ಹೊಸ ಪೋನ್ ಕಳೆದುಕೊಂಡ ಕೊಹ್ಲಿ, ಹೆಂಡ್ತಿ ಮೊಬೈಲ್‌ನಿಂದ ಐಸ್‌ಕ್ರೀಂ ಆರ್ಡರ್ ಮಾಡಿ ಎಂದ ಝೊಮೇಟೋ!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ತಾವು ಹೊಸದಾಗಿ ತೆಗೆದುಕೊಂಡ ಫೋನ್ ಕಳೆದುಕೊಂಡಿರುವುದಾಗಿ ಟ್ವೀಟ್‌ ಮಾಡಿದ್ದರು. ಸದ್ಯ ಇದಕ್ಕೆ ಫುಡ್ ಡೆಲಿವರಿ ಆಪ್ ಝೊಮೆಟೋ ನೀಡಿರುವ ಪ್ರತಿಕ್ರಿಯೆ ಎಲ್ಲೆಡೆ ವೈರಲ್ ಆಗ್ತಿದೆ. 

Virat Kohli tweets about losing his phone, Zomato shares a witty response Vin

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ತಾವು ಹೊಸದಾಗಿ ತೆಗೆದುಕೊಂಡ ಫೋನ್ ಕಳೆದುಕೊಂಡಿರುವುದಾಗಿ ಟ್ವೀಟ್‌ ಮಾಡಿದ್ದರು. ತಮ್ಮ ಫೋನ್ ಕಳೆದುಕೊಂಡಿರುವ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, "ಇನ್ನೂ ಅನ್‌ಬಾಕ್ಸ್‌ ಕೂಡಾ ಮಾಡದ ಹೊಸ ಫೋನ್‌ ಕಳೆದುಕೊಂಡಿದ್ದು, ಸಾಕಷ್ಟು ಬೇಸರವನ್ನುಂಟು ಮಾಡಿತು. ನೀವ್ಯಾರಾದರೂ ನೋಡಿದ್ರಾ?" ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ಟ್ವೀಟ್‌ಗೆ ಫುಡ್ ಡೆಲಿವರಿ ಆಪ್ ಝೊಮೆಟೋ ನೀಡಿರುವ ಪ್ರತಿಕ್ರಿಯೆ ಎಲ್ಲೆಡೆ ವೈರಲ್ ಆಗ್ತಿದೆ. 

ವಿರಾಟ್ ಕೊಹ್ಲಿ ತಮ್ಮ ಫೋನ್ ಕಳೆದುಹೋದ ಬಗ್ಗೆ ಟ್ವೀಟ್ ಮಾಡಿದರೆ, ಇದಕ್ಕೆ ಪ್ರತಿಯಾಗಿ ಝೊಮ್ಯಾಟೊ ಹಾಸ್ಯದ ಪ್ರತಿಕ್ರಿಯೆಯನ್ನು ಹಂಚಿಕೊಂಡಿದೆ. 'ಭಾಭಿಯ ಫೋನ್‌ನಿಂದ ಐಸ್ ಕ್ರೀಮ್ ಅನ್ನು ಆರ್ಡರ್ ಮಾಡಲು ಹಿಂಜರಿಯಬೇಡಿ, ಅದು ನಿಮಗೆ ಖುಷಿಯಾಗಿರಲು ಸಹಾಯ ಮಾಡುತ್ತದೆ' ಎಂದು ಝೊಮೆಟೋ ನಗುವ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದೆ. 

ಗಂಟೆಗಟ್ಟಲೆ ಕಾದರೂ ಬರಲೇ ಇಲ್ಲ ಫುಡ್, ಝೊಮೇಟೋ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರಿನ ಗ್ರಾಹಕ

ಒಂದು ದಿನದ ಹಿಂದೆ ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ, ವಿರಾಟ್ ಕೊಹ್ಲಿ ಅವರ ಟ್ವೀಟ್ 8.1 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಸಂಖ್ಯೆಗಳು ಇನ್ನೂ ಹೆಚ್ಚುತ್ತಿವೆ. ಅನೇಕರು ತಮ್ಮ ಆಲೋಚನೆಗಳನ್ನು (Thinking) ಕಾಮೆಂಟ್‌ಗಳ ವಿಭಾಗದಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವರು ಜೊಮಾಟೊ ಕಾಮೆಂಟ್‌ಗೆ ಪ್ರತ್ಯುತ್ತರವನ್ನೂ (Response) ನೀಡಿದ್ದಾರೆ.

ಇನ್ನು ಝೊಮ್ಯಾಟೋ ಕಾಮೆಂಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ಆರ್ಡರ್ ಮಾಡಿರುವ ನನಗೆ ಸರಿಯಾಗಿ ಡೆಲಿವರಿ ಕೊಟ್ಟಿಲ್ಲ ಇನ್ನು ಕೊಹ್ಲಿಗೇನು ಕೊಡ್ತಿರಾ ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು ಇದಕ್ಕೆ ಪ್ರತಿಕ್ರಿಯೆ ನೀಡಿ, "ವಿರಾಟ್ ಕೊಹ್ಲಿ ಐಸ್‌ ಕ್ರೀಂ ತಿನ್ನಲ್ಲ, ಕೊಹ್ಲಿ ಸಿಹಿ ತಿನ್ನುವುದನ್ನು ಬಿಟ್ಟಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಮೆಂಟ್‌ಗಳ ವಿಭಾಗದಲ್ಲಿ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಇಲ್ಲಿದೆ. 'ಬಾಭಿ ಸ್ವಿಗ್ಗಿ ಬಳಸಿದರೆ ಏನಾಗುತ್ತದೆ' ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. 'ಆದರೆ ಅವರಿಗೆ ಐಸ್ ಕ್ರೀಮ್ ಆರ್ಡರ್ ಮಾಡಲು @ಅನುಷ್ಕಾಶರ್ಮಾ ಅವರ ಫೋನ್ ಏಕೆ ಬೇಕು? ಅವರು ತಮ್ಮ ಫೋನ್‌ನಿಂದ ಟ್ವೀಟ್ ಮಾಡಿದ್ದಾರೆ' ಎಂದು ಮತ್ತೊಬ್ಬರು ಟೀಕಿಸಿದ್ದಾರೆ. 'ಎಪಿಕ್' ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ. 'ಇದು ಯಾವುದೇ ಬಾಲ್‌ನ್ನು ಎದುರಿಸದೆ ರನೌಟ್ ಆಗುವಂತಿದೆ' ಎಂದು ನಾಲ್ಕನೆಯವರು ಹಂಚಿಕೊಂಡರು. ಐದನೆಯವರು 'ನನ್ನ ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು ಖರೀದಿಸುವ ಮೊದಲು ಕಳೆದುಕೊಂಡೆ' ತಮ್ಮ ಅನುಭವವನ್ನು (Experience) ಹಂಚಿಕೊಂಡರು.

ಕಂಪನಿ ಟೀ ಶರ್ಟ್ ಸುಟ್ಟು ಹಾಕಿದ ಝೊಮೇಟೋ ಸಿಬ್ಬಂದಿ..! ಗ್ರಾಹಕರಿಗೆ ಹೇಳಿದ್ದಿಷ್ಟು

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವು ಮಂದಿ ಯಾವ ಫೋನ್ ಕಳೆದುಕೊಂಡಿದ್ದಿರಾ ಎಂದು ಕೇಳಿದ್ದಾರೆ. ಮತ್ತೆ ಕೆಲವರು ಇದೊಂದು ಜಾಹೀರಾತಿಗಾಗಿ ಮಾಡಿರುವ ಟ್ವೀಟ್ ಎಂದಿದ್ದಾರೆ. ನಥಿಂಗ್ ಎನ್ನುವ ಮೊಬೈಲ್‌ ಜಾಹೀರಾತಿಗಾಗಿ (Advertisement) ಈ ಟ್ವೀಟ್ ಮಾಡಿರಬಹುದು ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios