ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸಿ ಎಂದ ನೆಟ್ಟಿಗರು; ನಟ-ನಟಿಯ ಹೇಳಿಕೆಯೇ ಚಿತ್ರಕ್ಕೆ ಮುಳುವಾಯ್ತು!

ಲಾಲ್ ಸಿಂಗ್ ಚಡ್ಡಾ (Lal Singh Chadda) ಆಮೀರ್ ಖಾನ್ (Aamir Khan) ಹಾಗೂ ಕರೀನಾ ಕಪೂರ್ (kareena Kapoor) ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಹುಟ್ಟುಕೊಂಡಿದೆ.

First Published Jun 2, 2022, 11:35 AM IST | Last Updated Jun 2, 2022, 11:47 AM IST

ಲಾಲ್ ಸಿಂಗ್ ಚಡ್ಡಾ (Lal Singh Chadda) ಆಮೀರ್ ಖಾನ್ (Aamir Khan) ಹಾಗೂ ಕರೀನಾ ಕಪೂರ್ (kareena Kapoor) ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಹುಟ್ಟುಕೊಂಡಿದೆ. ಆದ್ರೆ ಚಿತ್ರ ರಿಲೀಸ್ ಬೆನ್ನಲ್ಲೆ ಸಿನಿಮಾ ಬಹಿಷ್ಕಾರ (Boycott) ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ಇದಕ್ಕೆ ಕಾರಣ ಸಿನಿಮಾ ಅಲ್ಲ.. ಸಿನಿಮಾದಲ್ಲಿ ಅಭಿನಯಮಾಡಿರೋ ಕಲಾವಿದರು.

Exclusive Making: ರಕ್ಕಮ್ಮನ ಹಾಡಿಗೆ ಜಾಕ್ವೆಲಿನ್ ಡ್ಯಾನ್ಸ್ ಪ್ರಾಕ್ಟೀಸ್ ಹೇಗಿತ್ತು ಗೊತ್ತಾ?

ಕೆಲವೊಮ್ಮೆ ಸಿನಿಮಾ ಕಲಾವಿದರು ಎಷ್ಟು ಎಚ್ಚರಿಕೆ ವಹಿಸಬೇಕಾಗುತ್ತೆ ಎಂದರೆ ಅವ್ರು ನೀಡೋ ಹೇಳಿಕೆಗಳು ಮತ್ತೆ ಅವರಿಗೆ ಮಾರಕವಾಗಿ ಬಿಡುತ್ತೆ. ಆಮೀರ್ ಕೊಟ್ಟ ಹೇಳಿಕೆಯನ್ನ ಈಗ ನೆಟ್ಟಿಗರು ಅವ್ರಿಗೆ ಹೇಳುವ ಮೂಲಕ ಸಿನಿಮಾವನ್ನ ಬಹಿಷ್ಕಾರ ಮಾಡುತ್ತಿದ್ದಾರೆ..ಈ ಹಿಂದೆ ಆಮೀರ್ ಖಾನ್ ಭಾರತ ಅಸಹಿಷ್ಣುತೆ ಹೊಂದಿದೆ, ನಾನು ಭಾರತ ಬಿಡಲು ಬಯಸಿದ್ದೆ ಎಂದಿದ್ದರು.. ಅದಷ್ಟೇ ಅಲ್ಲದೆ ಶಿವಲಿಂಗಕ್ಕೆ ಹಾಲು ಹಾಕುವ ಬದಲು ಬಡ ಮಕ್ಕಳಿಗೆ ಕೊಡಿ ಎಂದಿದ್ದರು..ಇನ್ನು ಕರೀನಾ ನಮ್ಮ ಸಿನಿಮಾ ನೋಡಬೇಡಿ. ನಾನು ಎಂದಿಗೂ ನನ್ನ ಸಿನಿಮಾ ನೋಡಿ ಎಂದು ಹೇಳುವುದಿಲ್ಲ ಎಂದಿದ್ದರು ಈಗ ನೆಟ್ಟಿಗರಿಗೆ ಇದೇ ಅಸ್ತ್ರವಾಗಿದೆ.

ಆಮೀರ್ ಖಾನ್ ಹಾಗೂ ಕರೀನಾ ಮೇಲೆ ಕೋಪಗೊಂಡಿದ್ದಾರೆ ನೆಟ್ಟಿಗರು...ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡುವ ಹಣದಲ್ಲಿ ಬಡ ಮಕ್ಕಳಿಗೆ ಆಹಾರ ನೀಡಿ, ಅಜ್ಜ-ಅಜ್ಜಿ ಜೊತೆ ಸಮಯ ಕಳೆಯಿರಿ. ಪುಸ್ತಕ ಓದಿ, ಆದರೆ ಅವರ ಸಿನಿಮಾ ನೋಡಬೇಡಿ, ರಾಷ್ಟ್ರ ಹಾಳುಮಾಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಬ್ಲಡ್ ಶೇಡ್‌ನಲ್ಲಿ ಯಂಗ್ ರೆಬಲ್, ಮೇಕಪ್‌ಗಾಗಿ 4 ಗಂಟೆ ಕೂತಲ್ಲೇ ಕೂತಿದ್ರು ಅಭಿಷೇಕ್...!

ಇನ್ನು ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಆಮಿರ್ ಖಾನ್, ಕಿರಣ್ ರಾವ್ ಕೂಡಿಕೊಂಡು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 11ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಬಿಗ್ ಬಜೆಟ್‌ಸಿನಿಮಾ ಇದಾಗಿದ್ದು  ಅದ್ವೈತ್ ಚಂದನ್ ಚಿತ್ರವನ್ನ  ನಿರ್ದೇಶನ ಮಾಡುತ್ತಿದ್ದಾರೆ....

Video Top Stories