MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Business
  • Antilia House: ಬೆಳ್ಳಿ ಬಾಗಿಲು, ಕಲ್ಲಿನ ಕೆತ್ತನೆ – ಮೊದಲ ಬಾರಿ ಆಂಟಿಲಿಯಾ ದೇವರ ಮನೆ ತೋರಿಸಿದ ನೀತಾ ಅಂಬಾನಿ

Antilia House: ಬೆಳ್ಳಿ ಬಾಗಿಲು, ಕಲ್ಲಿನ ಕೆತ್ತನೆ – ಮೊದಲ ಬಾರಿ ಆಂಟಿಲಿಯಾ ದೇವರ ಮನೆ ತೋರಿಸಿದ ನೀತಾ ಅಂಬಾನಿ

Nita Ambani : ಆಂಟಿಲಿಯಾ ಮೇಲೆ ಎಲ್ಲರ ಕಣ್ಣಿದೆ. ಭವ್ಯ ಬಂಗಲೆಯೊಳಗೆ ಏನೆಲ್ಲ ಇದೆ ಎಂಬುದನ್ನು ನೋಡುವ ಆಸಕ್ತಿ ಜನರಿಗಿದೆ. ಈಗ ನೀತಾ ಅಂಬಾನಿ ಮನೆಯ ಮುಖ್ಯ ಜಾಗವನ್ನು ಜನರಿಗೆ ತೋರಿಸಿದ್ದಾರೆ.

1 Min read
Author : Roopa Hegde
Published : Jul 24 2026, 12:38 PM IST
Share this Photo Gallery
  • FB
  • TW
  • Linkdin
  • Whatsapp
17
ವಿಶ್ವದ ದುಬಾರಿ ಮನೆ
Image Credit : Asianet News

ವಿಶ್ವದ ದುಬಾರಿ ಮನೆ

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ನಿವಾಸ ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಖಾಸಗಿ ಮನೆಗಳಲ್ಲಿ ಒಂದಾಗಿದೆ. 27 ಮಹಡಿಗಳ ಈ ಭವ್ಯ ಕಟ್ಟಡದಲ್ಲಿ ಐಷಾರಾಮಿ ಸೌಲಭ್ಯಗಳ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯೂ ಪ್ರಮುಖ ಸ್ಥಾನ ಪಡೆದಿವೆ. ಆಂಟಿಲಿಯಾ ಒಳಗೇನಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದೆ. ಆಗಾಗ ಮುಖೇಶ್‌ ಅಂಬಾನಿ ಮನೆಯೊಳಗಿನ ಕೆಲ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ದೇವರ ಮನೆ ತೋರಿಸಿದ ನೀತಾ ಅಂಬಾನಿ
Image Credit : Asianet News

ದೇವರ ಮನೆ ತೋರಿಸಿದ ನೀತಾ ಅಂಬಾನಿ

ನೀತಾ ಅಂಬಾನಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದಾರೆ. ಆಗಾಗ ಅವರ ಮನೆಯ ಕೆಲ ವಿಡಿಯೋ, ಫೋಟೋಗಳನ್ನು ಅವರು ಹಂಚಿಕೊಳ್ತಿರುತ್ತಾರೆ. ಈಗ ಅವರ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ನೀತಾ ಅಂಬಾನಿ ಮೊದಲ ಬಾರಿ ಮನೆಯ ಅತ್ಯಂತ ವಿಶೇಷ ಭಾಗವಾದ ಭವ್ಯ ದೇವರ ಕೋಣೆಯನ್ನು ಸಾರ್ವಜನಿಕರಿಗೆ ತೋರಿಸಿದ್ದಾರೆ. ಶ್ರೀಕೃಷ್ಣನ ಭಕ್ತಿಯಲ್ಲಿ ಲೀನರಾಗಿರುವ ಅವರ ವಿಡಿಯೋ ಎಲ್ಲರ ಗಮನ ಸೆಳೆದಿವೆ.

Related Articles

Related image1
ವಿಶ್ವದ ಗಮನ ಸೆಳೆದ ನೀತಾ ಅಂಬಾನಿಯ ನೀಲಿ ಬಣ್ಣದ ಕಾಂಜೀವರಂ ಚಿನ್ನದ ಸೀರೆ: ಏನಿದರ ವಿಶೇಷತೆ
Related image2
ದಿನನಿತ್ಯದ ಬದುಕಿನ ವಿಡಿಯೋಗಳಿಂದ ₹8.35 ಕೋಟಿ ಗಳಿಕೆ; ಗಂಡನನ್ನೇ ಕೆಲಸಕ್ಕೆ ನೇಮಿಸಿಕೊಂಡ ಮಹಿಳೆ!
37
ಬೆಳ್ಳಿ ಬಾಗಿಲು
Image Credit : Asianet News

ಬೆಳ್ಳಿ ಬಾಗಿಲು

ದೇವರ ಕೋಣೆಯ ಪ್ರವೇಶದಲ್ಲೇ ಬೆಳ್ಳಿಯ ಕೆತ್ತನೆಯ ಭವ್ಯ ಬಾಗಿಲುಗಳು ಕಣ್ಣಿಗೆ ಬೀಳುತ್ತವೆ. ಒಳಗೆ ಬಿಳಿ ಸಂಗಮರ್ಮರದ ನೆಲ, ದೊಡ್ಡ ಜೂಮರ್, ಸೂಕ್ಷ್ಮ ಕೆತ್ತನೆಯ ಸ್ತಂಭಗಳು ಹಾಗೂ ಹೂಗಳಿಂದ ಅಲಂಕರಿಸಿದ ಶ್ರೀಕೃಷ್ಣನ ಫೋಟೋ ದೈವಿಕ ವಾತಾವರಣವನ್ನು ಸೃಷ್ಟಿಸಿವೆ.

47
ಭಾರತೀಯ ಕಲೆಯ ಅದ್ಭುತ ಸಂಯೋಜನೆ
Image Credit : Asianet News

ಭಾರತೀಯ ಕಲೆಯ ಅದ್ಭುತ ಸಂಯೋಜನೆ

ಗೋಡೆಗಳ ಮೇಲೆ ರಾಧಾ-ಕೃಷ್ಣ, ಕಮಲದ ಹೂಗಳು ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಭವ್ಯ ಚಿತ್ರಕಲೆಗಳು ಅಲಂಕರಿಸಿವೆ. ಪ್ರತಿಯೊಂದು ಚಿತ್ರವೂ ಭಾರತೀಯ ಪರಂಪರೆಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ.

57
ರಾಜಮನೆತನದಂತೆ ಕಾಣುವ ಒಳಾಂಗಣ
Image Credit : Asianet News

ರಾಜಮನೆತನದಂತೆ ಕಾಣುವ ಒಳಾಂಗಣ

ಬೆಳ್ಳಿ ಹೊಳಪಿನ ಕ್ಲಾಸಿಕ್ ಸೋಫಾಗಳು, ಕಲಾತ್ಮಕ ಪೀಠೋಪಕರಣಗಳು, ಆಕರ್ಷಕ ಮಾರ್ಬಲ್ ವಿನ್ಯಾಸಗಳು ಹಾಗೂ ರಾಯಲ್ ಬಾಗಿಲುಗಳು ಆಂಟಿಲಿಯಾಗೆ ಅರಮನೆಯ ಮೆರುಗು ನೀಡಿವೆ.

67
ನೀತಾ ಅಂಬಾನಿಯ ರಾಯಲ್ ಲುಕ
Image Credit : Asianet News

ನೀತಾ ಅಂಬಾನಿಯ ರಾಯಲ್ ಲುಕ

ವಿಡಿಯೋದಲ್ಲಿ ನೀತಾ ಅಂಬಾನಿ ಶ್ರೀಕೃಷ್ಣ, ಗೋವು ಮತ್ತು ಕಮಲದ ವಿನ್ಯಾಸಗಳಿರುವ ಐವರಿ ಬಣ್ಣದ ಸೀರೆ ಧರಿಸಿದ್ದರು. ವಜ್ರಾಭರಣಗಳು, ಗುಲಾಬಿ ಹೂಗಳಿಂದ ಅಲಂಕರಿಸಿದ ಜಡೆ ಹಾಗೂ ಸರಳ ಮೇಕಪ್ ಅವರ ಸೌಂದರ್ಯವನ್ನು ಡಬಲ್‌ ಮಾಡಿತ್ತು.

77
ಆಧ್ಯಾತ್ಮಿಕತೆಗೆ ಆದ್ಯತೆ
Image Credit : Asianet News

ಆಧ್ಯಾತ್ಮಿಕತೆಗೆ ಆದ್ಯತೆ

ಆಂಟಿಲಿಯಾ ಕೇವಲ ದುಬಾರಿ ಮನೆ ಮಾತ್ರವಲ್ಲ. ಭಾರತೀಯ ಸಂಸ್ಕೃತಿ, ಕಲೆ ಮತ್ತು ಭಕ್ತಿಯ ಅದ್ಭುತ ಸಂಗಮವಾಗಿರುವ ಈ ಭವ್ಯ ನಿವಾಸದ ದೇವರ ಕೋಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಐಷಾರಾಮಿ ಜೀವನದಲ್ಲೂ ಅವರು ಆಧ್ಯಾತ್ಮಿಕತೆಗೆ ಹೆಚ್ಚು ಆದ್ಯತೆ ನೀಡ್ತಿರೋದು ಎಲ್ಲರ ಗಮನ ಸೆಳೆದಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ನೀತಾ ಅಂಬಾನಿ
ಮುಕೇಶ್ ಅಂಬಾನಿ

Latest Videos
Recommended Stories
Recommended image1
ಮೀಸಲಾತಿಯನ್ನು ಬೆಂಬಲಿಸಿದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೇಟ್ಸ್​: ಆದ್ರೆ ಇಲ್ಲೊಂದಿದೆ ಸಕತ್​ ಟ್ವಿಸ್ಟ್​
Recommended image2
ಫೋನ್‌ ಮೂಲಕ ತಪ್ಪಾದ ವ್ಯಕ್ತಿಗೆ ಹಣ ಕಳುಹಿಸಿಬಿಟ್ಟಿದ್ದೀರಾ? ಪ್ಯಾನಿಕ್‌ ಆಗಬೇಡಿ, ಹೀಗೆ ಮಾಡಿ
Recommended image3
EPFO: ₹50,000 ಸಂಬಳ, 25 ವರ್ಷ ಖಾಸಗಿ ಉದ್ಯೋಗ! ನಿವೃತ್ತಿ ಬಳಿಕ ಸಿಗುವ ಪಿಂಚಣಿ ಎಷ್ಟು? ನೀವೆ ಲೆಕ್ಕ ಹಾಕಲು ಇಲ್ಲಿದೆ ಸರಳ ವಿಧಾನ!
Related Stories
Recommended image1
ವಿಶ್ವದ ಗಮನ ಸೆಳೆದ ನೀತಾ ಅಂಬಾನಿಯ ನೀಲಿ ಬಣ್ಣದ ಕಾಂಜೀವರಂ ಚಿನ್ನದ ಸೀರೆ: ಏನಿದರ ವಿಶೇಷತೆ
Recommended image2
ದಿನನಿತ್ಯದ ಬದುಕಿನ ವಿಡಿಯೋಗಳಿಂದ ₹8.35 ಕೋಟಿ ಗಳಿಕೆ; ಗಂಡನನ್ನೇ ಕೆಲಸಕ್ಕೆ ನೇಮಿಸಿಕೊಂಡ ಮಹಿಳೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved