MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಏಪ್ರಿಲ್ 1ರಿಂದಲೇ ಆಗಲಿದೆ ಅದಾಯ ತೆರಿಗೆ, ಬ್ಯಾಂಕಿಂಗ್, ಸಂಬಳದಲ್ಲಿ ಮಹತ್ವದ ಬದಲಾವಣೆ

ಏಪ್ರಿಲ್ 1ರಿಂದಲೇ ಆಗಲಿದೆ ಅದಾಯ ತೆರಿಗೆ, ಬ್ಯಾಂಕಿಂಗ್, ಸಂಬಳದಲ್ಲಿ ಮಹತ್ವದ ಬದಲಾವಣೆ

2026ರಿಂದ ಆದಾಯ ತೆರಿಗೆ, ಸಂಬಳ, ಬ್ಯಾಂಕಿಂಗ್, ಮತ್ತು ಹೂಡಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ತೆರಿಗೆ ವಿನಾಯಿತಿ, ಪಿಎಫ್ ಕಡಿತ, ಎಟಿಎಂ ಶುಲ್ಕಗಳು ಮತ್ತು ಡಿಜಿಟಲ್ ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲಿವೆ.

2 Min read
Author : Kannadaprabha News
Published : Mar 31 2026, 08:33 AM IST
Share this Photo Gallery
  • FB
  • TW
  • Linkdin
  • Whatsapp
17
1. ಆದಾಯ ತೆರಿಗೆಯಲ್ಲಿ ಬದಲಾವಣೆ
Image Credit : Getty

1. ಆದಾಯ ತೆರಿಗೆಯಲ್ಲಿ ಬದಲಾವಣೆ

ಆದಾಯ ತೆರಿಗೆ ಕಾಯ್ದೆ 2025ರ ಹೊಸ ನಿಯಮಗಳು ಜಾರಿಗೆ ಬರುತ್ತವೆ. ವಾರ್ಷಿಕ 12.75 ಲಕ್ಷಗಳವರೆಗೆ ತೆರಿಗೆ ರಿಯಾಯಿತಿ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಮೊದಲಾದವುಗಳಲ್ಲಿ ವಿನಾಯಿತಿ ಇತ್ಯಾದಿ ಅಂಶಗಳು ಜಾರಿಯಾಗಲಿವೆ.

ಈವರೆಗೆ ಬಳಕೆಯಲ್ಲಿದ್ದ ಫಿನಾನ್ಶಿಯಲ್‌ ಇಯರ್‌ ಮತ್ತು ಅಸೆಸ್‌ಮೆಂಟ್‌ ಇಯರ್‌ ಎಂಬ ಪದಗಳ ಬದಲಿಗೆ ಟ್ಯಾಕ್ಸ್‌ ಇಯರ್‌ ಎಂಬ ಒಂದೇ ಪದ ಬಳಕೆಯಾಗಲಿದೆ. ಗೊಂದಲ ಕಡಿಮೆಮಾಡುವುದು ಈ ಬದಲಾವಣೆಯ ಉದ್ದೇಶ.

ಸ್ಟಾಂಡರ್ಡ್‌ ಡಿಡಕ್ಷನ್‌ ಎಂದರೆ ಉದ್ಯೋಗಿಗಳು ತಮ್ಮ ವಾರ್ಷಿಕ ಆದಾಯದ ಮೇಲೆ ಪಡೆಯಬಹುದಾದ ತೆರಿಗೆ ರಿಯಾಯಿತಿ. ಈ ಮೊತ್ತ 75,000 ಆಗಿದೆ. ಮೊದಲು ಇದು 50,000 ರು. ಇತ್ತು. ಈ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.

ಊಟ, ಮನೆ ಬಾಡಿಗೆ ಮೊದಲಾದೆಡೆ ಹೆಚ್‌ಆರ್‌ಎ ನಿಯಮದಡಿ ವಿನಾಯಿತಿ ಕಲ್ಪಿಸಲಾಗಿದ್ದರೂ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿರಲಿವೆ.

ಇನ್‌ಕಂ ಟ್ಯಾಕ್ಸ್‌ ರಿಟರ್ನ್ಸ್‌ (ಐಟಿಆರ್‌) ಸಲ್ಲಿಕೆಗೆ ಅಂತಿಮ ಗಡುವನ್ನು ಆಗಸ್ಟ್‌ 31ಕ್ಕೆ ವಿಸ್ತರಿಸಲಾಗಿದೆ.

27
2. ವೇತನದ ಮೇಲೆ ಪರಿಣಾಮ
Image Credit : Getty

2. ವೇತನದ ಮೇಲೆ ಪರಿಣಾಮ

ಕೈಗೆ ಬರುವ ಸಂಬಳದ ಮೊತ್ತಕ್ಕಿಂತ ಉಳಿತಾಯಕ್ಕೆ ಆದ್ಯತೆ. ಮೂಲ ಸಂಬಳದ ಶೇ.50ರಷ್ಟು ಮೊತ್ತ ಪಿಎಫ್‌ಗೆ ಕಡಿತಗೊಳ್ಳಬಹುದು.

ಗ್ರ್ಯಾಚುಯಿಟಿ ಬೆನಿಫಿಟ್‌ ಹೆಚ್ಚಾಗಲಿದೆ.

Related Articles

Related image1
ಶಾಕ್ ಇಲ್ಲ, ಹಲವರಿಗೆ ಗೊತ್ತಾಗಲೇ ಇಲ್ಲ, ಜೊಮ್ಯಾಟೋ ಪ್ಲಾಟ್‌ಫಾರ್ಮ್ ಫೀ‌ನಿಂದ 1000 ಕೋಟಿ ಆದಾಯ
Related image2
ಜಿಬಿಎ ಬಜೆಟ್‌ಗೆ ರಾಜ್ಯ, ಕೇಂದ್ರ ಸರ್ಕಾರದಿಂದ ₹4196 ಕೋಟಿ ನೀರಿಕ್ಷೆ
37
3. ಬ್ಯಾಂಕಿಂಗ್‌ ಮತ್ತು ಎಟಿಎಂ ವ್ಯವಹಾರದಲ್ಲಿ ಬದಲಾವಣೆ
Image Credit : Asianet News

3. ಬ್ಯಾಂಕಿಂಗ್‌ ಮತ್ತು ಎಟಿಎಂ ವ್ಯವಹಾರದಲ್ಲಿ ಬದಲಾವಣೆ

ಎಟಿಎಂನಲ್ಲಿ ಉಚಿತವಾಗಿ ತಿಂಗಳಿಗೆ 5 ಸಲ ಹಣ ತೆಗೆಯಬಹುದಷ್ಟೇ ಮತ್ತು ದಿನಕ್ಕೆ ಹಣ ವಿತ್‌ಡ್ರಾ ಮಾಡಬಹುದಾದ ಗರಿಷ್ಠ ಮೊತ್ತದಲ್ಲಿ ಬದಲಾವಣೆ. ಡೆಬಿಟ್‌ ಕಾರ್ಡ್‌ಗಳಿಗೆ ಅನುಗುಣವಾಗಿ ಈ ಬದಲಾವಣೆ ಇರುತ್ತದೆ.

ಸೂಚಿಸಿದ್ದಕ್ಕಿಂತ ಹೆಚ್ಚು ಸಲ ಎಟಿಎಂನಿಂದ ಹಣ ಡ್ರಾ ಮಾಡಿದರೆ ಪ್ರತೀ ಸಲ 23 ರು.ಗಳಷ್ಟು ಹೆಚ್ಚುವರಿ ಹಣ ಕಟ್‌ ಆಗುತ್ತದೆ.

47
4. ಡಿಜಿಟಲ್‌ ವಟಿವಾಟು ಹೆಚ್ಚು ಸುರಕ್ಷಿತ
Image Credit : Getty

4. ಡಿಜಿಟಲ್‌ ವಟಿವಾಟು ಹೆಚ್ಚು ಸುರಕ್ಷಿತ

ಪ್ರತೀ ಪಾವತಿಗೂ 2 ಅಂಶಗಳ ದೃಢೀಕರಣ ಕಡ್ಡಾಯ.

ಸಣ್ಣ ಮೊತ್ತಕ್ಕೂ ಓಟಿಪಿ ಅಥವಾ ಬಯೋಮೆಟ್ರಿಕ್‌ ದೃಢೀಕರಣ ಬೇಕಾಗುತ್ತದೆ.

57
5. ಪಾನ್‌ ಕಾರ್ಡ್‌ ಸಂಬಂಧಿ ನಿಯಮಗಳು
Image Credit : Gemini

5. ಪಾನ್‌ ಕಾರ್ಡ್‌ ಸಂಬಂಧಿ ನಿಯಮಗಳು

ಆಧಾರ್‌ನ ಯಥಾವತ್‌ ವಿವರಗಳು ಪ್ಯಾನ್‌ ಕಾರ್ಡ್‌ನಲ್ಲಿರಬೇಕು.

ಪಾನ್ ಕಾರ್ಡ್‌ ಮಾಡಿಸಬೇಕೆಂದರೆ ಮೊದಲಿಗಿಂತ ಹೆಚ್ಚು ದಾಖಲೆಗಳು ಬೇಕು.

67
6. ನಿತ್ಯ ಬಳಕೆಯ ಖರ್ಚು ವೆಚ್ಚಗಳು
Image Credit : Getty

6. ನಿತ್ಯ ಬಳಕೆಯ ಖರ್ಚು ವೆಚ್ಚಗಳು

ಫಾಸ್ಟ್‌ಟ್ಯಾಗ್‌ನ ವಾರ್ಷಿಕ ಮೊತ್ತ 3000 ರು.ನಿಂದ 3075 ರು.ಗೆ ಹೆಚ್ಚಳವಾಗಿದೆ.

ಪ್ರಯಾಣಕ್ಕೂ 8 ಗಂಟೆಯೊಳಗೆ ರೈಲ್ವೇ ಟಿಕೆಟ್‌ ಕ್ಯಾನ್ಸಲ್‌ ಮಾಡಿದರೆ ಹಣ ವಾಪಾಸ್‌ ಬರಲ್ಲ.

ಇದನ್ನೂ ಓದಿ: ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, 28 ದಿನ ಬದಲು 30 ದಿನ ರೀಚಾರ್ಜ್ ಪ್ಲಾನ್‌ಗೆ ಸೂಚನೆ

77
7. ಹೂಡಿಕೆ ಮತ್ತು ಉಳಿತಾಯ
Image Credit : Gemini AI

7. ಹೂಡಿಕೆ ಮತ್ತು ಉಳಿತಾಯ

ಸಾವರಿನ್‌ ಗೋಲ್ಡ್‌ ಬಾಂಡ್‌ ಅಂದರೆ ಕೇಂದ್ರ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತರಿಸುವ ಡಿಜಿಟಲ್ ಚಿನ್ನದ ಬಾಂಡ್‌ಗಳನ್ನು ಅವಧಿಗೆ ಮೊದಲೇ ಮಾರಾಟ ಮಾಡಿದರೆ, ಸ್ಟಾಕ್‌ ಎಕ್ಸ್‌ಚೇಂಜ್‌ ಅಥವಾ ಬೇರೆ ಹೂಡಿಕೆದಾರರಿಂದ ಖರೀದಿ ಮಾಡಿದ್ದರೆ ಅದಕ್ಕೆ ಟ್ಯಾಕ್ಸ್‌ ಕಟ್ಟಬೇಕು.

ಎನ್‌ಪಿಎಸ್‌ ಅಂದರೆ ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ನಲ್ಲೂ ಬದಲಾವಣೆಗಳಾಗಿವೆ.

ಇದನ್ನೂ ಓದಿ: 1 ರೂಪಾಯಿಗೆ ಸಿಗೋ ಪೇಪರ್‌ ಬ್ಯಾಗ್‌ಗೆ 20 ರೂಪಾಯಿ, ಪ್ಯಾಕಿಂಗ್‌ಗೆ ₹40 ಚಾರ್ಜ್‌: ಇದು ರಾಮೇಶ್ವರಂ ಕೆಫೆ ಲೂಟಿ!

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವ್ಯವಹಾರ
ಹಣ (Hana)
ಹೂಡಿಕೆ

Latest Videos
Recommended Stories
Recommended image1
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, 28 ದಿನ ಬದಲು 30 ದಿನ ರೀಚಾರ್ಜ್ ಪ್ಲಾನ್‌ಗೆ ಸೂಚನೆ
Recommended image2
1 ರೂಪಾಯಿಗೆ ಸಿಗೋ ಪೇಪರ್‌ ಬ್ಯಾಗ್‌ಗೆ 20 ರೂಪಾಯಿ, ಪ್ಯಾಕಿಂಗ್‌ಗೆ ₹40 ಚಾರ್ಜ್‌: ಇದು ರಾಮೇಶ್ವರಂ ಕೆಫೆ ಲೂಟಿ!
Recommended image3
ಏಪ್ರಿಲ್‌ 1 ರಿಂದ ದೇಶದ ಪ್ರಖ್ಯಾತ ಸಿಸಿಟಿವಿ ಕಂಪನಿ Hikvision, TP-Link, Dahiya ಬ್ಯಾನ್‌!
Related Stories
Recommended image1
ಶಾಕ್ ಇಲ್ಲ, ಹಲವರಿಗೆ ಗೊತ್ತಾಗಲೇ ಇಲ್ಲ, ಜೊಮ್ಯಾಟೋ ಪ್ಲಾಟ್‌ಫಾರ್ಮ್ ಫೀ‌ನಿಂದ 1000 ಕೋಟಿ ಆದಾಯ
Recommended image2
ಜಿಬಿಎ ಬಜೆಟ್‌ಗೆ ರಾಜ್ಯ, ಕೇಂದ್ರ ಸರ್ಕಾರದಿಂದ ₹4196 ಕೋಟಿ ನೀರಿಕ್ಷೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved