾ ಕಪೂರ್ ಕೆಲವು ಹಳೆಯ ಹೇಳಿಕೆಗಳು ವಿವಾದ ಸೃಷ್ಟಿ ಮಾಡಿತ್ತು. ಅದನ್ನು ಕೂಡ ಈಗ ಎಳೆದುತಂದು ಸಿನಿಮಾ ಬಹಿಷ್ಕರಿಸುವಂತೆ ಟ್ರೆಂಡ್ ಮಾಡಲಾಗುತ್ತಿದೆ.


ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಟ್ರೈಲರ್; ಸರಳ ವ್ಯಕ್ತಿಯ ಭಾವನಾತ್ಮಕ ಪಯಣಕ್ಕೆ ಫ್ಯಾನ್ಸ್ ಫಿದಾ

 

ಅಂದಹಾಗೆ ಈ ಸಿನಿಮಾದಲ್ಲಿ ತೆಲುಗು ಸ್ಟಾರ್ ನಾಗಚೈತನ್ಯ ಕೂಡ ಕಾಣಿಸಿಕೊಂಡಿದ್ದಾರೆ. ಸೇನೆಯಲ್ಲಿ ನಾಗ್ ಮತ್ತು ಆಮೀರ್ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಒಂದೇ ಒಂದು ದೃಶ್ಯ ತೋರಿಸಲಾಗಿದೆ. ನಾಗ ಚೈತನ್ಯಗೆ ಇದು ಮೊದಲ ಹಿಂದಿ ಸಿನಿಮಾವಾಗಿದೆ. ಹಾಗಾಗಿ ಸಿನಿಮಾದ ಮೇಲೆ ಸಖತ್ ಉತ್ಸುಕರಾಗಿದ್ದಾರೆ.

12 ವರ್ಷ ಕಲಿತದ್ದಕ್ಕಿಂತ 45 ದಿನಗಳಲ್ಲಿ ಆಮೀರ್ ಖಾನ್‌ನಿಂದ ತುಂಬಾ ಕಲಿತೆ; ಮಿಸ್ಟರ್ ಪರ್ಫೆಕ್ಷನಿಸ್ಟ್ ಬಗ್ಗೆ ನಾಗ ಚೈತನ್ಯ ಮಾತು

ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್‌ನ 1994ರಲ್ಲಿ ರಿಲೀಸ್ ಆಗಿದ್ದ ಟಾಮ್ ಹ್ಯಾಂಕ್ಸ್ ಕ್ಲಾಸಿಕ್ ಅವರ 'ಫಾರೆಸ್ಟ್ ಗಂಪ್' ಚಿತ್ರದ ರಿಮೇಕ್ ಆಗಿದೆ. ಈ ಸಿನಿಮಾವನ್ನು ಆಮೀರ್ ಖಾನ್ ತೀರಾ ಆಸಕ್ತಿ ವಹಿಸಿ ರಿಮೇಕ್ ಮಾಡಿದ್ದಾರೆ. ಈ ಸಿನಿಮಾಗೆ 'ಸೀಕ್ರೆಟ್ ಸೂಪರ್ ಸ್ಟಾರ್' ಖ್ಯಾತಿಯ ನಿರ್ದೇಶಕ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷೆಯ ಚಿತ್ರವು ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.

Follow Us:
Download App:
  • android
  • ios