ಬೆತ್ತಲೆ ಫೋಟೋ ಶೇರ್ ಮಾಡಿದ ಬಾಲಿವುಡ್ ಹಾಟ್ ನಟ: ಬಟ್ಟೆ ಎಲ್ಲಣ್ಣಾ ಎಂದ್ರು ಫ್ಯಾನ್ಸ್
ಬಾಲಿವುಡ್ ಹಾಟ್ ನಟ ಜಾನ್ ಅಬ್ರಹಾಂ ನ್ಯೂಡ್ ಫೋಟೋ ಶೇರ್ ಮಾಡಿದ್ದಾರೆ. ಪೋಟೋ ನೋಡಿದ ಫ್ಯಾನ್ಸ್ ಏನಂದ್ರು ನೋಡಿ
ಜಾನ್ ಅಬ್ರಹಾಂ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಫೋಟೋವನ್ನು ಶೇರ್ ಮಾಡಿದ್ದಾರೆ. "ವೇಟಿಂಗ್ ಫಾರ್ ವಾರ್ಡ್ರೋಬ್ # ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ. ಬಟ್ಟೆಗಾಗಿ ಕಾಯ್ತಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟು ಶೇರ್ ಮಾಡಿದ ಫೋಟೋ ಹೇಗಿರಬಹುದು ನೀವೇ ಊಹಿಸಿ..
ಫೋಟೋದಲ್ಲಿ ಮಂಚದ ಮೇಲೆ ಕುಳಿತು ಹಾಟ್ ಪೋಸ್ ಕೊಟ್ಟ ನಟ ಖಾಸಗಿ ಭಾಗವನ್ನು ಮಾತ್ರ ದಿಂಬಿನಿಂದ ಮುಚ್ಚಿಕೊಂಡಿದ್ದಾರೆ. ಕ್ಯಾಮರಾ ನೋಡಿ ಹಾಟ್ ಪೋಸ್ ಕೊಟ್ಟ ನಟನ ಫೋಟೋಗಳು ವೈರಲ್ ಆಗಿವೆ.
ಮಸಲ್ಸ್ ತೋರಿಸಿದ ನಟ: ಇದೇನು ಗೂಗಲ್ ಮ್ಯಾಪಾ ಎಂದ್ರು ಫ್ಯಾನ್ಸ್
ಅವರ ಕೆಲವು ಫಾಲೋವರ್ಸ್ ಫೋಟೋವನ್ನು ಮೆಚ್ಚಿ ಕಮೆಂಟ್ ಸೆಕ್ಷನ್‌ನಲ್ಲಿ ಬೆಂಕಿ ಮತ್ತು ಲವ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ಫೋಟೋ ಯಾರು ಕ್ಲಿಕ್ ಮಾಡಿದ್ದಾರೆ ಎಂದು ಆಶ್ಚರ್ಯಪಟ್ಟರು.
“ಭಾಯ್ ಕಪ್ಡೆ?” ‘ಅಣ್ಣಾ ನಿಮ್ಮ ಬಟ್ಟೆ’ ಎಂದು ಅಭಿಮಾನಿಯೊಬ್ಬರು ಕೇಳಿದಾಗ ಮತ್ತೊಬ್ಬರು, “ಇಲ್ಲ ಜಾನ್, ಇದು ದಿನದ ಆರಂಭದಲ್ಲಿ ಅಲ್ಲ ಎಂದಿದ್ದಾರೆ.