ಮೊನ್ನೆ ಪಾನಿಪುರಿ ಸರ್ವ್ ಮಾಡಿದ್ದ ಸ್ಮೃತಿ ಇರಾನಿ ಇದೀಗ Healthy Soup ರೆಸಿಪಿ ಹೇಳಿಕೊಟ್ಟಿದ್ದಾರೆ!
ಮಹಿಳೆಯರಿಗೆ ಕಬ್ಬಿಣದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತದೆ. ಐರನ್ ಹೆಚ್ಚಿಸಿಕೊಳ್ಳಲು ಏನ್ ಮಾಡ್ಬೇಕು ಎಂಬ ಚಿಂತೆಯಲ್ಲಿ ಅನೇಕರಿರ್ತಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಐರನ್ ಹೊಂದಿರುವ ಸೂಪ್ ಟಿಪ್ಸ್ ನೀಡಿದ್ದಾರೆ ಸ್ಮೃತಿ ಇರಾನಿ.
ಆರೋಗ್ಯಕರ ಆಹಾರ ನಮಗೆಲ್ಲ ಮುಖ್ಯ. ಪ್ರತಿ ದಿನ ಆರೋಗ್ಯಕ್ಕೆ ಉತ್ತಮವಾದ ಆಹಾರ ಸೇವನೆ ಮಾಡುವಂತೆ ತಜ್ಞರು ಸಲಹೆ ನೀಡ್ತಾರೆ. ಒತ್ತಡ ಜೀವನದಲ್ಲಿ ಇದು ಅನೇಕರಿಗೆ ಸಾಧ್ಯವಾಗೋದಿಲ್ಲ. ಆದ್ರೆ ಕೆಲವೊಂದು ಆಹಾರ ತಯಾರಿಸಲು ಹೆಚ್ಚು ಸಮಯ ಅಗತ್ಯವಿಲ್ಲ. ಕೆಲವೇ ನಿಮಿಷದಲ್ಲಿ ಕೆಲವೇ ಪದಾರ್ಥಗಳಲ್ಲಿ ಉತ್ತಮ ಆಹಾರ ತಯಾರಿಸಿ ಸೇವನೆ ಮಾಡಬಹುದು. ನೀವು ಇಂಥದ್ದೇ ಆಹಾರ ತಯಾರಿಬೇಕು ಅಂದುಕೊಂಡ್ರೆ ಕ್ಯಾಬಿನೆಟ್ ಸಚಿವೆ ಸ್ಮೃತಿ ಇರಾನಿ ಟಿಪ್ಸ್ ಪಡೆಯಬಹುದು. ಕರ್ಲಿ ಟೇಲ್ಸ್ ಜೊತೆ ಮಾತನಾಡಿದ ಸ್ಮೃತಿ ಇರಾನಿ, ಐರನ್ ರಿಚ್ ಸೂಪ್ ತಯಾರಿಸೋದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಮೃತಿ ಇರಾನಿ (Smriti Irani) ಪ್ರಕಾರ ಮಸೂರ್ ದಾಲ್ ಹಾಗೂ ನುಗ್ಗೆಕಾಯಿಯಿಂದ ಮಾಡಿದ ಸೂಪ್ ಕಬ್ಬಿಣಾಂಶವನ್ನು ಹೆಚ್ಚು ಹೊಂದಿರುತ್ತದೆ. ಸಸ್ಯಹಾರಿಗಳಿಗೆ ಇದು ಅತ್ಯುತ್ತಮ ಹಾಗೂ ಆರೋಗ್ಯಕರ ಆಹಾರ ಎನ್ನುತ್ತಾರೆ ಸ್ಮೃತಿ ಇರಾನಿ.
ನುಗ್ಗೆಕಾಯಿ – ಮಸೂರ್ ದಾಲ್ (ಚನ್ನಂಗಿ ) ಸೂಪ್ ಮಾಡೋದು ಹೇಗೆ ಗೊತ್ತಾ? :
ಆರ್‌ಒ, ಪ್ಯೂರಿಫೈಡ್ ನೀರು ಅಂತ ಅತೀ ಶುದ್ಧ ನೀರ ಕುಡಿಯೋದು ಆರೋಗ್ಯಕ್ಕೆ ಒಳ್ಳೇದಲ್ಲ
ಸೂಪ್ ಮಾಡಲು ಅಗತ್ಯವಿರುವ ಪದಾರ್ಥ :
1 ಕಪ್ ಕೆಂಪು ಮಸೂರ್ ದಾಲ್
3 ನುಗ್ಗೆಕಾಯಿ
1 ಈರುಳ್ಳಿ (Onion)
1 ಇಂಚು ಶುಂಠಿ
1 ಟೊಮೆಟೊ (Tomato)
3-4 ಬೀನ್ಸ್ (Beans)
4 ಕಪ್ ನೀರು (Cup of Water)
1 ಚಮಚ ತುಪ್ಪ (Ghee)
1/2 ಟೀಸ್ಪೂನ್ ಕರಿಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು (Salt)
ಮಸೂರ್ ದಾಲ್ – ನುಗ್ಗೆಕಾಯಿ ಸೂಪ್ ಮಾಡುವ ವಿಧಾನ : ಮೇಲೆ ಹೇಳಿದ ಎಲ್ಲ ಪದಾರ್ಥವನ್ನು ಕತ್ತರಿಸಿ, ನೀರಿನಲ್ಲಿ ಸ್ವಚ್ಛಗೊಳಿಸಿ, ಅದನ್ನು ಕುಕ್ಕರ್ ಗೆ ಹಾಕಿ. ಮೂರು ಸೀಟಿ ಹೊಡೆದ ನಂತ್ರ ಕುಕ್ಕರ್ ಬಂದ್ ಮಾಡಿ. ನಂತ್ರ ಈ ಎಲ್ಲ ಬೆಂದ ಪದಾರ್ಥವನ್ನು ಚೆನ್ನಾಗಿ ಹ್ಯಾಂಡ್ ಬ್ಲೆಂಡರ್ ಬಳಸಿ ಮಿಕ್ಸ್ ಮಾಡಿ. ನಂತ್ರ ಅದನ್ನು ಸೋಸಿ. ಅದಕ್ಕೆ ಅಗತ್ಯವಿರುವಷ್ಟು ನೀರನ್ನು ಹಾಕಿ ಮತ್ತೆ ಕುದಿಸಿ. ಕೊತ್ತಂಬರಿ ಸೊಪ್ಪನ್ನು ಹಾಕಿ ಸೂಪನ್ನು ಕುದಿಯಲು ಬಿಡಿ. ಐದು ನಿಮಿಷದ ನಂತ್ರ ಸೂಪ್ ಸರ್ವ್ ಮಾಡಿ.
ಮಹಿಳೆಯರಿಗೆ ಅತ್ಯುತ್ತಮ ಸೂಪ್ ಇದು : ನಮ್ಮ ದೇಶದಲ್ಲಿ ಮಹಿಳೆಯರು ಕಬ್ಬಿಣದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಶೇಕಡಾ 90 ರಷ್ಟು ಯುವತಿಯರು ಕಬ್ಬಿಣದ ಕೊರತೆ ಅನುಭವಿಸುತ್ತಿದ್ದಾರೆ. ಅವರು ಈ ಸೂಪ್ ಸೇವನೆ ಮಾಡಿದ್ರೆ ಒಳ್ಳೆಯದು. ಮುಟ್ಟಿನ ವೇಳೆ ಹಾಗೂ ಗರ್ಭಾವಸ್ಥೆಯಲ್ಲಿ ರಕ್ತ ನಷ್ಟವಾಗುತ್ತದೆ. ಇದು ಅವರಲ್ಲಿ ಕಬ್ಬಿಣದ ಕೊರತೆಯನ್ನು ಹೆಚ್ಚು ಮಾಡುತ್ತದೆ. ಕಬ್ಬಿಣದ ಸಮಸ್ಯೆ ಎದುರಾದಾಗ ತಲೆ ಸುತ್ತುವಿಕೆ, ಸುಸ್ತು, ನಿದ್ರೆ ಸಮಸ್ಯೆ, ಆಯಾಸ ಕಾಡುತ್ತದೆ. ಈ ಸಮಯದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವನೆ ಮಾಡಬೇಕು. ನುಗ್ಗೆಕಾಯಿ ಸೂಪ್ ನಂತಹ ನೈಸರ್ಗಿಕ ಪರಿಹಾರಗಳು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತವೆ.
ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ಅನಾರೋಗ್ಯ ! ಇದನ್ನು ನೀವೂ ನಂಬುತ್ತೀರಾ?
ನುಗ್ಗಿಕಾಯಿ ರಕ್ತವನ್ನು ಶುದ್ಧೀಕರಿಸುತ್ತದೆ. ಇದರಲ್ಲಿ ರಂಜಕ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದ್ರ ಸೇವನೆಯಿಂದ ಮಧುಮೇಹ, ಹೃದಯದ ಆರೋಗ್ಯ ಮತ್ತು ಯಕೃತ್ತಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಬಹುದು. ನುಗ್ಗೆ ಕಾಯಿ ಮಾತ್ರವಲ್ಲ ಸೊಪ್ಪನ್ನು ಕೂಡ ನೀವು ಬಳಸಬಹುದು. ಅದು ಆರೋಗ್ಯಕ್ಕೆ ಒಳ್ಳೆಯದು. 100 ಗ್ರಾಂ ನುಗ್ಗೆಕಾಯಿಯಲ್ಲಿ 28 ಮಿಗ್ರಾಂ ಕಬ್ಬಿಣವಿರುತ್ತದೆ. ದೈನಂದಿನ ಕಬ್ಬಿಣದ ಅಗತ್ಯವನ್ನು ಪೂರೈಸಲು ಇದು ಪ್ರಯೋಜನಕಾರಿ. ರಕ್ತಹೀನತೆಯಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು ಇದನ್ನು ಸೇವಿಸಬೇಕು.ನೀವು ಕಬ್ಬಿಣಾಂಶವಿರುವ ನುಗ್ಗೆಕಾಯಿ ಸೇವನೆ ಮಾಡುವ ಜೊತೆಗೆ ಅದನ್ನು ಹೀರಿಕೊಳ್ಳಲು ಸಹಾಯ ಮಾಡುವ ವಿಟಮಿನ್ ಸಿಯನ್ನು ತೆಗೆದುಕೊಳ್ಳಬೇಕು. ಆದ್ರೆ ಈ ಸಮಯದಲ್ಲಿ ಕಾಫಿ – ಟೀನಿಂದ ದೂರವಿರಿ.