MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಇನ್ಮುಂದೆ ಇಷ್ಟು ಕ್ಯಾಶ್​ ಮುಟ್ಟಿದ್ರೆ ಡೇಂಜರ್​: ಬೀಳತ್ತೆ 100% ದಂಡ! ಏನಿದು ಹೊಸ ರೂಲ್ಸ್, ಡಿಟೇಲ್ಸ್​ ಇಲ್ಲಿದೆ

ಇನ್ಮುಂದೆ ಇಷ್ಟು ಕ್ಯಾಶ್​ ಮುಟ್ಟಿದ್ರೆ ಡೇಂಜರ್​: ಬೀಳತ್ತೆ 100% ದಂಡ! ಏನಿದು ಹೊಸ ರೂಲ್ಸ್, ಡಿಟೇಲ್ಸ್​ ಇಲ್ಲಿದೆ

ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ಹೊಸ ಆದಾಯ ತೆರಿಗೆ ನಿಯಮಗಳು ನಗದು ವ್ಯವಹಾರಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿವೆ. ಕಪ್ಪು ಹಣ ತಡೆಯುವ ಉದ್ದೇಶದಿಂದ, 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ಸ್ವೀಕಾರ ಮತ್ತು 20 ಸಾವಿರ ರೂ. ಮೀರಿದ ವ್ಯವಹಾರಕ್ಕೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ. 

2 Min read
Author : Suchethana D
Published : Apr 02 2026, 01:55 PM IST
Share this Photo Gallery
  • FB
  • TW
  • Linkdin
  • Whatsapp
16
ಹಳೆ ಆದಾಯ ತೆರಿಗೆ ಕಾನೂನಿಗೆ ಬ್ರೇಕ್​
Image Credit : Gemini

ಹಳೆ ಆದಾಯ ತೆರಿಗೆ ಕಾನೂನಿಗೆ ಬ್ರೇಕ್​

ಭಾರತದಲ್ಲಿ ಸದ್ಯ ಇರುವುದು 64 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನು. ಅದಕ್ಕೀಗ ಮೇಜರ್​ ಸರ್ಜರಿ ಹಾಕಲಾಗಿದೆ. ಇನ್ಮುಂದೆ ಅರ್ಥಾತ್​ ನಿನ್ನೆ ಏಪ್ರಿಲ್​ 1ರಿಂದಲೇ ಜಾರಿಯಾಗುವಂತೆ ಹೊಸ ನಿಯಮ ಘೋಷಣೆ ಮಾಡಲಾಗಿದೆ. ಇನ್ಮುಂದೆ ನಗದು ವ್ಯವಹಾರ ಮಾಡುವವರು, ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಶ್​ ಇಟ್ಟುಕೊಳ್ಳುವವರು, ಎಟಿಎಂನಿಂದ ಇಂತಿಷ್ಟ ನಗದು ಡ್ರಾ ಮಾಡಿಕೊಳ್ಳುವವರು ಎಲ್ಲರಿಗೂ ಈ ನಿಯಮ ಅನ್ವಯ ಆಗಲಿದೆ.

26
ಮನೆ, ಬಾಡಿಗೆ, ಓನರ್​ ಎಲ್ಲರೂ ಗಮನಿಸಿ...
Image Credit : stockPhoto

ಮನೆ, ಬಾಡಿಗೆ, ಓನರ್​ ಎಲ್ಲರೂ ಗಮನಿಸಿ...

ಏಕೆಂದರೆ ಪ್ರತಿಯೊಬ್ಬ ನಾಗರಿಕನ ಕಣ್ಣು ಇನ್​ಕಮ್​ ಟ್ಯಾಕ್ಸ್​ ಮೇಲೆ ಇದೆ. ನಾನೇನು ಸಾಮಾನ್ಯ ಮನುಷ್ಯ ಬಿಡು ಎನ್ನೋ ಹಾಗೆಯೇ ಇಲ್ಲ. ಕ್ಯಾಶ್​ ಡ್ರಾ ಮಾಡುವ, ಮನೆಯಲ್ಲಿ ನಗದು ಇಟ್ಟುಕೊಳ್ಳುವ ಪ್ರತಿಯೊಬ್ಬರ ಕಣ್ಣು ಕೂಡ ಆದಾಯ ತೆರಿಗೆ ಇಲಾಖೆ ಮೇಲೆ ನೆಟ್ಟಿದೆ ಎನ್ನೋದನ್ನು ಮರೆಯಬೇಡಿ. ಕಪ್ಪು ಹಣವನ್ನು ತಡೆಯುವುದಕ್ಕಾಗಿ ಈ ಹೊಸ ರೂಲ್ಸ್​ ಮಾಡಲಾಗಿದೆ. ಆದ್ದರಿಂದ ಮದುವೆ, ಮುಂಜಿ, ಇನ್ನೇನೋ ಕಾರ್ಯ, ಮನೆ ನಿರ್ಮಾಣ, ಮನೆ ಮಾಲೀಕರಿಗೆ ಹಣ ನೀಡುವುದು... ಹೀಗೆ ಯಾವ್ಯಾವುದೋ ಕಾರಣಕ್ಕೆ ಇಲ್ಲಿ ಹೇಳಿದಷ್ಟು ಕ್ಯಾಶ್​ ತೆಗೆದರೆ, ಕೊಟ್ಟರೆ, ಇಸ್ಕೊಂಡ್ರೆ ಎಲ್ಲದಕ್ಕೂ ಭಾರಿ ದಂಡ ಬೀಳುತ್ತೆ ಹುಷಾರ್​.

Related Articles

Related image1
3 ಸಾವಿರದಿಂದ GRB ಫುಡ್ಸ್ ಸಾಮ್ರಾಜ್ಯ ಕಟ್ಟಿದರು! ಶಾಲೆಗೆ ಹೋಗಲಾಗದ ಬಾಲಕನ ಇಂಟರೆಸ್ಟಿಂಗ್​ ಸ್ಟೋರಿ ಇದು
Related image2
ಅತ್ಯಧಿಕ ಬಡ್ಡಿ ನೀಡುವ ಸರ್ಕಾರದ 9 ಸ್ಕೀಮ್​ಗಳು: 100% ಸೇಫ್​, ಕಳೆದುಕೊಳ್ಳೋ ಭೀತಿಯೇ ಇಲ್ಲ
36
ಎರಡು ಲಕ್ಷ ಕ್ಯಾಶ್​ ಇಟ್ಕೊಂಡ್ರೆ
Image Credit : Asianet News

ಎರಡು ಲಕ್ಷ ಕ್ಯಾಶ್​ ಇಟ್ಕೊಂಡ್ರೆ

ನೀವು ಎರಡು ಲಕ್ಷ ರೂಪಾಯಿ ಕ್ಯಾಶ್ ಇಟ್ಟುಕೊಂಡಿದ್ದೇ ಆದರೆ, ಅಷ್ಟೂ ಹಣವನ್ನು ದಂಡ ಕಟ್ಟಬೇಕಾಗಿ ಬರಬಹುದು. ಇದರ ಅರ್ಥ, ಒಂದು ದಿನದಲ್ಲಿ, ನೀವು ಯಾವುದೇ ವ್ಯಕ್ತಿಯಿಂದ ಎರಡು ಲಕ್ಷ ರೂಪಾಯಿ ಕ್ಯಾಷ್​ ಪಡೆದುಕೊಂಡದ್ದೇ ಆಗಿದ್ದರೆ, ನಿಮ್ಮ ಮೇಲೆ 100 ಪರ್ಸೆಂಟ್​ ದಂಡ ಬೀಳುತ್ತದೆ. ಒಂದು ವೇಳೆ ಮದುವೆಗೋ, ಮನೆ ಮಾಲೀಕರಿಗೂ ಅಥವಾ ಇನ್ನಾವುದೇ ಕಾರಣಕ್ಕೆ ನೀವು ಎರಡು ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರವನ್ನು ಒಂದೇ ದಿನ ಮಾಡಿದರೆ, ಅಷ್ಟೂ ಮೊತ್ತವನ್ನು ದಂಡದ ರೂಪದಲ್ಲಿ ಕೊಡಬೇಕಾಗುತ್ತದೆ. ಆದ್ದರಿಂದ ಏನೇ ಇದ್ದರೂ ಆನ್​ಲೈನ್​ ಟ್ರಾನ್​ಸ್ಯಾಕ್ಷನ್​ ಮಾಡಿ.

46
ಎಷ್ಟಕ್ಕೆ ಅವಕಾಶ?
Image Credit : Asianet News

ಎಷ್ಟಕ್ಕೆ ಅವಕಾಶ?

ಯಾರಿಗಾದರೂ ನೀವು ಕ್ಯಾಶ್​ ಕೊಡುವುದೇ ಆಗಿದ್ದಲ್ಲಿ, ಕೇವಲ 20 ಸಾವಿರ ರೂಪಾಯಿವರೆಗೆ ಮಾತ್ರ ಅವಕಾಶ. ಒಂದು ವೇಳೆ ನೀವು ಈ ಮೊತ್ತಕ್ಕಿಂತ ಹೆಚ್ಚು ಹಣ ಡ್ರಾ ಮಾಡಿ, ಕ್ಯಾಶ್ ರೂಪದಲ್ಲಿ ಕೊಟ್ಟರೆ ಅಥವಾ ಪಡೆದುಕೊಂಡರೆ 100% ದಂಡ ಬೀಳುತ್ತೆ.

56
 ಆದಾಯ ತೆರಿಗೆ ಪಾವತಿ ಮಾಡ್ತಿಲ್ವಾ?
Image Credit : our own

ಆದಾಯ ತೆರಿಗೆ ಪಾವತಿ ಮಾಡ್ತಿಲ್ವಾ?

ನೀವೇನಾದರೂ ಆದಾಯ ತೆರಿಗೆ ಪಾವತಿ ಮಾಡದೇ ಇರುವವರಾಗಿದ್ದರೆ (Income Tax Return) ನಿಮ್ಮ ಒಂದು ವರ್ಷದ ಕ್ಯಾಶ್​ ವಿತ್​ಡ್ರಾ ಲಿಮಿಟ್​ 20 ಲಕ್ಷ ಮಾತ್ರ. ಒಂದು ವೇಳೆ ಇದಕ್ಕಿಂತ ಹೆಚ್ಚು ಡ್ರಾ ಆದಲ್ಲಿ, ಆ ಮೊತ್ತದ ಮೇಲೆ ಶೇಕಡಾ ಎರಡರಷ್ಟು ಟಿಡಿಎಸ್ ಕಟ್ ಆಗುತ್ತೆ. ಆದರೆ ನೀವು ಆನ್​ಲೈನ್​, ಕ್ರೆಡಿಟ್​, ಡೆಬಿಟ್​ ಕಾರ್ಡ್​ ಮೂಲಕ ಎಷ್ಟು ಬೇಕಾದ್ರೂ ವ್ಯವಹಾರ ಮಾಡಿಕೊಳ್ಳಬಹುದು. ಇದು ಕೇವಲ ಕ್ಯಾಶ್​ಗೆ ಮಾತ್ರ ಸಂಬಂಧ ಪಟ್ಟಿದ್ದು.

66
ಯುಪಿಐ ಬಳಸಿ ಕ್ಯಾಶ್​ ತೆಗಿಯೋದು
Image Credit : our own

ಯುಪಿಐ ಬಳಸಿ ಕ್ಯಾಶ್​ ತೆಗಿಯೋದು

ಸದ್ಯ ನೀವು ಎಟಿಎಂ ಕಾರ್ಡ್​ ಇಲ್ಲದಿದ್ದರೂ ಯುಪಿಐ ಬಳಸಿ ಕ್ಯಾಶ್ ತೆಗೆಯೋ ಆಪ್ಷನ್ ಇದೆಯಲ್ವಾ, ಅದಕ್ಕೂ ಈಗ ರೂಲ್ಸ್​ ಮಾಡಲಾಗಿದೆ. ಇನ್ನು ಮುಂದೆ ತಿಂಗಳಿಗೆ ಕೇವಲ ಐದು ಬಾರಿ ಮಾತ್ರ ಉಚಿತ ಲಿಮಿಟ್ ಇರುತ್ತೆ. ಒಂದು ವೇಳೆ ಐದು ಬಾರಿ ದಾಟಿದ ಮೇಲೆ ನೀವು ಯುಪಿಐ ಮೂಲಕ ಎಟಿಎಂ ನಿಂದ ದುಡ್ಡು ತೆಗೆದರೆ ಪ್ರತಿ ಟ್ರಾನ್ಸಾಕ್ಷನ್ ಗೆ 23 ರೂಪಾಯಿ ದಂಡ ಹಾಕಲಾಗುತ್ತೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ವ್ಯವಹಾರ
ಭಾರತ ಸುದ್ದಿ
ಜೀವನಶೈಲಿ

Latest Videos
Recommended Stories
Recommended image1
ಬಿಹಾರವಾದ ಕರ್ನಾಟಕ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 45 ಲಕ್ಷ ಮೌಲ್ಯದ ಸ್ಟೀಲ್‌ ಕಳ್ಳತನ
Recommended image2
ಡಿಮಾರ್ಟ್ ಮಾಲೀಕ ದಮಾನಿ ಕುಟುಂಬದ ಸಂಪತ್ತು ₹16100 ಕೋಟಿ ಏರಿಕೆ: ಶೇರುಗಳ ಮಿಂಚಿನ ಓಟ
Recommended image3
ಏರಿಕೆ ನಡುವೆ ನೆಮ್ಮದಿ ನೀಡಿದ ಚಿನ್ನದ ಬೆಲೆ; ಇಂದು ಎಷ್ಟು ಇಳಿಕೆ? ಗ್ರಾಹಕರು ಖುಷ್
Related Stories
Recommended image1
3 ಸಾವಿರದಿಂದ GRB ಫುಡ್ಸ್ ಸಾಮ್ರಾಜ್ಯ ಕಟ್ಟಿದರು! ಶಾಲೆಗೆ ಹೋಗಲಾಗದ ಬಾಲಕನ ಇಂಟರೆಸ್ಟಿಂಗ್​ ಸ್ಟೋರಿ ಇದು
Recommended image2
ಅತ್ಯಧಿಕ ಬಡ್ಡಿ ನೀಡುವ ಸರ್ಕಾರದ 9 ಸ್ಕೀಮ್​ಗಳು: 100% ಸೇಫ್​, ಕಳೆದುಕೊಳ್ಳೋ ಭೀತಿಯೇ ಇಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved