MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • LPG Price: ಚೆನ್ನೈ, ಹೈದರಾಬಾದ್‌ಗಿಂತ ಬೆಂಗಳೂರೇ ಬೆಸ್ಟ್; ದೇಶದಲ್ಲಿ ಎಲ್ಲೆಲ್ಲಿ ಗ್ಯಾಸ್ ಸಿಲಿಂಡರ್ ಅಗ್ಗ? ಎಲ್ಲಿ ದುಬಾರಿ?

LPG Price: ಚೆನ್ನೈ, ಹೈದರಾಬಾದ್‌ಗಿಂತ ಬೆಂಗಳೂರೇ ಬೆಸ್ಟ್; ದೇಶದಲ್ಲಿ ಎಲ್ಲೆಲ್ಲಿ ಗ್ಯಾಸ್ ಸಿಲಿಂಡರ್ ಅಗ್ಗ? ಎಲ್ಲಿ ದುಬಾರಿ?

ಜುಲೈ 23ರಂದು ದೇಶಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳು ಅಪ್ಡೇಟ್ ಆಗಿವೆ. ಗೃಹಬಳಕೆಯ ಸಿಲಿಂಡರ್ ಬೆಲೆ ಲೇಹ್‌ನಲ್ಲಿ ಅತಿ ದುಬಾರಿಯಾಗಿದ್ದರೆ, ಅಸ್ಸಾಂನ ಡಿಬ್ರೂಗಢದಲ್ಲಿ ಅತಿ ಅಗ್ಗವಾಗಿದೆ. ಸಾರಿಗೆ ವೆಚ್ಚದ ಕಾರಣದಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಸಿಲಿಂಡರ್ ದರಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ.

2 Min read
Author : Sathish Kumar KH
Published : Jul 23 2026, 08:18 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : ANI

ಸಾಮಾನ್ಯ ಜನರ ದೈನಂದಿನ ಮತ್ತು ತಿಂಗಳ ಬಜೆಟ್‌ನಲ್ಲಿ (Monthly Budget) ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ (LPG Gas Cylinder Price) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಜುಲೈ 23ರಂದು ದೇಶಾದ್ಯಂತ ಗೃಹಬಳಕೆಯ 14.2 ಕೆಜಿ (Domestic Cylinder) ಮತ್ತು ವಾಣಿಜ್ಯ ಬಳಕೆಯ 19 ಕೆಜಿ (Commercial Cylinder) ಎಲ್‌ಪಿಜಿ ಸಿಲಿಂಡರ್ ದರಗಳು ಅಪ್ಡೇಟ್ ಆಗಿವೆ. ಇಂಡಿಯನ್ ಆಯಿಲ್ (Indian Oil) ಬಿಡುಗಡೆ ಮಾಡಿರುವ ತಾಜಾ ದರಗಳ ಪ್ರಕಾರ, ಬೆಂಚ್‌ಮಾರ್ಕ್ ನಗರವಾದ ದೆಹಲಿಯಲ್ಲಿ (Delhi) ಗೃಹಬಳಕೆಯ ಸಿಲಿಂಡರ್ ಬೆಲೆ ₹942 ಆಗಿದ್ದರೆ, ವಾಣಿಜ್ಯ ಸಿಲಿಂಡರ್ ಬೆಲೆ ₹2,930 ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ದೇಶದಲ್ಲಿ ಎಲ್ಲಿ ಅತಿ ದುಬಾರಿ? ಎಲ್ಲಿ ಅಗ್ಗ?

ಗೃಹಬಳಕೆಯ ಸಿಲಿಂಡರ್ ದರಗಳನ್ನು ಗಮನಿಸಿದರೆ, ದೇಶದಲ್ಲೇ ಅತಿ ಹೆಚ್ಚು ಬೆಲೆ ಲೆಹ್‌ನಲ್ಲಿ (Leh) ದಾಖಲಾಗಿದೆ. ಇಲ್ಲಿ ಸಿಲಿಂಡರ್ ಬೆಲೆ ₹1,179 ಇದೆ. ಮತ್ತೊಂದೆಡೆ, ಅಸ್ಸಾಂನ ಡಿಬ್ರೂಗಢದಲ್ಲಿ (Dibrugarh) ದೇಶದಲ್ಲೇ ಅತಿ ಕಡಿಮೆ ಬೆಲೆಗೆ ಅಂದರೆ ₹940.50 ಕ್ಕೆ ಸಿಲಿಂಡರ್ ಲಭ್ಯವಿದೆ. ಈ ಎರಡು ನಗರಗಳ ನಡುವಿನ ಬೆಲೆಯ ವ್ಯತ್ಯಾಸ ಬರೋಬ್ಬರಿ ₹238.50 ಆಗಿದೆ.

₹1000 ದಾಟಿದ ನಗರಗಳು ಯಾವುವು?

ಹಲವು ನಗರಗಳಲ್ಲಿ ಗೃಹಬಳಕೆಯ ಸಿಲಿಂಡರ್ ದರ (LPG Rates) 1000 ರೂಪಾಯಿ ಗಡಿ ದಾಟಿದೆ. ಶ್ರೀನಗರ (₹1,058), ಅಂಡಮಾನ್ (₹1,018), ಚಿತ್ತೂರು (₹1,008.50), ಮತ್ತು ಈಶಾನ್ಯ ರಾಜ್ಯಗಳಾದ ವೆಸ್ಟ್ ಇಂಫಾಲ್ (₹1,093.50), ಐಜ್ವಾಲ್ (₹1,094), ಗ್ಯಾಂಗ್ಟಕ್ (₹1,094.50) ಮತ್ತು ನಾರ್ತ್ ತ್ರಿಪುರಾದಲ್ಲಿ (₹1,119.50) ಬೆಲೆಗಳು ಅತ್ಯಂತ ಉನ್ನತ ಮಟ್ಟದಲ್ಲಿವೆ.

Related Articles

Related image1
LPG; ಎಲ್‌ಪಿಜಿ ಗ್ರಾಹಕರೇ ಎಚ್ಚರ! ಗ್ಯಾಸ್ ಬುಕ್ ಮಾಡುವ ಮುನ್ನ ಈ '8' ನಿಯಮ ತಿಳಿಯಿರಿ! ಇಲ್ಲದಿದ್ದರೆ ಸಿಗಲ್ಲ ಸಿಲಿಂಡರ್!
Related image2
ಜುಲೈ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್; LPG ದರದಲ್ಲಿ ಗಣನೀಯ ಇಳಿಕೆ, ಕಡಿಮೆಯಾದ ಹೊರೆ
36
Image Credit : Asianet News

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಮಿತವ್ಯಯ :

ರಾಂಚಿಯಿಂದ ಮುಂಬೈವರೆಗಿನ ಹಲವು ನಗರಗಳಲ್ಲಿ ಬೆಲೆ ತುಲನಾತ್ಮಕವಾಗಿ ಕಡಿಮೆಯಿದೆ. ಹೈದರಾಬಾದ್ (₹994), ಲಕ್ನೋ (₹976.50), ಚೆನ್ನೈ (₹957.50), ಜೈಪುರ (₹952.50) ದರಗಳಿದ್ದರೆ, ಬೆಂಗಳೂರಿನಲ್ಲಿ (Bengaluru) ಗೃಹಬಳಕೆಯ ಸಿಲಿಂಡರ್ ದರ ₹944.50 ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ (Mumbai) ಇದು ₹941.50 ಕ್ಕೆ ಲಭ್ಯವಿದೆ.

46
Image Credit : Asianet News

ವಾಣಿಜ್ಯ ಸಿಲಿಂಡರ್ (Commercial Cylinder) ದರಗಳ ಕಥೆಯೇನು?

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲೂ ಭಾರಿ ವ್ಯತ್ಯಾಸವಿದೆ. ಲೆಹ್‌ನಲ್ಲಿ ಗರಿಷ್ಠ ₹3,752 ಇದ್ದರೆ, ಮುಂಬೈನಲ್ಲಿ ಕನಿಷ್ಠ ₹3,067.50 ಇದೆ. ಈ ಎರಡೂ ನಗರಗಳ ನಡುವಿನ ವಾಣಿಜ್ಯ ಸಿಲಿಂಡರ್ ದರದ ವ್ಯತ್ಯಾಸ ಸುಮಾರು ₹684.50 ರಷ್ಟಿದೆ. ಬೆಂಗಳೂರಿನಲ್ಲಿ ಇದರ ಬೆಲೆ ₹3,198 ರಷ್ಟಿದೆ.

56
Image Credit : X

ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? (Reason for Price Difference)

ಇಂದು ದೇಶದಲ್ಲಿ ಗ್ಯಾಸ್ ಬೆಲೆಗಳಲ್ಲಿ ಯಾವುದೇ ಹೊಸ ಬದಲಾವಣೆ ಮಾಡಿಲ್ಲವಾದರೂ, ರಾಜ್ಯದಿಂದ ರಾಜ್ಯಕ್ಕೆ ದರಗಳಲ್ಲಿ ಭಾರಿ ಅಂತರವಿದೆ. ಬಿಹಾರ, ಜಾರ್ಖಂಡ್, ತೆಲಂಗಾಣದ ಗ್ರಾಹಕರ ಮೇಲಿನ ಹೊರೆ ದೆಹಲಿ ಮತ್ತು ಮುಂಬೈಗಿಂತ ಹೆಚ್ಚಿದೆ. ಬೆಲೆ ವ್ಯತ್ಯಾಸಕ್ಕೆ ಮುಖ್ಯ ಕಾರಣ ಸಾರಿಗೆ ವೆಚ್ಚ (Transportation Cost). ಗುಡ್ಡಗಾಡು ಮತ್ತು ದುರ್ಗಮ ಪ್ರದೇಶಗಳಿಗೆ ಸಿಲಿಂಡರ್ ಸಾಗಿಸುವುದು ದುಬಾರಿ. ಅದೇ ರೀತಿ, ಬಂದರುಗಳಿಗೆ (Port Cities) ಹತ್ತಿರವಿರುವ ನಗರಗಳಲ್ಲಿ ಸಿಲಿಂಡರ್ ಬೆಲೆ ಅಗ್ಗವಾಗಿರುತ್ತದೆ.

66
Image Credit : X

ಪ್ರಮುಖ ನಗರಗಳ ಗೃಹಬಳಕೆಯ ಸಿಲಿಂಡರ್ (14.2 Kg) ದರಗಳ ಪಟ್ಟಿ:

ಲೆಹ್ (Leh): ₹ 1,179.00 (ದೇಶದಲ್ಲೇ ದುಬಾರಿ)

ಶ್ರೀನಗರ (Srinagar): ₹ 1,058.00

ಹೈದರಾಬಾದ್ (Hyderabad): ₹ 994.00

ಲಕ್ನೋ (Lucknow): ₹ 976.50

ಚೆನ್ನೈ (Chennai): ₹ 957.50

ಬೆಂಗಳೂರು (Bengaluru): ₹ 944.50

ನವದೆಹಲಿ (New Delhi): ₹ 942.00

ಮುಂಬೈ (Mumbai): ₹ 941.50

ಡಿಬ್ರೂಗಢ (Dibrugarh): ₹ 940.50 (ದೇಶದಲ್ಲೇ ಅಗ್ಗ)

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಎಲ್‌ಪಿಜಿ
ಬೆಂಗಳೂರು
ಕರ್ನಾಟಕ ಸುದ್ದಿ
ಭಾರತ ಸುದ್ದಿ
Latest Videos
Recommended Stories
Recommended image1
ಆದಾಯ ಹೆಚ್ಚಳಕ್ಕೆ BMTC ಹೊಸ ಪ್ಲಾನ್; ಬಸ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ನ್ಯೂ QR ಕೋಡ್
Recommended image2
ಚೀನಾ, ಸೌದಿ, IMF ಆಯ್ತು ಈಗ ಅಮೆರಿಕದ ಮುಂದೆ 85 ಸಾವಿರ ಕೋಟಿ ಸಾಲಕ್ಕೆ ಭಿಕ್ಷಾಪಾತ್ರೆ ಹಿಡಿದ ಪಾಕಿಸ್ತಾನ
Recommended image3
ಗೌತಮ್ ಅದಾನಿಗೆ ಭರ್ಜರಿ ಲಾಭ, ಮೊದಲ ತ್ರೈಮಾಸಿಕದಲ್ಲಿ 4,806 ಕೋಟಿ ರೂಪಾಯಿಗೆ ಜಿಗಿತ
Related Stories
Recommended image1
LPG; ಎಲ್‌ಪಿಜಿ ಗ್ರಾಹಕರೇ ಎಚ್ಚರ! ಗ್ಯಾಸ್ ಬುಕ್ ಮಾಡುವ ಮುನ್ನ ಈ '8' ನಿಯಮ ತಿಳಿಯಿರಿ! ಇಲ್ಲದಿದ್ದರೆ ಸಿಗಲ್ಲ ಸಿಲಿಂಡರ್!
Recommended image2
ಜುಲೈ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್; LPG ದರದಲ್ಲಿ ಗಣನೀಯ ಇಳಿಕೆ, ಕಡಿಮೆಯಾದ ಹೊರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved