ಕಾಲೇಜು ವಿದ್ಯಾಭ್ಯಾಸ ಜೊತೆ 21 ವರ್ಷದ ವಿದ್ಯಾರ್ಥಿನಿ ಸಣ್ಣ ಬ್ಯೂಸಿನೆಸ್ ಆರಂಭಿಸಿದ್ದಾಳೆ. ಮೊದಲ ಐವತ್ತೇ ದಿನದಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ಆದಾಯಗಳಿಸಿದ್ದಾಳೆ. ಓದಿನ ಜೊತೆ ಇದೀಗ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾಳೆ.

ಗುರುಗಾಂವ್ (ನ.07) ಅಸೈನ್ಮೆಂಟ್, ಲೈಬ್ರರಿ, ಪರೀಕ್ಷೆ, ಓದು ಇವೆಲ್ಲಾ ಕಾಲೇಜು ದಿನಗಳಲ್ಲಿ ಸಾಮಾನ್ಯ. ಎಲ್ಲಾ ವಿದ್ಯಾರ್ಥಿಗಳು ಈ ವಿಷಯಗಳಲ್ಲೇ ಗಮನ ಕೇಂದ್ರಿಕರಿಸುತ್ತಾರೆ. ಆದರೆ 21 ವರ್ಷದ ಅನನ್ಯಾ ಅಗರ್ವಾಲ್ ಓದು, ಅಸೈನ್ಮೆಂಟ್ ಜೊತೆ ಸಣ್ಣ ಬ್ಯೂಸಿನೆಸ್ ಆರಂಭಿಸಿದ್ದಾಳೆ. ಆದರೆ ಯಶಸ್ಸು ಅಷ್ಟೇ ಬೇಗ ಒಲಿದು ಬಂದಿದೆ. ಉದ್ಯಮ ಆರಂಭಿಸಿದ ಆರಂಭಿಕ 50 ದಿನಗಲ್ಲಿ ಅನನ್ಯಾ 15 ಲಕ್ಷ ರೂಪಾಯಿ ಆದಾಯಗಳಿಸಿದ್ದಾಳೆ. ಇದೀಗ ಅನನ್ಯಾ ಕೇವಲ ವಿದ್ಯಾರ್ಥಿನಿ ಮಾತ್ರವಲ್ಲ, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾಳೆ.

ಅನನ್ಯಾ ಅಗರ್ವಾಲ್ ಮ್ಯಾನೇಜ್ಮೆಂಟ್ ಸ್ಟಡೀಸ್ ವಿದ್ಯಾರ್ಥಿನಿ. ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅನನ್ಯಾ ಓದು, ಇತರ ಚಟುವಟಿಕೆ ಮೂಲಕ ಕಾಲೇಜಿನಲ್ಲಿ ಗುರುತಿಸಿಕೊಂಡಿದ್ದಾಳೆ. ಉತ್ತಮ ಅಂಕದೊಂದಿಗೆ ಹಲವು ಇತಿಹಾಸ ರಚಿಸಿದ್ದಾಳೆ. ಇದರ ನಡುವೆ ಗುರುಗಾಂವ್‌ನಲ್ಲಿ ಬಿಸ್ಟ್ರೋ ಸಸ್ಯಾಹಾರಿ ಕೆಫಿ ಆರಂಭಿಸಿದ್ದಾಳೆ. ತಂದೆ, ತಾಯಿ ಪ್ರೋತ್ಸಾಹ, ಬೆಂಬಲ ಜೊತೆ ಈಕೆ ಹೈಜಿನಿಕ್ ಕೆಫೆ ಆರೆಂಭಿಸಿದ್ದಾಳೆ. ಹಾಗಂತ ಇದು ಕೇವಲ ವೆಜಿಟೇರಿಯನ್ ಕೆಫೆ ಮಾತ್ರವಲ್ಲ. ಇದೇ ಕಾರಣದಿಂದ ಈ ಕೆಫೆ ಕ್ಲಿಕ್ ಅತ್ಯಂತ ಜನಪ್ರಿಯವಾಗಿದೆ. ಜೊತೆಗೆ ಭರ್ಜರಿ ಆದಾಯ ತರುತ್ತಿದೆ.

ಹರಟೆಗೂ ಇಲ್ಲಿದೆ ಪ್ರಾಮುಖ್ಯತೆ

ವೆಜಿಟೇರಿಯನ್ ಕೆಫೆಯಲ್ಲಿ ಹಲವು ಬಗೆಯ ಖಾದ್ಯಗಳು , ತಿನಿಸುಗಳು ಲಭ್ಯವಿದೆ. ಜೊತೆಗೆ ಇಲ್ಲಿ ಗೆಳೆಯರು, ಆಪ್ತರು, ಕುಟುಂಬಸ್ಥರ ಹರಟೆಗೂ ಪ್ರಾಮುಖ್ಯತೆ ನೀಡಲಾಗಿದೆ. ಆಹಾರದ ಜೊತೆ ಹರಟೆ, ಮಾತುಕತೆಗೂ ಇಲ್ಲಿ ಆದ್ಯತೆ ನೀಡಲಾಗಿದೆ. ತನ್ನ ಕೆಫೆಯಲ್ಲಿ ಆಹಾರ ಸವಿಯುವ ಪ್ರತಿಯೊಬ್ಬರು ಅದನ್ನು ಎಂಜಾಯ್ ಮಾಡಬೇಕು ಅನ್ನೋ ಉದ್ದೇಶದಿಂದ ಅನನ್ಯಾ ಅಗರ್ವಾಲ್ ಈ ರೀತಿಯ ಕೆಫೆ ಆರಂಭಿಸಿದ್ದಾರೆ. ಹೊಸ ರೀತಿಯ ಆಲೋಚನೆ ಕ್ಲಿಕ್ ಆಗಿದೆ.

ಇಟಾಲಿಯನ್ ಮೆಡಿಟೇರಿಯನ್, ಮೆಕ್ಸಿಕನ್ ಸೇರಿದಂತೆ ಹಲವು ಜನಪ್ರಿಯ ಖಾದ್ಯಗಳಿಗೆ ಭಾರತೀಯ ಫ್ಲೇವರ್ ಸೇರಿಸಲಾಗಿದೆ. ಇಲ್ಲಿನ ಆಹಾರ ಪದ್ಧತಿ, ರುಚಿ ಹಾಗೂ ಸಂಪ್ರದಾಯಕ್ಕೆ ತಕ್ಕಂತೆ ಬ್ಲೆಂಡ್ ಮಾಡಲಾಗಿದೆ. ಹೀಗಾಗಿ ಜನರು ಖಾದ್ಯಗಳನ್ನು ಇಷ್ಟಪಟ್ಟಿದ್ದಾರೆ. ಇದೀಗ ಪ್ರತಿ ದಿನ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ.

ಉದ್ಯಮ ಜೊತೆ ಕಾಲೇಜು

ಅಪ್ಪನ ಜೊತೆ ಕೆಫೆ ಆರಂಭಿಸಿದ ಅನನ್ಯಾ ಅಗರ್ವಾಲ್ ಪೋಷಕರ ಉದ್ಯಮ ಅನುಭವವನ್ನು ಬಳಸಿಕೊಂಡಿದ್ದಾರೆ. ಇದು ಅನನ್ಯಾ ಉದ್ಯಮ ಬಹುಬೇಗನೆ ಯಶಸ್ವಿಯಾಗಲು ನೆರವಾಗಿದೆ. ಸದ್ಯ ಅನನ್ಯಾ ಯಶಸ್ವಿ ಉದ್ಯಮಿಯಾಗಿದ್ದರೂ, ತನ್ನ ಕಾಲೇಜು, ಓದು, ಅಧ್ಯಯನ ಕುರಿತು ಹಿಂದೆ ಬಿದ್ದಿಲ್ಲ. ಕಾಲೇಜು ತರಗತಿ, ಪರೀಕ್ಷೆ, ಅಸೈನ್ಮೆಂಟ್ ಜೊತೆ ಉದ್ಯಮವನ್ನು ನಡೆಸುತ್ತಿದ್ದಾರೆ.

ಕೇವಲ 21ನೇ ವಯಸ್ಸಿಗೆ ಅನನ್ಯಾ ಯಶಸ್ವಿಯಾಗಿ ಉದ್ಯಮ ನಡೆಸುತ್ತಿದ್ದಾರೆ. ಕಾಲೇಜು ದಿನಗಳಲ್ಲೇ ತನ್ನ ಆಸಕ್ತಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಭವಿಷ್ಯದ ದಾರಿ ಸ್ಪಷ್ಪಪಡಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಆದಾಯ, ಕೆಲಸ, ಸ್ಯಾಲರಿ ಕುರಿತು ಈಗಲೇ ನಿಖರತೆ ಹೊಂದಿದ್ದಾರೆ.