- Home
- Business
- ನಿಮಗೆ ತಿಳಿಯದ ಓಲ್ಡ್ ಮಂಕ್ ಕತೆ: ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ
ನಿಮಗೆ ತಿಳಿಯದ ಓಲ್ಡ್ ಮಂಕ್ ಕತೆ: ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ
ಭಾರತದ ಜನಪ್ರಿಯ ರಮ್ ಬ್ರಾಂಡ್ ಓಲ್ಡ್ ಮಂಕ್ ಬಗ್ಗೆ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ. ಇದು ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹುಟ್ಟಿದ ಕತೆ.

ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್
ಇದು ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹುಟ್ಟಿದ ಕತೆ. ಭಾರತದ ಜನ ಇಷ್ಟ ಪಡುವ ರಮ್ ಬ್ರಾಂಡ್‌ನ ಸಾಮ್ರಾಜ್ಯ ಸ್ಥಾಪಿಸಿದ್ದು ವೇದ್ ರತನ್ ಮೋಹನ್ ಅವರು. ಆದರೆ ಈ ಓಲ್ಡ್ ಮಂಕ್ ಹೆಸರು ಹಾಗೂ ಸ್ಥಾಪನೆಯ ಹಿಂದಿದೆ ಒಂದು ಇಂಟರೆಸ್ಟಿಂಗ್ ಕಹಾನಿ..
ಓಲ್ಡ್ ಮಂಕ್ ಹೆಸರು ಬಂದಿದ್ದು ಹೇಗೆ?
ಈ ಐತಿಹಾಸಿಕ ಓಲ್ಡ್ ಮಂಕ್ ರಮ್‌ಗೆ ಈ ಹೆಸರು ಬಂದಿದ್ದು ಯುರೋಪಿಯನ್ ಮಂಕ್‌ಗಳಿಂದ(ಸನ್ಯಾಸಿಗಳು). ವೇದ ರತನ್ ಮೋಹನ್ ಅವರು 1954ರಲ್ಲಿ ಈ ಓಲ್ಡ್ ಮಂಕ್ ರಮ್ ಬ್ರಾಂಡ್ ಅನ್ನು ಶುರು ಮಾಡಿದರು.
7 ವರ್ಷಗಳ ಕಾಲ ಓಕ್ ಮರದೊಳಗೆ ಮಾಗಿಸಿ ಮಾಡಿದ ಡಾರ್ಕ್ ರಮ್
ರಹಸ್ಯವಾದ ಮಸಾಲೆಗಳನ್ನು ಬಳಸಿ 7 ವರ್ಷಗಳ ಕಾಲ ಓಕ್ ಮರದೊಳಗೆ ಮಾಗಿಸಿ ಮಾಡಿದ ಡಾರ್ಕ್ ರಮ್ ಇದಾಗಿತ್ತು. ಅವರು ಈ ಯುರೋಪಿಯನ್ ಸನ್ಯಾಸಿಗಳಿಂದ ಈ ರೀತಿ ರಮ್ ಮಾಡೋದನ್ನು ಕಲಿತಿದ್ದು, ಅವರ ಗೌರವಾರ್ಥವಾಗಿ ಈ ರಮ್‌ಗೆ ಓಲ್ಡ್ ಮಂಕ್ ಎಂದು ಹೆಸರಿಡಲಾಯ್ತು ಎಂದು ಹೇಳಿಕೊಂಡಿದ್ದಾಗಿ ಮಾಹಿತಿ ಇದೆ.
ಯುರೋಪಿಯನ್ ಸನ್ಯಾಸಿಗಳ ಗೌರವಾರ್ಥ ಈ ಹೆಸರು
ಯುರೋಪಿನ ಸನ್ಯಾಸಿಗಳ ಗುಣಮಟ್ಟದ ಮದ್ಯಗಳನ್ನು ತಯಾರಿಸುವ ಅವರ ಸಂಪ್ರದಾಯವನ್ನು ಗೌರವಿಸಲು ವೇದ್ ರತನ್ ಮೋಹನ್ ಬಯಸಿದ್ದರು. ಹೀಗಾಗಿ ವಯಸ್ಸು ಮತ್ತು ಗುಣಮಟ್ಟವನ್ನು ಸೂಚಿಸಲು ಓಲ್ಡ್ ಅನ್ನು ಸೇರಿಸಿ ಓಲ್ಡ್ ಮಂಕ್ ಹೆಸರಿಟ್ಟರು.
ಬಾಟಲಿ ಮೇಲಿರುವ ಮುಖ ಯಾರದ್ದು?
ಅದರ ಬಾಟಲಿಯ ಮೇಲಿನ ಮುಖವು ನಿಜವಾದ ಸನ್ಯಾಸಿ ಅಥವಾ ಈ ರಮ್‌ನ ಮೂಲವನ್ನು ಸ್ಥಾಪಿಸಿದ ಎಚ್.ಜಿ. ಮೀಕಿನ್ ಅವರನ್ನು ಪ್ರತಿನಿಧಿಸುತ್ತದೆ. ಆದರೆ 1970ರಲ್ಲಿ ವೇದ್ ರತನ್ ಮೋಹನ್ ತೀರಿಕೊಂಡಾಗ ಅವರ ಸೋದರ ಬ್ರಿಗೇಡಿಯರ್ ಕಪಿಲ್ ಮೋಹನ್ ಅವರು ಈ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡರು.
ಒಂದೇ ಒಂದು ಸಿಪ್ ಮದ್ಯ ಕುಡಿಯದೇ ಸಾಮ್ರಾಜ್ಯವನ್ನು ವಿಶ್ವಕ್ಕೆ ವಿಸ್ತರಿಸಿದ ಕಪಿಲ್
ಆದರೆ ಕಪಿಲ್ ಮೋಹನ್ ಅವರು ಒಂದೇ ಒಂದು ಸಿಪ್ ಮದ್ಯವನ್ನು ಕುಡಿಯದಂತಹ ವ್ಯಕ್ತಿ. ಆದರೂ ಅವರು ಯಾವುದೇ ಜಾಹೀರಾತುಗಳಿಲ್ಲದೇ ಈ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡ ನಂತರ ಈ ಓಲ್ಡ್ ಮಂಕ್ ಬ್ರಾಂಡ್ ಇಡೀ ವಿಶ್ವದ ಮನೆ ಮಾತಾಯ್ತು.
ಭಾರತದ ಅತ್ಯಂತ ಇಷ್ಟದ ರಮ್ ಬ್ರಾಂಡ್
ಕಪಿಲ್ ಮೋಹನ್ ಅವರು ಈ ಓಲ್ಡ್ ಮಂಕ್‌ನ್ನು ಇಡೀ ಪ್ರಪಂಚದೆಲ್ಲೆಡೆ ವಿಸ್ತರಿಸಿದರು. 2000ನೇ ಇಸವಿಯ ಆರಂಭದಲ್ಲಿ ಅವರು ಅದು ಭಾರತದ ಅತ್ಯಂತ ಇಷ್ಟದ ರಮ್ ಬ್ರಾಂಡ್ ಆಗೋಯ್ತು. ಇಂದು ಓಲ್ಡ್ ಮಂಕ್ ಹಲವು ರುಚಿಗಳಲ್ಲಿ ಹಲವು ದರಗಳಲ್ಲಿ ಲಭ್ಯವಿದೆ.
22 ದೇಶಗಳಿಗೆ ರಫ್ತಾಗುತ್ತಿದೆ ಓಲ್ಡ್ ಮಂಕ್
ಇಂದು ಈ ಓಲ್ಡ್ ಮಂಕ್ ವಿಶ್ವದ 22 ದೇಶಗಳಿಗೆ ರಫ್ತಾಗುತ್ತಿದೆ. ಅದರ ರಪ್ತು ಮಾರುಕಟ್ಟೆಯ ವಹಿವಾಟೇ 10.3 ಮಿಲಿಯನ್ ಡಾಲರ್ ಇದೆ. ಈ ಬ್ರಾಂಡ್‌ನ್ನು ಕೇವಲ ನಂಬಿಕೆಯ ಮೇಲೆ ನಿರ್ಮಿಸಲಾಯ್ತು. ಅದೇನೆ ಇರಲಿ ನಮ್ಮ ಭಾರತೀಯರು ರಮ್ ಬ್ರಾಂಡ್‌ಗಳಿಗೆ ಲಾಸ್ ಆಗೋದಕ್ಕೆ ಯಾವತ್ತೂ ಬಿಡೋದಿಲ್ಲ. ಹೀಗಾಗಿ ಈ ಬ್ರಾಂಡ್ ಯಶಸ್ಸಿಯಾಗೋದರ ಹಿಂದೆ ಮದ್ಯಪ್ರಿಯರ ಪ್ರೀತಿ ಸಾಕಾಷ್ಟಿದೆ ಈ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

