Gold Rate Today: 8 ದಿನದಲ್ಲಿ 5ನೇ ಬಾರಿ ಕುಸಿತ ಕಂಡ ಬಂಗಾರ; ಹಣ ಇದ್ರೆ ಇಂದೇ ಖರೀದಿಸಿ ಚಿನ್ನ
ಬೆಂಗಳೂರು: ಕಳೆದ ಎಂಟು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಮುಂದುವರೆದಿದೆ. ಇದರ ನಡುವೆ ಜುಲೈ 08ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

ಇವತ್ತಿನ ಚಿನ್ನದ ಬೆಲೆಯ ಅಪ್‌ಡೇಟ್ಸ್
ಇನ್ನೇನು ಅಮೆರಿಕ ಹಾಗೂ ಇರಾನ್ ನಡುವಿನ ಯುದ್ದ ಮುಗಿಯಿತು ಎನ್ನುತ್ತಿರುವಾಗಲೇ ಮತ್ತೆ ಹೊರದಾಗಿ ಯುಎಸ್ ಹಾಗೂ ಇರಾನ್ ನಡುವೆ ಏರ್‌ಸ್ಟ್ರೈಕ್ ಶುರುವಾಗಿದೆ. ಇದರ ಬೆನ್ನಲ್ಲೇ ಜುಲೈ 08ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದು ಭಾರತದಲ್ಲಿ ಆಭರಣ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಕಳೆದ ಐದು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ
ಯುಎಸ್ ಹಾಗೂ ಇರಾನ್ ನಡುವೆ ಹೊಸದಾಗಿ ಮತ್ತೆ ಯುದ್ದ ಭೀತಿ ಆರಂಭವಾಗಿರುವುದರಿಂದ ಕಚ್ಚಾ ತೈಲದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಹೀಗಾಗಿ ಹಣದುಬ್ಬರದ ಭೀತಿ ಶುರುವಾಗಿದೆ. ಇದೇ ಕಾರಣಕ್ಕೆ ಕಳೆದ ಐದು ದಿನಗಳಿಂದಲೂ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದೆ. ಕಳೆದ ಎಂಟು ದಿನಗಳಿಗೆ ಹೋಲಿಸಿದರೆ, ಐದನೇ ಬಾರಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 770 ರುಪಾಯಿ ಇಳಿಕೆಕಳೆದ
ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 770 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,449 ರುಪಾಯಿಗಳಾಗಿದೆ. ಕಳೆದ ಐದು ದಿನಗಳಲ್ಲಿ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2240 ರುಪಾಯಿ ಇಳಿಕೆಯಾಗಿದೆ.
22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ
ಇನ್ನೊಂದೆಡೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಕೂಡಾ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆಭರಣ ಚಿನ್ನವೆಂದು ಕರೆಸಿಕೊಳ್ಳುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 700 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ಇದೀಗ ಇಂದು 13,245 ರುಪಾಯಿಗಳಾಗಿದೆ.
ಬೆಳ್ಳಿ ಬೆಲೆ ಸ್ಥಿರ
ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯಾಗಿದ್ದರೂ ಬೆಳ್ಳಿ ಬೆಲೆಯು ಸ್ಥಿರವಾಗಿದ್ದು, ಯಾವುದೇ ಏರಿಳಿತಗಳಾಗಿಲ್ಲ. ಇದೀಗ ಒಂದು ಕೆಜಿ ಬೆಳ್ಳಿ ಬೆಲೆಯು ಜುಲೈ 08ರಂದು 2,45,000 ರುಪಾಯಿಗಳಾಗಿದೆ. ಕಳೆದ ಮೂರು ದಿನಗಳಿಂದಲೂ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಚಿನ್ನ ಖರೀದಿಸಲು ಇದೇ ಸರಿಯಾದ ಸಮಯ!
ಇರಾನ್-ಯುಎಸ್ ಯುದ್ದ ಭೀತಿ ಹಿನ್ನಲೆಯಿಂದ ಭಾರತೀಯ ಚಿನ್ನ ಮಾರುಕಟ್ಟೆಯಲ್ಲಿ ಬಂಗಾರ ಖರೀದಿಸುವವರಿಗೆ ಒಟ್ಟಿನಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಸದ್ಯದ ಬಂಗಾರದ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಗಮನಿಸಿದರೆ, ನಿಮ್ಮ ಕೈಯಲ್ಲಿ ಹಣವಿದ್ರೆ ಇಂದೇ ಬಂಗಾರ ಖರೀದಿಸುವುದು ಒಳ್ಳೆಯದು ಎನಿಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

