ಏರಿಕೆ ನಡುವೆ ನೆಮ್ಮದಿ ನೀಡಿದ ಚಿನ್ನದ ಬೆಲೆ; ಇಂದು ಎಷ್ಟು ಇಳಿಕೆ? ಗ್ರಾಹಕರು ಖುಷ್
ಏಪ್ರಿಲ್ ತಿಂಗಳ ಬೆಲೆ ಏರಿಕೆಗಳ ನಂತರ, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ಮೇಲೆ ₹15,300 ಮತ್ತು 1 ಕೆಜಿ ಬೆಳ್ಳಿಯ ಮೇಲೆ ₹5,000 ದಷ್ಟು ಬೆಲೆ ಕುಸಿದಿದೆ. ಈ ಲೇಖನವು ಇಂದಿನ ನಿಖರವಾದ ಚಿನ್ನ ಮತ್ತು ಬೆಳ್ಳಿಯ ದರಗಳನ್ನು ವಿವರಿಸುತ್ತದೆ.

ಚಿನ್ನದ ಬೆಲೆಯಲ್ಲಿ ಇಳಿಕೆ
ಏಪ್ರಿಲ್ ಮೊದಲ ದಿನ ದೇಶದ ಜನತೆ ಸಾಲು ಸಾಲು ಬೆಲೆ ಏರಿಕೆಗಳನ್ನು ನೋಡಿ ಕಂಗಲಾಗಿದ್ದರು. ಈ ಎಲ್ಲಾ ಏರಿಕೆ ನಡುವೆ ಇಂದು ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರೋದು ಕಂಡು ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಎಷ್ಟು ಇಳಿಕೆ?
ಇಂದು 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 14 ಸಾವಿರ ರೂಪಾಯಿ ಮತ್ತು 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 15,300 ರೂ.ಗಳಷ್ಟು ಕಡಿಮೆಯಾಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆಯಲ್ಲಿ 5 ಸಾವಿರ ರೂ.ಗಳಷ್ಟು ಕುಸಿತ ಕಂಡಿದೆ. ಇಂದಿನ ಬೆಲೆಗಳು ಎಷ್ಟಿವೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,880 ರೂಪಾಯಿ
8 ಗ್ರಾಂ: 1,11,040 ರೂಪಾಯಿ
10 ಗ್ರಾಂ: 1,38,800 ರೂಪಾಯಿ
100 ಗ್ರಾಂ: 13,88,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,412 ರೂಪಾಯಿ
8 ಗ್ರಾಂ: 1,21,136 ರೂಪಾಯಿ
10 ಗ್ರಾಂ: 1,51,420 ರೂಪಾಯಿ
100 ಗ್ರಾಂ: 15,14,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,39,500 ರೂಪಾಯಿ, ಮುಂಬೈ: 1,38,800 ರೂಪಾಯಿ, ದೆಹಲಿ: 1,38,950 ರೂಪಾಯಿ, ಬೆಂಗಳೂರು: 1,38,800 ರೂಪಾಯಿ, ಹೈದರಾಬಾದ್: 1,38,800 ರೂಪಾಯಿ, ಪುಣೆ: 1,38,800 ರೂಪಾಯಿ
ಇದನ್ನೂ ಓದಿ: Hubballi: ನೈಋತ್ಯ ರೈಲ್ವೆಯಿಂದ ದಾಖಲೆಗಳ ಮೇಲೆ ದಾಖಲೆ; ಆದಾಯ ಕೇಳಿದ್ರೆ ಶಾಕ್ ಆಗ್ತೀರಿ!
ದೇಶದಲ್ಲಿ ಬೆಳ್ಳಿ ಬೆಲೆ
1 ಕೆಜಿ ಬೆಳ್ಳಿ ಬೆಲೆ 3 ಲಕ್ಷದ ಗಡಿ ದಾಟಿ ಸಾರ್ವಕಾಲಿಕ ದಾಖಲೆಯನ್ನು ಬರೆದಿತ್ತು. ಕಳೆದ ಕೆಲವು ದಿನಗಳಿಂದ ಬೆಳ್ಳಿ ಬೆಲೆಯೂ ಹಂತತ ಹಂತವಾಗಿ ಇಳಿಕೆಯಾಗುತ್ತಿದೆ. ಇಂದಿನ ಬೆಳ್ಳಿ ದರ ಕೆಳಗಿನಂತಿದೆ.
10 ಗ್ರಾಂ: 2,500 ರೂಪಾಯಿ
100 ಗ್ರಾಂ: 25,000 ರೂಪಾಯಿ
1000 ಗ್ರಾಂ: 2,50,000 ರೂಪಾಯಿ
ಇದನ್ನೂ ಓದಿ: ಏಪ್ರಿಲ್ 1ರಿಂದಲೇ ಆಗಲಿದೆ ಅದಾಯ ತೆರಿಗೆ, ಬ್ಯಾಂಕಿಂಗ್, ಸಂಬಳದಲ್ಲಿ ಮಹತ್ವದ ಬದಲಾವಣೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

