ಇನ್ಮುಂದೆ ಸಿಮ್ ರೀತಿ ಬ್ಯಾಂಕ್ ಖಾತೆಯನ್ನ ಮಾಡ್ಕೊಳ್ಳಿ ಪೋರ್ಟ್: RBIನಿಂದ ವಿಶೇಷ ಸೌಲಭ್ಯ
ಭಾರತೀಯ ರಿಸರ್ವ್ ಬ್ಯಾಂಕ್, ಮೊಬೈಲ್ ನಂಬರ್ ಪೋರ್ಟಬಿಲಿಟಿಯಂತೆ 'ಬ್ಯಾಂಕ್ ಖಾತೆ ಪೋರ್ಟಬಿಲಿಟಿ'ಯನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಈ ಯೋಜನೆಯು ಕಳಪೆ ಸೇವೆ ಮತ್ತು ಅನಿಯಂತ್ರಿತ ಶುಲ್ಕಗಳಿಂದ ಗ್ರಾಹಕರನ್ನು ರಕ್ಷಿಸುವ ಗುರಿ ಹೊಂದಿದೆ.

ಬ್ಯಾಂಕಿಂಗ್
ಇಂದು ಗ್ರಾಹಕರು ಬೇಕಾದ ನೆಟ್‌ವರ್ಕ್‌ಗೆ ಸಿಮ್ ಪೋರ್ಟ್ ಮಾಡಿಕೊಳ್ಳಬಹುದು. ನೆಟ್‌ವರ್ಕ್ ಬದಲಾದ್ರೂ ನಿಮ್ಮ ಸಂಖ್ಯೆ ಬದಲಾಗಲ್ಲ. ಈ ಕಾರಣದಿಂದ ಕಂಪನಿಗಳು ಗುಣಮಟ್ಟದ ಸೇವೆಗಳನ್ನು ನೀಡಲು ಪ್ರಯತ್ನಿಸುತ್ತಿರುತ್ತವೆ. ಇದೀಗ ಇದೇ ಮಾದರಿ ಬ್ಯಾಂಕಿಂಗ್ ವಲಯಕ್ಕೆ ಬರುತ್ತಿದೆ.
Bank Account Portability
ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ವಲಯದಲ್ಲಿ Bank Account Portability ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಟೆಲಿಕಾಂ ಉದ್ಯಮದಲ್ಲಿ ಮೊಬೈಲ್ ನಂಬರ್ ಪೋರ್ಟಬಿಲಿಟಿ (MNP) ಮಾದರಿಯಲ್ಲಿ ಗ್ರಾಹಕರು ಬ್ಯಾಂಕ್‌ಗಳನ್ನು ಬದಲಿಸುವ ಸೌಲಭ್ಯವಾಗಿದೆ. ಆರ್‌ಬಿಐನ "ಪಾವತಿ ವಿಷನ್ 2028" ನ ಭಾಗವಾಗಿ ಈ ಸೌಲಭ್ಯವನ್ನು ತೆಗೆದುಕೊಂಡು ಬರಲಾಗುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಳಪೆ ಬ್ಯಾಂಕಿಂಗ್ ಮತ್ತು ಅನಿಯಂತ್ರಿತ ಶುಲ್ಕ
ಈ ಮಿಷನ್ ಮೂಲಕ ಕಳಪೆ ಬ್ಯಾಂಕಿಂಗ್ ಮತ್ತು ಅನಿಯಂತ್ರಿತ ಶುಲ್ಕಗಳಿಂದ ಗ್ರಾಹಕರನ್ನು ಮುಕ್ತಿಗೊಳಿಸುವ ಉದ್ದೇಶವನ್ನು ರಿಸರ್ವ್ ಬ್ಯಾಂಕ್ ಹೊಂದಿದೆ. ಈ ಯೋಜನೆಯಿಂದ ಗ್ರಾಹಕರು ಸಿಮ್ ನೆಟ್‌ವರ್ಕ್‌ನಂತೆ ಬ್ಯಾಂಕ್ ಚೇಂಜ್ ಮಾಡಬಹುದು. ಈ ಪ್ರಕ್ರಿಯೆಗೆ ಹೆಚ್ಚು ದಾಖಲೆಗಳ ಅಗತ್ಯವಿರಲ್ಲ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ಬದಲಾವಣೆ ಸಮಸ್ಯೆ
ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ನಲ್ಲಿ ಖಾತೆ ತೆರೆಯೋದು ಸವಾಲಿನ ಕೆಲಸವಾಗಿದೆ. ಬಹುತೇಕರು ಒಂದೇ ಬ್ಯಾಂಕ್ ಖಾತೆಯಿಂದಲೇ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುತ್ತಾರೆ. ಸಂಬಳ, ಹೂಡಿಕೆ, ವಿಮೆ, ಸರ್ಕಾರಿ ಯೋಜನೆಗಳಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಬದಲಾಯಿಸಲು ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈ ಒಂದು ಕಾರಣದಿಂದ ಗ್ರಾಹಕರು ಬ್ಯಾಂಕ್‌ಗಳಲ್ಲಿ ಸಮಸ್ಯೆಗಳಿದ್ರೂ ಬದಲಾವಣೆಗೆ ಮುಂದಾಗಲ್ಲ.
ಇದನ್ನೂ ಓದಿ: 2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ 80 ಲಕ್ಷದ ಉದ್ಯೋಗ
ಏನೆಲ್ಲಾ ಬದಲಾಗಬಹುದು?
ಬ್ಯಾಂಕ್ ಖಾತೆ ಪೋರ್ಟಬಿಲಿಟಿ ಸೇವೆ ಆರಂಭವಾದಾಗ ಗ್ರಾಹಕರು ಕಡಿಮೆ ದಾಖಲಾತಿಗಳಲ್ಲಿ ಮತ್ತೊಂದು ಬ್ಯಾಂಕ್‌ಗೆ ತೆರಳಬಹುದಾಗಿದೆ. ಗ್ರಾಹಕರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬ್ಯಾಂಕ್‌ಗಳು ಉತ್ತಮ ಸೇವೆಗಳನ್ನು ನೀಡಲು ಮುಂದಾಗಬಹುದು ಎಂದು ಅಂದಾಜಿಸಲಾಗಿದೆ. ಹಿಡನ್ ಚಾರ್ಜ್, ಮಾಹಿತಿ ನೀಡದೇ ಶುಲ್ಕ ಕಡಿತಗಳಿಸುವ ಪದ್ಧತಿ ಸೇರಿದಂತೆ ಹಲವು ಸೇವೆಗಳಲ್ಲಿ ಸುಧಾರಣೆ ಆಗಬಹುದು ಎಂದು ನಂಬಲಾಗಿದೆ.
ಇದನ್ನೂ ಓದಿ: ಏಪ್ರಿಲ್ 1ರಿಂದಲೇ ಆಗಲಿದೆ ಅದಾಯ ತೆರಿಗೆ, ಬ್ಯಾಂಕಿಂಗ್, ಸಂಬಳದಲ್ಲಿ ಮಹತ್ವದ ಬದಲಾವಣೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

