Gold: ತಿಂಗಳ 4 ದಿನಗಳಲ್ಲಿ 2ನೇ ಬಾರಿ ಇಳಿಕೆಯಾದ ಚಿನ್ನ; ಖರೀದಿದಾರಿಗೆ ಜಾಕ್‌ಪಾಟ್
ಈ ತಿಂಗಳು ಆರಂಭವಾದ ನಾಲ್ಕೇ ದಿನಗಳಲ್ಲಿ ಚಿನ್ನದ ಬೆಲೆಯು ಎರಡನೇ ಬಾರಿಗೆ ಇಳಿಕೆಯಾಗಿದೆ. ಈ ಲೇಖನದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ, ಪ್ರಮುಖ ನಗರಗಳಲ್ಲಿನ ಬೆಲೆ ಹಾಗೂ ಎಷ್ಟು ಇಳಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ಇದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಚಿನ್ನದ ಬೆಲೆ ಎರಡನೇ ಬಾರಿಗೆ ಇಳಿಕೆ
ಇಂದು ದೇಶದಲ್ಲಿ ಅದು ತಿಂಗಳು ಆರಂಭವಾದ ನಾಲ್ಕು ದಿನಗಳಲ್ಲಿಯೇ ಚಿನ್ನದ ಬೆಲೆ ಎರಡನೇ ಬಾರಿಗೆ ಇಳಿಕೆಯಾಗಿದೆ. ತಿಂಗಳ ಮೊದಲ ದಿನ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 12 ಸಾವಿರ ರೂ.ಗಳವರೆಗೆ ಕಡಿಮೆಯಾಗಿತ್ತು. ಇಂದು ಮತ್ತೊಮ್ಮೆ ಚಿನ್ನ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ?
1 ಗ್ರಾಂ: 13,450 ರೂಪಾಯಿ
8 ಗ್ರಾಂ: 1,07,600 ರೂಪಾಯಿ
10 ಗ್ರಾಂ: 1,34,500 ರೂಪಾಯಿ
100 ಗ್ರಾಂ: 13,45,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ?
1 ಗ್ರಾಂ: 14,673 ರೂಪಾಯಿ
8 ಗ್ರಾಂ: 1,17,384 ರೂಪಾಯಿ
10 ಗ್ರಾಂ: 1,46,730 ರೂಪಾಯಿ
100 ಗ್ರಾಂ: 14,67,300 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,37,000 ರೂಪಾಯಿ, ಮುಂಬೈ: 1,34,500 ರೂಪಾಯಿ, ದೆಹಲಿ: 1,34,650 ರೂಪಾಯಿ, ಕೋಲ್ಕತ್ತಾ: 1,34,500 ರೂಪಾಯಿ, ಬೆಂಗಳೂರು: 1,34,500 ರೂಪಾಯಿ
ಎಷ್ಟು ಇಳಿಕೆ?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂ.ಗಳಷ್ಟು ಇಳಿಕೆಯಾಗಿದೆ. ಆದ್ರೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. 1 ಕೆಜಿ ಬೆಳ್ಳಿ ಬೆಲೆ 2.5 ಲಕ್ಷ ರೂಪಾಯಿ ಆಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

