Asianet Suvarna News Asianet Suvarna News

Food Tips: ಮರಳಿನಲ್ಲಿ ಹುರಿದ ಆಹಾರ ತಿಂದ್ರೆ ಆರೋಗ್ಯಕ್ಕೆ ಒಳ್ಳೇದಾ ?

ಮೊದಲ್ಲೆಲ್ಲಾ ಬರೀ ಬೇಯಿಸಿ ಆಹಾರ (Food)ವನ್ನು ತಯಾರಿಸುವ ಕ್ರಮವಷ್ಟೇ ಇತ್ತು. ಆದರೆ ಈಗೆಲ್ಲಾ ಫ್ರೈಡ್‌ (Fried), ರೋಸ್ಟೆಡ್‌, ಡೀಪ್ ಫ್ರೈಯಿಂಗ್ ಎಂದು ಬೇರೆ ಬೇರೆ ರೀತಿಯಲ್ಲಿ ಫುಡ್ ಪ್ರಿಪೇರ್ ಮಾಡಲಾಗುತ್ತದೆ. ಮರಳಲ್ಲಿ ಆಹಾರ ಹುರಿಯೋ ಟೆಕ್ನಿಕ್ ಬಗ್ಗೆ ನಿಮ್ಗೆ ಗೊತ್ತಾ ?

Benefits Of Traditional Sand Roasting Of Food
Author
Bengaluru, First Published Feb 15, 2022, 12:42 PM IST

ಹಿಂದಿನ ಕಾಲದಲ್ಲೆಲ್ಲಾ ಮೂರು ಹೊತ್ತೂ ಗಂಜಿಯನ್ನೇ ಕುಡಿಯುವ ಅಭ್ಯಾಸ ರೂಢಿಯಲ್ಲಿತ್ತು. ಕಾಲ ಬದಲಾದಂತೆಲ್ಲಾ ಆಹಾರಕ್ರಮಗಳೂ ಬದಲಾದವು. ಚಪಾತಿ, ರೋಟಿ ವಿವಿಧ ರೀತಿಯ ಕರಿಗಳು, ಸ್ನ್ಯಾಕ್ಸ್‌ಗಳು ಯಾವುದುಂಟು ಯಾವುದಿಲ್ಲ. ಎಲ್ಲದರಿಂದಲೂ ಇವತ್ತಿನ ದಿನಗಲ್ಲಿ ಆಹಾರ (Food)ವನ್ನು ತಯಾರಿಸಬಹುದಾಗಿ. ಬರೀ ಬಾಯಿಗೆ ಮಾತ್ರ ರುಚಿಯಿಲ್ಲ, ನೋಟಕ್ಕೂ ಚಂದ ಕಾಣುವ ಸ್ಟೈಲಿಶ್ ಆಹಾರಗಳನ್ನು ತಯಾರಿಸುತ್ತಾರೆ. ಬೇಯಿಸಿ, ಫ್ರೈ ಮಾಡಿ, ಉಗಿಯಲ್ಲಿ ಬೇಯಿಸಿ ಹೀಗೆ ವಿವಿಧ ರೀತಿಯಲ್ಲಿ ಆಹಾರವನ್ನು ತಯಾರಿಸಲಾಗುತ್ತದೆ.

ನಾವು ಸಾಮಾನ್ಯವಾಗಿ ಡೀಪ್ ಫ್ರೈಯಿಂಗ್, ಶಾಲೋ-ಫ್ರೈಯಿಂಗ್, ಬೇಕಿಂಗ್ ಮತ್ತು ಹೆಚ್ಚಿನವುಗಳಂತಹ ವಿಭಿನ್ನ ಅಡುಗೆ ಟೆಕ್ನಿಕ್‌ಗಳ ಬಗ್ಗೆ ಮಾತನಾಡುತ್ತೇವೆ. ಆದರೆ 'ಸ್ಯಾಂಡ್ ರೋಸ್ಟಿಂಗ್' (Sand Roasting)ತಂತ್ರವನ್ನು ನೀವು ಎಂದಾದರೂ ಗಮನಿಸಿದ್ದೀರಾ. ಇದು ಸಿರಿಧಾನ್ಯಗಳು, ಬೀಜಗಳು, ರಾಗಿ ಮತ್ತು ದ್ವಿದಳ ಧಾನ್ಯಗಳಿಂದ ಮಾಡಿದ ತಿಂಡಿಗಳನ್ನು ಹುರಿಯಲು ಬೀದಿ ಬದಿಯ ಆಹಾರ ಮಾರಾಟಗಾರರು ವ್ಯಾಪಕವಾಗಿ ಬಳಸಲಾಗುವ ಆರೋಗ್ಯಕರ ವಿಧಾನವಾಗಿದೆ. ರಾಷ್ಟ್ರೀಯ ಸಂಶೋಧನಾ ಕೇಂದ್ರದ ಬುಲೆಟಿನ್ ಪ್ರಕಟಿಸಿದ 'ಸಾಂಪ್ರದಾಯಿಕ ಭಾರತೀಯ ತಿಂಡಿಗಳ ತಯಾರಿಕೆಯಲ್ಲಿ ಮರಳು ಹುರಿಯುವ ವಿಧಾನ’ ಸಂಶೋದನೆಯಲ್ಲಿ ಸ್ಯಾಂಡ್ ರೋಸ್ಟಿಂಗ್ ವಿಧಾನದ ಮೂಲಕ ತಯಾರಿಸಿದ ಆಹಾರದ ಪ್ರಯೋಜನಗಳ ಬಗ್ಗೆ ತಿಳಿಸಲಾಗಿದೆ.

Health Tips: ಊಟ ಮಾಡಿದ್ಮೇಲೆ ನಡೀಬೇಕಾ ? ಎಕ್ಸ್‌ಪರ್ಟ್ಸ್ ಏನ್ ಹೇಳ್ತಾರೆ ಕೇಳಿ

ಸ್ಯಾಂಡ್ ರೋಸ್ಟಿಂಗ್ ಎಂದರೇನು ?
ಸ್ಯಾಂಡ್ ರೋಸ್ಟಿಂಗ್ ಎಂಬುದು ಮರಳಿನಲ್ಲಿ ಆಹಾರವನ್ನು ಹುರಿಯುವ ವಿಧಾನವಾಗಿದೆ. ಇದರಲ್ಲಿ ಶುದ್ಧವಾದ ಮರಳನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ (Heat) ಮಾಡಿ ನಂತರ ಅದರಲ್ಲಿ ಆಹಾರ ಪದಾರ್ಥವನ್ನು ಹುರಿಯಲಾಗುತ್ತದೆ. ಆಹಾರವನ್ನು ಬಿಸಿಮರಳಿನಿಂದ ಸೋಸಿ ಪ್ರತ್ಯೇಕವಾಗಿ ತಿನ್ನಲು ನೀಡಲಾಗುತ್ತದೆ. ಹೆಚ್ಚಾಗಿ ಈ ವಿಧಾನದಲ್ಲಿ ಧಾನ್ಯಗಳನ್ನು ಹುರಿಯುವುದನ್ನು ನೋಡಬಹುದು.

ಮರಳಲ್ಲಿ ಹುರಿದ ಆಹಾರ ನಿಜವಾಗಿಯೂ ಆರೋಗ್ಯಕರವೇ ?
ಅಧ್ಯಯನದ ಪ್ರಕಾರ, ಮರಳು ಹುರಿಯುವಿಕೆಯಲ್ಲಿ ಹೆಚ್ಚಿನ ತಾಪಮಾನದಲ್ಲಿ ಅಲ್ಪಾವಧಿಯಲ್ಲಿ ತಯಾರಿಸಿದ ಆಹಾರವು ಗರಿಗರಿಯಾಗಿಸುತ್ತದೆ. ಇದುವೇ ಆಹಾರಕ್ಕೆ ಉತ್ತಮ ಬಣ್ಣ ಮತ್ತು ಸುವಾಸನೆಯನ್ನು ನೀಡುತ್ತದೆ. ಪೌಷ್ಠಿಕಾಂಶಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮರಳಿನಲ್ಲಿ ಹುರಿಯುವ ಪ್ರಕ್ರಿಯೆಯ ಮೂಲಕ ತಯಾರಿಸಿದ ಆಹಾರದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಆಹಾರದ ನಾರಿನ ಮಟ್ಟಗಳು, ಖನಿಜಗಳು ಹೆಚ್ಚಿರುತ್ತವೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ. 

Work From Home Snacks: ಕೆಲ್ಸದ ಮಧ್ಯೆ ಏನೇನೋ ತಿನ್ಬೇಡಿ. ಹೆಲ್ದಿ ಫುಡ್ ಲಿಸ್ಟ್ ಇಲ್ಲಿದೆ

ಮರಳಲ್ಲಿ ಹುರಿದ ಆಹಾರ ಪದಾರ್ಥಗಳು ಪ್ರಿಬಯಾಟಿಕ್ ಆಹಾರದ ಫೈಬರ್ ಆಗಿ ಕಾರ್ಯನಿರ್ವಹಿಸುತ್ತವೆ. ಪಾಲಿಶ್ ಮಾಡಿದ ಧಾನ್ಯಗಳಿಗೆ ಪರ್ಯಾಯವಾಗಿ ಮರಳಿನಲ್ಲಿ ಹುರಿದ ಆಹಾರ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಹೀಗಾಗಿ ಧಾನ್ಯಗಳನ್ನು ತಿನ್ನುವಾಗ ಯಾವಾಗಲೂ ಮರಳಿನಲ್ಲಿ ಹುರಿದ ಧಾನ್ಯ (Grains)ಗಳ ಸೇವನೆ ಹೆಚ್ಚು ಸೂಕ್ತವಾಗಿದೆ.

ಮರಳಿನಲ್ಲಿ ಹುರಿಯಲು ಯಾವ ರೀತಿಯ ಆಹಾರಗಳು ಒಳ್ಳೆಯದು
ಪಫ್ಡ್ ರೈಸ್, ಚಪ್ಪಟೆ ಅಕ್ಕಿ, ಚನ್ನಾ ಮತ್ತು ಕಡಲೆಕಾಯಿಗಳಂತಹ ಆಹಾರಗಳನ್ನು ಮರಳಿನಲ್ಲಿ ಹುರಿಯಲಾಗುತ್ತದೆ. ಅಲ್ಲದೆ, ಬೀನ್ಸ್, ಹುಣಸೆ ಬೀಜವನ್ನು ಸಹ ಮರಳಿನಲ್ಲಿ ಹುರಿಯುತ್ತಾರೆ. ಕೇಕ್, ತರಕಾರಿಗಳು (Vegetables), ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಬೇಯಿಸಲು ಸಹ ಮರಳನ್ನು ಬಳಸಲಾಗುತ್ತದೆ ಆಧುನಿಕ ಅಡುಗೆಮನೆಯಲ್ಲಿ ಇದನ್ನು ಮಾಡಲು, ನಿಮಗೆ ಎರಕಹೊಯ್ದ ಕಬ್ಬಿಣದ ಕಡಾಯಿ ಮತ್ತು ಸ್ವಲ್ಪ ಶುದ್ಧವಾದ ಮರಳು ಬೇಕಾಗುತ್ತದೆ. ಮರಳಿನಲ್ಲಿ ಆಹಾರವನ್ನು ತಯಾರಿಸಲು ಮೊದಲಿಗೆ ಕಡಾಯಿಯಲ್ಲಿ ಮರಳನ್ನು ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಿ. ನಂತರ ಸ್ವಲ್ಪ ಕಡಲೆಕಾಯಿಗಳನ್ನು ಸೇರಿಸಿ ಮತ್ತು ಬೀಜಗಳನ್ನು ಹುರಿಯಲು ಒಂದು ಸೌಟನ್ನು ಬಳಸಿ.

ಮರಳನ್ನು ಆಹಾರದಿಂದ ಬೇರ್ಪಡಿಸಲು ಜರಡಿ ಬಳಸಿ
ಮರಳಿನಲ್ಲಿ ಹುರಿಯುವ ತಂತ್ರವನ್ನು ಅಗ್ಗದ, ಪರಿಣಾಮಕಾರಿ, ತೈಲ ಮುಕ್ತ ಮತ್ತು ಆರೋಗ್ಯ (Health)ಕರವೆಂದು ಪರಿಗಣಿಸಲಾಗುತ್ತದೆ. ಹೀಗಿದ್ದೂ, ಈ ರೀತಿಯ ಅಡುಗೆ ಪ್ರಕ್ರಿಯೆಯಲ್ಲಿ ಸೂಕ್ಷ್ಮ ಪೋಷಕಾಂಶಗಳಿಗೆ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅಧ್ಯಯನವು ಹೇಳುತ್ತದೆ. 

Follow Us:
Download App:
  • android
  • ios