ವಿದ್ಯುತ್ ಅಥವಾ ವೈಫೈ ಸಂಪರ್ಕವಿಲ್ಲದ ಕೃಷಿ ಜಮೀನುಗಳಿಗೆ 4ಜಿ ಸಿಮ್ ಮತ್ತು ಸೌರಶಕ್ತಿಯ ಕ್ಯಾಮೆರಾಗಳು ಉತ್ತಮ ಪರಿಹಾರವಾಗಿದೆ. ಇವು ರೈತರಿಗೆ ತಮ್ಮ ಮೊಬೈಲ್ ಮೂಲಕವೇ ಜಮೀನಿನ ಮೇಲೆ ಕಣ್ಣಿಡಲು, ಪ್ರಾಣಿ ಅಥವಾ ವ್ಯಕ್ತಿಗಳ ಚಲನವಲನ ಪತ್ತೆಹಚ್ಚಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಕೃಷಿಯ ಜಮೀನು ಮನೆಯಿಂದ ದೂರದಲ್ಲಿದ್ದರೆ ಮತ್ತು ವಿದ್ಯುತ್ ಅಥವಾ ವೈಪೈ ಸಂಪರ್ಕ ಇಲ್ಲದಿದ್ದರೆ ಒಂದು ಉತ್ತಮ ಸಿಸಿಟಿವಿ ಕ್ಯಾಮೆರಾ ಸ್ಥಾಪಿಸುವುದು ಕಷ್ಟದ ಕೆಲಸ. ವೈರ್ ಹಾಕವುದು, ವಿದ್ಯುತ್ ಸಂಪರ್ಕ ಪಡೆಯುವುದು ಅಥವಾ ಸೂಕ್ತ ಬ್ಯಾಟರಿಗಳನ್ನು ಪದೇ ಪದೇ ಚಾರ್ಜ್ ಮಾಡುವುದು ರೈತರಿಗೆ ಸವಾಲಿನ ಕೆಲಸವಾಗಿದೆ.

ವಿದ್ಯುತ್ ಇಲ್ಲದ ಜಮೀನಿಗೆ ಅದ್ಭುತ ಕಾವಲುಗಾರ!

ಇಂತಹ ಸಂದರ್ಭದಲ್ಲಿ 4ಜಿ ಸಿಮ್ ಮತ್ತು ಸೌರಶಕ್ತಿಯನ್ನು ಹೊಂದಿರುವ ಕ್ಯಾಮೆರಾ ತುಂಬಾ ಉತ್ತಮ ಆಯ್ಕೆ ಎಂದು ಹೇಳಬಹುದು. ಸೌರ ಫಲಕದಿಂದ ಚಾರ್ಜ್ ಆಗುತ್ತದೆ ಮತ್ತು ಫೋನ್‌ನಲ್ಲಿ ಮೊಬೈಲ್‌ ನೆಟ್‌ವರ್ಕ್‌ ಮೂಲಕ ಕೃಷಿ ಜಮೀನಿನ ಮೇಲೆ ಕಣ್ಣಿಡಲು ಅನುವು ಮಾಡಿಕೊಡುತ್ತದೆ. ಆಗ ರೈತರು ಎಲ್ಲಿದ್ದರೂ ತಮ್ಮ ಕೃಷಿ ಜಮೀನಿನ ಮೇಲೆ ಕಣ್ಣಿಡಲು ಅನುವು ಮಾಡಿಕೊಡುತ್ತದೆ. ಮನೆಯಿಂದ ದೂರದಲ್ಲಿರುವ ಮತ್ತು ನಿಯಮಿತವಾಗಿ ಅಲ್ಲಿಗೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡುವುದು ಕಷ್ಟಕರವಾದ ರೈತರಿಗೆ ಈ ಆಯ್ಕೆಯೂ ವಿಶೇಷ ಉಪಯುಕ್ತವಾಗಿದೆ.

4ಜಿ ಸೌರ ಕ್ಯಾಮೆರಾ ಉತ್ತಮ: ಈ ಕ್ಯಾಮೆರಾಗಳು ಕೃಷಿ ಭೂಮಿಗೆ ಅನುಕೂಲಕರವಾದ ಆಯ್ಕೆಯಾಗಿದೆ. ಇದಕ್ಕೆ ವಿದ್ಯುತ್ ಮತ್ತು ವೈ-ಫೈ ಸಂಪರ್ಕಗಳು ಅಗತ್ಯವಿಲ್ಲ. ಕ್ಯಾಮೆರಾಗೆ ಸಿಮ್ ಕಾರ್ಡ್ ಸೇರಿಸುವ ಮೂಲಕ, ಲೈವ್ ದೃಶ್ಯಾವಳಿ ಮತ್ತು ಎಚ್ಚರಿಕೆಗಳನ್ನು ಮೊಬೈಲ್ ನೆಟ್‌ವರ್ಕ್ ಮೂಲಕ ನಿಮ್ಮ ಫೋನ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

ಕೃಷಿ ಭೂಮಿಗೆ ಯಾವುದೇ ಪ್ರಾಣಿ, ವ್ಯಕ್ತಿಗಳು ಕಂಡು ಬಂದರೂ ತಕ್ಷಣೆ ರೈತನಿಗೆ ಈ ಕ್ಯಾಮೆರಾ ಎಚ್ಚರ ನೀಡುತ್ತದೆ. ಇದಕ್ಕೆ ಕ್ಯಾಮೆಆ ಇರುವ ಸ್ಥಳಗಳಲ್ಲಿ ಉತ್ತಮ ನೆಟ್‌ವರ್ಕ್‌ ಸಂಪರ್ಕ ಅತ್ಯಗತ್ಯವಲ್ಲ, ಆದರೆ ಲೈವ್ ದೃಶ್ಯಾವಳಿ ಅಥವಾ ಎಚ್ಚರಿಕೆಗಳು ವಿಳಂಬವಾಗಬಹುದು. ಕ್ಯಾಮೆರಾಗಳು ಕ್ಯಾಮೆರಾದ ದಿಕ್ಕನ್ನು ಬದಲಾಯಿಸುವ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಸುತ್ತಮುತ್ತಿನ ಪ್ರದೇಶಗಳನ್ನು ವೀಕ್ಷಿಸುವ ಆಯ್ಕೆಯನ್ನು ನೀಡುತ್ತದೆ.

ಕ್ಯಾಮೆರಾ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಫೀಚರ್‌ಗಳನ್ನು ಗಮನಿಸಿ

ಕೃಷಿ ಭೂಮಿಗೆ ಕ್ಯಾಮೆರಾ ಖರೀದಿಸುವಾದ ಕೇವಲ, ರೆಸಲ್ಯೂಶನ್ ಮೇಲೆ ಗಮನಕೊಡದೆ, ನೈಟ್ ವಿಷನ್, ಮೋಷನ್ ಸೆನ್ಸರ್, ಜನರು ಮತ್ತು ಪ್ರಾಣಿಗಳ ಪತ್ತೆ, ಟು ವೇ ಕಮ್ಯೂನಿಕೇಷನ್, ಮೆಮೊರಿ ಕಾರ್ಡ್ ಸಪೋರ್ಟ್ ನಂತರ ಆಯ್ಕೆಗಳನ್ನು ಗಮನಿಸಬೇಕು. ರಾತ್ರಿ ಸಂದರ್ಭದಲ್ಲಿ ಕಳ್ಳರು ಹಾಗೂ ಪ್ರಾಣಿಗಳನ್ನು ಗುರುತಿಸುವ ವಿಶೇಷ ಸಾಮರ್ಥ್ಯ ಇರ್ಬೇಕು. ಕೃಷಿ ಪ್ರದೇಶ ದೊಡ್ಡದಾಗಿದ್ದರೆ ಹೆಚ್ಚು ಕ್ಯಾಮೆರಾ ಆಯ್ಕೆಯನ್ನು ಹೊಂದಿರಬೇಕು. ಅದರಲ್ಲೂ ಬಯಲು ಅಥವಾ ಮಳೆ ಮತ್ತು ಸೂರ್ಯನ ಬೆಳಕವು ನೇರವಾಗಿ ಬೀಳುವ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಿದರೆ ಆ ಕ್ಯಾಮೆರಾ ವೆದರ್ ರೆಸಿಸ್ಟನ್ಟ್ ರೇಟಿಂಗ್ ಗಮನಿಸಬೇಕು. ಜೊತೆಗೆ ಕ್ಯಾಮೆರಾ ರೆಕಾರ್ಡಿಂಗ್ ಸಾಮರ್ಥ್ಯ ಮತ್ತು ಶೇಖರಣಾ ಆಯ್ಕೆಯನ್ನು ಮುನ್ನವೇ ಖಚಿತಪಡಿಸಿಕೊಳ್ಳಿ.

ಸೋಲಾರ್ ಮತ್ತು ಬ್ಯಾಟರಿ ಆಯ್ಕೆ ಹೇಗಿರಬೇಕು?

ಕೃಷಿ ಭೂಮಿಯಲ್ಲಿ ಕ್ಯಾಮೆರಾ ಅಳವಡಿಸುವ ಸಂದರ್ಭದಲ್ಲಿ ಸೌರ ಫಲಕ ಮತ್ತು ಬ್ಯಾಟರಿ ಬ್ಯಾಕಪ್ ಸಾಮರ್ಥ್ಯದ ಬಗ್ಗೆ ವಿಶೇಷ ಗಮನ ನೀಡಬೇಕು. ಸೌರ ಫಲಕ ಹಗಲಿನಲ್ಲಿ ಬ್ಯಾಟರಿ ಚಾರ್ಜ್ ಮಾಡಲು ಸಹಾಯ ಮಾಡಿದರೆ, ಮೋಡ ಕವಿದ ದಿನಗಳಲ್ಲಿ ಕ್ಯಾಮೆರಾ ವಿದ್ಯುತ್ ವಿದ್ಯುತ್ ಇಲ್ಲದೇ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಕ್ಯಾಮೆರಾ 4ಜಿ, ರೋಮಿಂಗ್ ಅಥವಾ ಸ್ಮಾರ್ಟ್ ಐಡೆಂಟಿಫಿಕೇಶನ್ ನಂತಗ ಫೀಚರ್‌ಗಳನ್ನು ಹೊಂದಿರಬೇಕು.

ಹೆಚ್ಚಿನ ಬ್ಯಾಟರಿ ಸಾಮರ್ಥ್ಯ, ದೊಡ್ಡ ಸೌರ ಫಲಕ ಹೆಚ್ಚು ಉಪಯುಕ್ತ, ಏಕೆಂದರೆ ಹೆಚ್ಚಿನ ಫೀಚರ್ ಹೊಂದಿರುವ ಕ್ಯಾಮೆರಾಗಳು ಹೆಚ್ಚು ಹೆಚ್ಚು ವಿದ್ಯುತ್ ಬಳಕೆ ಮಾಡುತ್ತವೆ. ಜೊತೆ ಕ್ಯಾಮೆರಾ ಖರೀದಿ ಮಾಡುವ ಮುನ್ನ ನಿಮ್ಮ ಕೃಷಿ ಭೂಮಿಯ ಬಳಿ ನೆಟ್‌ವರ್ಕ್ ಸೌಳಬ್ಯ ಹೇಗಿದೆ ಎಂದು ಪರಿಶೀಲನೆ ನಡೆಸಿ. ಸೂಕ್ತ ಸ್ಥಳವನ್ನು ಗುರುತಿಸಿ ಆ ಬಳಿಕ ಕ್ಯಾಮೆರಾ ಅಳವಡಿಕೆ ಮಾಡಿ. ದಿನವೀಡಿ ಬಿಸಲು ಬೀಳುವಂತಹ ಸ್ಥಳದಲ್ಲಿ ಸೌರ ಫಲಕ ಅಳವಡಿಕೆ ಮಾಡಿ. ಕ್ಯಾಮೆರಾವನ್ನು ಎಷ್ಟು ಎತ್ತರದಲ್ಲಿ ಅಳವಡಿಕೆ ಮಾಡಿದರೆ ಹೆಚ್ಚು ವ್ಯಾಪ್ತಿಯನ್ನು ಕವರ್ ಮಾಡಲು ಸೂಕ್ತ ಎಂದು ಪರಿಶೀಲನೆ ನಡೆಸಿ. ಇದರಿಂದ ತೋಟದ ಭದ್ರತೆಯನ್ನು ಉತ್ತಮವಾಗಿಸಿ, ಕಣ್ಗಾವಲು ವ್ಯಾಪ್ತಿಯನ್ನು ಹೆಚ್ಚಿಸಬಹುದಾಗಿದೆ.