Asianet Suvarna News Asianet Suvarna News

ರಸ್ಕ್‌ ಮಾಡ್ತಿರುವ ವೀಡಿಯೋ ವೈರಲ್‌: ಈ ವೀಡಿಯೋ ನೋಡಿದ್ರೆ ಮತ್ತೆ ತಿನ್ನಲ್ಲ ರಸ್ಕ್‌

ರಸ್ಕ್‌ ತಯಾರಿಯ ವೀಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಜನ ಅಂಗಡಿಯಲ್ಲಿ ಸಿಗೋ ರಸ್ಕ್‌ ತಿನ್ನೋದು ಬಿಡೋದೇ ವಾಸಿ ಎಂದು ಹೇಳ್ತಿದ್ದಾರೆ. 

Video of doing rusk Biscuit goes viral If you see it you will never eat rusk again akb
Author
First Published Nov 23, 2023, 10:27 AM IST

ಪಾನಿಪುರಿ ಅಥವಾ ಗೋಲ್ಗಪ್ಪದ ಜೊತೆ ನೀಡುವ ಪಾನಿ ತಯಾರಿಸುವ ರೀತಿಯ ವೀಡಿಯೋಗಳು ಈ ಹಿಂದೆ ಸಾಕಷ್ಟು ವೈರಲ್ ಆಗಿ ಪಾನಿಪುರಿ ತಿನ್ನುವವರನ್ನು ತಿನ್ಬೇಕೆ ಬೇಡ್ವೆ ಎಂದು ಯೋಚ್ನೆ ಮಾಡುವಂತೆ ಮಾಡಿದ್ದವು. ಅದೇ ರೀತಿ ಈಗ ರಸ್ಕ್‌ ತಯಾರಿಯ ವೀಡಿಯೋವೊಂದುವ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಜನ ಅಂಗಡಿಯಲ್ಲಿ ಸಿಗೋ ರಸ್ಕ್‌ ತಿನ್ನೋದು ಬಿಡೋದೇ ವಾಸಿ ಎಂದು ಹೇಳ್ತಿದ್ದಾರೆ. ರಸ್ಕ್ ತಯಾರಿಯ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಹಾಗಿದ್ದರೆ ವೀಡಿಯೋದಲ್ಲಿ ಇರೋದೇನು?

ರಸ್ಕ್ ತಯಾರಿಸುವ ರೀತಿ ಕೊಳಕೋ ಕೊಳಕು

ಈ ವೀಡಿಯೋವನ್ನು ಭಾರತೀಯ ರೈಲ್ವೆ ಇಲಾಖೆ ಅಧಿಕಾರಿ ಅನಂತ್ ರೂಪನಗುಡಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 35 ಸೆಕೆಂಡ್‌ಗಳ ಈ ವೀಡಿಯೋ ಸಣ್ಣ ಆಹಾರೋದ್ಯಮ ಘಟಕದಲ್ಲಿ ರಸ್ಕ್‌ನ್ನು ಎಷ್ಟು ಕೆಟ್ಟದಾಗಿ ತಯಾರಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದ್ದಾರೆ. ಯಾವುದೇ ಕೈಗವಸನ್ನು ಬಳಸದೇ ಬರೀ ಕೈನಿಂದಲೇ ರಸ್ಕ್ ತಯಾರಿಸಲು ಬಳಸುವ ಹಿಟನ್ನು ನಾದುತ್ತಿದ್ದು, ತಯಾರಿಸುತ್ತಿರುವ ಪ್ರದೇಶವೂ ಕೂಡ ಗಲೀಜಾಗಿದೆ.  ಹಿಟನ್ನು ನಾದುವುದರಿಂದ ಹಿಡಿದು ಕೊನೆಗೆ ರಸ್ಕ್ ಹೊರ ಬರುವವರೆಗೆ ಸಂಪೂರ್ಣ ಪ್ರಕ್ರಿಯೆಯ ವೀಡಿಯೋ ಇಲ್ಲಿದ್ದು, ಇಲ್ಲಿ ಕೆಲಸ ಮಾಡುವ ಯಾರೊಬ್ಬರು ಕೈಗವಸು ಧರಿಸಿಲ್ಲ, ಜೊತೆಗೆ ರಸ್ಕ್ ತಯಾರಿಸುವ ವೇಳೆ ಶುಚಿತ್ವದ ನಿರ್ವಹಣೆಯೂ ಮಾಡಿಲ್ಲ, ಕೆಲಸಗಾರರು ಅಲ್ಲೇ ಸ್ಮೋಕಿಂಗ್‌ ಮಾಡುತ್ತಿರುವುದು ಕೂಡ ವೀಡಿಯೋದಲ್ಲಿ ಕಾಣಿಸುತ್ತಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಅಸಹ್ಯದ ಜೊತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Food Trend of 2023: ಇವುಗಳೇ ನೋಡಿ ಈ ವರ್ಷ ಹೆಚ್ಚು ಟ್ರೆಂಡ್‌ನಲ್ಲಿದ್ದ ಆಹಾರ

ಒಂದು ವೇಳೆ ಈ ಘಟನೆ ನಿಜವೇ ಆಗಿದ್ದಲ್ಲಿ ಇನ್ನು ಮೇಲೆ ರಸ್ಕ್ ತಿನ್ನಲು ನನಗೆ ಭಯವಾಗುತ್ತಿದೆ ಎಂದು ಅನಂತ್ ರೂಪನಗುಡಿ ಈ ವೀಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಹಿಟ್ಟಿನ ಮೇಲೆ ಕೈಯಾಡಿಸುವ ಮೊದಲು ಈ ಬರಿಗೈಗಳು ಎಲ್ಲಿದ್ದವೋ ಎಂದು ನೆನೆದರೆ ಅಸಹ್ಯವಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ನಾನು ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸುವುದನ್ನೇ ಬಹುತೇಕ ಬಿಟ್ಟು ಬಿಟ್ಟಿದೆ. ಆದರೆ ಈ ವೀಡಿಯೋ ನೋಡಿದ ಮೇಲೆ ಬೇಕರಿ ಐಟಂಗಳನ್ನು ಕೂಡ ನಾನೇ ತಯಾರಿಸಬೇಕೆನೋ ಎಂದೆನಿಸುತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವು ಇದನ್ನು ಸಮರ್ಥಿಸಿಕೊಂಡಿದ್ದು, ಎಲ್ಲಾ ಕಡೆ ಇದೇ ರೀತಿ ಇರುತ್ತದೆ. ಬೇಕಿದ್ದರೆ ನಿಮ್ಮಿಷ್ಟದ ರೆಸ್ಟೋರೆಂಟ್‌ನ ಅಡುಗೆ ಮನೆಗೊಮ್ಮೆ ಭೇಟಿ ನೀಡಿ ಎಂದು ಕಾಮೆಂಟ್ ಮಾಡಿದ್ದಾರೆ. 

ದಕ್ಷಿಣ ಕೊರಿಯಾ ಜನ ನಾಯಿ ಮಾಂಸ ತಿನ್ನೋದೇಕೆ?

ಅದೇನೆ ಇರಲಿ ಈ ವೀಡಿಯೋವನ್ನು ನೀವು ಒಮ್ಮೆ ನೋಡಿ ಇದು ಸರಿಯೋ ತಪ್ಪೋ ಎಂಬುದನ್ನು ನೀವೇ ನಿರ್ಧರಿಸಿ.

 

 

Follow Us:
Download App:
  • android
  • ios