ಗಂಟೆಗಟ್ಟಲೆ ಕಾದರೂ ಬರಲೇ ಇಲ್ಲ ಫುಡ್, ಝೊಮೇಟೋ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರಿನ ಗ್ರಾಹಕ

ಹಸಿವಾಯ್ತು ಎಂದ ತಕ್ಷಣ ಅಡುಗೆ ಮನೆಗೆ ಹೋಗುವ ಬದಲು ಮೊಬೈಲ್ ಹಿಡಿಯುವವರ ಸಂಖ್ಯೆ ಹೆಚ್ಚಿದೆ. ಆನ್ಲೈನ್ ಅಪ್ಲಿಕೇಷನ್ ಮೂಲಕ ತಮ್ಮಿಷ್ಟದ ಫುಡ್ ಆರ್ಡರ್ ಮಾಡಿ ಆರಾಮವಾಗಿ ತಿನ್ನುತ್ತಾರೆ. ಆದ್ರೆ ಈ ಝೊಮೆಟೋದಲ್ಲಿ ಕೆಲವೊಮ್ಮೆ ಎಡವಟ್ಟು ಕೂಡಾ ಆಗುತ್ತೆ. ಬೆಂಗಳೂರಿನಲ್ಲೂ ಫುಡ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬನಿಗೆ ಹಾಗೇ ಆಗಿದ್ದು, ಆತ ಪರಿಹಾರ ಒದಗಿಸುವಂತೆ ಕೋರ್ಟ್ ಮೊರೆ ಹೋಗಿದ್ದಾನೆ. 

Dinner not delivered: Zomato, hotel told to pay Bengalurean Rs 3,000 relief Vin

ಮನೆಯಲ್ಲಿ ಎಷ್ಟೇ ರುಚಿಯಾಗಿ ಆಹಾರ ತಯಾರಿಸಿದ್ರೂ ಹೋಟೆಲ್ ಆಹಾರ (Food) ತಿಂದಂತೆ ಆಗೋದಿಲ್ಲ. ಕೆಲವೊಂದು ಅಡುಗೆಯನ್ನು ಮನೆಯಲ್ಲಿ ಮಾಡೋಕೆ ಸಮಯ ಕೂಡ ಸಿಗೋದಿಲ್ಲ. ವಾರದ ದಿನಗಳಲ್ಲಿ ಕೆಲಸದ ಒತ್ತಡ ಎನ್ನುವ ಕಾರಣಕ್ಕೆ ವಾರಾಂತ್ಯದಲ್ಲಿ ವಿಶ್ರಾಂತಿ ಎನ್ನುವ ಕಾರಣಕ್ಕೆ ಬಹುತೇಕರು ಹೋಟೆಲ್ ತಿಂಡಿ ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀವು ಹೋಟೆಲ್ ಗೆ ಹೋಗಿ ತಿಂಡಿ ತಿನ್ನಬೇಕಾಗಿಲ್ಲ. ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ರೆ ಮನೆ ಬಾಗಿಲಿಗೆ ತಿಂಡಿ ಬರುತ್ತದೆ. ಇದೇ ಕಾರಣಕ್ಕೆ ಸ್ವಿಗ್ಗಿ ಹಾಗೂ ಜೊಮಾಟೊ ಅಪ್ಲಿಕೇಷನ್ ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಜನರು ಅಡುಗೆ ಮಾಡೋಕೆ ಉದಾಸೀನವಾದಾಗ, ಸಮಯವಿಲ್ಲದಿದ್ದಾಗ ಅಥವಾ ಯಾವುದಾದರೂ ವಿಶೇಷ ಆಹಾರವನ್ನು ತಿನ್ನಬೇಕು ಅನಿಸಿದಾಗ ಸ್ವಿಗ್ಗಿ, ಝೋಮೇಟೋದಲ್ಲಿ ಆರ್ಡರ್ ಮಾಡುತ್ತಾರೆ.

ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್‌ (Online) ನಲ್ಲಿ ಆಹಾರ (Food) ವನ್ನು ಆರ್ಡರ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಹಾರ ಮನೆ ಡೋರ್ ಮುಂದಿರುತ್ತದೆ ಎಂದು ಫುಡ್ ಅಪ್ಲಿಕೇಶನ್‌ಗಳು ಹೇಳುತ್ತವೆಯಾದರೂ ಕೆಲವೊಮ್ಮೆ ಇಂಥಾ ಅಪ್ಲಿಕೇಶನ್‌ನಿಂದಲೂ ಅವಾಂತರಗಳು ಆಗುತ್ತವೆ.  ಹೀಗೆ ಬೆಂಗಳೂರಿನಲ್ಲೂ ಫುಡ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬನಿಗೆ ಹಾಗೇ ಆಗಿದ್ದು, ಆತ ಪರಿಹಾರ ಒದಗಿಸುವಂತೆ ಕೋರ್ಟ್ ಮೊರೆ ಹೋಗಿದ್ದಾನೆ. 

ತಡವಾಗಿ ಫುಡ್ ಡೆಲಿವರಿಗೆ ಬಂದ ಜೋಮ್ಯಾಟೋ ಬಾಯ್‌ಗೆ ಅಚ್ಚರಿ, ಆರತಿ ಎತ್ತಿ ಸ್ವಾಗತ!

ಝೊಮೆಟೋ, ಸ್ವಿಗ್ಗಿ ಸೇರಿಂದತೆ ಯಾವುದೇ ಫುಡ್ ಅಪ್ಲಿಕೇಶನ್‌ನಲ್ಲಿ ಆಹಾರ ಆರ್ಡರ್ ಮಾಡಿದಾಗ ಅದೆಷ್ಟೋ ಬಾರಿ ಆಹಾರ ತಡವಾಗಿ ಮನೆ ಸೇರುತ್ತದೆ. ಕೆಲವೊಮ್ಮೆ ಆರ್ಡರ್ ಮಾಡಿದ ಎಲ್ಲಾ ತಿನಿಸುಗಳು ಬರುವುದಿಲ್ಲ. ಫುಡ್ ಆರ್ಡರ್ ಮಾಡಿ, ಮನೆಯಲ್ಲೂ ಅಡುಗೆ ಮಾಡಿರದಿದ್ದಾಗ ಹಸಿವಿನಿಂದ ಕಾಯುತ್ತಿರುವವರು ಇದರಿಂದ ಸಿಟ್ಟುಗೊಳ್ಳುತ್ತಾರೆ. ಸದ್ಯ ಝೊಮೆಟೋ ಫುಡ್ ಅಪ್ಲಿಕೇಶನ್‌ನಿಂದಲೂ ಇಂಥಹದ್ದೇ ಒಂದು ಸಮಸ್ಯೆಯಾಗಿದೆ.

ಝೊಮೇಟೋ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಗ್ರಾಹಕ
ಮಲ್ಲೇಶ್ವರಂನ 28ರ ಹರೆಯದ ವ್ಯಕ್ತಿಯೊಬ್ಬರು ಝೊಮ್ಯಾಟೋದಲ್ಲಿ ಚೋಲೆ ಥಾಲಿಯನ್ನು ಆರ್ಡರ್ ಮಾಡಿದ್ದರು. ಆದರೆ ಎಷ್ಟು ಹೊತ್ತಾದರೂ ಅವರ ಆರ್ಡರ್ ಕೈ ಸೇರಿಲ್ಲ. ಹೀಗಾಗಿ ಹೊಟೇಲ್ ಮತ್ತು ಝೊಮೇಟೋ ವಿರುದ್ಧ ಆಹಾರ ವಿತರಣಾ ವೇದಿಕೆ ಮತ್ತು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಸಂಗ್ರಾಹಕ ಮತ್ತು ರೆಸ್ಟೋರೆಂಟ್‌ಗೆ ಜಂಟಿಯಾಗಿ 3,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಏಪ್ರಿಲ್ 14ರಂದು ಅಭಿಷೇಕ್ ಎಂ.ಆರ್ ಎಂಬವರು ಝೊಮ್ಯಾಟೋದಲ್ಲಿ ಅಮೃತಸರ ಚೋಲೆ ಬಟೂರೆಯನ್ನು ಆರ್ಡರ್ ಮಾಡಿದ್ದರು. ರಾಜಾಜಿನಗರದ ಬಾಕ್ಸ್‌ 8 ದೇಸಿ ಮಸಾಲ ರೆಸ್ಟೋರೆಂಟ್‌ನಿಂದ ಇದನ್ನು ಆರ್ಡರ್‌ ಮಾಡಲಾಗಿತ್ತು. ರಾತ್ರಿ 8.46ಕ್ಕೆ ಅಭಿಷೇಕ್ 256 ರೂ. ಪಾವತಿಸಿ ಫುಡ್ ಆರ್ಡರ್ ಮಾಡಿದ್ದರು. ಆದ್ರೆ ಸಮಯ ರಾತ್ರಿ 9.45 ಆದರೂ ಫುಡ್ ಡೆಲಿವರಿ ಆಗಿಲ್ಲ. ಈ ಬಗ್ಗೆ ಝೊಮ್ಯಾಟೋ ಏಜೆಂಟ್‌ಗೆ ಕರೆ ಮಾಡಿ ವಿಚಾರಿದರೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿರಲ್ಲಿಲ್ಲ.

Hyderabad Biriyani Delivery: ವಿಮಾನದ ಮೂಲಕ ಬಿರಿಯಾನಿ ಡೆಲಿವರಿ ಮಾಡುತ್ತೆ ಜೊಮ್ಯಾಟೋ..!

ಮೂರು ಸಾವಿರ ರೂ. ಪರಿಹಾರ ನೀಡಲು ನ್ಯಾಯಾಲಯ ಸೂಚನೆ
ಪ್ರಕರಣದ ಬಗ್ಗೆ ತಿಳಿದ ಫುಡ್ ಡೆಲಿವರಿ ಆಪ್ ತನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸಿದ್ದು, ಹಣವನ್ನು ರಿಫಂಡ್ ಮಾಡಿದೆ. ಮಾತ್ರವಲ್ಲ ವಾಲೆಟ್‌ಗೆ ಸಾವಿರ ರೂಪಾಯಿಯನ್ನು ಕ್ರೆಡಿಟ್ ಮಾಡಿದೆ. ಆದರೆ ಅಭಿಷೇಕ್ ಈ ಕುರಿತು ನ್ಯಾಯಾಲಯಕ್ಕೆ ದೂರು ನೀಡಲು ನಿರ್ಧರಿಸಿದರು ಮತ್ತು ಒಂದು ಲಕ್ಷ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು. ಆದರೆ ಝೊಮ್ಯಾಟೋದ ಲಾಯರ್ ಇಷ್ಟು ಮೊತ್ತದ ಪರಿಹಾರವನ್ನು ನೀಡಲು ನಿರಾಕರಿಸುವುದಾಗಿ ಹೇಳಿದರು. ರೆಸ್ಟೋರೆಂಟ್‌ನ ತಪ್ಪಿನಿಂದ ಹೀಗಾಗಿದ್ದು, ಝೊಮೇಟೋ ಇದಕ್ಕಾಗಿ ಈಗಾಗಲೇ ಒಂದು ಸಾವಿರ ರೂ. ನೀಡಿದೆ ಎಂದು ತಿಳಿಸಿದರು. 

ಆದರೆ ಡಿಸೆಂಬರ್ 31, 2022ರಂದು ನೀಡಿದ ಕೋರ್ಟ್‌ನಲ್ಲಿ ನ್ಯಾಯಾಲಯ ಝೋಮೇಟೋ ಸಂಸ್ಥೆ ವ್ಯಕ್ತಿಗೆ ಮೂರು ಸಾವಿರ ಪಾವತಿಸುವಂತೆ ಸೂಚಿಸಿದೆ.

Latest Videos
Follow Us:
Download App:
  • android
  • ios