ಭಾರತದಲ್ಲಿ ಮದ್ಯಪಾನ ಮಾರುಕಟ್ಟೆಯಲ್ಲಿ ವಿಸ್ಕಿಯೇ ಅಗ್ರಸ್ಥಾನದಲ್ಲಿದೆ. ಒಟ್ಟು ಮದ್ಯ ಮಾರಾಟದಲ್ಲಿ 60% ಕ್ಕಿಂತ ಹೆಚ್ಚು ಪಾಲು ವಿಸ್ಕಿಯದ್ದು. ಕೈಗೆಟುಕುವ ಬೆಲೆ ಮತ್ತು ವೈವಿಧ್ಯಮಯ ಬ್ರಾಂಡ್‌ಗಳು ಇದರ ಜನಪ್ರಿಯತೆಗೆ ಕಾರಣ.

ಭಾರತದಲ್ಲಿ ಮದ್ಯಪಾನದ ಮಾರುಕಟ್ಟೆ ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಮತ್ತು ಇಲ್ಲಿ ಮದ್ಯದ ಬೇಡಿಕೆಯು ನಿರಂತರವಾಗಿ ಏರುತ್ತಿದೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಮದ್ಯದ ಅಂಗಡಿಗಳು ತೆರೆದಾಗ ಜನರು ಸರತಿ ಸಾಲುಗಳಲ್ಲಿ ನಿಂತಿದ್ದ ದೃಶ್ಯಗಳು ಇದಕ್ಕೆ ಸಾಕ್ಷಿಯಾಗಿವೆ.

ರಮ್, ವೋಡ್ಕಾ, ಬಿಯರ್ ಮತ್ತು ವಿಸ್ಕಿಯಂತಹ ವಿವಿಧ ಮದ್ಯಗಳಲ್ಲಿ ಭಾರತೀಯರು ಯಾವುದನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದು ಕುತೂಹಲದ ವಿಷಯ. ಆದರೆ, ಒಂದು ಸ್ಪಷ್ಟ ಉತ್ತರವಿದೆ: ಭಾರತದಲ್ಲಿ ವಿಸ್ಕಿಯೇ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದೆ.

ವರದಿಗಳ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಒಟ್ಟು ಮದ್ಯದಲ್ಲಿ ವಿಸ್ಕಿಯ ಪಾಲು 60%ಕ್ಕಿಂತ ಹೆಚ್ಚಿದೆ. ರಮ್, ಬಿಯರ್ ಮತ್ತು ವೋಡ್ಕಾ ಕೂಡ ಜನಪ್ರಿಯವಾಗಿದ್ದರೂ, ಇವುಗಳ ಬಳಕೆ ವಿಸ್ಕಿಗೆ ಸರಿಸಾಟಿಯಾಗುವುದಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ವಿಸ್ಕಿಯು ಸುಮಾರು ಮೂರನೇ ಎರಡರಷ್ಟು ಪಾಲನ್ನು ಹೊಂದಿದೆ, ಇದು ದೇಶದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತವೂ ಜನಪ್ರಿಯವಾಗಿದೆ. ಇತ್ತೀಚಿನ ವರದಿಯೊಂದು ವಿಶ್ವದಲ್ಲಿ ಹೆಚ್ಚು ಮಾರಾಟವಾಗುವ 20 ವಿಸ್ಕಿ ಬ್ರಾಂಡ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತದ್ದಾಗಿವೆ.

ಇದನ್ನೂ ಓದಿ: ಮೇಡ್‌ ಇನ್ ಚೀನಾ ಗೊಬ್ಬರ ಚೀಲಗಳ ಮೇಲೆ ಮೋದಿ ಫೋಟೋ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ವಿಸ್ಕಿಯ ಜನಪ್ರಿಯತೆಗೆ ಕಾರಣವೇನು?

ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಮತ್ತು ಭಾರತೀಯರ ರುಚಿಗೆ ತಕ್ಕಂತೆ ವಿವಿಧ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮುಂಬರುವ ಐದು ವರ್ಷಗಳಲ್ಲಿ ಕಾನೂನುಬದ್ಧವಾಗಿ ಮದ್ಯ ಸೇವಿಸಬಹುದಾದ ಸುಮಾರು 10 ಕೋಟಿ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ, ಇದು ಭಾರತದ ಮದ್ಯ ಮಾರುಕಟ್ಟೆಯ ಬೆಳವಣಿಗೆಯ ವೇಗವನ್ನು ತೋರಿಸುತ್ತದೆ. ವಿಶ್ವ ಮಾರುಕಟ್ಟೆಯಲ್ಲಿ ಸವಾಲುಗಳಿದ್ದರೂ, ಭಾರತೀಯ ವಿಸ್ಕಿ ತನ್ನದೇ ಆದ ವೇಗದಲ್ಲಿ ಬೆಳೆಯುತ್ತಿದೆ. ಈ ಎಲ್ಲಾ ಅಂಶಗಳಿಂದ, ಭಾರತದಲ್ಲಿ ವಿಸ್ಕಿಯ ಆಕರ್ಷಣೆಯು ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿದೆ.