MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಯುದ್ಧದ ನಡುವೆ ಬದಲಾದ ಕುಬೇರರ ಪಟ್ಟಿ: ಇವರೀಗ ವಿಶ್ವದ ಟಾಪ್-3 ಶ್ರೀಮಂತ, ಅಗ್ರಸ್ಥಾನ ಯಾರಿಗೆ?

ಯುದ್ಧದ ನಡುವೆ ಬದಲಾದ ಕುಬೇರರ ಪಟ್ಟಿ: ಇವರೀಗ ವಿಶ್ವದ ಟಾಪ್-3 ಶ್ರೀಮಂತ, ಅಗ್ರಸ್ಥಾನ ಯಾರಿಗೆ?

World Wealth Ranking April 2026: ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಷೇರು ಮಾರುಕಟ್ಟೆಯ ದಿಢೀರ್ ಬದಲಾವಣೆಗಳು ವಿಶ್ವದ ಕುಬೇರರ ಪಟ್ಟಿಯನ್ನೇ ಅದಲು-ಬದಲು ಮಾಡಿವೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆ, ಟೆಕ್ ದಿಗ್ಗಜರ ಆಸ್ತಿಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ.

1 Min read
Author : Ashwini HR
Published : Apr 04 2026, 12:22 PM IST
Share this Photo Gallery
  • FB
  • TW
  • Linkdin
  • Whatsapp
17
ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆ
Image Credit : freepik

ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆಗಳಾಗಿವೆ. 'ಫೋರ್ಬ್ಸ್' (Forbes) ಬಿಲಿಯನೇರ್ಸ್ ಪಟ್ಟಿಯ ಪ್ರಕಾರ ಏಪ್ರಿಲ್ ತಿಂಗಳ ಆರಂಭದಲ್ಲಿ ಕಂಡುಬಂದ ಪ್ರಮುಖ ಬದಲಾವಣೆಗಳು ಇಲ್ಲಿವೆ.

27
1. ಎಲಾನ್ ಮಸ್ಕ್ (Elon Musk) - ನಂ. 1 ಸ್ಥಾನದಲ್ಲಿ ಭದ್ರ!
Image Credit : Getty

1. ಎಲಾನ್ ಮಸ್ಕ್ (Elon Musk) - ನಂ. 1 ಸ್ಥಾನದಲ್ಲಿ ಭದ್ರ!

ಮೂಲತಃ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಇವರು ಈಗ ಅಮೆರಿಕದ ನಿವಾಸಿ. ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಗಳ ಒಡೆಯ.
ಸಂಪತ್ತು: ಯುಎಸ್ ಷೇರು ಮಾರುಕಟ್ಟೆಯ ಏರಿಳಿತದ ನಡುವೆಯೂ ಇವರ ಆಸ್ತಿ ಈಗ ಸುಮಾರು $800 ಬಿಲಿಯನ್ ದಾಟುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆದರೂ ಇತ್ತೀಚಿನ ಯುದ್ಧದ ಎಫೆಕ್ಟ್‌ನಿಂದಾಗಿ ಇವರ ಆಸ್ತಿಯಲ್ಲಿ ಸುಮಾರು $22 ಬಿಲಿಯನ್ ಇಳಿಕೆಯಾಗಿ ಈಗ $817 ಬಿಲಿಯನ್ ತಲುಪಿದೆ.

Related Articles

Related image1
ಕರ್ನಾಟಕದ ಶ್ರೀಮಂತ ರಾಜಕಾರಣಿಗಳು ಇವರೆ… ನಂ 1 ಸ್ಥಾನದಲ್ಲಿರೋದು ಯಾರು?
Related image2
ಭಾರತದ ಶ್ರೀಮಂತ, ಬಡ ರಾಜ್ಯಗಳ ಪಟ್ಟಿ: ಉತ್ತರ ಪ್ರದೇಶ, ಗುಜರಾತ್, ಕರ್ನಾಟಕದ ಸ್ಥಾನವೆಷ್ಟು?
37
2. ಲ್ಯಾರಿ ಪೇಜ್ (Larry Page) - 2ನೇ ಸ್ಥಾನ
Image Credit : google

2. ಲ್ಯಾರಿ ಪೇಜ್ (Larry Page) - 2ನೇ ಸ್ಥಾನ

ಅಮೆರಿಕಾದವರು ಮತ್ತು ಗೂಗಲ್‌ನ ಸಹ-ಸಂಸ್ಥಾಪಕರು.
ಸಂಪತ್ತು:ಇವರು ಸುಮಾರು $237 ಬಿಲಿಯನ್ ಆಸ್ತಿಯೊಂದಿಗೆ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತರಾಗಿದ್ದಾರೆ.

47
3. ಜೆಫ್ ಬೆಜೋಸ್ (Jeff Bezos) - ಈಗ 3ನೇ ಸ್ಥಾನಕ್ಕೆ ಏರಿಕೆ!
Image Credit : Asianet News

3. ಜೆಫ್ ಬೆಜೋಸ್ (Jeff Bezos) - ಈಗ 3ನೇ ಸ್ಥಾನಕ್ಕೆ ಏರಿಕೆ!

ಅಮೆರಿಕಾದವರು ಮತ್ತು ಅಮೆಜಾನ್ (Amazon) ಸಂಸ್ಥಾಪಕರು.
ವಿಶೇಷತೆ: ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ಜೆಫ್ ಬೆಜೋಸ್ ಅವರು ಗೂಗಲ್‌ನ ಸರ್ಜೆ ಬ್ರಿನ್ ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ದಾರೆ. ಇವರ ಒಟ್ಟು ಆಸ್ತಿ ಈಗ ಸುಮಾರು $223 ಬಿಲಿಯನ್ ಆಗಿದೆ.

57
4. ಸರ್ಜೆ ಬ್ರಿನ್ (Sergey Brin) - 4ನೇ ಸ್ಥಾನಕ್ಕೆ ಕುಸಿತ
Image Credit : Getty

4. ಸರ್ಜೆ ಬ್ರಿನ್ (Sergey Brin) - 4ನೇ ಸ್ಥಾನಕ್ಕೆ ಕುಸಿತ

ಅಮೆರಿಕಾದವರು ಮತ್ತು ಗೂಗಲ್‌ನ ಮತ್ತೊಬ್ಬ ಸಹ-ಸಂಸ್ಥಾಪಕರು.
ಇವರ ಆಸ್ತಿ ಸುಮಾರು $18 ಬಿಲಿಯನ್ ಕುಸಿತ ಕಂಡು, ಈಗ $219 ಬಿಲಿಯನ್ ಹೊಂದಿದೆ. ಇದರಿಂದಾಗಿ ಇವರು 4ನೇ ಸ್ಥಾನಕ್ಕೆ ಇಳಿದಿದ್ದಾರೆ.

67
ಭಾರತೀಯ ಶ್ರೀಮಂತರ ಪರಿಸ್ಥಿತಿ
Image Credit : stockPhoto

ಭಾರತೀಯ ಶ್ರೀಮಂತರ ಪರಿಸ್ಥಿತಿ

ಯುದ್ಧದ ನಡುವೆಯೂ ಭಾರತದ ಬಿಲಿಯನೇರ್‌ಗಳ ಆಸ್ತಿ ಹೆಚ್ಚಾಗಿದೆ, ಆದರೆ ಅವರ ಸ್ಥಾನದಲ್ಲಿ ಬದಲಾವಣೆಯಾಗಿಲ್ಲ.
ಮುಖೇಶ್ ಅಂಬಾನಿ (Mukesh Ambani): ರಿಲಯನ್ಸ್ ಮುಖ್ಯಸ್ಥರಾದ ಇವರು ಸುಮಾರು $99.7 ಬಿಲಿಯನ್ ಆಸ್ತಿಯೊಂದಿಗೆ 21ನೇ ಸ್ಥಾನದಲ್ಲಿದ್ದಾರೆ.
ಗೌತಮ್ ಅದಾನಿ (Gautam Adani): ಅದಾನಿ ಗ್ರೂಪ್‌ನ ಮಾಲೀಕರು ಸುಮಾರು $63.8 ಬಿಲಿಯನ್ ಆಸ್ತಿಯೊಂದಿಗೆ 31ನೇ ಸ್ಥಾನದಲ್ಲಿದ್ದಾರೆ.

77
ಇತರ ಪ್ರಮುಖ ಬದಲಾವಣೆಗಳು:
Image Credit : Getty

ಇತರ ಪ್ರಮುಖ ಬದಲಾವಣೆಗಳು:

ಮಾರ್ಕ್ ಜುಕರ್‌ಬರ್ಗ್ (Meta): ಇವರ ಆಸ್ತಿ $196 ಬಿಲಿಯನ್ ಹೊಂದಿದ್ದು, 5ನೇ ಸ್ಥಾನದಲ್ಲಿದ್ದಾರೆ.
ಲ್ಯಾರಿ ಎಲಿಸನ್ (Oracle): ಇವರ ಆಸ್ತಿ $189 ಬಿಲಿಯನ್ ಆಗಿದ್ದು, 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸೂಚನೆ: ಷೇರು ಮಾರುಕಟ್ಟೆಯ ಕ್ಷಣ ಕ್ಷಣದ ಏರಿಳಿತಕ್ಕೆ ಅನುಗುಣವಾಗಿ ಈ ಅಂಕಿ-ಅಂಶಗಳು ಪ್ರತಿದಿನ ಬದಲಾಗುತ್ತಿರುತ್ತವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ವ್ಯವಹಾರ
ಹಣ (Hana)

Latest Videos
Recommended Stories
Recommended image1
ಮಗನಿಗೋಸ್ಕರ ಎಂಬ್ರಾಯ್ಡರಿ ಫ್ಯಾಕ್ಟರಿ ಮಾಡಿ, 6 ಕೋಟಿ ರೂ. ನಷ್ಟ ಕಂಡ ನಟ ರಮೇಶ್‌ ಭಟ್! ಅಂಥದ್ದೇನಾಯ್ತು?
Recommended image2
ಭಾರತದಲ್ಲಿ ಸರ್ಕಾರಿ ನೌಕರಿಗಳಿಗೆ ಮಾತ್ರ ಅಲ್ಲ…. ಈ ಕೆಲಸಗಳಿಗೂ ಸಿಗುತ್ತೆ ಹೆಚ್ಚು ಸಂಬಳ
Recommended image3
18 ನೇ ವಯಸ್ಸಿಗೆ ಸಾಧನೆ ಮಾಡಿರೋ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಹುಡುಗಿ ನೇಹಾ ಗುಪ್ತ ಅನೇಕರಿಗೆ ಮಾದರಿ!
Related Stories
Recommended image1
ಕರ್ನಾಟಕದ ಶ್ರೀಮಂತ ರಾಜಕಾರಣಿಗಳು ಇವರೆ… ನಂ 1 ಸ್ಥಾನದಲ್ಲಿರೋದು ಯಾರು?
Recommended image2
ಭಾರತದ ಶ್ರೀಮಂತ, ಬಡ ರಾಜ್ಯಗಳ ಪಟ್ಟಿ: ಉತ್ತರ ಪ್ರದೇಶ, ಗುಜರಾತ್, ಕರ್ನಾಟಕದ ಸ್ಥಾನವೆಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved