ಉಚಿತ ಅಪಘಾತ ವಿಮೆ, ಓವರ್‌ಡ್ರಾಫ್ಟ್ ಸೇರಿ ಜನಧನ ಖಾತೆದಾರರಿಗಿದೆ ಪ್ರಮುಖ ನಾಲ್ಕು ಸೌಲಭ್ಯ
ಕೇಂದ್ರ ಸರ್ಕಾರದ ಜನಧನ ಬ್ಯಾಂಕ್ ಖಾತೆ ಗ್ರಾಮೀಣ ಮಟ್ಟದಲ್ಲಿ ಅತೀ ಹೆಚ್ಚಿನ ಮಂದಿ ಉಪಯೋಗಿಸುತ್ತಿದ್ದಾರೆ. ಸೌಲಭ್ಯ ಪಡೆದಿದ್ದಾರೆ. ವಿಶೇಷ ಅಂದರೆ ಈ ಜನಧನ ಖಾತೆದಾರರಿಗೆ ನಾಲ್ಕು ವಿಶೇಷ ಸೌಲಭ್ಯಗಳು ಇವೆ.

ಜನಧನ ಖಾತೆ ಸೌಲಭ್ಯ
ಪ್ರಧಾನ ಮಂತ್ರಿ ಜನಧನ ಯೋಜನೆ ಅತ್ಯಂತ ಯಶಸ್ವಿ ಮಾತ್ರವಲ್ಲ, ಭಾರತದಲ್ಲಿ ಹೊಸ ಕ್ರಾಂತಿ ಮಾಡಿದ ಯೋಜನೆ. ನಗರದಿಂದ ಗ್ರಾಮೀಣ ಮಟ್ಟದವರೆಗೆ ಪ್ರತಿಯೊಬ್ಬರಿಗೆ ಅಡೆ ತಡೆ ಇಲ್ಲದೆ ಬ್ಯಾಂಕ್ ಖಾತೆ ತೆರೆಯುವ ಈ ಯೋಜನೆಯಡಿ ಹಲವು ಸೌಲಭ್ಯಗಳು ಲಭ್ಯವಿದೆ. 2014ರಲ್ಲಿ ಆರಂಭಗೊಂಡ ಈ ಯೋಜನೆಯಿಂದ ಇದೀಗ ಭಾರತದಲ್ಲಿ ಶೇಕಡಾ 94ರಷ್ಟು ವಯಸ್ಕರು ಬ್ಯಾಂಕ್ ಖಾತೆ ಹೊಂದಿದ್ದಾರೆ.
ಶೂನ್ಯ ಮೊತ್ತ
ವಿಶೇಷ ಅಂದರೆ ಜನಧನ ಖಾತೆಯಲ್ಲಿ ಇಂತಿಷ್ಟು ಹಣ ಇರಲೇಬೇಕು ಎಂದಿಲ್ಲ. ಶೂನ್ಯ ಮೊತ್ತದಲ್ಲಿ ಖಾತೆ ನಿರ್ವಹಣೆ ಮಾಡಬಹುದು. ಖಾತೆದಾರರಿಗೆ ರೂಪೆ ಡೆಬಿಟ್ ಕಾರ್ಡ್ ಉಚಿತವಾಗಿ ನೀಡಲಾಗುತ್ತಿದೆ. ದೇಶಾದ್ಯಂತ ಎಲ್ಲೆ ತಡೆ ರಹಿತವಾಗಿ ನಗದು ಹಣ ಪೆಡಯಲು ಸಾಧ್ಯವಾಗುತ್ತದೆ.
ಉಚಿತ ಅಪಘಾತ ವಿಮೆ
ಜನಧನ ಖಾತೆದಾರರಿಗೆ ಉಚಿತ ಅಪಘಾತ ವಿಮೆ ನೀಡಲಾಗುತ್ತದೆ. ಖಾತೆ ತೆರೆದ ಬೆನ್ನಲ್ಲೇ ಆಟೋಮ್ಯಾಟಿಕ್ ಆಗಿ ಉಚಿತ ಅಪಘಾತ ವಿಮೆ ಸೌಲಭ್ಯ ಸಿಗಲಿದೆ.ರೂಪೆಕಾರ್ಡ್ ಜೊತೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಾಗಲಿದೆ.
ಓವರ್ ಡ್ರಾಫ್ಟ್ ಸೌಲಭ್ಯ
ಜನಧನ ಖಾತೆದಾರರ ಮತ್ತೊಂದು ಸೌಲಭ್ಯವೆಂದರೆ ತೀವ್ರ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಓವರ್ ಡ್ರಾಫ್ಟ್ ಫೆಸೆಲಿಟಿ ಮೂಲಕ 10 ರೂಪಾಯಿ ವರೆಗೆ ಸಾಲ ಸೌಲಭ್ಯ ಪಡೆಯಬಹುದು. ಇದು ಆರ್ಥಿಕವಾಗಿ ತೀವ್ರ ಸಮಸ್ಯೆ ಎದುರಾದಾಗ, ಕುಟುಂಬ ಸೇರಿದಂತೆ ಇತರ ಆರ್ಥಿಕ ಸಮಸ್ಯೆಗಳಿಗೆ ಬಳಸಿಕೊಳ್ಳಬಹುದು.
45 ಲಕ್ಷ ಕೋಟಿ ಹಣ ವರ್ಗಾವಣೆ
2014ರಲ್ಲಿ ಪ್ರಧಾನಿ ಮೋದಿ ಸರ್ಕಾರ ದೇಶದಲ್ಲಿ ಜನಧನ ಖಾತೆ ತೆರೆಯುವ ಆಂದೋಲನ ಆರಂಭಿಸಿತ್ತು. ಬಳಿಕ ಕೇಂದ್ರ ಸರ್ಕಾರದ ಸೌಲಭ್ಯಗಳ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಲಾಗಿತ್ತು. ಇದರ ಪರಿಣಾಮ ಕೇಂದ್ರ ಸರ್ಕಾರ ಬರೋಬ್ಬರಿ 45 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಇದುವರೆಗೆ ಜನಧನ ಖಾತೆ ಮೂಲಕ ಫಲಾನುಭವಿಗಳಿಗೆ ನೀಡಲಾಗಿದೆ.
58 ಕೋಟಿ ಖಾತೆ
ಗ್ರಾಮೀಣ ಭಾಗದಲ್ಲಿ ಬಹುತೇಕರು ಖಾತೆ ಇಲ್ಲ, ಬ್ಯಾಂಕ್‌ನತ್ತ ಮುಖಮಾಡಲು ಆಗದೆ ಪರದಾಡಿದ್ದರು. ಆದರೆ 2014ರ ಬಳಿಕ ಮೋದಿ ಸರ್ಕಾರ ಜನಧನ ಖಾತೆ ಮೂಲಕ ಕ್ರಾಂತಿ ಮಾಡಿತು. ಇದೀಗ ಬರೋಬ್ಬರಿ 58 ಕೋಟಿ ಖಾತೆಗಳು ಪ್ರಧಾನ ಮಂತ್ರಿ ಜನಧನ ಖಾತೆ ಯೋಜನೆ ಮೂಲಕ ತೆರೆಯಲಾಗಿದೆ, ಕಾರ್ಯನಿರ್ವಹಿಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.
