- Home
- Technology
- What's New
- ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ, ಬರೋಬ್ಬರಿ 97 ಸಾವಿರ ಟವರ್ ಮೂಲಕ ಜನರಿಗೆ ಮೂಲೆ ಮೂಲೆಗೆ 4ಜಿ ನೆಟ್‌ವರ್ಕ್ ಸರ್ವೀಸ್ ನೀಡಲಿದೆ.

ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್
ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್
ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ್ದಾರೆ. ಭಾರದ ಮೂಲೆ ಮೂಲೆಯಲ್ಲಿ ಈ 4ಜಿ ನೆಟ್‌ವರ್ಕ ಲಭ್ಯವಾಗುತ್ತಿದೆ. ಬಿಎಸ್ಎನ್ಎಲ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕಳೆದ 25 ವರ್ಷಗಳಿಂದ ಭಾರತದಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ ಬಿಎಸ್ಎನ್‌ಎಲ್, 25ನೇ ವರ್ಷಕ್ಕೆ ಸ್ವದೇಶಿ 4ಜಿ ನೆಟವರ್ಕ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ 4ಜ ನೆಟ್‌ವರ್ಕ್ ಸರ್ವೀಸ್ ಲಾಂಚ್ ಮಾಡಿದೆ. 25 ಅಥವಾ ಅದಕ್ಕಿಂತ ಹೆಚ್ಚು ವರ್ಷ ಸ್ವದೇಶಿ ಟೆಲಿಕಾಂ ಕಂಪನಿಯೊಂಂದು ಕಾರ್ಯಾನಿರ್ವಹಿಸುತ್ತಿರುವುದು ಇದೇ ಮೊದಲು, ಇಷ್ಟೇ ಅಲ್ಲ ಡೆನ್ಮಾರ್ಕ್, ಸ್ವೀಡನ್, ಸೌತ್ ಕೊರಿಯ ಹಾಗೂ ಚೀನಾದಂತ ದಿಗ್ಗಜ ದೇಶಗಳ ಸಾಲಿಗೆ ಸೇರಿಕೊಂಡಿದೆ.
ಸ್ವದೇಶಿಗೆ ಒತ್ತು ನೀಡಿದ ಮೋದಿ
ಸ್ವದೇಶಿಗೆ ಒತ್ತು ನೀಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜಿಎಸ್‌ಟಿ 2.0 ಜಾರಿ ಕುರಿತು ದೇಶವನ್ನುದ್ದೇಶಿ ಮಾತನಾಡಿದ್ದರು. ಸೆಪ್ಟೆಂಬರ್ 22ರಿಂದ ದೇಶದಲ್ಲಿ ಹೊಸ ಜಿಎಸ್‌ಟಿ ದರ ಜಾರಿಯಾಗಿದೆ. ಇದಕ್ಕೂ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ಜಿಎಸ್‌ಟಿ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ್ದರು. ಇದೇ ವೇಳೆ ಸ್ವದೇಶಿ, ಸ್ವಾಲಂಬನೆ ಹಾಗೂ ಆತ್ಮನಿರ್ಭರತೆ ಭಾರತ ಕುರಿತು ಮತ್ತೆ ಮಹತ್ವದ ವಿಚಾರ ಪ್ರಸ್ತಾಪಿಸಿದ್ದರು. ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಲು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಮೋದಿ ಸ್ವದೇಶಿ 4ಜಿ ಸರ್ವೀಸ್ ಲಾಂಚ್ ಮಾಡುವ ಮೂಲಕ ಬಿಎಸ್ಎನ್ಎಲ್ ವ್ಯಾಪ್ತಿ ವಿಸ್ತರಿಸಿದ್ದಾರೆ.
ಬಿಎಸ್ಎನ್ಎಲ್ 5ಜಿ, 97 ಸಾವಿರ ಟವರ್
ಬಿಎಸ್ಎನ್ಎಲ್ 5ಜಿ, 97 ಸಾವಿರ ಟವರ್
ಪ್ರಧಾನಿ ಮೋದಿ ಬಿಎಸ್ಎನ್ಎಲ್ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. ಇದೀಗ ಬಿಎಸ್ಎನ್ಎಲ್ ಬರೋಬ್ಬರಿ 97,000 ಟವರ್ ಈಗಾಗಲೇ 4ಜಿ ಅಪ್‌ಗ್ರೇಡೆಟ್ ಸರ್ವೀಸ್ ಮಾಡಲಾಗಿದೆ. ಹೀಗಾಗಿ ದೇಶಾದ್ಯಂತ ಬಿಎಸ್ಎನ್ಎಲ್ 4ಜಿ ಸರ್ವೀಸ್ ಲಭ್ಯವಾಗುತ್ತಿದೆ.
ಸ್ವದೇಶಿ 4ಜಿ ನೆಟ್‌ವರ್ಕ್ ವಿಶೇಷತೆ
ಸ್ವದೇಶಿ 4ಜಿ ನೆಟ್‌ವರ್ಕ್ ವಿಶೇಷತೆ
ಸ್ವದೇಶಿ 4ಜಿ ಸರ್ವೀಸ್ ಪ್ರಮುಖವಾಗಿ ಕ್ಲೌಡ್ ಮೂಲಾಧಾರಿತವಾಗಿದೆ. ವಿಶೇಷ ಅಂದರೆ ಇದೇ ಸ್ವದೇಶಿ 4ಜಿ ಸರ್ವೀಸ್ ಯಾವುದೇ ಅಡೆ ತಡೆ ಇಲ್ಲದೆ 5ಜಿ ಸರ್ವೀಸ್ ಆಗಿ ಪರಿವರ್ತನೆ ಮಾಡಲು ಸಾಧ್ಯವಿದೆ.
ಇದುವರೆಗೂ ನೆಟ್‌ವರ್ಕ್ ಇಲ್ಲದ 26,700 ಗ್ರಾಮಗಳಿಗೆ ಸ್ವದೇಶಿ 4ಜಿ ಲಾಂಚ್‌ನೊಂದಿಗೆ ಸಂಪರ್ಕವೂ ಸಿಗುತ್ತಿದೆ. ಈ ಪೈಕಿ 2,472 ಒಡಿಶಾದ ಅತೀ ಕುಗ್ರಾಮಗಳಿಗೂ ಸಂಪರ್ಕ ಸಿಗುತ್ತಿದೆ. ಈ ಪೈಕಿ ಹಲವು ಪ್ರದೇಶಗಳು ನಕ್ಸಲ್ ಪೀಡಿತ ಪ್ರದೇಶವಾಗಿತ್ತು.
ಬರೋಬ್ಬರಿ 37,000 ಕೋಟಿ ರೂ
ಬರೋಬ್ಬರಿ 37,000 ಕೋಟಿ ರೂ
ಸ್ವದೇಶಿ 4ಜಿ ನೆಟ್‌ವರ್ಕ್ ಯೋಜನೆ ಬರೋಬ್ಬರಿ 37,000 ಕೋಟಿ ರೂಪಾಯಿ ಬೃಹತ್ ಯೋಜನೆ ಇದಾಗಿದೆ. ಸ್ವದೇಶಿ 4ಜಿ ನೆಟ್‌ವರ್ಕ್‌ನಿಂದ 20 ಲಕ್ಷ ಗ್ರಾಹಕರು ಬಿಎಸ್ಎನ್ಎಲ್ ಸೇರಿಕೊಳ್ಳುವ ಸಾಧ್ಯತೆ ಇದೆ.
ಶೇಕಡಾ 100 ರಷ್ಟು 4ಜಿ ನೆಟ್‌ವರ್ಕ್ ಸಂಪರ್ಕ ಸಾಧಿಸಲು ಈ ಯೋಜನೆ ಮಾಲೂಕಕ ಕಾರ್ಯಪ್ರವತ್ತರಾಗಿದೆ.