32 ವಿಧದ ಕಾಯಿಲೆ ಬರೋಕೆ ಕಾರಣವಾಗುತ್ತೆ ಅಲ್ಟ್ರಾ ಪ್ರೊಸೆಸ್ಡ್ ಫುಡ್, ನೀವೂ ತಿನ್ತಿದ್ದೀರಾ?

ಅಲ್ಟ್ರಾ-ಪ್ರೊಸೆಸ್ಡ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಅದು ಈಗ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಅಲ್ಟ್ರಾ-ಪ್ರೊಸೆಸ್ಡ್ ಫುಡ್ ತಿನ್ನೋ ಅಭ್ಯಾಸ ಜೀವಿತಾವಧಿಯನ್ನೂ ಕಡಿಮೆ ಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

What is ultra processed food, that causes 32 disease, have you eaten it Vin

ಅಲ್ಟ್ರಾ-ಪ್ರೊಸೆಸ್ಡ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಅದು ಈಗ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಅಲ್ಟ್ರಾ-ಪ್ರೊಸೆಸ್ಡ್ ಫುಡ್ ಆರೋಗ್ಯವನ್ನು ಕೆಡಿಸುವುದು ಮಾತ್ರವಲ್ಲದೆ ಜೀವಿತಾವಧಿಯನ್ನೂ ಕಡಿಮೆ ಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸುವುದರಿಂದ ಸುಮಾರು 32 ರೀತಿಯ ಕಾಯಿಲೆಗಳು ಬರೋ ಸಾಧ್ಯತೆಯಿದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಸಾವಿನ ಅಪಾಯವು 21 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಟ್ರಾ ಸಂಸ್ಕರಿತ ಆಹಾರಗಳು ಯಾವುವು?
ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು ಅನೇಕ ಕೈಗಾರಿಕಾ ಪ್ರಕ್ರಿಯೆಗಳಿಗೆ ಒಳಗಾಗುತ್ತವೆ. ಇದನ್ನು ತಯಾರಿಸುವ ಸಂದರ್ಭದಲ್ಲಿ ಕೃತಕ ಬಣ್ಣಗಳು, ಎಮಲ್ಸಿಫೈಯರ್‌ಗಳು, ಸುವಾಸನೆಗಳು ಮತ್ತು ಇತರ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಪ್ಯಾಕ್ ಮಾಡಲಾದ ಬೇಯಿಸಿದ ಆಹಾರಗಳು, ತಿಂಡಿಗಳು, ಕಾರ್ಬೊನೇಟೆಡ್ ಪಾನೀಯಗಳು, ಸಕ್ಕರೆ ಧಾನ್ಯಗಳು ಮತ್ತು ತಿನ್ನಲು ಸಿದ್ಧವಾಗಿರುವ ಆಹಾರಗಳು ಈ ವರ್ಗದಲ್ಲಿ ಬರುತ್ತವೆ. ಈ ಆಹಾರಗಳು ಸಾಮಾನ್ಯವಾಗಿ ವಿಟಮಿನ್ ಮತ್ತು ಫೈಬರ್ ಕೊರತೆಯನ್ನು ಹೊಂದಿರುತ್ತವೆ. ಮಾತ್ರವಲ್ಲ ಇದರಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ.

ಈ ಆಹಾರಗಳ ಜೊತೆ ಬೆಣ್ಣೆ ಸೇರಿಸಿದ್ರೆ… ವಿಷವಾಗೋದು ಖಂಡಿತಾ… ಹುಷಾರಾಗಿರಿ!

ಹೃದ್ರೋಗ ಸೇರಿದಂತೆ ಈ ರೋಗಗಳ ಅಪಾಯ ಹೆಚ್ಚು
ಆಸ್ಟ್ರೇಲಿಯಾ, ಯುಎಸ್, ಫ್ರಾನ್ಸ್ ಮತ್ತು ಐರ್ಲೆಂಡ್‌ನ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಹೆಚ್ಚಿನ ಅಲ್ಟ್ರಾ-ಸಂಸ್ಕರಿಸಿದ ಆಹಾರ ಸೇವನೆಯು ಹೃದ್ರೋಗಕ್ಕೆ ಸಂಬಂಧಿಸಿದ ಸಾವಿನ ಅಪಾಯವನ್ನು 48-53 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇದಲ್ಲದೆ,  ಹೃದ್ರೋಗ, ಸ್ಥೂಲಕಾಯತೆ, ಒತ್ತಡ, ಮಾನಸಿಕ ಅಸ್ವಸ್ಥತೆ ಮತ್ತು ಟೈಪ್-2 ಮಧುಮೇಹದ ಅಪಾಯವು ಸುಮಾರು 12 ಪ್ರತಿಶತದಷ್ಟು ಹೆಚ್ಚಾಗುತ್ತದೆ. ನಿದ್ರೆ ಮತ್ತು ಖಿನ್ನತೆಯ ಸಮಸ್ಯೆಗಳು ಶೇಕಡಾ 22ರಷ್ಟು ಹೆಚ್ಚಾಗುತ್ತವೆ ಎಂದು ವರದಿಯಿಂದ ತಿಳಿದುಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕಾರ್ಬೊನೇಟೆಡ್ ತಂಪು ಪಾನೀಯಗಳು, ಪ್ಯಾಕೆಟ್ ತಿಂಡಿಗಳು, ಪ್ಯಾಕ್‌ ಮಾಡಿದ ಮಾಂಸ, ಚೀಸ್, ಪಾಸ್ಟಾ, ಪಿಜ್ಜಾ, ಮೀನು, ಸಾಸೇಜ್‌ಗಳು, ಸಿಹಿತಿಂಡಿಗಳು, ಪ್ಯಾಕೇಜ್ ಮಾಡಿದ ಬ್ರೆಡ್, ಬಿಸ್ಕತ್ತುಗಳು, ಪೇಸ್ಟ್ರಿಗಳು, ಕ್ಯಾಂಡಿ, ಕೇಕ್‌ಗಳು, ಹಣ್ಣಿನ ಮೊಸರು, ಬರ್ಗರ್‌ಗಳು, ಹಾಟ್ ಡಾಗ್‌ಗಳು, ತ್ವರಿತ ನೂಡಲ್ಸ್ ಮತ್ತು ಇನ್‌ಸ್ಟಂಟ್ ಸೂಪ್‌ಗಳು ಅಲ್ಟ್ರಾ ಸಂಸ್ಕರಿತ ಆಹಾರಗಳ ಅಡಿಯಲ್ಲಿ ಬರುತ್ತವೆ.

ಆಯುರ್ವೇದದ ಪ್ರಕಾರ ಬೆಳಗ್ಗೆದ್ದು ಇಂಥಾ ಆಹಾರ ತಿಂದ್ರೆ ಬೇಗ ಸ್ಲಿಮ್ ಆಗ್ಬೋದು

Latest Videos
Follow Us:
Download App:
  • android
  • ios