Asianet Suvarna News Asianet Suvarna News

ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೇದು, ಆದ್ರೆ ತಿನ್ನೋ ರೀತಿ ಸರಿಯಾಗಿರ್ಬೇಕು ಅಷ್ಟೆ

ಡ್ರೈಫ್ರೂಟ್ಸ್‌ (Dryfruits) ಅಥವಾ ಒಣಹಣ್ಣುಗಳು ಆರೋಗ್ಯ (Health)ಕ್ಕೆ ಬಹು ಉಪಕಾರಿ. ಇದನ್ನು ತಿನ್ನೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹೀಗಾಗಿಯೇ ಹೆಚ್ಚಿನವರು ಆಗಾಗ ಡ್ರೈ ಫ್ರೂಟ್ಸ್ ತಿನ್ತಿರ್ತಾರೆ. ಆದ್ರೆ ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೇದು ನಿಜ, ಆದ್ರೆ ತಿನ್ನೋ ರೀತಿ ಸರಿಯಾಗಿರ್ಬೇಕು ಅಷ್ಟೆ. 

Why Ayurveda Suggests Soaking Nuts For Six Eight Hours Before Consumption Vin
Author
Bengaluru, First Published Jun 23, 2022, 2:15 PM IST

ದೇಹ (Body)ವನ್ನು ಆರೋಗ್ಯಕರ (Healthy) ಮತ್ತು ಶಕ್ತಿಯುತವಾಗಿ ಮಾಡುವ ಮೂಲಕ ರೋಗಗಳಿಂದ ರಕ್ಷಿಸಲು ಆಹಾರದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಸೇರಿಸುವುದು ಬಹಳ ಮುಖ್ಯವಾಗಿದೆ. ಬೇರೆ ಬೇರೆ ರೀತಿಯ ಆಹಾರಗಳು ಅನೇಕ ರೀತಿಯಲ್ಲಿ ದೇಹಕ್ಕೆ ಪ್ರಯೋಜನಕಾರಿಯಾಗಿರುತ್ತವೆ. ಅನೇಕ ರೋಗಗಳಿಂದ ರಕ್ಷಿಸುತ್ತದೆ. ಅದರಲ್ಲೂ ಡ್ರೈ ಫ್ರೂಟ್ಸ್ ಸೇವನೆ ಆರೋಗ್ಯಕ್ಕೆ (Health) ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ಸಾಕಷ್ಟು ಖನಿಜಗಳು, ಪೋಷಕಾಂಶಗಳು ಮತ್ತು ವಿಟಮಿನ್‌ (Vitamin)ಗಳಿಂದ ಕೂಡಿರುತ್ತದೆ. ಆದ್ರೆ ಇದನ್ನು ಸರಿಯಾಗಿ ತಿನ್ನುವ ರೀತಿ ಹೇಗೆಂದು ಗೊತ್ತಿರಬೇಕು. ಡ್ರೈ ಫ್ರೂಟ್ಸ್‌ನ್ನು ಯಾವಾಗ ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ತಿಳಿದುಕೊಂಡಾಗ ಮಾತ್ರ ಇದು ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರಬಹುದು.

ಎಲ್ಲರೂ ಒಣಹಣ್ಣುಗಳನ್ನು ತಿನ್ನುವುದು ಆರೋಗ್ಯಕರ ಎಂದು ಭಾವಿಸುತ್ತಾರೆ. ಯಾಕೆಂದರೆ ಇದರಲ್ಲಿ ವಿಟಮಿನ್ ಇ, ಕ್ಯಾಲ್ಸಿಯಂ, ಸೆಲೆನಿಯಮ್, ತಾಮ್ರ, ಮೆಗ್ನೀಸಿಯಮ್ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದೆ. ಮಾತ್ರವಲ್ಲ ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ಬಿ ಜೀವಸತ್ವಗಳು, ನಿಯಾಸಿನ್, ಥಯಾಮಿನ್ ಮತ್ತು ಫೋಲೇಟ್‌ ಅಂಶಗಳೂ ಇವೆ.. ಆದ್ದರಿಂದ, ಪ್ರತಿದಿನ ಅವುಗಳನ್ನು ಸೇವಿಸುವುದು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದು ಡಾ.ದೀಕ್ಷಾ ಭಾವಸರ್ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಜೊತೆಗೆ ಒಬ್ಬರು ಎಷ್ಟು ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ತಿನ್ನಬಹುದು, ಯಾವಾಗ ತಿನ್ನಬೇಕು ಮೊದಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಆರೋಗ್ಯಕ್ಕೆ ಒಳ್ಳೇದಂತ ಬೇಕಾಬಿಟ್ಟಿ ಬೇಡ.. ಡ್ರೈ ಫ್ರುಟ್ಸ್ ಸೇವನೆಗೂ ಇರಲಿ ಮಿತಿ

ಡ್ರೈಫ್ರೂಟ್ಸ್‌ ಎಷ್ಟು ಪ್ರಮಾಣದಲ್ಲಿ ತಿನ್ನಬಹುದು ?
ದಿನನಿತ್ಯದ ವ್ಯಾಯಾಮ ಮಾಡುವ, ಸಾಕಷ್ಟು ನೀರು ಕುಡಿಯುವ ಮತ್ತು ಯಾವುದೇ ಕಾಯಿಲೆ ಇಲ್ಲದಿರುವ ಅತ್ಯುತ್ತಮ ಜೀರ್ಣಕಾರಿ ಸಾಮರ್ಥ್ಯ ಹೊಂದಿರುವ ಜನರು ಪ್ರತಿದಿನ ಒಂದು ಔನ್ಸ್ (ಅಂಗೈಗೆ ಹೊಂದುವ) ಬೀಜಗಳನ್ನು ಸೇವಿಸುವುದು ಆರೋಗ್ಯಕರವಾಗಿದೆ.

ಒಣಹಣ್ಣುಗಳನ್ನು ಹೇಗೆ ಸೇವಿಸಬೇಕು ?
ಆಯುರ್ವೇದದ ಪ್ರಕಾರ,  ದೇಹಕ್ಕೆ ಡ್ರೈ ಫ್ರೂಟ್ಸ್‌ ಜೀರ್ಣಿಸಿಕೊಳ್ಳಲು ಕಷ್ಟವಾಗಿರುತ್ತದೆ. ಏಕೆಂದರೆ ಅವುಗಳು ಉತ್ತಮ ಪ್ರಮಾಣದ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್‌ನ್ನು ಒಳಗೊಂಡಿರುತ್ತವೆ. ಆದ್ದರಿಂದ ನೀವು ಅವುಗಳನ್ನು ತಿನ್ನುವಾಗಲೆಲ್ಲಾ, ಅವುಗಳನ್ನು ಆರು-ಎಂಟು ಗಂಟೆಗಳ ಕಾಲ ನೆನೆಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೆನೆಸುವಿಕೆಯು ಅದರಲ್ಲಿರುವ ಫೈಟಿಕ್ ಆಸಿಡ್, ಟ್ಯಾನಿನ್‌ಗಳನ್ನು ತೆಗೆದುಹಾಕುತ್ತದೆ ಇದರಿಂದ ಅವುಗಳಿಂದ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ನಮಗೆ ಸುಲಭವಾಗುತ್ತದೆ. ನೀವು ಅವುಗಳನ್ನು ನೆನೆಸುವುದನ್ನು ಮರೆತರೆ, ಅವುಗಳನ್ನು ಒಣಗಿಸಿ ಹುರಿಯಿರಿ. ಈ ರೀತಿ ಡ್ರೈ ಫ್ರೂಟ್ಸ್ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು..

ಪ್ರತಿಯೊಬ್ಬರೂ ಡ್ರೈ ಫ್ರೂಟ್ಸ್ ಸೇವಿಸಬಹುದೇ ?
ಕಳಪೆ ಕರುಳಿನ ಆರೋಗ್ಯ, ಜೀರ್ಣಕಾರಿ ಸಮಸ್ಯೆಗಳು, ಉಬ್ಬುವುದು, ಆಮ್ಲೀಯತೆ, ತೀವ್ರ ಅತಿಸಾರ, ಅಲ್ಸರೇಟಿವ್ ಕೊಲೈಟಿಸ್, ಒಣ ಹಣ್ಣುಗಳಿಗೆ ಅಲರ್ಜಿ ಇರುವವರು ತಮ್ಮ ಜೀರ್ಣಕ್ರಿಯೆ ಸುಧಾರಿಸುವವರೆಗೆ ಬೀಜಗಳನ್ನು ಸೇವಿಸಬಾರದು. ಇಲ್ಲದಿದ್ದರೆ ಇದು ಅಜೀರ್ಣ, ಮಲಬದ್ಧತೆ ಮೊದಲಾದ ಸಮಸ್ಯೆಗೆ ಕಾರಣವಾಗಬಹುದು.

ಡ್ರೈ ಫ್ರೂಟ್ಸ್ ನಿಂದ ಆರೋಗ್ಯದೊಂದಿಗೆ ಸೌಂದರ್ಯ... ಹೇಗೆ ಬಳಸೋದು?

ಯಾವಾಗ ಡ್ರೈಫ್ರೂಟ್ಸ್ ತಿನ್ನಬಾರದು ?
ಡ್ರೈ ಫ್ರೂಟ್ಸ್ ನಮ್ಮ ದೇಹದ ಆರೋಗ್ಯ ಕಾಪಾಡಲು ಮತ್ತು ಫಿಟ್ ನೆಸ್ ಗೆ ತುಂಬಾ ಒಳ್ಳೆಯದು. ನೀವು ನಿಮ್ಮ ದೈನಂದಿನ ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇರಿಸಿದರೆ ಹಲವು ಉಪಯೋಗಗಳನ್ನು ಪಡೆಯುತ್ತೀರಿ. ಅನೇಕ ಜನರು ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನುವುದನ್ನು ತಪ್ಪಿಸುತ್ತಾರೆ. ಯಾಕೆಂದರೆ ಒಣ ಹಣ್ಣುಗಳು ಬಿಸಿಯಾಗಿರುತ್ತವೆ. ಅವು ದೇಹದಲ್ಲಿ ಹೀಟ್ ಗೆ ಕಾರಣವಾಗುತ್ತವೆ ಎಂದು ಭಾವಿಸುತ್ತಾರೆ. ಹೀಗಾಗಿ ಡ್ರೈ ಫ್ರೂಟ್ಸ್ ತಾಪಮಾನದಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ ಎಂದು ಅರ್ಥೈಸುತ್ತಾರೆ.

Follow Us:
Download App:
  • android
  • ios