Asianet Suvarna News Asianet Suvarna News

ದಕ್ಷಿಣ ಕೊರಿಯಾ ಜನ ನಾಯಿ ಮಾಂಸ ತಿನ್ನೋದೇಕೆ?

ನಾಯಿ ಮಾಂಸ ತಿನ್ನೋರಿದ್ದಾರೆ ಎಂಬುದನ್ನು ನಮಗೆ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಆದ್ರೆ ಚೀನಾ ಸೇರಿದಂತೆ ದಕ್ಷಿಣ ಕೋರಿಯಾ ಹಾಗೂ ಕೆಲ ದೇಶದಲ್ಲಿ ನಾಯಿ ಮಾಂಸ ತಿನ್ನುವ ಜನರ ಸಂಖ್ಯೆ ಹೆಚ್ಚಿದೆ. ಈಗ ದಕ್ಷಿಣ ಕೋರಿಯಾ ಮಹತ್ವದ ನಿರ್ಧಾರಕ್ಕೆ ಮುಂದಾಗ್ತಿದೆ.
 

South Korea Dog Eating Ba With A Law In Korean Parliament roo
Author
First Published Nov 21, 2023, 2:17 PM IST

ನಾಯಿಗಳನ್ನು ನಾವು ನಾರಾಯಣನಿಗೆ ಹೋಲಿಸ್ತೇವೆ. ಭಾರತದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ರೂ ಅವುಗಳನ್ನು ಹತ್ಯೆ ಮಾಡುವ ಕೆಲಸಕ್ಕೆ ಹೋಗೋದಿಲ್ಲ. ನಾಯಿಗಳ ಹತ್ಯೆ ಪಾಪದ ಕೆಲಸ ಎಂದೇ ಭಾವಿಸಲಾಗುತ್ತದೆ. ಆದ್ರೆ ವಿಶ್ವದ ದೇಶವೊಂದರಲ್ಲಿ ನಾಯಿ ಹತ್ಯೆ ಮಾಡೋದಲ್ಲದೆ ಅದ್ರ ಮಾಂಸವನ್ನು ತಿನ್ನಲಾಗುತ್ತದೆ. ಏಷ್ಯಾದ ಅತ್ಯಂತ ಮುಂದುವರಿದ ದೇಶಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ನಾಯಿ ಮಾಂಸ ಸೇವನೆ ಮಾಡೋದು ಇಲ್ಲಿ ಸರ್ವೆ ಸಾಮಾನ್ಯ. 

ನಾಯಿ (Dog) ಮಾಂಸ ಸೇವನೆಗೆ ಕಾರಣವೇನು? : ದಕ್ಷಿಣ ಕೊರಿಯಾ (South Korea) ದ ಜನರು ಈಗ ನಾಯಿ ಮಾಂಸ (Meat) ಸೇವನೆ ಮಾಡ್ತಿಲ್ಲ.  ನಾಯಿ ಮಾಂಸವನ್ನು ಸೇವಿಸುವುದು ಶತಮಾನಗಳ ಹಳೆಯ ಅಭ್ಯಾಸವಾಗಿದೆ. ಬೇಸಿಗೆಯ ದಿನಗಳಲ್ಲಿ ಇದು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಜನರು ನಂಬಿದ್ದಾರೆ.  

ಕಾರಲ್ಲಿ ಹೋಗೋವಾಗ ಅರ್ಧದಾರೀಲಿ ಪೆಟ್ರೋಲ್ ಖಾಲಿಯಾದ್ರೆ ಈ ದೇಶದಲ್ಲಿ ಜೈಲು ಶಿಕ್ಷೆ!

ನಾಯಿ ಸಾಕಣೆ ಬ್ಯುಸಿನೆಸ್ (Canine Business): ನಮ್ಮಲ್ಲಿ ಕೋಳಿ ಫಾರ್ಮ್, ಹಂದಿ ಫಾರ್ಮ್ ಇದ್ದಂತೆ ದಕ್ಷಿಣ ಕೊರಿಯಾದಲ್ಲಿ ನಾಯಿ ಫಾರ್ಮ್ ಗಳಿವೆ. ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದ್ರೆ ಸದ್ಯ ದಕ್ಷಿಣ ಕೊರಿಯಾದಲ್ಲಿ ನಾಯಿ ಫಾರ್ಮ್ ಗಳ ಸಂಖ್ಯೆ ಕಡಿಮೆ ಇದೆ. ನಾಯಿ ಸಾಕಣೆದಾರರ ಪ್ರಕಾರ, ದಕ್ಷಿಣ ಕೊರಿಯಾದಲ್ಲಿ  ಸಾಕಣೆ ಕೇಂದ್ರಗಳ ಸಂಖ್ಯೆ ಕೆಲವು ವರ್ಷಗಳ ಹಿಂದೆ ಸುಮಾರು 3,000 ರಿಂದ 4,000ರಷ್ಟಿತ್ತು. ಆದ್ರೆ ಕೆಲ ವರ್ಷದಿಂದ ಇದು ಅರ್ಧಕ್ಕೆ ಇಳಿದಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 1,150 ತಳಿ ಸಾಕಣೆ ಕೇಂದ್ರಗಳು, 34 ಕಸಾಯಿಖಾನೆಗಳು, 219 ವಿತರಣಾ ಕಂಪನಿಗಳು ಮತ್ತು ಸುಮಾರು 1,600 ರೆಸ್ಟೋರೆಂಟ್‌ಗಳು ನಾಯಿ ಮಾಂಸದ ವ್ಯಾಪಾರ ನಡೆಸುತ್ತಿವೆ. ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸೇವನೆ ಮಾಡುವವರ ಸಂಖ್ಯೆ ಈಗಿನ ದಿನಗಳಲ್ಲಿ ಕಡಿಮೆ ಆಗ್ತಿದೆ. ಆದ್ರೂ ಪ್ರತಿ ವರ್ಷ 10 ಲಕ್ಷ ನಾಯಿಗಳನ್ನು ಕೊಲ್ಲಲಾಗುತ್ತದೆ.   

ನಾಯಿ ಮಾಂಸ ಕಾನೂನು ಬಾಹಿರ : ದಕ್ಷಿಣ ಕೊರಿಯಾದಲ್ಲಿ ಶತಮಾನಗಳಿಂದ ಬಂದಿರುವ ನಾಯಿ ಮಾಂಸ ಸೇವನೆ ವಿರುದ್ಧ ಪ್ರತಿಭಟನೆಗಳು ಕೇಳಿ ಬರ್ತಿವೆ. ಸರ್ಕಾರ ಕೂಡ ನಾಯಿ ಮಾಂಸ   ತಿನ್ನುವ ಪದ್ಧತಿಯನ್ನು ನಿಷೇಧಿಸುವುದಾಗಿ ಘೋಷಿಸಲು ಮುಂದಾಗಿದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತರು ನಾಯಿ ಮಾಂಸ ತಿನ್ನುವುದನ್ನು ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ. ಸರ್ಕಾರವು 2027 ರ ವೇಳೆಗೆ ನಾಯಿ ತಿನ್ನುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ. ಇದನ್ನು ಕಾನೂನುಬಾಹಿರ ಎಂದು ಘೋಷಿಸಲಿದೆ.  ನಾಯಿ ಮಾಂಸ ಸೇವನೆಯ ಮೇಲೆ ವಿಶೇಷ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸಾಮಾಜಿಕ ಸಂಘರ್ಷಗಳು ಮತ್ತು ವಿವಾದಗಳನ್ನು ತೊಡೆದುಹಾಕಲು ಇದು ಸಮಯ ಎಂದು ಆಡಳಿತಾರೂಢ ಪೀಪಲ್ಸ್ ಪವರ್ ಪಾರ್ಟಿಯ ನೀತಿ ಮುಖ್ಯಸ್ಥ ಯು ಇಯು-ಡಾಂಗ್ ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಹೇಳಿದ್ದಾರೆ.

ಭೂತ-ಪ್ರೇತಗಳ ದ್ವೀಪದಲ್ಲಿ ಡಾ.ಬ್ರೋ! ಹತ್ರ ಹೋದ್ರೆ ಅಲ್ಲೇ ಮಿಸ್ಸಿಂಗ್​, ವಾಪಸಾಗೋ ಮಾತೇ ಇಲ್ಲ...

ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಕಿಯೋನ್-ಹೀ ಅವರು ನಾಯಿ ಮಾಂಸ ಸೇವನೆಯ ತೀವ್ರ ಟೀಕಾಕಾರರಾಗಿದ್ದಾರೆ. ಅವರ ಪತಿ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರೊಂದಿಗೆ ಬೀದಿ ನಾಯಿಗಳನ್ನು ದತ್ತು ಪಡೆಯುವ ಕೆಲಸ ಮಾಡ್ತಿದ್ದಾರೆ.  ಅನೇಕಾನೇಕ ವರ್ಷಗಳಿಂದ ನಾಯಿ ಮಾಂಸ ಇಲ್ಲಿ ಮಾರಾಟವಾಗ್ತಿರುವ ಕಾರಣ ಅದನ್ನು ನಂಬಿ ಜೀವನ ನಡೆಸುತ್ತಿರುವವರು ತೊಂದರೆ ಅನುಭವಿಸ್ತಾರೆ, ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿತ್ತವೆ ಎನ್ನುವ ಕಾರಣದಿಂದಾಗಿಯೇ ಇಲ್ಲಿಯವರೆಗೆ ಮಸೂದೆ ಜಾರಿಯಾಗಿಲ್ಲ. ಹಿರಿಯರು ಮಾತ್ರ ಈಗ ನಾಯಿ ಮಾಂಸ ಸೇವನೆ ಮಾಡ್ತಿದ್ದು, ಯುವಕರ ಸಂಖ್ಯೆ ಬಹಳ ಕಡಿಮೆ ಇದೆ. ಸಮೀಕ್ಷೆ ಒಂದರ ಪ್ರಕಾರ, ಕಳೆದ ವರ್ಷ ಶೇಕಡಾ 64ರಷ್ಟು ಜನರು ನಾಯಿ ಮಾಂಸ ಸೇವನೆಯನ್ನು ವಿರೋಧಿಸಿದ್ದರು.  
 

Follow Us:
Download App:
  • android
  • ios