MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸೀ ಫೇಸಿಂಗ್‌ ಬಂಗಲೆ to ದುಬಾರಿ ಬೈಕ್‌, ಕಾರ್ಸ್... ಜಾನ್‌ ಅಬ್ರಹಾಂ ಜೀವನ ಶೈಲಿ ಹೀಗಿದೆ

ಸೀ ಫೇಸಿಂಗ್‌ ಬಂಗಲೆ to ದುಬಾರಿ ಬೈಕ್‌, ಕಾರ್ಸ್... ಜಾನ್‌ ಅಬ್ರಹಾಂ ಜೀವನ ಶೈಲಿ ಹೀಗಿದೆ

ಬಾಲಿವುಡ್ ತಾರೆಯರು ಶ್ರೀಮಂತ ಜೀವನಶೈಲಿಯನ್ನು ಆನಂದಿಸುತ್ತಾರೆ. ನಟ ಜಾನ್ ಅಬ್ರಹಾಂ (John Abraham) ಸಹ ಇದಕ್ಕೆ  ಭಿನ್ನವಾಗಿಲ್ಲ. ಬಾಲಿವುಡ್‌ನ ಮೋಸ್ಟ್‌ ಫಿಟ್‌ ನಟರಲ್ಲಿ ಒಬ್ಬರಾಗಿರುವ ಜಾನ್‌ ಸಖತ್‌ ಲ್ಯಾವಿಶ್‌ ಜೀವನನಡೆಸುತ್ತಾರೆ. ಹೇಗಿದೆ ನೋಡಿ ಜಾನ್‌ ಅಬ್ರಹಾಂ ಲೈಫ್‌ಸ್ಟೈಲ್‌

2 Min read
Suvarna News
Published : Dec 19 2022, 03:47 PM IST
Share this Photo Gallery
  • FB
  • TW
  • Linkdin
  • Whatsapp
110

ಇನ್ಫಿನಿಟಿ ನೆಟ್ ವರ್ತ್ ಪ್ರಕಾರ ನಟ ಜಾನ್‌ ಅಬ್ರಹಾಂ  270 ಕೋಟಿ ರೂ.ಗಳ ನೆಟ್‌ ವರ್ಥ್‌ ಹೊಂದಿದ್ದಾರೆ. ಅದರ ಜೊತೆಗೆ ಐಷಾರಾಮಿ ಕಾರುಗಳು, ದುಬಾರಿ ಆಸ್ತಿಗಳ ಮಾಲೀಕರು ಹೌದು.

210

ಜಾನ್ ಅಬ್ರಹಾಂ ಅವರ ಸೂಪರ್ ಫಾಸ್ಟ್ ಕಾರುಗಳು ಮತ್ತು ಬೈಕ್‌ಗಳ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಜಾನ್‌ ಅವರ ಗ್ಯಾರೇಜ್‌ನಲ್ಲಿ ದುಬಾರಿ ಬೈಕ್‌ ಮತ್ತು ಕಾರುಗಳ ಸಂಗ್ರಹವಿದೆ 

310

ಅವರ ಐಷಾರಾಮಿ ಕಾರು ಸಂಗ್ರಹದಲ್ಲಿ ಲಂಬೋರ್ಗಿನಿ ಗಲ್ಲಾರ್ಡೊ, ನಿಸ್ಸಾನ್ GT-R ಬ್ಲ್ಯಾಕ್ ಎಡಿಷನ್, ಪೋರ್ಷೆ ಕಯೆನ್ನೆ ಟರ್ಬೊ ಮತ್ತು ಆಡಿ ಕ್ಯೂ7 ಮತ್ತು ಕ್ಯೂ3 ಸೇರಿವೆ. ಇದರ ಜೊತೆಗೆ, ಅವರು BMWS 1000 RR, ಎಪ್ರಿಲಿಯಾ RSV4 RF ಮತ್ತು ಹೋಂಡಾ CBR1000RR-R ಬೈಕ್‌ಗಳನ್ನು ಒಳಗೊಂಡಂತೆ ಅಪರೂಪದ ಮತ್ತು ದುಬಾರಿ ಬೈಕ್‌ಗಳನ್ನು ಹೊಂದಿದ್ದಾರೆ.


 

410

ಜಾನ್ ಅಬ್ರಹಾಂ ಮುಂಬೈನ ವಿಶಾಲವಾದ ಪೆಂಟ್ ಹೌಸ್ ನಲ್ಲಿ ವಾಸವಾಗಿದ್ದಾರೆ. ಈ ಮನೆಯು ಅರೇಬಿಯನ್ ಸಮುದ್ರದ ಅದ್ಭುತ ನೋಟವನ್ನು ನೀಡುತ್ತದೆ, ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ 4-000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ.

510

ಜಾನ್‌ ಮನೆಯನ್ನು ಅವರ ವಾಸ್ತುಶಿಲ್ಪಿ ಸಹೋದರ ಅಲನ್ ಅಬ್ರಹಾಂ ವಿನ್ಯಾಸಗೊಳಿಸಿದ್ದಾರೆ ಮತ್ತು ಪರಿಕಲ್ಪನೆ ಮಾಡಿದ್ದಾರೆ. ಸ್ಥಳೀಯ ಮರಗಳಿಂದ ಮಾಡಲ್ಪಟ್ಟಿದೆ, ಆಸ್ತಿಯು ನಗರದ ಹೃದಯಭಾಗದಲ್ಲಿರುವ ಅಪರೂಪದ ನಿರ್ಮಾಣಗಳಲ್ಲಿ ಒಂದು. 

610

ಆಧುನಿಕ ವೈಬ್‌ಗಳನ್ನು ಹೊಂದಿರುವ ಐಷಾರಾಮಿ ನಿವಾಸವು ಈಜುಕೊಳ, ಆಂತರಿಕ ಜಿಮ್ ಮತ್ತು ಬೃಹತ್ ಬಾಲ್ಕನಿ ಡೆಕ್‌ ಅನ್ನು ಸಹ ಈ ಮನೆ ಹೊಂದಿದೆ.

710

ಮುಂಬೈನಲ್ಲಿ ಇಲ್ಲದಿರುವಾಗ ಮತ್ತು ಅಂತಾರಾಷ್ಟ್ರೀಯವಾಗಿ ಪ್ರಯಾಣಿಸುವಾಗ, ಜಾನ್ ಅಬ್ರಹಾಂ ತನ್ನದೇ ಆದ ವಿಶೇಷ ಹಾಲಿಡೇ ಹೋಮ್‌ನಲ್ಲಿ ವಾಸಿಸಲು ಇಷ್ಟಪಡುತ್ತಾರೆ. 

810

ಇವರು  ಲಾಸ್ ಏಂಜಲೀಸ್‌ನ ಶ್ರೀಮಂತ ಬೆಲ್ ಏರ್ ಪ್ರದೇಶದಲ್ಲಿ ಲ್ಯಾವಿಶ್‌ ಪ್ರಾಪರ್ಟಿ ಮಾಲೀಕರಾಗಿದ್ದಾರೆ. ಇದು ಹಾಲಿವುಡ್ ತಾರೆಗಳಾದ ಜೆನ್ನಿಫರ್ ಅನಿಸ್ಟನ್, ಏಂಜಲೀನಾ ಜೋಲೀ ಮತ್ತು ಇತರರು ವಾಸಿಸುವ ಸ್ಥಳವಾಗಿದೆ.

910

ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ನಟನು ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ ಮತ್ತು ಸೆಂಟ್ರಲ್ ಲಂಡನ್‌ನ ಉನ್ನತ ಮಟ್ಟದ  ಸ್ಥಳಗಳಲ್ಲಿ  ಆಸ್ತಿಯನ್ನು ಸಹ ಹೊಂದಿದ್ದಾರೆ.

 

1010

ಜಾನ್ ಅಬ್ರಹಾಂ ಫಿಟ್ನೆಸ್ ಫ್ರೀಕ್‌. ತನ್ನ ಮನೆಯೊಳಗಿನ ಜಿಮ್‌ ಹೊಂದಿರುವ ಜೊತೆಗೆ  ಮುಂಬೈನ ಐಷಾರಾಮಿ ವರ್ಲಿ ಪ್ರದೇಶ ಮತ್ತು ಪುಣೆಯಲ್ಲಿರುವ JA ಫಿಟ್‌ನೆಸ್ ಹೆಸರಿನ ತನ್ನದೇ ಆದ ಜಿಮ್‌ಗಳನ್ನು ಹೊಂದಿದ್ದಾರೆ. ಇವು  ಕ್ರಮವಾಗಿ 15,000 ಚದರ ಅಡಿ ಮತ್ತು 4,000 ಚದರ ಅಡಿಗಳಲ್ಲಿ ಹರಡಿದೆ.


 

About the Author

SN
Suvarna News
ಜೀವನಶೈಲಿ
ಬಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved