ಈ ಆಹಾರಗಳ ಜೊತೆ ಬೆಣ್ಣೆ ಸೇರಿಸಿದ್ರೆ… ವಿಷವಾಗೋದು ಖಂಡಿತಾ… ಹುಷಾರಾಗಿರಿ!
ಅತಿಯಾದ ಬೆಣ್ಣೆಯನ್ನು ತಿನ್ನೋದು ಅನೇಕ ರೋಗಗಳಿಗೆ ಕಾರಣವಾಗಬಹುದುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಬೆಣ್ಣೆಯೊಂದಿಗೆ ಕೆಲವು ಆಹಾರಗಳನ್ನು ತಿನ್ನೋದು ಈ ರೋಗಗಳ ಅಪಾಯವನ್ನು 10 ಪಟ್ಟು ಹೆಚ್ಚಿಸುತ್ತದೆ ಅನ್ನೋದು ನಿಮಗೆ ತಿಳಿದಿದೆಯೇ.
ಬೆಣ್ಣೆಯು ಕ್ಯಾಲೊರಿಗಳಿಂದ ತುಂಬಿರುವ ಹೈ ಪ್ರೋಟೀನ್ ಆಹಾರ (high protein food). ಇದು ಸ್ವಲ್ಪ ಉಪ್ಪು, ಕೊಬ್ಬನ್ನು ಸಹ ಹೊಂದಿದೆ. ಈ ಪ್ರೊಸೆಸ್ಡ್ ಬೆಣ್ಣೆ ತಯಾರಿಸಲು, ತಾಳೆ ಎಣ್ಣೆಯಂತಹ ಕೊಳಕು ಮತ್ತು ವಿಷಕಾರಿ ತೈಲಗಳನ್ನು ಪ್ರತ್ಯೇಕವಾಗಿ ಸೇರಿಸಲಾಗುತ್ತದೆ. ಬೆಣ್ಣೆ ದೇಹಕ್ಕೆ ಹಾನಿಕಾರಕವೇ ಅಥವಾ ಅಲ್ಲವೇ ಎಂದು ಆಗಾಗ್ಗೆ ಚರ್ಚಿಸಲಾಗುತ್ತದೆ? ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ಕೂಡ ಇದೆ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ರಿಫ್ರೆಕ್ಸ್) ಪ್ರಕಾರ, ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬು ಕೊಬ್ಬಿನ ಹಾನಿಕಾರಕ ರೂಪವಾಗಿದೆ. ಅಧಿಕ ಕೊಲೆಸ್ಟ್ರಾಲ್, ಅಧಿಕ ಟ್ರೈಗ್ಲಿಸರೈಡ್ಸ್, ಹೃದಯಾಘಾತ (heart attack), ಮೆದುಳಿನ ಪಾರ್ಶ್ವವಾಯು, ಬೊಜ್ಜು, ಕ್ಯಾನ್ಸರ್ (Cancer), ಮಧುಮೇಹ ಎಲ್ಲವೂ ಇವುಗಳ ಸೇವನೆಯಿಂದ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಇದೆಲ್ಲಾ ಬೇರೆ ವಿಷ್ಯ ಆದರೆ, ಈ ಬೆಣ್ಣೆಯನ್ನು (butter) ಕೆಲವು ಆಹಾರಗಳ ಮೇಲೆ ಹಚ್ಚಿದರೆ, ಅದರಿಂದ ಉಂಟಾಗುವ ಹಾನಿ ಡಬಲ್ ಆಗುತ್ತೆ ಅನ್ನೋದು ಗೊತ್ತಿದ್ಯಾ ನಿಮಗೆ? ನೀವು ಆರೋಗ್ಯವಾಗಿರಲು ಬಯಸಿದರೆ ನೀವು ಕೆಲವೊಂದು ಆಹಾರಗಳ ಜೊತೆ ಬೆಣ್ಣೆ ಬಳಸೋದನ್ನು ತಪ್ಪಿಸಬೇಕು. ಮಾರುಕಟ್ಟೆಯಲ್ಲಿ ಕಂಡುಬರುವ ಬೆಣ್ಣೆಯನ್ನು ಯಾವ ಆಹಾರಗಳೋಂದಿಗೆ ತಿನ್ನಬಾರದು (worst food combination)ಅನ್ನೋದನ್ನು ತಿಳಿಯೋಣ.
ಬಿಳಿ ಬ್ರೆಡ್ (White bread)
ಬೆಣ್ಣೆಯನ್ನು ಸಾಮಾನ್ಯವಾಗಿ ಬಿಳಿ ಬ್ರೆಡ್ ಜೊತೆ ತಿನ್ನಲಾಗುತ್ತದೆ. ಇದು ಹೆಚ್ಚು ಸಂಸ್ಕರಿಸಿದ ಆಹಾರವಾಗಿದ್ದು, ಇದು ಹೃದ್ರೋಗ, ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ. ಇದರೊಂದಿಗೆ ಬೆಣ್ಣೆಯನ್ನು ತಿನ್ನೋದ್ರಿಂದ ನೀವು ಈ ರೋಗಗಳ ಅಪಾಯವನ್ನು ಅನೇಕ ಪಟ್ಟು ಹೆಚ್ಚಿಸುತ್ತೀರಿ.
ಪಾವ್ ಭಾಜಿ (Pav Bhaji)
ಪಾವ್ ಭಾಜಿ ತುಂಬಾ ರುಚಿಕರವಾದ ಆಹಾರ ಅನ್ನೋದು ನಿಜಾ, ಇದರಲ್ಲಿ ಬೆಣ್ಣೆಯಲ್ಲಿ ಕರಿದ ಪಾವ್ ಅನ್ನು ತಿನ್ನಲಾಗುತ್ತದೆ. ಇದಲ್ಲದೆ, ರುಚಿಯನ್ನು ಹೆಚ್ಚಿಸಲು ಭಾಜಿ ಮೇಲೆ ಬೆಣ್ಣೆಯನ್ನು ಪ್ರತ್ಯೇಕವಾಗಿ ಸೇರಿಸಲಾಗುತ್ತದೆ. ಆದರೆ ಬಿಳಿ ಬ್ರೆಡ್ ನಂತೆ, ಪಾವ್ ಅನ್ನು ಸಹ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.
ಇನ್ ಸ್ಟಂಟ್ ನೂಡಲ್ಸ್ (Instant Noodles)
ಫಾಸ್ಟ್ ಫುಡ್ ಆಗಿದ್ದ, ಇನ್ ಸ್ಟಂಟ್ ನೂಡಲ್ಸ್ ಇದೀಗ ಪ್ರತಿ ಅಡುಗೆಮನೆಯಲ್ಲಿಯೂ ಸ್ಥಾನ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಜನರು ಸಂಸ್ಕರಿಸಿದ ಬೆಣ್ಣೆಯನ್ನು ನೂಡಲ್ಸ್ ಜೊತೆ ಹಾಕಿ ತಿನ್ನೋ ಟ್ರೆಂಡ್ ಹೆಚ್ಚಿದೆ. ಇದು ಸೋಡಿಯಂ ಮತ್ತು ಹಾನಿಕಾರಕ ವಸ್ತುಗಳಿಂದ ತುಂಬಿದೆ, ಇದು ಹೊಟ್ಟೆ ನೋವು, ನಿದ್ರಾಹೀನತೆ, ತಲೆನೋವು, ಕಿರಿಕಿರಿ, ಕ್ಯಾನ್ಸರ್ಗೆ ಸಂಬಂಧಿಸಿದೆ. ಬೆಣ್ಣೆ ಮತ್ತು ಈ ನೂಡಲ್ಸ್ ಕಾಂಬಿನೇಶನ್ ಎಷ್ಟು ವಿಷಕಾರಿಯಾಗಿರಬಹುದು ನೀವೇ ಯೋಚಿಸಿ.
ಬರ್ಗರ್ (Burger)
ಬೆಣ್ಣೆಯೊಂದಿಗೆ ತಿನ್ನುವ ಆಹಾರಗಳಲ್ಲಿ ಬರ್ಗರ್ ಗಳನ್ನು ಸಹ ಸೇರಿಸಲಾಗುತ್ತದೆ. ಬರ್ಗರ್ ನ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬು ಬೆಣ್ಣೆ ಜೊತೆ ಸೇರಿದ್ರೆ ಡಬಲ್ ಆಗುತ್ತೆ. ಬರ್ಗರ್ ಜೊತೆ ಟ್ರಾನ್ಸ್ ಕೊಬ್ಬು ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆಗಳು, ತೂಕ ಹೆಚ್ಚಳ, ಕ್ಯಾನ್ಸರ್, ಮಧುಮೇಹ, ಬಾಯಿಯ ತೊಂದರೆಗಳು ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ.
ಸ್ಯಾಂಡ್ ವಿಚ್ (Sandwich)
ಸ್ಯಾಂಡ್ ವಿಚ್ ಸಸ್ಯಾಹಾರಿಯಾಗಿರಲಿ ಅಥವಾ ಮಾಂಸಾಹಾರಿಯಾಗಿರಲಿ, ಆದರೆ ಬೆಣ್ಣೆಯ ಪ್ರಮಾಣವು ಖಂಡಿತವಾಗಿಯೂ ಅದರಲ್ಲಿ ಕಂಡುಬರುತ್ತದೆ. ಇದು ಹೆಚ್ಚುವರಿ ಉಪ್ಪು, ವೈಟ್ ಬ್ರೆಡ್, ಚೀಸ್ ಇತ್ಯಾದಿಗಳನ್ನು ಸಹ ಹೊಂದಿರುತ್ತೆ. ಈ ಎಲ್ಲಾ ಜೊತೆಯಾಗಿ ಸೇರಿದ್ರೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.