- Home
- Karnataka Districts
- Bengaluru Urban
- Bengaluru: 'ಕ್ಯಾಶ್ ಯಾಕೆ ಕೊಡ್ತಿಯಾ, ಯುಪಿಐ ಮಾಡು.. ನಾನೇನು ಭಿಕ್ಷುಕನಾ..' ಟೆಕ್ಕಿ ವಿರುದ್ಧ ಆಟೋ ಚಾಲಕ ಗರಂ!
Bengaluru: 'ಕ್ಯಾಶ್ ಯಾಕೆ ಕೊಡ್ತಿಯಾ, ಯುಪಿಐ ಮಾಡು.. ನಾನೇನು ಭಿಕ್ಷುಕನಾ..' ಟೆಕ್ಕಿ ವಿರುದ್ಧ ಆಟೋ ಚಾಲಕ ಗರಂ!
Bengaluru Auto Incident: ola auto ಪ್ರಯಾಣದ ಬಳಿಕ ನಗದು ಸ್ವೀಕರಿಸಲು ನಿರಾಕರಿಸಿ, 'ನಾನು ಭಿಕ್ಷುಕನಾ?' ಎಂದು UPI ಮೂಲಕವೇ ಹಣ ಕೇಳಿದ ಚಾಲಕನ ವಿರುದ್ಧ ಟೆಕ್ಕಿಯ ಪೋಸ್ಟ್ ವೈರಲ್ ಆಗಿದೆ.

Peak Bengaluru Moment
ತುಂಬಾ ಸಮಯದ ನಂತರ ಬಳಿಕ ಬೆಂಗಳೂರಿಗೆ ಬಂದಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಧನುಷ್ ನೆಹರು ಅವರು ಇತ್ತೀಚೆಗೆ X ನಲ್ಲಿ ಹಂಚಿಕೊಂಡ ಅನುಭವ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಪೋಸ್ಟ್‌ನಲ್ಲಿ ಈ ಘಟನೆಯನ್ನು ಅವರು "Peak Bengaluru Moment" ಎಂದು ಬಣ್ಣಿಸಿದ್ದಾರೆ.
ಓಲಾ ಬುಕ್ ಪ್ರಯಾಣ
ಧನುಷ್ ಅವರು ಓಲಾ ಬುಕ್ ಮಾಡಿದ್ದರು, ಆ ಪ್ರಯಾಣ ಒಂದು ಗಂಟೆಯದ್ದಾಗಿತ್ತು. ಆದರೆ ಪ್ರಯಾಣ ಆರಂಭಕ್ಕೂ ಮುನ್ನವೇ ಆಟೋ ಚಾಲಕ ಹೆಚ್ಚುವರಿ ಹಣ ನೀಡುವಂತೆ ಕೇಳಿದ್ದಾನೆ. ಪ್ರಯಾಣ ಶುರುವಾಗುವ ಮೊದಲೇ ವಾದಿಸಲು ಇಷ್ಟಪಡದ ಧನುಷ್, " ತನಗೆ ಹೋಗಬೇಕಾದ ಸ್ಥಳವನ್ನು ತಲುಪಿದ ಬಳಿಕ ಈ ಬಗ್ಗೆ ಮಾತನಾಡೋಣ" ಎಂದು ಹೇಳಿ ಪ್ರಯಾಣ ಮುಂದುವರಿಸಿದ್ದಾರೆ.
ಚಾಲಕನ ಅಸಭ್ಯ ವರ್ತನೆ
ಪ್ರಯಾಣ ಮುಗಿದ ಬಳಿಕ ಓಲಾ ಆ್ಯಪ್‌ನಲ್ಲಿ ತೋರಿಸಿದ ದರವನ್ನು ಪಾವತಿಸಲು ಧನುಷ್ ನಗದು ಹಣ ತೆಗೆದಾಗ, ಚಾಲಕ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಬದಲಾಗಿ UPI ಮೂಲಕವೇ ಹಣ ಪಾವತಿಸಬೇಕು ಎಂದು ಒತ್ತಾಯಿಸಿದ್ದಾನೆ.
ಇದೇ ವೇಳೆ, "ನಾನು ಭಿಕ್ಷುಕನಾ?" ಎಂದು ಪ್ರಶ್ನಿಸಿದ ಚಾಲಕ, ನಗದು ಬದಲಿಗೆ ಡಿಜಿಟಲ್ ಪಾವತಿಯನ್ನೇ (UPI) ಮಾಡಬೇಕು ಎಂದು ಪಟ್ಟು ಹಿಡಿದಿದ್ದಾನೆ ಎಂದು ಧನುಷ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಧನುಷ್ ಉತ್ತಮ ನಡೆ
ಸಾರ್ವಜನಿಕ ಸ್ಥಳದಲ್ಲಿ ಅನಗತ್ಯ ವಾಗ್ವಾದ ಬೇಡ ಎಂಬ ಕಾರಣಕ್ಕೆ ತಾವು ಪರಿಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸಿದ್ದಾಗಿ ಧನುಷ್ ಹೇಳಿದ್ದಾರೆ. ಆದರೆ ಚಾಲಕ ಆರಂಭದಲ್ಲೇ ಕೇಳಿದ್ದ ಹೆಚ್ಚುವರಿ ಹಣವನ್ನು ಮಾತ್ರ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯಿ
ಧನುಷ್ ಅವರ ಪೋಸ್ಟ್ ವೈರಲ್ ಆದ ಬಳಿಕ ಸಾವಿರಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಹೆಚ್ಚುವರಿ ಹಣ ಕೇಳುವ ಆಟೋ ಚಾಲಕರ ಅನುಭವಗಳನ್ನು ಹಂಚಿಕೊಂಡರೆ, ಇನ್ನೂ ಕೆಲವರು UPI ಮಾತ್ರ ಸ್ವೀಕರಿಸುವುದು ಅಥವಾ ನಗದು ನಿರಾಕರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಕೆಲವರು ಡಿಜಿಟಲ್ ಪಾವತಿ ಸುಲಭವಾಗಿರುವ ಕಾರಣ UPI ಬಳಸಲು ಚಾಲಕರು ಆದ್ಯತೆ ನೀಡುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಘಟನೆ ಮತ್ತೊಮ್ಮೆ ಬೆಂಗಳೂರಿನ ಆಟೋ ಸೇವೆ, ಹೆಚ್ಚುವರಿ ದರದ ಬೇಡಿಕೆ ಹಾಗೂ ಡಿಜಿಟಲ್ ಪಾವತಿ ಕುರಿತ ಚರ್ಚೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೀವಂತಗೊಳಿಸಿದೆ.