ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, 28 ದಿನ ಬದಲು 30 ದಿನ ರೀಚಾರ್ಜ್ ಪ್ಲಾನ್‌ಗೆ ಸೂಚನೆ
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, 28 ದಿನ ಬದಲು 30 ದಿನ ರೀಚಾರ್ಜ್ ಪ್ಲಾನ್‌ಗೆ ಸೂಚನೆ, ರಾಜ್ಯಸಭೆಯಲ್ಲಿ ಆಪ್ ಸಂಸದ ರಾಘವ ಚಡ್ಡಾ ಈ ಕುರಿತು ಸರ್ಕಾರದ ಗಮನಸೆಳೆದಿದ್ದರು. ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು.

ವರ್ಷದಲ್ಲಿ 12 ತಿಂಗಳು 13 ಬಾರಿ ರೀಚಾರ್ಜ್
ಭಾರತದಲ್ಲಿನ ಟೆಲಿಕಾಂ ಆಪರೇಟರ್ ಸರ್ವೀಸ್ ರೀಚಾರ್ಜ್ ಅವಧಿ 28 ದಿನ. ಬಹುತೇಕಾ ಎಲ್ಲಾ ರೀಚಾರ್ಜ್ ಅವಧಿ 28 ದಿನಗಳು ಮಾತ್ರ ನೀಡುತ್ತಿದೆ. ಈ ಕುರಿತು ಆಪ್ ಸಂಸದ ರಾಘವ ಚಡ್ಡಾ ರಾಜ್ಯಸಭೆಯಲ್ಲಿ ಗಮನಸೆಳೆದಿದ್ದರು. ವರ್ಷದ 12 ತಿಂಗಳಲ್ಲಿ ಜನಸಾಮಾನ್ಯರು 13 ಬಾರಿ ರೀಚಾರ್ಜ್ ಮಾಡಬೇಕು. ಇದರ ಬದಲು 30 ದಿನದ ರೀಚಾರ್ಜ್ ಅವಧಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು.
ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ
ರಾಘವ ಚಡ್ಡಾ ರೀಚಾರ್ಜ್ ಸೇರಿದಂತೆ ಟೆಲಿಕಾಂ ವಿಚಾರಗಳ ಕುರಿತು ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣಿಸುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಟೆಲಿಕಾಂ ಆಪರೇಟರ್‌ಗಳಿಗೆ ಮನವಿ ಮಾಡಿದ್ದಾರೆ. ಗ್ರಾಹಕರಿಗೆ 30 ದಿನಗಳ ರೀಚಾರ್ಜ್ ಅವಧಿ ನೀಡಬೇಕು ಎಂದು ಸೂಚಿಸಿದ್ದಾರೆ.
ಗ್ರಾಹಕರಿಗೆ ಆಯ್ಕೆ ಲಭ್ಯವಿರಬೇಕು
28 ದಿನ ಬದಲು 30 ದಿನದ ಪ್ಲಾನ್ ಮಾತ್ರ ಇರಬೇಕು ಎಂದಲ್ಲ. ಆದರೆ ಗ್ರಾಹಕರಿಗೆ 30 ದಿನದ ರೀಚಾರ್ಜ್ ಪ್ಲಾನ್ ಕೂಡ ಲಭ್ಯವಿರಬೇಕು ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ. ಹಲವು ಗ್ರಾಹಕರು 30 ದಿನದ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಈ ಆಯ್ಕೆ ಗ್ರಾಹಕರಿಗೆ ಲಭ್ಯವಿರಬೇಕು ಎಂದಿದ್ದಾರೆ.
2022ರಲ್ಲಿ ಟ್ರಾಯ ಹೊರಡಿಸಿತ್ತು ಸೂಚನೆ
2022ರಲ್ಲೇ ಟ್ರಾಯ್ 30 ದಿನ ವ್ಯಾಲಿಟಿಡಿ ರೀಚಾರ್ಜ್ ಪ್ಲಾನ್‌ಗೆ ಸೂಚಿಸಿತ್ತು. ಕೆಲ ಆಪರೇಟರ್‌ಗಳು 30 ದಿನ ಪ್ಲಾನ್ ನೀಡುತ್ತಿದೆ. ಆದರೆ ಬಲು ದುಬಾರಿಯಾಗಿದೆ. ಇದೀಗ ಎಲ್ಲಾ ಆಪರೇಟರ್ 30 ದಿನ ವ್ಯಾಲಿಟಿಡಿ ಪ್ಲಾನ್ ನೀಡಲು ಸೂಚನೆ ನೀಡಲಾಗಿದೆ.
ಡೇಟಾ ಪ್ಲಾನ್ ಕುರಿತು ರಾಘವ್ ಚಡ್ಡಾ ಹೇಳಿದ್ದೇನು
ರಾಜ್ಯಸಭೆಯಲ್ಲಿ ಡೇಟಾ ಕುರಿತು ರಾಘವ್ ಚಡ್ಡಾ ಮಾತನಾಡಿದ್ದಾರೆ. ಹಲವು ಗ್ರಾಹಕರು ದಿನದ ಡೇಟಾ ಸಂಪೂರ್ಣ ಬಳಕೆ ಮಾಡಿರುವುದಿಲ್ಲ. ಆದರೆ ಮರುದಿನಕ್ಕೆ ಈ ಡೇಟಾ ಮುಂದುವರಿಯುವುದಿಲ್ಲ. ಉದಾಹರಣೆಗೆ 1.5 ಜಿಬಿ ಡೇಟಾದಲ್ಲಿ 1 ಜಿಬಿ ಬಳಕೆ ಮಾಡಿರುತ್ತಾರೆ. ಮರುದಿನ ಈ ಬಳಸದೆ ಡೇಟಾ ಮುಂದುವರಿಯುವುದಿಲ್ಲ. ಈ ನೀತಿಯಲ್ಲಿ ಬದಲಾವಣೆಯಾಗಬೇಕು ಎಂದಿದ್ದರು.
ಡೇಟಾ ಪ್ಲಾನ್ ಕುರಿತು ರಾಘವ್ ಚಡ್ಡಾ ಹೇಳಿದ್ದೇನು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

