Childrens Food: ಮಕ್ಕಳ ಆಹಾರಕ್ಕೆ ಬೇಕಾಬಿಟ್ಟಿ ಸಾಸ್ ಸೇರಿಸ್ಬೇಡಿ, ಆರೋಗ್ಯಕ್ಕೇ ಅಪಾಯ
ಅಮ್ಮಂದಿರ ಪಾಲಿಗೆ ಮಕ್ಕಳಿಗೆ ತಿನ್ನಿಸೋದಕ್ಕಿಂತ ದೊಡ್ಡ ಟಾಸ್ಕ್ ಮತ್ತೊಂದಿಲ್ಲ. ಏನು ಕೊಟ್ರೂ ಮಕ್ಳು (Children) ತಟ್ಟೆಯನ್ನು ದೂರಕ್ಕೇ ತಳ್ತಾರೆ. ಹೀಗಿದ್ದಾಗ ತಾಯಂದಿರು ಮಕ್ಕಳ ಆಹಾರ (Food)ವನ್ನು ಟೇಸ್ಟೀಯಾಗಿಸಲು ವಿವಿಧ ರೀತಿಯ ಸಾಸ್‌ಗಳನ್ನು ಸೇರಿಸ್ತಾರೆ. ಆದ್ರೆ ಇದ್ರಿಂದ ಆರೋಗ್ಯ (Health)ಕ್ಕೆ ಎಷ್ಟು ತೊಂದ್ರೆಯಿದೆ ಗೊತ್ತಾ ?
ಮನುಷ್ಯ ಸ್ಬಭಾತಹಃ ಆಹಾರ (Food)ಪ್ರಿಯ. ಹೀಗಾಗಿಯೇ ವೆರೈಟಿ ವೆರೈಟಿ ರೆಸಿಪಿ (Recipe) ಗಳನ್ನು ತಯಾರಿಸಿ ತಿಂದು ಖುಷಿಪಡುತ್ತಾನೆ. ಆದರೆ ಮಕ್ಕಳಿಗೆ ತಿನ್ನೋ ಕೆಲ್ಸ ಹೇಳ್ಬೇಕಾ ? ಫುಡ್ ಎಷ್ಟು ಟೇಸ್ಟೀಯಾಗಿದ್ರೂ, ಕಲರ್ ಫುಲ್ ಆಗಿದ್ರೂ ತಿನ್ನೋಕೆ ಹಿಂಜರಿಯುತ್ತಾರೆ. ಅವರಿಗಿಷ್ಟವಾದ ತಿಂಡಿಯನ್ನು ಮಾಡಿಕೊಟ್ರೂ ಮುಖ ಸಿಂಡರಿಸಿ ಕುಳಿತುಕೊಂಡು ಬಿಡ್ತಾರೆ. ಹೀಗಾಗಿಯೇ ಅಮ್ಮಂದಿರು ಮಕ್ಕಳ ತಿನಿಸನ್ನು ದಿ ಬೆಸ್ಟ್ ಮಾಡಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡ್ತಾನೆ ಇರ್ತಾರೆ. ಕಲರ್ ಫುಲ್ ತರಕಾರಿಗಳಿಂದ ಡೆಕೊರೇಷನ್ ಮಾಡುವುದು, ಕ್ರೀಮ್ ಗಳನ್ನು ಸೇರಿಸುವುದು ಮಾಡ್ತಾರೆ. ಹಾಗೆಯೇ ನಿಮ್ಮ ಮಗುವನ್ನು ಸಂತೋಷಪಡಿಸಲು, ಮಗುವಿಗೆ ಇಷ್ಟವಾಗಲು ನೀವು ಅಡುಗೆ (Cooking)ಯಲ್ಲಿ ಹೆಚ್ಚು ಸಾಸ್ ಬಳಸುತ್ತೀರಾ? ಹಾಗಿದ್ರೆ ನೀವು ತಿಳ್ಕೊಳ್ಳಬೇಕಾದ ಕೆಲವೊಂದು ವಿಚಾರ ಇಲ್ಲಿದೆ.
ನಿಮ್ಮ ಮನೆಯ ಕಂದಮ್ಮನಿಗೆ ಸರಳವಾದ ಅಡುಗೆಯನ್ನು ತಿನ್ನಲು ಇಷ್ಟವಿಲ್ಲವೇ? ಹಾಗಾಗಿ, ಅಡುಗೆಯ ರುಚಿಯನ್ನು ಹೆಚ್ಚಿಸಲು ನೀವು ವಿವಿಧ ಸಾಸ್‌ಗಳನ್ನು ಬಳಸುತ್ತಿದ್ದೀರಾ. ಆದರೆ, ತಿಳ್ಕೊಳ್ಳಿ ಮಾರುಕಟ್ಟೆಯಿಂದ ಖರೀದಿಸಿ ತರುವ ಈ ಸಾಸ್‌ಗಳು ಆರೋಗ್ಯಕರವಲ್ಲ. ವಿವಿಧ ರೀತಿಯ ಈ ಸಾಸ್ (Sauce)ಗಳು ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ನಿಮ್ಮ ಅಡುಗೆಯಲ್ಲಿ ನೀವು ಹೆಚ್ಚು ಸಾಸ್ ಅನ್ನು ಬಳಸಿದರೆ, ನಿಮ್ಮ ಮಗುವಿನ ಜೊತೆಗೆ ನಿಮ್ಮ ಆರೋಗ್ಯಕ್ಕೂ ಸಮಸ್ಯೆಯಾಗಬಹುದು.
Food Tips: ಮರಳಿನಲ್ಲಿ ಹುರಿದ ಆಹಾರ ತಿಂದ್ರೆ ಆರೋಗ್ಯಕ್ಕೆ ಒಳ್ಳೇದಾ ?
ಸೋಯಾ ಸಾಸ್
ಸೋಯಾ ಸಾಸ್ನ್ನು ಸಾಮಾನ್ಯವಾಗಿ ಹಲವು ಅಡುಗೆ ತಯಾರಿಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇದು ಆಹಾರಕ್ಕೆ ಹೆಚ್ಚಿನ ರುಚಿ ಹಾಗೂ ಪರಿಮಳವನ್ನು ನೀಡುತ್ತದೆ. ಆದರೆ, ನಿಮಗೆ ಗೊತ್ತಾ, ಒಂದು ಚಮಚ ಸೋಯಾ ಸಾಸ್ (Soya Sauce) ಸುಮಾರು 1000 ಮಿಲಿಗ್ರಾಂಗಳಷ್ಟು ಸೋಡಿಯಂ ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ನಿರಂತರವಾಗಿ ಸೋಯಾ ಸಾಸ್ ತಿನ್ನುತ್ತಿರುವುದು ಪಾರ್ಶ್ವವಾಯು ಅಪಾಯವನ್ನು ಸಹ ಹೆಚ್ಚು ಮಾಡುತ್ತದೆ. ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದ ಸೋಯಾ ಸಾಸ್ ಬಳಕೆ ಹೃದಯಾಘಾತವನ್ನು ಹೆಚ್ಚಿಸುತ್ತದೆ.
ಟೊಮೇಟೋ ಸಾಸ್
ಟೊಮೇಟೋ (Tomato) ಸಾಸ್ ಅನ್ನು ಸಾಮಾನ್ಯವಾಗಿ ಹಲವು ಆಹಾರ ಪದಾರ್ಥಗಳನ್ನು ತಯಾರಿಸುವಾಗ, ತಿನ್ನುವಾಗ ಬಳಸಿಕೊಳ್ಳುತ್ತಾರೆ. ಟೊಮೇಟೋ ಸಾಸ್ ಆಹಾರಕ್ಕೆ ಹೆಚ್ಚಿನ ರುಚಿ ನೀಡುತ್ತದೆಯಾದರೂ ಇದನ್ನು ಹೆಚ್ಚು ತಿನ್ನುವುದು ಸಹ ಒಳ್ಳೆಯದಲ್ಲ. ಯಾಕೆಂದರೆ ಈ ಸಾಸ್‌ನ್ನು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ನೊಂದಿಗೆ ನೀಡಲಾಗುತ್ತದೆ. ಈ ಸಿರಪ್ ಬಹಳಷ್ಟು ಸಕ್ಕರೆಯನ್ನು ಹೊಂದಿರುತ್ತದೆ. ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಟೊಮೇಟೊಗಳು ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿದ್ದರೂ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಚಪ್ ತಯಾರಿಕೆಯ ವಿಷಯಕ್ಕೆ ಬಂದರೆ, ಕಾರ್ನ್ ಸಿರಪ್ ಟೊಮೆಟೊಗಳ ಉತ್ತಮ ಲೈಕೋಪೀನ್ ಗುಣಗಳನ್ನು ಮೀರಿಸುತ್ತದೆ.
Health Tips: ಊಟ ಮಾಡಿದ್ಮೇಲೆ ನಡೀಬೇಕಾ ? ಎಕ್ಸ್‌ಪರ್ಟ್ಸ್ ಏನ್ ಹೇಳ್ತಾರೆ ಕೇಳಿ
ಕೆನೆ ಸಲಾಡ್ ಡ್ರೆಸ್ಸಿಂಗ್
ಮಾರುಕಟ್ಟೆಯಲ್ಲಿ ದೊರಕುವ ಸಲಾಡ್ ಡ್ರೆಸ್ಸಿಂಗ್‌ಗಳಲ್ಲಿ ಸಕ್ಕರೆ, ಕಾರ್ನ್ ಸಿರಪ್, ಸೋಡಿಯಂ, ಸಂರಕ್ಷಕಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ಅಧಿಕವಾಗಿವೆ. ಅಂತಹ ಕೆನೆ ಡ್ರೆಸ್ಸಿಂಗ್‌ಗಳಿಗೆ ರಾಸಾಯನಿಕ ಸಂರಕ್ಷಕಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಕೆನೆ ಸಲಾಡ್ ಡ್ರೆಸ್ಸಿಂಗ್ ಸೇವನೆ ಕ್ಯಾನ್ಸರ್ (Cancer) ಅಪಾಯವನ್ನು ಹೆಚ್ಚಿಸುತ್ತದೆ. ಕ್ರೀಮ್ ಡ್ರೆಸ್ಸಿಂಗ್ ಕೂಡ ಹೆಚ್ಚಿನ ಮಟ್ಟದ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ.
ಬಾಲ್ಸಾಮಿಕ್ ವಿನೇಗರ್
ಈ ಜನಪ್ರಿಯ ವಿನೇಗರ್ ಡ್ರೆಸ್ಸಿಂಗ್‌ನ ಒಂದು ಚಮಚವು ಸುಮಾರು 100 ಕ್ಯಾಲೋರಿಗಳು, 1500 ಮಿಗ್ರಾಂ ಸೋಡಿಯಂ ಮತ್ತು ಮೂರು ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ, ಇದು ಸುಮಾರು 75% ಉಪ್ಪಿನ ಪ್ರಮಾಣಕ್ಕೆ ಸಮನಾಗಿರುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಇದನ್ನು ಅತಿಯಾಗಿ ತಿನ್ನುವುದು ಸೂಕ್ತವಲ್ಲ.