Black Magic: ಮನೆಯಲ್ಲಿ ಈ 6 ಸಮಸ್ಯೆಗಳಿವೆಯೇ? ಹಾಗಿದ್ರೆ ಮಾಟ-ಮಂತ್ರದ ಪ್ರಭಾವ ಇರಬಹುದು!
Signs of black magic in home: ನಿಮ್ಮ ಮನೆಯಲ್ಲಿ ಮಾಟ-ಮಂತ್ರದಂತಹ ಕೆಟ್ಟ ಶಕ್ತಿಗಳ ಪ್ರಭಾವ ಇದೆಯಾ ಎಂದು ಸುಲಭವಾಗಿ ಪತ್ತೆ ಹಚ್ಬೇಕಾ? ಅದಕ್ಕೆ ಸಹಾಯ ಮಾಡುವ 6 ಪ್ರಮುಖ ಲಕ್ಷಣಗಳು ಇಲ್ಲಿವೆ. ಈ ಲಕ್ಷಣಗಳು ನಿಮ್ಮ ಮನೆಯಲ್ಲಿ ಕಂಡುಬಂದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಇದೆ ಎಂದರ್ಥ.

ನಾಯಿ ಅಥವಾ ಬೆಕ್ಕುಗಳ ವಿಚಿತ್ರ ವರ್ತನೆ
ನಾಯಿ ಅಥವಾ ಬೆಕ್ಕುಗಳ ವಿಚಿತ್ರ ವರ್ತನೆ
ಮನುಷ್ಯರಿಗೆ ಕಾಣದ ಕೆಲವು ಕಂಪನಗಳನ್ನು ಪ್ರಾಣಿಗಳು ಗ್ರಹಿಸುತ್ತವೆ. ಮನೆಯಲ್ಲಿರುವ ನಾಯಿ ಅಥವಾ ಬೆಕ್ಕು ಇದ್ದಕ್ಕಿದ್ದಂತೆ ಮನೆಯ ಒಂದು ನಿರ್ದಿಷ್ಟ ಮೂಲೆಯನ್ನು ನೋಡಿ ಕಾರಣವಿಲ್ಲದೆ ಬೊಗಳಿದರೆ ಅಥವಾ ಭಯದಿಂದ ನಡುಗಿದರೆ, ಅಲ್ಲಿ ಯಾವುದೋ ನಕಾರಾತ್ಮಕ ಶಕ್ತಿ ಇದೆ ಎಂದು ಅರ್ಥ.
ತುಳಸಿ ಒಣಗಿದರೆ
ತುಳಸಿ ಒಣಗಿದರೆ
ನೀವು ಎಷ್ಟೇ ನೀರು ಹಾಕಿ ಆರೈಕೆ ಮಾಡಿದರೂ, ಮನೆಯಲ್ಲಿ ಹಸಿರಾಗಿದ್ದ ಗಿಡಗಳು (ವಿಶೇಷವಾಗಿ ತುಳಸಿ, ಮನಿ ಪ್ಲಾಂಟ್) ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಒಣಗಿ ಹೋದರೆ ಅದು ಒಳ್ಳೆಯ ಸಂಕೇತವಲ್ಲ. ಮನೆಯಲ್ಲಿ ಹರಡಿರುವ ಕೆಟ್ಟ ಶಕ್ತಿಯನ್ನು ಗಿಡ ಹೀರಿಕೊಳ್ಳುವುದರಿಂದ ಹೀಗೆ ಆಗುತ್ತದೆ ಎನ್ನುತ್ತದೆ ಆಧ್ಯಾತ್ಮ.
ಏನೋ ಕೆಟ್ಟ ವಾಸನೆ
ಏನೋ ಕೆಟ್ಟ ವಾಸನೆ
ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ, ಇದ್ದಕ್ಕಿದ್ದಂತೆ ಕೊಳೆತ ಮೊಟ್ಟೆಯ ವಾಸನೆ, ಏನೋ ಸುಟ್ಟ ವಾಸನೆ ಅಥವಾ ಸ್ಮಶಾನದ ಬೂದಿಯಂತಹ ವಿಚಿತ್ರ ದುರ್ವಾಸನೆ ಬರುತ್ತಿದೆಯೇ? ಸ್ವಚ್ಛಗೊಳಿಸಿದ ನಂತರವೂ ಈ ವಾಸನೆ ಹೋಗದಿದ್ದರೆ, ಅದು ನಕಾರಾತ್ಮಕ ಶಕ್ತಿಯ ತೀವ್ರತೆಯ ಸಂಕೇತ!
ವಿವರಿಸಲಾಗದ ಸುಸ್ತು ಮತ್ತು ತಲೆನೋವು
ವಿವರಿಸಲಾಗದ ಸುಸ್ತು ಮತ್ತು ತಲೆನೋವು
ಕುಟುಂಬದ ಸದಸ್ಯರು ಒಬ್ಬರ ನಂತರ ಒಬ್ಬರಂತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದರೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದರೆ, ರಿಪೋರ್ಟ್‌ನಲ್ಲಿ ಎಲ್ಲವೂ 'ನಾರ್ಮಲ್' ಎಂದೇ ಬರುತ್ತದೆ. ಈ ವಿವರಿಸಲಾಗದ ಸುಸ್ತು ಮತ್ತು ತಲೆನೋವನ್ನು ಮಾಟ-ಮಂತ್ರದ ಪ್ರಮುಖ ಲಕ್ಷಣವೆಂದು ಪರಿಗಣಿಸಲಾಗುತ್ತದೆ.
ಹಣದ ಕೊರತೆ
ಹಣದ ಕೊರತೆ
ಪ್ರೀತಿಯಿಂದಿದ್ದ ಕುಟುಂಬದಲ್ಲಿ ಇದ್ದಕ್ಕಿದ್ದಂತೆ ಸಣ್ಣಪುಟ್ಟ ವಿಷಯಗಳಿಗೂ ದೊಡ್ಡ ಜಗಳ ಶುರುವಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಕಡಿಮೆಯಾಗಿ, ಕೈಯಲ್ಲಿ ಹಣ ನಿಲ್ಲುವುದಿಲ್ಲ. ಯಾವುದಾದರೂ ಒಂದು ದಾರಿಯಲ್ಲಿ ಅನಗತ್ಯ ಖರ್ಚುಗಳು ಹೆಚ್ಚಾಗಿ, ಹಣದ ಕೊರತೆ ಕಾಡುತ್ತದೆ.
ಕೆಟ್ಟ ಕನಸುಗಳು
ಕೆಟ್ಟ ಕನಸುಗಳು
ರಾತ್ರಿ 1 ರಿಂದ ಬೆಳಗಿನ ಜಾವ 3 ಗಂಟೆಯೊಳಗೆ ಇದ್ದಕ್ಕಿದ್ದಂತೆ ಎಚ್ಚರವಾಗುವುದು, ಯಾರೋ ಎದೆಯ ಮೇಲೆ ಕುಳಿತಂತೆ ಉಸಿರುಗಟ್ಟಿದ ಅನುಭವ (Sleep Paralysis) ಆಗುವುದು ಮತ್ತು ಸತತವಾಗಿ ಭಯಾನಕ ಕೆಟ್ಟ ಕನಸುಗಳು ಬೀಳುವುದು ಕೆಟ್ಟ ಶಕ್ತಿಗಳ ಪ್ರಭಾವವನ್ನು ಸೂಚಿಸುತ್ತದೆ.