ಲಡಾಖ್‌ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಚೀನಾದ ನಡೆಯನ್ನು ವಿರೋಧಿಸಿ, ಝೊಮೇಟೋ ಸಿಬ್ಬಂದಿ ತಮ್ಮ ಟೀ ಶರ್ಟ್‌ ತೆಗೆದು ಸುಟ್ಟು ಹಾಕಿದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

ಬೆಹಾಲದಲ್ಲಿ ಪ್ರತಿಭಟನೆ ನಡೆಸಿದ ಝೊಮೇಟೋ ಬಾಯ್ಸ್ ತಾವು ಕೆಲಸ ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಝೊಮೇಟೋ ಕಂಪನಿಯಲ್ಲಿ ಚೀನಾ ಬಹುಪಾಲು ಹೂಡಿಕೆ ಹೊಂದಿದ್ದು, ಜನರು ಝೊಮೇಟೋ ಮೂಲಕ ಆಹಾರ ಆರ್ಡರ್ ಮಾಡುವುದನ್ನು ನಿಲ್ಲಿಸಬೇಕೆಂದು ಕೇಳಿಕೊಂಡಿದ್ದಾರೆ.

ಚೀನಾ ತಂಟೆಗೆ ಭಾರತದ ಮಿಸೈಲ್‌ ಸಡ್ಡು: ಡ್ರ್ಯಾಗನ್ ವಿರುದ್ಧ ಮಹತ್ತರ ಹೆಜ್ಜೆ!

2018ರಲ್ಲಿ ಪ್ರಮುಖ ಚೈನೀಸ್ ಕಂಪನಿ ಅಲಿಬಾಬಾದ ಭಾಗವಾದ ಏಂಟ್ ಫಿನಾನ್ಶಿಯಲ್ 120 ಮಿಲಯನರ್ ಯುಎಸ್ ಡಾಲರ್ ಝೊಮೇಟೋದಲ್ಲಿ ಹೂಡಿಕೆ ಮಾಡಿತ್ತು. ಇತ್ತೀಚೆಗೆ ಹೂಡಿಕೆಯನ್ನು 150 ಮಿಲಯನ್ ಯುಎಸ್ ಡಾಲರ್‌ಗೆ ಏರಿಸಿತ್ತು.

ಚೀನಾದ ಕಂಪನಿಗಳು ಇಲ್ಲಿಂದ ಲಾಭ ಮಾಡಿಕೊಂಡು ನಮ್ಮದೇ ದೇಶದ ಸೇನೆ ಮೇಲೆ ದಾಳಿ ಮಾಡುತ್ತಿದೆ. ನಮ್ಮ ನೆಲವನ್ನು ಕಬಳಿಸಲು ನೋಡುತ್ತಿದ್ದಾರೆ. ಇದನ್ನು ನಾವೆಂದಿಗೂ ಒಪ್ಪುವುದಿಲ್ಲ ಎಂದಿದ್ದಾರೆ.

ಚೀನಾ ಮತ್ತೆ ಕುತಂತ್ರ: ಶಾಂತಿ ಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್‌ ನಿರ್ಮಾಣ!

ನಾವು ಉಪವಾಸವಾದರೂ ಇರುತ್ತೇವೆ. ಆದರೆ ಚೀನಾ ಹೂಡಿಕೆ ಇರುವ ಕಂಪನಿಯಲ್ಲಿ ಖಂಡಿತಾ ದುಡಿಯುವುದಿಲ್ಲ ಎಂದಿದ್ದಾರೆ. ಮೇಯಲ್ಲಿ ಕೊರೋನಾ ವೈರಸ್‌ನಿಂದಾಗಿ ಝೊಮೇಟೋ 520 ಕೆಲಸಗಾರರನ್ನು ವಜಾಮಡಿತ್ತು. ಪ್ರತಿಭಟನೆ ಮಾಡಿದವರು ಕಂಪನಿಯಿಂದ ತೆಗೆದು ಹಾಕಲ್ಪಟ್ಟವರಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಝೊಮೇಟೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಲ್ವಾನ್ ಕಣಿವೆಯಲ್ಲಿ ನಡೆದ ದಾಳಿ ಪ್ರತಿದಾಳಿಯಲ್ಲಿ ಕರ್ನಲ್ ಸೇರಿದಂತೆ 20 ಜನ ಯೋಧರು ಹುತಾತ್ಮರಾಗಿದ್ದರು.